ಈ ಆರು ಸಾಲು ಬರೆಯಲು ನಾನು ೬೦ ವರ್ಷ ತೆಗೆದುಕೊಂಡಿದ್ದೇನೆ
ನಾನು ಕಿಟಕಿಗೆ ಬಣ್ಣ ಬಳಿಯುತ್ತಿರುವ ಈ ಫೋಟೋ ನನ್ನನ್ನು ಕಾಡಿ ಅಂತೂ ಇಂತೂ ಈ ಆರು ಸಾಲು ಹುಟ್ಟಿದೆ
ಮಹೇಶ ಕೆರೆಗದ್ದೆ
ಗೋಡೆಯಲ್ಲೊಂದು ಕಿಟಕಿ,
ಕಿಟಕಿಯ ಹೊರಗೆ ಬೆಳಕೋ ಬೆಳಕು..
ಕುಳಿತಿದ್ದೇನೆ ಸರಳುಗಳ ಹಿಂದೆ
ಕೈಯ್ಯಲ್ಲೊಂದು ಬಣ್ಣದ ಡಬ್ಬಿ ಹಿಡಿದು..
ಸರಳುಗಳಿಗೆಲ್ಲ ಬೆಳಕೆಂಬ ಬಣ್ಣ ಬಳಿದು
ಹೊರಹೋಗುವಾ ತವಕ ..

0 ಪ್ರತಿಕ್ರಿಯೆಗಳು