ಬಣ್ಣಗಳೇ ಮೂಡುತ್ತಿಲ್ಲ ,ಖಾಲಿ ರೇಖೆಗಳಿಗೆ ..

ಬದುಕಲಾಗದ ಮುಖಗಳು …

ಎಂ ಎಂ ಶೇಕ್

ಬೇಸರವಿದೆ ಕಾತುರದ ಕ್ಷಣಗಳಿಗೆ ….. ಹೀಗೆಯೇ ಹಗಲಾಗುತ್ತದೆ , ಹಾಗೆಯೇ ರಾತ್ರಿಯಾಗುತ್ತದೆ ..! ಮತ್ತದೇ ದಿನವಾಯ್ತು ,ಮತ್ತದೇ ತಿಂಗಳಾಯ್ತು ಮತ್ತದೇ ವರುಷವಾಯ್ತು …..!!! ಮಳೆ ಬಂತು ಕ್ಷಣಗಳು ಹುಟ್ಟಿದವು , ಚಳಿ ಬಂತು ,ಕ್ಷಣಗಳು ಕೊನರಿದವು… ಬೇಸಿಗೆ ಬಂತು ,ಕ್ಷಣಗಳು ಬಾಯಾರಿದವು….!! ಹೀಗೆಯೇ ಮತ್ತೆ ಮತ್ತೆ ಋತುಚಕ್ರ ಸುತ್ತುವಲ್ಲೆಲ್ಲಾ ಸುತ್ತುತ್ತವೆ ಆಕ್ಷೆಪವೆತ್ತದೆ…!! ಯಾಕೆಂದರೆ ……. ಬದುಕೆಂದರೆ ಇದೆ…ಹೀಗೆಯೇ ಜೀವಂತಿಕೆಯ ಲಕ್ಷಣ ಇದುವೇ…..!! ಬಣ್ಣ ಬಳಿಯಲು ತವಕಿಸುತ್ತೇನೆ ಬಣ್ಣಗಳೇ ಮೂಡುತ್ತಿಲ್ಲ ,ಖಾಲಿ ರೇಖೆಗಳಿಗೆ .. ಆಸೆ ಇದೆ,ಬಯಕೆ ಇದೆ …. ಕುಂಚವನ್ನು ಪದೇ ಪದೇ ಅದ್ದುತ್ತೇನೆ… ನೀರಿಲ್ಲದ,ತಂಪಿಲ್ಲದ ಬಣ್ಣದಲ್ಲಿ …! ಇದು ನನ್ನ ತಪ್ಪು … ಹೌದು ,ಈಗ ಗೊತ್ತಾಗಿದೆ….. ಒಂದೂ ಹಾಳೆಯಿಲ್ಲ ಖಾಲಿ….. ಅಡ್ಡಡ್ಡ ಕೊರೆದಿದೆ ಚಿತ್ರಗಳೆಂದು ಕಾಲ….!! ಮೂಡಿಸಿದ್ದಿದೆ ,ಹೆಜ್ಜೆಗಳ ….. ಶತಮಾನದ ಸರ್ವಶ್ರೇಷ್ಥ ನಾಗರಿಕತೆಯ ಚಿತ್ರಕಲಾಕೃತಿಗಳು ….!! ವ್ಯಾಖ್ಯಾನಿಸಿವೆ ,ಬದುಕಲಾಗದ ಮುಖಗಳು…..!!!]]>

‍ಲೇಖಕರು G

September 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This