ಯು ಬಿ ರಾಜಲಕ್ಷ್ಮಿ ತರಂಗದ ಮೂಲಕ ಹೆಸರಾದವರು. ತರಂಗಕ್ಕಾಗಿ ಆಕೆ ನಾಡಿನ ತುಂಬಾ ಸುತ್ತಾಡಿದ್ದಾರೆ. ಈಗ ತರಂಗದ ಕಾರ್ಯನಿರ್ವಾಹಕ ಸಂಪಾದಕಿ. ರಾಜಲಕ್ಷ್ಮಿ ಉಡುಪಿ ಅಡಿಗೆಯ ಬಗ್ಗೆ ಬರೆದ ಪುಸ್ತಕಗಳು ತುಂಬಾ ಹೆಸರು ಮಾಡಿದೆ. ಕುಕ್ ಬುಕ್ ಗಳು ಈಗ ಎಲ್ಲೆಡೆ ಹಾಟ್ ಸೇಲ್ ವಸ್ತುವಾಗಿರುವಾಗ ರಾಜಲಕ್ಷ್ಮಿ ಅತ್ಯಂತ ನವಿರಾದ ಭಾಷೆಯಲ್ಲಿ ಉಡುಪಿ ಅಡುಗೆಯ ಬಗ್ಗೆ ಬರೆದಿದ್ದಾರೆ. ಗಂಜೀಫಾ ರಘುಪತಿ ಭಟ್ಟರಿಂದ ರೇಖಾ ಚಿತ್ರಗಳನ್ನು ಮಾಡಿಸಿರುವುದು ರಾಜಲಕ್ಷ್ಮಿ ಟೇಸ್ಟ್ ಗೆ ಒಂದು ಉದಾಹರಣೆ. ಕನ್ನಡದ ಅಡುಗೆಯ ಪೈಕಿ ನಿಜಕ್ಕೂ ಅಗ್ರ ಸ್ಥಾನದಲ್ಲಿ ನಿಲ್ಲುವ ಅಡುಗೆ ಬರಹಗಾರ್ತಿ ಇವರು.
ತರಂಗದಲ್ಲಿ ಬರೆದ ಅವರ ಉತ್ತಮ ಲೇಖನಗಳನ್ನೆಲ್ಲ ಒಟ್ಟು ಮಾಡಿ ಪುಸ್ತಕ ಹೊರ ತಂದಿದ್ದಾರೆ. ಇವರೇ ನೂರಾರು ಲೇಖನಗಳಿಂದ ಒಳ್ಳೆಯದು ಎಂದುಕೊಂಡ ಬರಹಗಳನ್ನು ಆಯ್ಕೆ ಮಾಡಿರುವುದರಿಂದ ಓದಲು ಅರ್ಹವಾಗಿದೆ. ನುಡಿಚಿತ್ರಗಳ ಈ ಬರವಣಿಗೆ ಯಾವುದೇ ಪತ್ರಿಕೋದ್ಯಮ ವಿದ್ಯಾರ್ಥಿಗೂ, ಇದೀಗ ತಾನೆ ಬರವಣಿಗೆ ಆರಂಭಿಸಿರುವ ಹವ್ಯಾಸಿ ಪತ್ರಕರ್ತರಿಗೂ ಮಾರ್ಗದರ್ಶಿಯಾಗಬಲ್ಲುದು. ಗರುಡನಗಿರಿ ನಾಗರಾಜ್ ಅವರು ಬೆನ್ನುಡಿಯಲ್ಲಿ ಆಶಿಸಿರುವುದೂ ಇದನ್ನೇ.
ಜೇಮ್ಸ್ ವಾಜ್ ಅವರಿಂದ ಮಾಡಿಸಿರುವ ವಿನ್ಯಾಸ ಮತ್ತೆ ರಾಜಲಕ್ಷ್ಮಿ ಅವರ ಅಭಿರುಚಿಯನ್ನು ಸಾರಿ ಹೇಳುತ್ತದೆ. ಬರಹಗಾರರ ಮನೆತನದಿಂದ ಬಂದ, ಸೌಮ್ಯ ಮಾತಿನ ರಾಜ ಲಕ್ಷ್ಮಿ ಪುಸ್ತಕ ಎಲ್ಲರ ಕೈನಲ್ಲಿರುವಂತಾಗಲಿ.
ನೂಪುರ ಪುಸ್ತಕದ ಮುಖಪುಟಕ್ಕೆ ಬಳಸಿರುವ ನಾಟ್ಯ ಶೈಲಿಯ ಹೆಜ್ಜೆ-ಗೆಜ್ಜೆ ಪೋಟೋ ತುಮಬಾ ಸುಂದರವಾಗಿದೆ. ಪುಸ್ತಕದ ವಿನ್ಯಾಸ ಸ್ವಲ್ಪ ಹಾದಿತಪ್ಪಿದ್ದರೂ, ಆ ಫೋಟೋ ಮಾತ್ರ ದನ್ನೆಲ್ಲವನ್ನೂ ಮರೆಸುತ್ತದೆ.
ಶ್ರೀಕಂಠ