ಬಾಯಿ ಇದ್ದೋರು ಜೀವ ಕೇಳ್ತಾರೆ, ಇಲ್ದೋರು ಬಲಿ ಆಗ್ತಾರೆ…

ಸಂಪ್ರದಾಯದ ಗೊಡ್ಡುತನಕ್ಕೆ ಚುಚ್ಚುವ `ಭಾಗೀರಥಿ’

– ಗಿರೀಶ್ ಕೆ

ಬಯಲ ಬಿತ್ತಿ   `ಬಾಯಿ ಇದ್ದೋರು `ಜೀವ’ ಕೇಳ್ತಾರೆ ಬಾಯಿ ಇಲ್ದೋರು `ಬಲಿ’ ಆಗ್ತಾರೆ…’ ಇದು ಭಾಗೀರಥಿ ಚಿತ್ರದ ಭಾವ. ಕನ್ನಡದ ಪ್ರಸಿದ್ಧ ಜನಪದ ಕಾವ್ಯ ಕಥನ `ಕೆರೆಗೆ ಹಾರ’ಕ್ಕೆ ಹೊಸ ಕಣ್ಣುಗಳ ಜೊತೆಗೆ ಬಾಯಿ ಆಗುವ ಪ್ರಯತ್ನವನ್ನು ನಿದರ್ೇಶಕ ಬರಗೂರು ರಾಮಚಂದ್ರಪ್ಪ ಮಾಡಿದ್ದಾರೆ. ಐತಿಹಾಸಿಕವಾದ ಒಂದು ಸಾಮಾಜಿಕ ಘಟನೆ ಜನಪದ ಕಾವ್ಯವಾಗಿ ಜನಮಾನಸದಲ್ಲಿ ಹರಿಯುತ್ತಿದೆ. ಕತೆಯಾಗಿ-ದಂತಕತೆಯಾಗಿ, ನಂಬಿಕೆಯಾಗಿ-ಮೂಢನಂಬಿಕೆಯಾಗಿ, ಕಾವ್ಯವಾಗಿ-ಘಟನೆಯಾಗಿ ಹಲವು ಮಗ್ಗುಲುಗಳಲ್ಲಿ ಚಚರ್ೆಯಾಗಿರುವ `ಕೆರೆಗೆ ಹಾರ’ವನ್ನು ಮರು ನೋಡುವಿಕೆ ಮತ್ತು ಓದುವಿಕೆ ಮೂಲಕ ಇನ್ನಷ್ಟು ವಿಸ್ತರಿಸುವ ಪ್ರಯತ್ನ ಇಲ್ಲಿದೆ. ಈ ಕಾರಣಕ್ಕೆ `ಭಾಗೀರಥಿ’ ಐತಿಹಾಸಿಕ, ಸಾಮಾಜಿಕ, ಜನಪದ ಅನ್ನುವ ಮೂರೂ ವಿಭಾಗಗಳಿಗೂ ಒಪ್ಪಿಕೊಳ್ಳುವ ಚಿತ್ರ. ಕಾಲೇಜಿನ ಪಠ್ಯ ಮತ್ತು ಸಾಹಿತ್ಯದ ಶಿಸ್ತಿನಲ್ಲಷ್ಟೇ ಸೀಮಿತಗೊಂಡಿದ್ದನ್ನು ಸಿನಿಮಾದ ಸಾಧ್ಯತೆ ಮೂಲಕ ವಿಸ್ತರಿಸಿರುವುದು ಅದಕ್ಕೆ `ಕೆರೆಗೆ ಹಾರ’ ವಸ್ತುವಾಗಿರುವುದು ಜನಪದ ಸಂಸ್ಕೃತಿಯ ಸಾಂದ್ರತೆಯನ್ನು ತೋರಿಸುತ್ತದೆ. ಭಾಗೀರಥಿ ಅನ್ನುವ ಗರತಿ ತನ್ನ ಮಾವನ ಮಾತು ಕೇಳಿ ನೀರು ಕಾಣದ ಕೆರೆಗೆ ಆಹಾರವಾಗುತ್ತಾಳೆ. ಕೆರೆ ತುಂಬಿಕೊಳ್ಳುತ್ತದೆ. ಇದು ಜನಪದ ಕಾವ್ಯ ಕಥನ. ಇಲ್ಲಿ ಊರಿನ ಏಳಿಗೆಗಾಗಿ ಪ್ರಾಣ ಬಿಟ್ಟ ತ್ಯಾಗಮಯಿಯಾಗಿ ಕಾಣುತ್ತಾಳೆ. ಆದರೆ ಬರಗೂರರ ಭಾಗೀರಥಿ ವ್ಯವಸ್ಥೆಯನ್ನು ಆಳುವ ಗಂಡುತನದ ಗೊಡ್ಡುತನವನ್ನು ಪ್ರತಿಭಟಿಸುವ ಹೆಣ್ಣಾಗಿ ಧ್ವನಿಸುತ್ತಾಳೆ. `ಕೆರೆಗೆ ಹಾರ ಆಗಬೇಕಿರುವುದು ಯಾರೋ ಅಲ್ಲ… ಕಲ್ಲನಕೆರೆ ಮಲ್ಲನಗೌಡರ ಕಿರಿ ಸೊಸೆ’ ಅನ್ನುವಂತಹ ಡೈಲಾಗ್ಗಳು ಊರ ಗೌಡನ ಗೌಡಿಕೆಯಲ್ಲಿ ಬಾಯಿ ಕಳೆದುಕೊಂಡ ಸೊಸೆಯಾಗಿ, ಪುರುಷಾಧಿಪತ್ಯದ ಬಾಯಿಗೆ ಧ್ವನಿ ಕಳೆದುಕೊಂಡ ಹೆಣ್ಣಿನ ನರಳಾಟವಾಗಿ ಕೇಳಿಸುತ್ತದೆ. ಹಾಗೆಯೇ `ಹೆಣ್ಣಿನ ಬಲಿ ಕೇಳುತ್ತಿರುವ ಆ ಕೆರೆ ಗಂಡು ಕೆರೆಯೇ ಆಗಿರಬೇಕು’ ಅನ್ನುವ ಮಾತು ಗೆಳತಿ ಕಾವೇರಿಯ ಬಾಯಲ್ಲೂ ಬರುತ್ತದೆ. ಇಲ್ಲಿ ಪ್ರೀತಿ ಮಾತಿನಿಂದ ಹೆಣ್ಣಿನ ತುಟಿಗಳನ್ನು ಹೊಲಿದಿಟ್ಟ ಗಂಡುತನದ ವಿರುದ್ಧದ ಪ್ರತಿಭಟನೆಯೂ ಇದೆ. ನರಳಾಟ-ಪ್ರತಿಭಟನೆ ಇದ್ದಾಗ ಅದು ತ್ಯಾಗ ಅನ್ನಿಸಿಕೊಳ್ಳಲು ಹೇಗೆ ಸಾಧ್ಯ? ಅನ್ನುವ ಮರು ಓದಿಗೆ ಚಿತ್ರ ಪ್ರಚೋದಿಸುತ್ತದೆ. ಹೀಗೆ ಹೆಣ್ಣನ್ನು ಶೋಷಿಸುವ ಗಂಡುತನವೇ ವಿಲನ್ನಂತೆ ಕಂಡರೂ, ಆ ಗಂಡುತನ ಕೂಡಾ ಬ್ರಾಹ್ಮಣಶಾಹಿ ಪಿತೂರಿಗೆ ಕಾಲಾಳು ಆಗಿದೆ ಅನ್ನುವುದನ್ನೂ ಚಿತ್ರ ಧ್ವನಿಸುತ್ತದೆ. `ಹೆಣ್ಣಿನ ಜೀವವನ್ನು ಹೆಣ್ಣಿನ ಬಾಯಲ್ಲೇ ಕೇಳಿಸುವ ನೀವೆಂಥ ಗಂಡಸು’ ಅನ್ನುವ ಪ್ರಶ್ನೆಗೆ `ಬಲಿ ಕೇಳ್ತಾ ಇರೋದು ನಾನಾ? ಜೋಯಿಸ್ರು ತಾನೆ?’ ಅನ್ನುವ ಉತ್ತರ. `ಹಾಗಾದ್ರೆ ಜೋಯಿಸ್ರನ್ನೇ ಕೇಳಿ’ ಅನ್ನುವ ಸಿಟ್ಟಿಗೆ, `ಜೋಯಿಸ್ರೇನು ಜೀವ ಕೊಡ್ತಾರಾ?’ ಅನ್ನುವ ಅಸಹಾಯಕ ಸಿಟ್ಟು. ಇದೇ ಸಿಟ್ಟು ಶಾಸ್ತ್ರ, ಸಂಪ್ರದಾಯದ ಹೆಸರಲ್ಲಿ ನಿರಂತರವಾಗಿ ಜೀವಬಲಿ ಕೇಳುತ್ತಿದೆ ಅನ್ನುವುದಕ್ಕೂ ಪ್ರತಿಭಟನೆ ಆಗಿ ವ್ಯಕ್ತವಾಗುತ್ತದೆ. `ನೂರಾರು ವರ್ಷದ ಸಂಪ್ರದಾಯಕ್ಕೆ ನಾನು ಬಾಯಿ ಅಷ್ಟೆ. ನಾನು ಬಾಯಿ ಅಗಿದ್ದಕ್ಕೆ ನೀನು ಹಾವು ಆಗ್ಬೇಡ’ ಅನ್ನುವ ಪುರೋಹಿತಶಾಹಿಯ ಪುಕ್ಕಲುತನವನ್ನೂ ಕೂಡಾ `ಭಾಗೀರಥಿ’ ಬಿಚ್ಚಿಡುತ್ತಾಳೆ. ಹೀಗೆ `ತ್ಯಾಗ’ದ ಜಾಗದಲ್ಲಿ `ಬಲಿ’ಯನ್ನು ತಂದು ನಿಲ್ಲಿಸಿ ಜನಪದ ಕಾವ್ಯಕಥನವೊಂದು ಪ್ರತಿಭಟನಾ ಕಾವ್ಯವಾಗಿ ತೆರೆದುಕೊಳ್ಳುವ ಸಿನಿಮಾ ತನ್ನ ಕಾಳಜಿ ಮತ್ತು ಉದ್ದೇಶದಲ್ಲಿ ಸಮಾಜಮುಖಿ ಅಭಿರುಚಿ ಹೊಂದಿದೆ. ಆದರೆ ಸಿನಿಮಾ ಅವತ್ತಿನ ಕಾಲಘಟ್ಟಕ್ಕೇ ಸ್ಥಗಿತಗೊಂಡು ಅದಕ್ಕೊಂದು ಸಮಕಾಲೀನತೆಯನ್ನು ಒದಗಿಸಿಕೊಡುವುದರಲ್ಲಿ ಸೋಲುತ್ತದೆ. ಶಿಕ್ಷಣ ಮತ್ತು ಮಾಧ್ಯಮಗಳು ಇಲ್ಲದ ಆ ಹೊತ್ತಿನ ಶೋಷಣೆ ಈ ಹೊತ್ತಿನ `ಮಯರ್ಾದಾ ಹತ್ಯೆ’ಗಳಂತಹ ಪ್ರಕರಣಗಳಲ್ಲೂ ಕಾಣಬಹುದಾಗಿದೆ. ಮಾಧ್ಯಮಗಳ ಆರ್ಭಟಗಳಿರುವ ಈ ಹೊತ್ತಿನಲ್ಲೂ ಸಂಪ್ರದಾಯದ ಹೆಸರಲ್ಲಿ ಹೆಣ್ಣಿನ ಶೋಷಣೆ, ಬಲಿಗಳು ನಡೆಯುತ್ತಿರುವುದು ನಿದರ್ೇಶಕರ ಉದ್ದೇಶದಲ್ಲಿ ಸೇರ್ಪಡೆಗೊಂಡಿದ್ದರೆ ಸಿನಿಮಾದ ವ್ಯಾಪ್ತಿ ದೇಶ-ಕಾಲವನ್ನು ಮೀರಿ ನಿಲ್ಲುತ್ತಿತ್ತು. ನಿರೂಪಣಾ ಶೈಲಿಯಲ್ಲಿ ಮೊದಲ ಅರ್ಧದ ಕೊರತೆಯನ್ನು ದ್ವಿತೀಯ ಅರ್ಧ ಸರಿದೂಗಿಸುತ್ತದೆ. ಮೊದಲ ಅರ್ಧದಲ್ಲಿ ಸಡಿಲ ಚಿತ್ರಕತೆ ಕಾರಣಕ್ಕೆ ಭಾವಪ್ರಧಾನ ದೃಶ್ಯಗಳು ದುರ್ಬಲಗೊಂಡಿವೆ. ನಾಟಕೀಯತೆ ಕೂಡಾ ಸವಕಲು ಅನಿಸುತ್ತದೆ. ದ್ವಿತೀಯಾರ್ಧದಲ್ಲಿ ಹಿರಿ ಮತ್ತು ಕಿರಿ ಸೊಸೆಯರ (ತಾರಾ ಮತ್ತು ಭಾವನಾ) ಭಾವನಾತ್ಮಕ ಹೊಯ್ದಾಟ ಹೃದಯವನ್ನು ಹಿಂಡಿಬಿಡುತ್ತದೆ. ಅಷ್ಟೊತ್ತಿಗೆ `ಕೆರೆ ತುಂಬೋಕೆ ಕಣ್ಣೀರು ಸಾಲೋಲ್ಲ’ ಅನ್ನುವ ಡೈಲಾಗ್ ನೋಡುಗರನ್ನು ಬಿಕ್ಕಳಿಸುವಂತೆ ಮಾಡುತ್ತದೆ. ಹೀಗಾಗಿ ಮಧ್ಯಂತರದ ನಂತರ ತಾರಾ ಮತ್ತು ಭಾವನಾ ಅವರ ಜುಗಲ್ಬಂದಿ ಸಿನಿಮಾವನ್ನು ಗಾಢವಾದ ಭಾವಪ್ರಧಾನತೆ, ನಾಟಕೀಯತೆಯ ಅಂಗಳಕ್ಕೆ ತಂದು ನಿಲ್ಲಿಸಿಬಿಡುತ್ತದೆ. ಇದಕ್ಕೆ ಪೂರಕವಾಗಿ ಬರುವ ಸಂಭಾಷಣೆಗಳು ಸಿನಿಮಾವನ್ನು ವಿಶ್ಲೇಷಣಾತ್ಮಕವಾಗಿಯೂ ವಿಚಾರ ಪ್ರಧಾನದ `ಜಗುಲಿ’ಯಲ್ಲಿ ತಂದು ಕೂರಿಸುತ್ತದೆ. ಈ ಕಾರಣಕ್ಕೇ ದ್ವಿತೀಯಾರ್ಧ ಮೊದಲರ್ಧದ ಕೊರತೆಯನ್ನು ಕರಗಿಸುತ್ತದೆ. ಇನ್ನು ಬರಗೂರು ಅವರ ಉಳಿದ ಚಿತ್ರಗಳಂತೆ ವಿಚಾರ-ಭಾವಗಳು ಉತ್ತುಂಗದ ಜೊತೆಗೆ ತಾಂತ್ರಿಕ ಕೊರತೆಗಳು ಇಲ್ಲೂ ಮುಂದುವರೆದಿವೆ. ಸಿನಿಮಾದ ಸ್ವಭಾವದ ಕಾರಣದಿಂದ ಇದೊಂದು ಕಲಾತ್ಮಕ ಚಿತ್ರ ಪಂಗಡಕ್ಕೆ ಸೀಮಿತಗೊಳಿಸುವ ಅಪಾಯವನ್ನು ಮೀರಿಸುವಂತಹ ಬದ್ಧತೆಯನ್ನು ನಿಮರ್ಾಪಕ ಬಿ.ಕೆ.ಶ್ರೀನಿವಾಸ್ ತೋರಿಸುತ್ತಿದ್ದಾರೆ. ಮುಖ್ಯವಾಹಿನಿ ಅಂದುಕೊಂಡಿರುವ ಚಿತ್ರಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲದಂತೆ ಪ್ರಚಾರಕ್ಕೆ ಕೋಟಿಗಳನ್ನು ಕಳೆಯುತ್ತಿದ್ದಾರೆ. ಮೊದಲ ದಿನ ಚಿತ್ರಮಂದಿರಕ್ಕೆ ಬರುವ ಮಹಿಳೆಯರಿಗೆ `ಬಾಗಿನ’ ಕೊಟ್ಟು ಕರೆಯುವ ಜನಮುಖಿಯಾದ ಸಾಂಪ್ರದಾಯಿಕ ಜನಪದ ಆಚರಣೆಯನ್ನೂ ನಡೆಸುತ್ತಿದ್ದಾರೆ. ಏನೇ ಆಗಲಿ ಕನ್ನಡದ ಮಟ್ಟಿಗೆ ಇಂಥಾ ವೈಭವಗಳು ಅಪರೂಪ.  ]]>

‍ಲೇಖಕರು G

June 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

೧ ಪ್ರತಿಕ್ರಿಯೆ

  1. D.RAVI VARMA

    ಭಾಗೀರಥಿ “ನಿರ್ದೇಶಕರಾದ ಶ್ರೀ.ಬರಗೂರ್ ರಾಮಚಂದ್ರಪ್ಪ ಹಾಗು ನಿರ್ಮಾಪಕರಾದ ಬಿ,ಕೆ. ಶ್ರೀನಿವಾಸ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು. ಹಾಗೆ ನೋಡಿದ್ರೆ kannada kelave samvedanashiila nirdeshakaralli baraguru kuda obbaru .aste alla avara ii varegina cinemagalannu nodutta hodalli, avara vaicharika,chintane, saamajika kalakali, istellakku meerida ondu visista samajika baddathe eddu kanuttade, kelavu kaala prekshakarannu kaaduttade nanaganniso ಹಾಗೆ avara iivaregina ella chitragalana pradarshana ಹಾಗು avugala bagge ondu vistrutavaada charcheyaagabekide. kannadadalli baruva gunatmaka ಹಾಗು kalaatmaka chitragala bagge charche yaagade iruvudu ondu durantave sari aste alla ii cinemagalu saamanya prekshanige muttade uliyuttiruvudu kuda durantavenisuttade esto saari atuttama cinemagalu prashasti padedaagyu avu prekshakarannu muttade mulegumpaagive, ondu touring talkies iigina agatyaveno, aa mulaka janarige talupadiruva olle cinemagalannu janarige talupisalu saadyavaagabahudeno, ಹಾಗೆ ನೋಡಿದ್ರೆ ii bhaagirati ii hinde samudaayakkagi basalingaiah tumbaa adbuta ಹಾಗು manamuttuvante naatakavaagi nirdeshisiddaru, aa naatakada kelacu drsyagalu innu nanna kanna mundive. baraguraru mattu ಬಿ,ಕೆ ಶ್ರೀನಿವಾಸ avaru ii cinemavannu karnatakada uddagalakku preksharige talupuvante ಯೋಜನೆ ರೂಪಿಸಲಿ,ನಾವು ಅಂದಲ್ಲಿ ಒಂದಿಸ್ಟು ಗೆಳೆಯರು avarodanirutteve .
    ರವಿ ವರ್ಮ hosapete

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: