ಬರುತ್ತಿದೆ 'ಎಕ್ಕುಂಡಿ ಹಬ್ಬ'


ಡಿ ವಿ ಪ್ರಹ್ಲಾದ್ ಒಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ಅದು ಬೆಳ್ಳಕ್ಕಿ ಹಿಂಡನ್ನು ಹಿಡಿಯುವ ಕೆಲಸ. ಎಕ್ಕುಂಡಿ ಎಂಬ ಬೆಳ್ಳಕ್ಕಿ ಮೋಹಗಾರನ ಎಲ್ಲಾ ಕವಿತೆಗಳನ್ನು ಒಂದೆಡೆ ಕೂಡಿಸಿ ‘ಬೆಳ್ಳಕ್ಕಿ ಹಿಂಡು’  ಹೆಸರಿನಲ್ಲಿ ನೀಡುತ್ತಿದ್ದಾರೆ.
ಕಡೆಂಗೋಡ್ಲು ಶಂಕರ ಭಟ್ಟರ ಸಮಗ್ರ ಸಾಹಿತ್ಯ ಹೊರಬಂದಾಗ ಡಿ ವಿ ಪ್ರಹ್ಲಾದ್ ಗೆ ನೆನಪಾದದ್ದು ಎಕ್ಕುಂಡಿ. ಗೋವಿಂದ ಪೈ ಪ್ರತಿಷ್ಠಾನ ಅತ್ಯಂತ ಸೊಗಸಾಗಿ ಮುದ್ರಿಸಿ ಹೊರತಂದ ಈ ಪುಸ್ತಕ ಇನ್ನಿಲ್ಲದಂತೆ ಅವರನ್ನು ಸೆಳೆಯಿತು. ಚಿ ಶ್ರೀನಿವಾಸರಾಜು ಅವರ ಬಳಿ ಚರ್ಚಿಸಿದರು. ಅವರು ನೀಡಿದ ಪ್ರೋತ್ಸಾಹ ಇನ್ನಷ್ಟು ಬಲ ನೀಡಿತು. ಆ ನಂತರ ಎಕ್ಕುಂಡಿ ಕವಿತೆಗಳನ್ನು ಒಂದೆಡೆ ಕೂಡಿಸಿ ತರುವಂತೆ ಕನ್ನಡ ಪುಸ್ತಕ ಪ್ರಾಧಿಕಾರ, ಖಾಸಗಿ ಪ್ರಕಾಶಕರ ಬೆನ್ನು ಹತ್ತಿದರು. ಆಮೇಲೆ ಇವೆಲ್ಲಾ ಸುಮ್ಮನೆ ಆಗದ ಕೆಲಸ ಎನಿಸಿ ಒಂದು ಬೆಳ್ಳಂಬೆಳಗ್ಗೆ ಮುದ್ರಣಾಲಯ ದತ್ತ   ಗಟ್ಟಿ ಮನಸ್ಸಿನಿಂದ ನಡೆದರು.
ಒಂದು ವಿಶ್ವವಿದ್ಯಾಲಯ ಮಾಡದ, ಒಂದು ಸರ್ಕಾರಿ ಸಂಸ್ಥೆ ನೆನಪಿಸಿಕೊಳ್ಳದ ವಿಶೇಷ ಕೆಲಸವನ್ನು ಪ್ರಹ್ಲಾದ್ ಮಾಡಿದ್ದಾರೆ. 500 ಕ್ಕೂ ಹೆಚ್ಚು ಪುಟಗಳ ಈ ಪುಸ್ತಕ ಎಕ್ಕುಂಡಿಯವರ ಹಸ್ತಾಕ್ಷರ, ಸಹಿ, ಕವಿತೆ, ಅವರ ಸಂಕಲನಕ್ಕೆ ಪೇಜಾವರ ಮಠಾಧೀಶರೂ ಸೇರಿದಂತೆ ಎಲ್ಲರೂ ಬರೆದಿರುವ ಮುನ್ನುಡಿ, ಎಕ್ಕುಂಡಿಯವರ ಬದುಕು ನಡೆದು ಬಂದ ಹಾದಿ ಎಲ್ಲವನ್ನೂ ಒಟ್ಟು ಮಾಡಿದ್ದಾರೆ. ಎ ಎನ್ ಮುಕುಂದ್ ಅವರ ವಾಹ್! ಎನಿಸುವ ಫೋಟೋಗಳಂತೂ ಎಕ್ಕುಂಡಿಯವರನ್ನೇ ತಂದು ಎದುರಿಗೆ ನಿಲ್ಲಿಸುತ್ತದೆ.
ಈ ಮರೆಯಲಾಗದ ಪುಸ್ತಕವನ್ನು ಯು ಆರ್ ಅನಂತಮೂರ್ತಿ ಅವರು ಜುಲೈ 27 ರಂದು ಸೆಂಟ್ರಲ್ ಕಾಲೇಜ್ ನ ಸೆನೆಟ್ ಹಾಲ್ ನಲ್ಲಿ ಓದುಗರ ಕೈಗಿಡಲಿದ್ದಾರೆ. ಕನ್ನಡದ ೧೫ ಮಹತ್ವದ ಕವಿಗಳು ಎಕ್ಕುಂಡಿ ಕವಿತೆ ವಾಚಿಸಲಿದ್ದಾರೆ. ಖ್ಯಾತ ಶಿಲ್ಪಿ ವೆಂಕಟಾಚಲಪತಿ ಅವರು ಎಕ್ಕುಂಡಿ ಶಿಲ್ಪಾ ಸ್ಮರಣಿಕೆ ರೂಪಿಸಿದ್ದಾರೆ. 
ಪುಸ್ತಕದ ಬೆಲೆ ೩೫೦ ರೂ. ಪುಸ್ತಕ ಬಿಡುಗಡೆಗೆ ಮುಂಚೆಯೇ ಬುಕ್ ಮಾಡಿದಾರೆ ೧೦೦ ರೂ ರಿಯಾಯಿತಿ. ಪುಸ್ತಕ ಬೇಕಾದಲ್ಲಿ [email protected] ಮೇಲ್ ಮಾಡಿ.

‍ಲೇಖಕರು avadhi

July 4, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾತು ಮುಗಿದೇ ಇಲ್ಲ ಇನ್ನು

ಮಾತು ಮುಗಿದೇ ಇಲ್ಲ ಇನ್ನು

ಡೋ‌ರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ...?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ...

ನೆಲದ ಕರುಳು

ನೆಲದ ಕರುಳು

ಪಿ ಆರ್ ವೆಂಕಟೇಶ್ ದುಃಖದ ಕುಲುಮೆಯಲಿಹಾಡಲಾರದು ಹಕ್ಕಿಬೇಲಿಯಾಚೆಯ ಮಾತು ಮೌನ ಬೆಂಕಿ ಬಂಧನದ ಭಾವಬಿತ್ತಿತಾದರು ಏನು?ಪುಟಿದ ಕನಸುಗಳೆಲ್ಲಕಸದ...

ಸತ್ಯವು ಸುಡುತಿರುವಾಗ…

ಸತ್ಯವು ಸುಡುತಿರುವಾಗ…

ಇಮ್ತಿಯಾಜ್ ಶಿರಸಂಗಿ ರಾತ್ರೋರಾತ್ರಿ ಚಿತೆಗಳೂರಿದುಸತ್ಯವು ಸುಡುತಿರುವಾಗ... ಸತ್ತವರ ನೋವನ್ನುಪ್ರಜೆಗಳು ನೆನಪಿಟ್ಟುಕೊಳ್ಳಬೇಕು…...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This