ಜಯಲಕ್ಷ್ಮಿ ಪಾಟೀಲ್
ಚಿತ್ತಾಲರ ಬಗ್ಗೆ ಬಷೀರ್ ಬರೆದ ಲೇಖನಕ್ಕೆ ರಂಗಕರ್ಮಿ ಜಯಲಕ್ಷ್ಮಿ ಪಾಟೀಲ್ ಬರೆದ ಅನಿಸಿಕೆ ಇಲ್ಲಿದೆ
ಬಶೀರ್ ಬರಹಕ್ಕೆ ಇಲ್ಲಿ ಕ್ಲಿಕ್ಕಿಸಿ
–
ಆಪ್ತ ಈ ಲೇಖನ.
ನಾನೂ ಸಹ ಚಿತ್ತಾಲರ ಮನೆಯಲ್ಲಿ ಅವರ ಹಾಲಿನ ಬಾಲ್ಕನಿಗೆ ಹತ್ತಿರವಾಗಿರುವ, ಅವರು ಕಾದಂಬರಿ ಬರೆವ ಸೋಫಾದ ಮೇಲೆ ಕುಳಿತಿದ್ದೆ ಅನ್ನುವುದಕ್ಕಿಂತ ಚಿತ್ತಾಲರೇ ಕರೆದು ಕೂರಿಸಿದ್ದರು (ಅದು ಚಿತ್ತಾಲರು ಕುಳಿತು ಬರೆವ ಸೋಫಾ ಎಂದು ಓದಿ ಗೊತ್ತಿದ್ದರಿಂದ ಅಲ್ಲಿ ಕುಳಿತುಕೊಳ್ಳುವ ಧೈರ್ಯವಿರಲಿಲ್ಲ ನನ್ನಲ್ಲಿ).
ಒಂದು ಗಂಟೆ ಕಾಲ ಮಾತಾಡಿ ಆದ ಆದ ಮೇಲೆ ಎದ್ದು ಹೊರಟಾಗ ಚಿತ್ತಾಲರು ನನಗೆ ಹೇಳಿದ್ದು, “ನಾ ಕಾದಂಬರಿ ಬರೆಯುವ ಸೋಫಾದ ಮೇಲೆ ಕುಳಿತಿದ್ದಿರಿ ಆದ್ದರಿಂದ ನಿಮ್ಮ ಬರವಣಿಗೆಯಲ್ಲಿ ಗಟ್ಟಿತನ ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ”….. ಅಂದಿನಿಂದ ಇಂದಿನವರೆಗೂ ಬರೆಯಲು ಕುಳಿತಾಗೊಮ್ಮೆ ಪ್ರತಿ ಪ್ರತೀ ಸಲ ಚಿತ್ತಾಲರ ಮಾತು ನೆನಪಾಗಿ ಸಣ್ಣಗೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಗಿ, ಬರೆದದ್ದನ್ನು ಹತ್ತು ಬಾರಿ ಓದಿಕೊಳ್ಳುವಂತಾಗುತ್ತದೆ!!
ಎಷ್ಟೋ ದಿನಗಳ ಕಾಲ ಅವರ ಈ ಮಾತಿಗೆ ಹೆದರಿ ಬರೆಯುವುದಕ್ಕೇ ಹೆದರಿಕೆಯಾಗುತ್ತಿತ್ತು…
That is the experience of all the successful writers