ಬನ್ನಿ ಒಂದಿಷ್ಟು ಕುಬ್ಜರಾಗೋಣ..


ಇಂದು, 27.03.10 ರಂದು ಜಾಗತಿಕ ತಾಪಮಾನ ಕುರಿತಂತೆ ಜಗತ್ತಿನಾದ್ಯಂತ
“Earth Hour” ಆಚರಿಸಲಾಗುತ್ತಿದೆ..ಇಂದು ಜಗತ್ತಿನಲ್ಲೆಡೆ ರಾತ್ರಿ 8.30 ರಿಂದ 9.30 ರ ವರೆಗೆ
ಎಲ್ಲ ರೀತಿಯ electricity dependents ಗಳನ್ನು switchoff ಮಾಡಲಾಗುತ್ತಿದೆ.
ನಾವೂ ಕೂಡ ಇಂಥದೊಂದು ಚಳುವಳಿಯಲ್ಲಿ ಭಾಗವಹಿಸಬಹುದು;
ನಮ್ಮ ನಮ್ಮ ಅವಶ್ಯಕತೆಗಳನ್ನು ಕೊಂಚ ಕುಬ್ಜವಾಗಿಸುವದರ ಮೂಲಕ!
ಬನ್ನಿ,ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳೋಣ..
-ಟಿ ಜಿ ಬಾಲಕೃಷ್ಣ
-ರಾಘವೇಂದ್ರ ಜೋಶಿ

‍ಲೇಖಕರು avadhi

March 27, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

4 ಪ್ರತಿಕ್ರಿಯೆಗಳು

 1. malathi S

  We switched off power yesterday evening for an hour from 8.30 to 9.30. tried to do our bit for the environment
  🙂
  malathi S

  ಪ್ರತಿಕ್ರಿಯೆ
 2. ಅಶೋಕವರ್ಧನ ಜಿ.ಎನ್

  ಮೊನ್ನೆ ನೆಹರೂ ಮೈದಾನದಲ್ಲಿ ರಾವಣನ ಭಾರೀ ಬೊಂಬೆ ನಿಲ್ಲಿಸಿದ್ದರು. ರಾತ್ರಿ ಯಾವುದೋ ಜಗದ್ಗುರುವಿನ ಮತ್ತದೇ ಧುಷ್ಟ ಶಿಕ್ಷಣ, ಶಿಷ್ಟರಕ್ಷಣದ ‘ಅದ್ಭುತ’ ಸಾಂಕೇತಿಕತೆಯ ಭಾಷಣದ ಕೊನೆಯಲ್ಲಿ ರಾವಣನಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದರು. ಗೋರಿಗಳ ನಗರ ದಿಲ್ಲಿಯಲ್ಲಂತೂ ಸಾವಿರದೊಂದು ಸಾಂಕೇತಿಕ ಆಚರಣೆಗಳು ಸತ್ತ ಎಲ್ಲರ ಬಗ್ಗೆ ನಡೆಯುತ್ತಲೇ ಇರುವುದನ್ನು ನಾವು ನೋಡಿ ನೋಡಿಯೇ ಬಳಲುತ್ತಿರುತ್ತೇವೆ. ಮೂವತ್ತು ಮೀಟರಿಗೊಂದು ಹೈಮಾಸ್ಟ್ ದೀಪ ಹಚ್ಚಿ, ಬಸ್ ನಿಲ್ಲದ ‘ಸ್ಟಾಪು’ಗಳಲ್ಲೆಲ್ಲ ಝಗಮಗಿಸುವ ಜಾಹೀರಾತು ಇಟ್ಟು ಎಲ್ಲೋ ಚೂರುಪಾರು ಮಂದಿ ಒಂದು ಗಂಟೆ ಕತ್ತಲಲ್ಲಿ ಕೂರುವ ಸಾಂಕೇತಿಕತೆ ಒಂದು ವಾರ್ಷಿಕ ವಿಧಿಯಾಗುತ್ತಿರುವುದು ನನಗೆ ಒಪ್ಪಿಗೆಯಿಲ್ಲ. ನಾನು ಎಂದಿನಂತೆ ನನ್ನ ಕೋಣೆಯ ದೀಪ, ಫ್ಯಾನ್ ಹಾಕಿ ಗಣಕ ಕಾರ್ಯ ನಿರತನಾಗಿದ್ದೆ. ಹೆಂಡತಿ ಎಂದಿನಂತೆ ಅವಳ ಕಾರ್ಯರಂಗದ ಜಾಗದ ದೀಪ ಮಾತ್ರ ಹಚ್ಚಿಕೊಂಡು ಅವಳ ಕಾರ್ಯನಿರತಳಾಗಿದ್ದಳು.
  ಅಶೋಕವರ್ಧನ

  ಪ್ರತಿಕ್ರಿಯೆ
 3. ಸುಘೋಷ್ ಎಸ್. ನಿಗಳೆ

  ನಾವಿರುವುದು ಬನಶಂಕರಿಯ ಸೋಕಾಲ್ಡ್ ಎಜುಕೇಟೆಡ್ ಬೀದಿಯಲ್ಲಿ. ಆದರೆ ದುರಂತ, ನಮ್ಮ ಬೀದಿಯಲ್ಲಿ ಲೈಟ್ ಸ್ವಿಚ್ ಮಾಡಿದ್ದು ಕೇವಲ ನಾವು ಹಾಗೂ ನಮ್ಮ ಮುಂದಿನ ಮನೆಯವರು ಮಾತ್ರ. ಆದರೆ ಲೈಟ್ ಸ್ವಿಚ್ ಮಾಡಿ ಅರ್ತ್ ಅವರ್ ಆಚರಿಸಿದುದರ ಬಗ್ಗೆ ನನಗೆ ಹೆಮ್ಮೆಯಿದೆ.

  ಪ್ರತಿಕ್ರಿಯೆ
 4. nagesh hegde

  ನಾವಿರುವ ಹಳ್ಳಿಮನೆಯಲ್ಲಿ ಸಂಜೆ ಏಳೂವರೆಗೇ ಕರೆಂಟ್ ಹೋಗಿತ್ತು. ದೂರ ದಿಗಂತದಲ್ಲಿ ಕಾಣುತ್ತಿದ್ದ ಬೆಂಗಳೂರಿನ ಧ್ರುವಪ್ರಭೆ ಕೂಡ ಮಂಕಾಗಿತ್ತು. ಬೆಸ್ಕಾಮ್ ಖುದ್ದಾಗಿ ಎಲ್ಲೆಡೆ ‘ಅರ್ಥ್ ಅವರ್’ ಆಚರಿಸುತ್ತಿದೆ ಎಂದು ಅಂದುಕೊಂಡು ರೇಡಿಯೊ ಕೇಳುತ್ತ ಕೂತಿದ್ದಾಗ ಏನಚ್ಚರಿ, ಸರಿಯಾಗಿ ಎಂಟೂವರೆಗೆ ಕರೆಂಟ್ ಬಂತು! ಇದಪ್ಪಾ ಚಮತ್ಕಾರ ಎಂದುಕೊಂಡು ನನ್ನ ಪತ್ನಿ ಸ್ವಿಚಾಫ್ ಮಾಡಿದಳು. ನಮ್ಮ ಕರೆಂಟ್ ಬಿಲ್ ತಿಂಗಳಿಗೆ ಯಾವತ್ತೂ ನೂರು ರೂಪಾಯಿ ತಲುಪದಂತೆ ಮಿತವಾಗಿ ಬಳಸುತ್ತಲೇ ಬಂದಿರುವ ನಮಗೆ ಮತ್ತೆ ಒಂದು ಗಂಟೆ ಕತ್ತಲಲ್ಲಿ ಕೂತಿರಬೇಕಾದ ನೈತಿಕ ಹರ್ಕತ್ತೇನೂ ಇರಲಿಲ್ಲ. ಆದರೆ ಕತ್ತಲನ್ನು ಆವಾಹಿಸುವ ಮೂಲಕ ವಿದ್ಯುತ್ ದುಂದುಗಾರರಿಗೆ ತುಸು ಬೆಳಕು ತೋರುವ ಈ ಅಭಿಯಾನಕ್ಕೆ ನಮ್ಮ ಬೆಂಬಲವಿದೆ.
  -ನಾಗೇಶ ಹೆಗಡೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: