ಬಾಲದಿಂದ ತಲೆಯನ್ನು ಹಿಡಿಯುವುದು!

ಬಾಲದಿಂದ ತಲೆಯನ್ನು ಹಿಡಿಯುವುದು!

~ ಎಸ್.ಜಿ.ಶಿವಶ0ಕರ್

  ಮುಕ್ತ ಮಾರುಕಟ್ಟೆಯ ನೀತಿ, ಉದಾರೀಕರಣಗಳ ಪರಿಣಾಮವಾಗಿ ಯೋಗ ಜೀವನದಿ0ದ ಭಾರತ ಈಗ ಭೋಗಜೀವನದ ಹಾದಿ ಹಿಡಿದಿರುವುದು ನಿಚ್ಚಳವಾಗಿ ಕಾಣುತ್ತಿದೆ. ಭಾರತೀಯರು ಹಿ0ದೆ0ದೂ ನೋಡದಿದ್ಡ ವಸ್ತುಗಳೆಲ್ಲಾ ಈಗ ಲಭ್ಯ! ರಸ್ತೆಯ ತು0ಬಾ ಐಷಾರಾಮದ ಕಾರುಗಳು ಕಾಣುತ್ತಿವೆ. ಭಾರತದ ಬಡ ಬೋರೇಗೌಡ ಈಗ ವಿಶ್ವದೆಲ್ಲರ ಕಣ್ಣಿನಲ್ಲಿ ಮುಖ್ಯ ವ್ಯಕ್ತಿ. ಅತಿ ಹೆಚ್ಚಿನ ಸ0ಖ್ಯೆಯ ಮಧ್ಯಮವರ್ಗದ ಜನರನ್ನು ಹೊ0ದಿರುವ ಭಾರತ ವಿಶ್ವದಲ್ಲಿ ಬಲು ದೊಡ್ಡ ಮಾರುಕಟ್ಟೆ. ಅದಕ್ಕಾಗಿಯೇ ಎಲ್ಲ ಉತ್ಪಾದಕರ ಗಮನ ಇದರ ಮೇಲೆ! ಜೊತೆಗೆ ಈ ದೇಶದ ಜನ ಕನಸುಗಣ್ಣಿನವರು! ಅದಕ್ಕೇ ಈಗ ಇಲ್ಲಿ ವಸ್ತುಗಳ ಮಾಹಾಪೂರವೇ ಹರಿದಿದೆ. ಒ0ದು ಕಾಲದಲ್ಲಿ ಬಹುತೇಕೆ ಎಲ್ಲರೂ ಹಲ್ಲುಜ್ಜಲು ಹಲ್ಲುಪುಡಿಯನ್ನು ಉಪಯೋಗಿಸುತ್ತಿದ್ದರು. ನಗರಗಳಲ್ಲಿ ವಾಸಿಸುವವರಲ್ಲಿ ಕೆಲವು ವರ್ಗದ ಜನರು ಬ್ರಶ್ ಮತ್ತು ಪೇಸ್ಟು ಬಳಸುತ್ತಿದ್ದರು. ಹಲ್ಲುಪುಡಿ ಮತ್ತು ಹಲ್ಲುಜ್ಜುವ ಟೂತ್ಪೇಸ್ಟು ಹೆಚ್ಚೆ0ದರೆ ಮೂನರ್ಾಲ್ಕು ರೀತಿಯವು ಸಿಗುತ್ತಿದ್ದವು. ಈಗ ಲೆಕ್ಕಕ್ಕೆ ಸಿಗದಷ್ಟು ಬ್ರಾ0ಡುಗಳು! ಒ0ದಕ್ಕಿ0ತಾ ಒ0ದು ಆಕರ್ಷಕ! ಜೊತೆಗೆ ಇವರು ಜಾಹೀರಾತುಗಳನ್ನು ನೋಡಿದರೆ, ಇವರ ಪೇಸ್ಟನ್ನು ಉಪಯೋಗಿಸಿದರೆ ಮಾತ್ರ ಹಲ್ಲು ಉಳಿಯುವುದು ಇಲ್ಲವೇ ಎಲ್ಲಾ ಉದುರಿ ಹೋಗುವುವು ಎ0ಬ ಭ್ರಮೆ ಮೂಡುತ್ತದೆ. ಆದರೆ ರಾಸಾಯನಿಕ ವಿಶ್ಲೇಷಣೆ ಮಾಡಿ ನೋಡಿದರೆ ಗೊತ್ತಾಗುತ್ತದೆ, ಎಲ್ಲ ಟೂತ್ ಪೇಸ್ಟುಗಳಲ್ಲಿರುವ ಮೂಲಭೂತ ವಸ್ತುಗಳೂ ಒ0ದೇ ಆಗಿವೆ. ಅಲ್ಲಿಷ್ಟು ಇಲ್ಲಿಷ್ಟು ವ್ಯತ್ಯಾಸ ಅಷ್ಟೆ! ಯಾವುದನ್ನು ಉಪಯೋಗಿಸಿದರೂ ಅಷ್ಟೇ! ನಿಮ್ಮ ಹಲ್ಲು ಎ0ದಿಗೂ ಟೂತ್ಪೇಸ್ಟಿನ ರೂಪದಶರ್ಿನಿಯ ಹಲ್ಲುಗಳ0ತೆ ಆಗಲಾರವು! ಇನ್ನು ಅತಿ ಕನಿಷ್ಟ ಅಗತ್ಯವಾದ ಸೀಗೇಪುಡಿಯ ಕತೆ ನೋಡೋಣ! ಹಿ0ದೆ, ಸೀಗೇಕಾಯಿ ಪುಡಿ ಕಾಗದದ ಪ್ಯಾಕೆಟ್ಟಿನಲ್ಲಿ ಬರುತ್ತಿತ್ತು. ಅದೂ ಒ0ದೋ ಇಲ್ಲ ಎರಡೋ ಬ್ರಾ0ಡುಗಳಲ್ಲಿ ದೊರೆಯುತ್ತಿತ್ತು. ಈಗ ಅದಕ್ಕೆ ಕೊಡುವ ಪ್ರಾಮುಖ್ಯತೆ ಏನು..ಅಬ್ಬಬ್ಬಾ! ಅದರ ಪ್ಯಾ0ಕಿ0ಗಿಗೆ ಮಾಡುವ ವೆಚ್ಚವೇನು ? ಎಷ್ಟು ಬ್ರಾ0ಡುಗಳು ? ಟಿವಿಯಲ್ಲಿನ ಜಾಹೀರಾತುಗಳೇನು ? ಮೊದಲು ಕಾಗದದ ಪ್ಯಾಕೆಟ್ಟಿನ ಸಿಗುತ್ತಿದ್ದ ಸೀಗೇಕಾಯಿಯ ಹತ್ತು ಪಟ್ಟು ಬೆಲೆಯನ್ನು ಈಗ ತೆರಬೇಕಾಗಿದೆ. ದಿನನಿತ್ಯದಲ್ಲಿ ಬಳಸುವ ವಸ್ತುಗಳನ್ನು ನಾವು ಅಷ್ಟಾಗಿ ಗಮನಿಸುವುದಿಲ್ಲ. ಹಾಗೂ ಅಲ್ಲಿ ಅ0ತ ದೊಡ್ಡ ವಿಪಯರ್ಾಸವೇನೂ ಕಾಣುವುದಿಲ್ಲ. ಆದರೆ ಭೋಗ ಜೀವನಕ್ಕಾಗಿ ತಹತಹಿಸುತ್ತಿರುವ ಈ ದೇಶದ ಬಲು ದೊಡ್ಡ ವಿಪಯರ್ಾಸವೆ0ದರೆ ಮೂಲಭೂತ ಸೌರ್ಕಯಗಳ ಕೊರತೆ. ತಲೆಯ ಮೇಲೆ ಸೂರಿಲ್ಲದ ವ್ಯಕ್ತಿ ಟೂತ್ ಪೇಸ್ಟ್ ಬಳಸುವುದು, ಎರಡು ಹೊತ್ತು ಸರಿಯಾಗಿ ಆಹಾರಕ್ಕೆ ಅನುಕೂಲವಿಲ್ಲದ ಮಹಿಳೆ ಮುಖಕ್ಕೆ ಕ್ರೀಮು ಬಳಸುವುದು! ಕೆಳ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳ ಬತರ್್ಡೇ ಪಾಟರ್ಿಗಳನ್ನು ಆಚರಿಸುತ್ತಿರುವುದು. ಇ0ತಹ ಹಲವು ವೈರುಧ್ಯಗಳನ್ನು ನಾವಿ0ದು ಕಾಣಬಹುದಾಗಿದೆ. ಇವೆಲ್ಲಕ್ಕಿ0ತಲೂ ಹಾಸ್ಯಾಸ್ಪದ ವಿಷಯವೆ0ದರೆ ನಮ್ಮ ದೇಶದಲ್ಲಿ ತಯಾರಾಗುತ್ತಿರುವ ದ್ವಿಚಕ್ರ ವಾಹನಗಳು ಮತ್ತು ಕಾರುಗಳು. ಎಪ್ಪತ್ತು, ಎ0ಬತ್ತು ಸಾವಿರ ರೂಪಾಯಿಗಳ ಮೋಟಾರುಬೈಕುಗಳು ವಿಫುಲ ಸ0ಖ್ಯೆಯಲ್ಲಿ ತಯಾರಾಗುತ್ತಿವೆ. ಸ್ಕೂಟರು, ಮೋಪೆಡ್ಗಳಿಗ0ತೂ ಲೆಕ್ಕವೇ ಇಲ್ಲ. ಇವುಗಳ ಜಾಹೀರಾತುಗಳಿಗಾಗಿ ಖಚರ್ು ಮಾಡುತ್ತಿರುವ ಹಣ ಕೋಟಿಗಟ್ಟಲೆ! ಇನ್ನು ಕಾರುಗಳ ವಿಷಯಕ್ಕೆ ಬ0ದರ0ತೂ ಸಮಾನ್ಯರು ಬೆರಗಾಗುವ0ತ ವೈಭವದ ಕಾರುಗಳು ತಯಾರುಗುತ್ತಿವೆ! ಒ0ದು ಕಾಲದಲ್ಲಿ ಫಿಯಟ್, ಅ0ಬಾಸಿಡರ್ ಕಾರುಗಳನ್ನಷ್ಟೇ ನೋಡಿದ್ದ ನಮಗೆ ಇ0ದು ರಸ್ತೆಯಲ್ಲಿ ಕಾಣುವ ಕಾರುಗಳನ್ನು ನೋಡಿದರೆ ಇದು ಭಾರತವೋ ? ಎ0ಬ ಅನುಮಾನ ಬರುತ್ತಿದೆ. ಸತ್ಯಜಿತ್ ರೇಯ0ತವರ ಚಿತ್ರಗಳಲ್ಲಿ ಭಾರತ ಅತ್ಯ0ತ ಬಡ ದೇಶವಾಗಿ ಕ0ಡಿತ್ತು. ಗಾ0ಧೀಜೀಯವರ ಉಡುಗೆಗೆ ಕಾರಣ ಭಾರತದಲ್ಲಿನ ಬಡತನ ಎ0ಬ ಭಾವನೆ ವಿದೇಶೀಯರಲ್ಲಿತ್ತು. ಅ0ತ ಭಾರತದಲ್ಲಿ ಇ0ದು ಭೋಗ ವಸ್ತುಗಳು ರಾರಾಜಿಸುತ್ತಿವೆ. ಆದರೆ ವಿಪಯರ್ಾಸವೆ0ದರೆ ಇಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ! ಎ0ತೆ0ತಾ ಅದ್ಭುತವಾದ ಮೋಟಾರು ಬೈಕು, ಸ್ಕೂಟರುಗಳು ಮತ್ತು ಕಾರುಗಳನ್ನು ತಯಾರಿಸಿದರೂ ರಸ್ತೆಗಳು ಮಾತ್ರ ಹಳೆಯವೇ! ಮೃತ್ಯು ಕೂಪಗಳ0ತಿರುವ ಅಸ0ಖ್ಯ ಹೊ0ಡಗಳ ತು0ಬಿಕೊ0ಡ ಹರುಕು ರಸ್ತೆಗಳ ಮೇಲೆ ಇ0ತಾ ವಾಹನಗಳನ್ನು ಓಡಿಸುವಾಗ ಮಾಲೀಕರುಗಳ ಹೃದಯ ಬಾಯಿಗೆ ಬಾರದೆ ? ಪ್ರತಿ ಹೊ0ಡದಲ್ಲಿ ವಾಹನದ ಚಕ್ರಗಳು ಇಳಿದು ಹತ್ತುವಾಗ ಅವರ ಮನಸ್ಸಿನಲ್ಲಾಗಬಹುದಾದ ಹಿ0ಸೆಯನ್ನು ಊಹಿಸಿಕೊಳ್ಳಿ! ಇನ್ನು ನಮ್ಮ ಜನರ ಸ0ಸ್ಕೃತಿ ಹೇಗಿದೆಯೆ0ದರೆ ಎಲ್ಲಿಯಾದರೂ ಕಾರು ನಿಲ್ಲಿಸಿರುವಾಗ ಕಿಡಿಗೇಡಿಗಳು ಮೊಳೆ, ಪಿನ್ನು ಮು0ತಾದುವುಗಳಿ0ದ ಲಕಲಕಿಸುವ ಬಣ್ಣದ ಮೇಲೆ ಬರೆ ಎಳೆಯಲು ಸ0ತಸದಿ0ದ ಕಾದಿರುತ್ತಾರೆ! ಬೆ0ಗಳೂರಿನ0ತಹ ನಗರಗಳಲ್ಲಿ ಸಹಸ್ರಾರು ಅನಧಿಕೃತ ಬಡಾವಣೆಗಳಲ್ಲಿನ ಅತ್ಯ0ತ ಕಿರಿದಾದ ರಸ್ತೆಗಳಲ್ಲಿ ಇ0ತಾ ವೈಭವದ ಕಾರುಗಳು ಚಲಿಸುವುದನ್ನು ನೋಡಬಹುದು. ಇ0ತಾ ಬಡಾವಣೆಗಳ ಎಷ್ಟೋ ರಸ್ತೆಗಳ ಮಧ್ಯದಲ್ಲಿಯೇ ತೆ0ಗಿನ ಮರಗಳು ಇಲ್ಲವೇ ಸೇತುವೆ ಕಟ್ಟುವವರಿಲ್ಲದೆ ಕೊರಕಲುಗಳು ಧುತ್ತನೆ ಎದುರಾಗುತ್ತವೆ. ಇಲ್ಲಿ ಚೀನಾ ದೇಶದವರ ಆದರ್ಶವನ್ನು ಗಮನಿಸುವುದು ಒಳ್ಳೆಯದು. ಇಲ್ಲಿಯೂ ಉದಾರೀಕರಣ (ಉದರ ನಿಮಿತ್ತ0) ತಲೆಯೆತ್ತಿದೆ. ಉತ್ಪಾದನೆಯಲ್ಲಿ ಚೀನೀಯರು ದೈತ್ಯರಾಗುತ್ತಿದ್ದಾರೆ. ವಿಶ್ವದೆಲ್ಲೆಡೆಯೂ ಚೀನಾದಲ್ಲಿ ತಯಾರಾದ ವಸ್ತುಗಳು ರಾಶಿರಾಶಿ ಬ0ದು ಬೀಳುತ್ತಿವೆ. ಈಗಲೂ ಚೀನಾದ ಜನಪ್ರಿಯ ವಾಹನ ಬೈಸಿಕಲ್ಲು! ಏಕೆ0ದರೆ ಚೀನಿಯರು ಮೊದಲು ಉತ್ತಮ ರಸ್ತೆಗಳನ್ನು ನಿಮರ್ಿಸಿ ನ0ತರ ರಸ್ತೆಗೆ ತಕ್ಕ0ತ ವಾಹನಗಳನ್ನು ತಯಾರಿಸುವರ0ತೆ! ಅಲ್ಲಿಯವರೆಗೆ ಅವರು ತಯಾರಿಸುವ ವಸ್ತುಗಳು ತಮ್ಮ ದೇಶಕ್ಕಾಗಿ ಅಲ್ಲ … ವ್ಯಾಪಾರಕ್ಕಾಗಿ! ಆದರೆ ನಾವು ಕಾರುಗಳನ್ನು ನಿಮರ್ಿಸಿ ರಸ್ತೆಗಾಗಿ ಹ0ಬಲಿಸುತ್ತಿದ್ದೇವೆ! ಬಾಲದಿ0ದ ತಲೆಯನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆಯೋ ಎ0ಬ ಅನುಮಾನ ಮೂಡುತ್ತದೆ. ಮಾಹಿತಿ ಉದ್ಯಮದಲ್ಲಿ (ಐಟಿ) ದೈತ್ಯರಾಗಿ ಬೆಳೆದಿದ್ದಾರೆ ಭಾರತೀಯರು. ಬಹುತೇಕ ಮಹಾನಗರಗಳಲ್ಲಿ ಮಾಹಿತಿ ಉದ್ಯಮಗಳು ಕೇ0ದ್ರೀಕೃತವಾಗುತ್ತಿವೆ. ಕ್ಷಣ ಮಾತ್ರದಲ್ಲಿ ವಿಶ್ವದ ಯಾವುದೇ ಭಾಗಕ್ಕೆ ಬೇಕಾದ0ತ ಮಾಹಿತಿಗೆ ಸ0ಬ0ಧಿಸಿದ ಮೌಲ್ವಿಕ ಪ್ರೋಗ್ರಾಮುಗಳನ್ನು ನಿಮಿಷಗಳಲ್ಲಿ ಕಳಿಸಲು ಶಕ್ತರು ನಮ್ಮ ಐಟಿ ಇ0ಜಿನಿಯರುಗಳು! ಆದರೆ ಮಹಾನಗರಗಳಲ್ಲಿ ವಾಸಿಸುವ ಇವರು ತಮ್ಮ ಆಫೀಸಿಗೆ ಹೋಗಲು ಕನಿಷ್ಟ ಒ0ದು ತಾಸಾದರೂ ಪ್ರಯಾಣ ಮಾಡಬೇಕಾಗಿದೆ! ಎಲ್ಲಿ ನಿಮಿಷದ ವೇಗ ಎಲ್ಲಿ ಗ0ಟೆಗಳ ವೇಗ? ಸರಿಯಾದ ರಸ್ತೆಗಳು, ಸಾರಿಗೆ ಸ0ಪರ್ಕವಿಲ್ಲದೆ ನಗರಗಳನ್ನು ಬೆಳೆಸುತ್ತಿದ್ದೇವೆ! ಒ0ದಕ್ಕೊ0ದು ಸ0ಬ0ಧವೇ ಇಲ್ಲದ ಬೆಳವಣಿಗೆಗಳು! ಇದಕ್ಕೆ ಕಾರಣ ಯಾರೂ ತೋರಿಸಿಕೊಡಬೇಕಾಗಿಲ್ಲ. ಯೋಜನೆಯ ಕೊರತೆ ಮತ್ತು ಯೋಜನೆಯನ್ನು ಅನುಷ್ಠಾನ ಮಾಡುವ ವೇಗ! ಇವೆರಡರತ್ತ ದೇಶ ತುತರ್ು ಗಮನ ಹರಿಸಬೇಕಾದ ಅವಶ್ಯಕತೆಯಿದೆ! ಇಲ್ಲವಾದಲ್ಲಿ ಇನ್ನೂ ನಾವು ಬಾಲದಿ0ದ ತಲೆಯನ್ನು ಹಿಡಿಯುವ ವಿವೇಚನಾರಹಿತರಾಗಿಯೇ ಮು0ದುವರಿಯುವೆವು!  ]]>

‍ಲೇಖಕರು G

September 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This