ಬಾಲ್ಕನಿಯಲ್ಲಿ ನೆನಪುಗಳ ಸಂತೆ…

 

ಎಷ್ಟೊಂದು ಒಳ್ಳೆಯ ಬ್ಲಾಗ್ ಗಳು ಅರಳುತ್ತಿವೆ. ಒಂದಷ್ಟು ಒಳ್ಳೆಯ ಓದಿಗೆ ದಾರಿ ಮಾಡಿ ಕೊಡುತ್ತಿವೆ..ಇಂತಹ ಬ್ಲಾಗ್ ಸಾಲಿನಲ್ಲಿ ಬಂದು ನಿಂತಿದೆ ಕೆನೆ coffee. ಹೆಸರೂ ಭಿನ್ನ. ಬರಹವೂ ಅಷ್ಟೆ.
ಕಪಾಟಿನೊಳಗಿನದು ಹೊಸದೇ ಪ್ರಪಂಚ
ಯಾರದೋ ಗುಟ್ಟು, ಯಾರದೋ ಜಮೀನು ನಕ್ಷೆ
ಬಚ್ಚಿಟ್ಟು ಕಳೆದುಕೊಂಡ ಪ್ರೀತಿ,
ಕದ್ದು ನೋಡುವ ನಗ್ನ ಚಿತ್ರ
ಎಲ್ಲ ಬಯಲಾಗಿಬಿಡಬಹುದೇನೋ ….
ಇದು ಒಂದು ಸ್ಯಾಂಪಲ್. ಕೆನೆ coffee ರುಚಿಯನ್ನು ನೀವೇ ಸವಿಯಿರಿ- 

ನಾನು ಮತ್ತು ಬಾಲ್ಕನಿ….
ಇವತ್ತು ಬಾಲ್ಕನಿ ಒದ್ದೆ ಒದ್ದೆ………
ಬೆಳಗಿನಿಂದಲೂ ಹೀಗೇ, ಮೂಡ್ ಆಫ್ ಮಾಡಿಕೊಂಡಂತಿರುವ ಆಕಾಶ.
ಇನ್ನೇನು ಅತ್ತೇ ಬಿಡುವಂತೆ……
ಮಳೆ ಬರುವ ಮುಂಚೆ ಕಪ್ಪಿಟ್ಟ ಮುಗಿಲು, ಥ೦ಡಿ ಗಾಳಿ, ನಿದ್ದೆಗಣ್ಣಿನ, ತೂಕಡಿಸುವ ವಾತಾವರಣ.
ಆಹಾ…! ಎಷ್ಟು ರೊಮ್ಯಾಂಟಿಕ್ ಕಣೇ…..ಎಂದುಕೊಳ್ಳುವ ಹಂತ ದಾಟಿಬಿಟ್ಟಿದ್ದೇನೆ.
ಮನಸಲ್ಲಿ ಎಂತದೋ ದುಗುಡ ತುಂಬಿಕೊಂಡ ಅಳುಮುಖದ ಹುಡುಗನ ಹಾಗೆ
ಆಕಾಶ ಅಂತೆಲ್ಲ ಅನಿಸಲು ಶುರುವಾಗಿರುವುದು ಈಗೀಗ ಅಷ್ಟೇ……
ಕಂಹೀ ದೂರ್ ಜಬ್ ದಿನ್ ಡಲ್ ಜಾಯೇ
ಸಾಂಜ್ ಕೀ ದುಲ್ಹನ್ ಬದನ್ ಚುರಾಯೇ
ಚುಪ್ ಕೈಸೆ ಆಯೆ ……..
ಅಂತ ಜಗಜಿತ್ ರ ಗಜ಼ಲ್ ಬ್ಯಾಕ್‌ಗ್ರೌಂಡ್ ನಲ್ಲಿ ಹಾಕಿ ಕುಳಿತು ಬಿಟ್ಟರಂತೂ ಬಾಲ್ಕನಿಯಲ್ಲಿ
…..
ಮನೆ ಕೆಳಗಿನ ಚಂದದ ಟಾರು ರಸ್ತೆಯ ಮೇಲೆ ರಪರಪನೆ ಮಳೆ ಸುರಿವ ಕ್ಷಣಗಳು ನನ್ನ ಫೆವರಿಟ್ !
ನಮ್ಮ ಹಿಂದಿ ಸಿನೆಮಾದ ಹೀರೋಯಿನ್ ಗಳಂತ ಜೋರು ಮಳೆ ಬರುವಾಗ ಖಾಲಿ ರಸ್ತೆಯಲ್ಲಿ
ಒಮ್ಮೆಯದಾದ್ರೂ ತಕತಕ ಕುಣಿದುಬಿಡಬೇಕು ಅಂತ ಮಳೆ ಬಂದಾಗೆಲ್ಲ ಯೋಚಿಸುತ್ತೇನೆ!
ಆದ್ರೆ ಅವೆಲ್ಲ್ಲ ಆಗೋ ಹೋಗೋ ಮಾತೇ? “ಇಷ್ಟು ಸಣ್ಣ ವಯಸ್ಸಿಗೇ ಹೇಗಾಗಿಹೋಗಿದೆ ನೋಡಿ ಪಾಪ “ಅಂದುಕೊಳ್ಳುತ್ತ ನಡೆದುಬಿಟ್ಟಾರು ನಮ್ಮ ಜನ ಆಮೇಲೆ!!
ನಂದು ಬಿಡಿ, ಪ್ರತಿದಿನ ಬಾಲ್ಕನಿಯಲ್ಲಿ ಕೂತು ಕೈಲೊಂದು ಕಪ್ ಕೆನೆಕಾಫಿಯೊಂದಿಗೆ
ಅಪರಾತಪರ ಕನಸು ಕಾಣೋದು ಚಟವಾಗಿಬಿಟ್ಟಿದೆ
ಕನಸು ಕಾಣೋದಿಕ್ಕೇನು ಹೇಳಿ, ಕಾಸೇ, ಖರ್ಚೇ??!
ಜಗಜಿತ್ ಸಿಂಗ್ ಹಾಡು ಮುಗಿಸಿ ಸುಮ್ಮನಾಗಿದ್ದಾನೆ.
ಕಾಫಿಯಲ್ಲಿನ ಕೆನೆ ನಿಧಾನಕ್ಕೆ ಕರಗುತ್ತಿದೆ…….
ಬಾಲ್ಕನಿಯ ಮತ್ತೊಂದು ಕನಸಿಗೆ ರೆಡಿಯಾಗುತ್ತಿದೆ………………..

‍ಲೇಖಕರು avadhi

September 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. ವೈಶಾಲಿ

  ಪ್ರಿಯ ಅವಧಿ,
  http://kenecoffee.wordpress.com/2008/09/22/ಪ್ರಿಯ-ಅವಧಿ/
  ಅಂತೂ ನಂಗೂ ಒಂದು ವೇದಿಕೆ ಕೊಟ್ಟೇ ಬಿಟ್ರಿ!
  ತುಂಬಾ ಥ್ಯಾಂಕ್ಸ್ ಕಣ್ರೀ…
  ಜನಾನೂ ನನ್ನ ಕಾಫೀನಲ್ಲಿ ಪಾಲು ಕೇಳ್ತಾ ಇದಾರೆ
  ಬಾಲ್ಕನಿ Housefull ಆಗ್ತಿದೆ! ಥ್ಯಾಂಕ್ಸ್.
  – ವೈಶಾಲಿ

  ಪ್ರತಿಕ್ರಿಯೆ
 2. ವೈಶಾಲಿ

  Thanks parameshwara avare,
  nan blog nolge bandu nodiddakke. barta iri. 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: