ಬಿಳಿಮಲೆ ಕಾಲಂ : ಕನ್ನಡ ಭಾಷೆಗೆ ರಾಷ್ಟ್ರೀಯ ಹಾಗೂ ಜಾಗತಿಕ ಮನ್ನಣೆ

ಕೃಪೆ : ವಿಜಯ ಕರ್ನಾಟಕ ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಇಡೀ ಕನರ್ಾಟಕ ಸಹಜವಾಗಿಯೇ ಸಂಭ್ರಮಿಸಿತು. ಪ್ರಶಸ್ತಿ ಬಂದಿರದಿದ್ದರೂ ಕನ್ನಡದ ಸಂದರ್ಭದಲ್ಲಿ ಕಂಬಾರರ ಸಾಹಿತ್ಯಿಕ ಸ್ಥಾನಕ್ಕೇನೂ ಚ್ಯುತಿಯಿರಲಿಲ್ಲ. ಕನ್ನಡ ವಿಮಶರ್ೆ ಅವರನ್ನು ಅತ್ಯಂತ ಮಹತ್ವದ ಬರೆಹಗಾರರೆಂದು ಈಗಾಗಲೇ ಮನ್ನಣೆ ನೀಡಿದೆ. ಜ್ಞಾನಪೀಠ ಪ್ರಶಸ್ತಿ ಅವರಿಗೆ ರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತು. ಆದರೆ ಕನರ್ಾಟಕ ಸಂಭ್ರಮಿಸಿದ ಹಾಗೆ ದೇಶ ಕಂಬಾರರ ಬಗೆಗೆ ಸಂಭ್ರಮಿಸಿತೇ? ಇಡೀ ರಾಷ್ಟ್ರ ಸಂಭ್ರಮಿಸುವ ಹಾಗೆ ಮಾಡಲು ನಮಗೆ ಸಾಧ್ಯವಾಯಿತೇ? ರವೀಂದ್ರನಾಥ ಠಾಗೋರರ 150ನೇ ಹುಟ್ಟುಹಬ್ಬವನ್ನು ಈಚೆಗೆ ಒಂದು ಜಾಗತಿಕ ಉತ್ಸವವಾಗಿ ಆಚಿಸಲಾಯಿತು. ದೆಹಲಿ, ಶಿಕಾಗೋ, ಮಾಸ್ಕೋ, ಲಂಡನ್, ಟೋಕಿಯೋ ಮತ್ತಿತರ ಮಹಾನಗರಗಳ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಠಾಗೋರರ ಬಗ್ಗೆ ಬಗೆಬಗೆಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಆದರೆ ನಮಗೆ ಆ ಬಗೆಯ ವಿಸ್ತಾರದಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಅತ್ಯಂತ ಸತ್ವಭರಿತ ಕನ್ನಡಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಕ್ತಿಯುತವಾದ ವೇದಿಕೆಯನ್ನು ನಿಮರ್ಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಇಡೀ ಕನರ್ಾಟಕಕ್ಕೆ ಹೊಸಬಗೆಯ ಚೈತನ್ಯ ನೀಡಿದ ಮಹಾಕವಿ ಕುವೆಂಪು ಅವರ ಶತಮಾನೋತ್ಸವವನ್ನೇ ಒಂದು ರಾಷ್ಟ್ರೀಯ ಉತ್ಸವವನ್ನಾಗಿ ಮಾಡಲು ನಮಗೆ ಶಕ್ತಿ ಸಾಲದಾಯಿತು. ಬೇಂದ್ರೆ, ಮಾಸ್ತಿ, ಅಡಿಗ, ಲಂಕೇಶ್, ಕಾರಂತ, ನರಸಿಂಹ ಸ್ವಾಮಿ ದೇಶಕ್ಕೆ ಗೊತ್ತಿಲ್ಲ. ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇರಳದ ಕಥಕಳಿ ಕಂಡಾಗ ಸಂತೋಷವಾಗುತ್ತದೆ, ಆದರೆ ಯಕ್ಷಗಾನ ಇಲ್ವಲ್ಲಾ ಎಂದಾಗ ವಿಷಾದವಾಗುತ್ತದೆ. ಸುಬ್ರಹ್ಮಣ್ಯ ಭಾರತಿ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಹೆಮ್ಮೆಯಾಗುತ್ತದೆ, ಆದರೆ ಕರ್ನಾಟಕ ಕಾಣೆಯಾಗಿದೆಯಲ್ಲಾ ಅಂದುಕೊಂಡಾಗ ವಾಹನದ ವೇಗ ಗೊತ್ತಿಲ್ಲದೇ ನಿಧಾನವಾಗುತ್ತದೆ.   ನಮ್ಮ ಇಂಥ ಆಸೆಗಳಿಗೆ ವಿರುದ್ಧವಾಗಿ ಕರ್ನಾಟಕವು ಇಂದು ಒಂದು ಕೊಳಕು ರಾಜ್ಯವಾಗಿ ಎಲ್ಲ ವೇದಿಕೆಗಳಲ್ಲಿ ಪ್ರಕಟಗೊಳ್ಳುತ್ತಿದೆ. ಅಧಿಕಾರ ರಾಜಕಾರಣದ ವಿಚಿತ್ರ ಚೇಷ್ಟೆಗಳು, ಅಂತ್ಯವಿಲ್ಲದ ಭೂ ಹಗರಣಗಳು, ವಿಧಾನ ಸೌಧದಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಘಟನೆ, ವಕೀಲರ ಗೂಂಡಾಗಿರಿ, ಮಠಾಧೀಶರ ಅನೈತಿಕ ನಡವಳಿಕೆಗಳು, ಪತ್ರಕರ್ತರ ಭ್ರಷ್ಟತೆ, ಭುಗಿಲೆದ್ದ ಜಾತೀಯತೆ, ಮೊದಲಾದವುಗಳು ಇಂದು ಕರ್ನಾಟಕದ ಘನತೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಣ್ಣುಪಾಲು ಮಾಡಿವೆ. ಸಿರಿಗಂಧದ ಸುವಾಸನೆಯ ನಾಡು ಇಂದು ದುರ್ಗಂಧಕ್ಕೆ ಹೆಸರಾಗಿದೆ. ಹೊರನಾಡಿನಲ್ಲಿ ಕೆಲಸ ಮಾಡುವ ನನ್ನಂಥವರಿಗೆ ಯಾವುದೇ ವೇದಿಕೆಯಲ್ಲಿ ರಾಜ್ಯವನ್ನು ಸಮರ್ಥಿಸಿಕೊಂಡು ಮಾತಾಡಲು ಕಷ್ಟವಾಗುತ್ತಿದೆ. ಕರ್ನಾಟಟಕವು ಇಂದು ಒಂದು ದುರ್ಬಲ ಮಾತ್ರವಲ್ಲ ಕೇಡಿನ ರಾಜ್ಯವಾಗಿ ಪ್ರತಿಬಿಂಬಿತವಾಗುತ್ತಿರುವುದು ವಿಷಾದ ಹುಟ್ಟಿಸುವ ಸಂಗತಿಯಾಗಿದೆ.   ಇದಕ್ಕೆ ಏನು ಕಾರಣ? ಮುಖ್ಯವಾಗಿ ಕನರ್ಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆ ನಮ್ಮಲ್ಲಿ ಇಲ್ಲ. ರಾಜ್ಯವನ್ನು ರಾಜಧಾನಿಯಲ್ಲಿ ಎತ್ತಿಹಿಡಿಯಬೇಕಾದ ಜನ ಪ್ರತಿನಿಧಿಗಳಿಗೆ ಮತ್ತೆ ರಾಜ್ಯದ ರಾಜಕಾರಣದಲ್ಲಿಯೇ ಆಸಕ್ತಿ. ಕಳೆದ ವರ್ಷ ಲೋಕಸಭಾ ಸ್ಪೀಕರ್ ಬಿಡುಗಡೆಮಾಡಿದ ವರದಿಯ ಪ್ರಕಾರ ಲೊಕಸಭೆಯಲ್ಲಿ ಕನರ್ಾಟಕದ ಭಾಗವಹಿಸುವಿಕೆಗೆ ಕೊಡಲಾದ ಸ್ಥಾನ 36ರಲ್ಲಿ 34. ಇದು ರಾಷ್ಟ್ರಮಟ್ಟದಲ್ಲಿನ ನಮ್ಮ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿ. ರಾಷ್ಟ್ರೀಯ ಮಾಧ್ಯಮಗಳಳ್ಲಿ ಕಾಣಿಸಿಕೊಳ್ಳುತ್ತಿರುವ ಕೆಲವರು ರಾಜ್ಯದ ಮಾನವನ್ನು ಹರಾಜು ಹಾಕುತ್ತಿದ್ದಾರೆ. ಇನ್ನೇನು ದೇಶದ ಬಜೆಟ್ ಮಂಡನೆಯಾಗಲಿದೆ, ರಾಜ್ಯದ ಬಜೆಟ್ ಕೂಡಾ ಸಿದ್ಧವಾಗುತ್ತಿದೆ. ಆದರೆ ಅದರ ಸಿದ್ಧತೆಯಲ್ಲಿ ಯಾರ್ಯಾರ ಕೊಡುಗೆ ಎಷ್ಟು? ಎಷ್ಟು ಜನಪ್ರತಿನಿಧಿಗಳು ಈ ಪ್ರಕ್ರಿಯೆಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ? ಅಥವಾ ಬದಲಾದ ಇಂದಿನ ಜಾಗತಿಕ ಸಂದರ್ಭದಲ್ಲಿ ಒಂದು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುನ್ನೋಟ ಇರಿಸಿಕೊಂಡು ಕೆಲಸ ಮಾಡುವ ಪ್ರಜ್ಞಾವಂತರನ್ನು ನಾವು ಚುನಾವಣೆಗಳಲ್ಲಿ ಆರಿಸಿ ಕಳಿಸಿದ್ದೇವೆ? ಕೇರಳದ ಮತ್ತು ಪಶ್ಚಿಮ ಬಂಗಾಲದ ಲೋಕಸಭಾ ಪ್ರತಿನಿಧಿಗಳು, ಆ ರಾಜ್ಯಗಳ ಐಎಎಸ್ ಅಧಿಕಾರಿಗಳ, ಪತ್ರಕರ್ತರ ಸಭೆ ಕರೆದು ಆಯಾ ರಾಜ್ಯದ ಅಭಿವೃದ್ಧಿಯ ಬಗೆಗೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ, ಮಲೆಯಾಳ ಮನೋರಮಾದಲ್ಲಿ ಕೆಲಸ ಮಾಡುತ್ತಿರುವ 12 ಪತ್ರಕರ್ತರು ಕೇರಳಕ್ಕೆ ರೈಲ್ವೇ ಬಜೆಟ್ನಲ್ಲಿ ಮೀಸಲಿಡಬೇಕಾದ ಹಣದ ಬಗ್ಗೆ ಒತ್ತಡ ಹೇರಲು ಸುರುಮಾಡಿ ತಿಂಗಳುಗಳೇ ಕಳೆದಿವೆ. ಬಜೆಟ್ ಅಧಿವೇಶನಕ್ಕೆ ಮುನ್ನ ತಮ್ಮ ತಮ್ಮ ರಾಜ್ಯಗಳಿಗೆ ದೊರೆಯಬೇಕಾದ ಸವಲತ್ತುಗಳ ಬಗ್ಗೆ ಆಯಾ ರಾಜ್ಯದ ಸಂಸದರು, ಕಾರ್ಯದಶರ್ಿಗಳು ಮಾಡುವ ಕೆಲಸಕ್ಕೆ, ಹೋಲಿಸಿದರೆ ಕನರ್ಾಟಕದ್ದು ಏನೂ ಅಲ್ಲ. ಕನಿಷ್ಠ ಕೆಲವು ಅಗತ್ಯದ ಸಂದರ್ಭದಲ್ಲಿ ಪಕ್ಷಭೇದ ಮರೆತು ಕೆಲಸ ಮಾಡುವ ಜಾಣತನವನ್ನು ಮತ್ತು ಔದಾರ್ಯವನ್ನು ನಮ್ಮ ನಾಯಕರು ತೋರಿಸಬೇಕಾಗುತ್ತದೆ. ಜಾಗತೀಕರಣದ ಫಲವಾಗಿ ಸರಕಾರಗಳ ಆದಾಯ ಗಮನಾರ್ಹವಾಗಿ ಹೆಚ್ಚಿದೆ. ಈ ಆದಾಯದ ಸದ್ವಿನಿಯೋಗ ಆದಾಗಲೇ ಪ್ರಜಾಪ್ರಭುತ್ವಕ್ಕೆ ಬೆಲೆ ಬರುತ್ತದೆ. ವಾಷರ್ಿಕ ಬಜೆಟ್ ಅಂದರೆ ವೋಟಿಗಾಗಿ ತಮಗೆ ಬೇಕಾದವರಿಗೆ ಹಣ ಹಂಚುವುದಲ್ಲ. ನಾಡಿನ ಜನ ಮಯರ್ಾದೆಯಿಂದ ಮತ್ತು ಘನತೆಯಿಂದ ಬದುಕಲು ಬೇಕಾದಂಥ ವಾತಾವರಣವನ್ನು ನಿಮರ್ಾಣ ಮಾಡಲು ಜನರೇ ನೀಡಿದ ಹಣವನ್ನು ಸದ್ವಿನಿಯೋಗ ಮಾಡುವುದು. ಅಧಿಕಾರ ಹಿಡಿದವರು, ತಮ್ಮ ತಾತ್ಕಾಲಿಕ ಅಗತ್ಯಗಳಾಚೆ ವಿಸ್ತರಿಸಿಕೊಂಡು ಅತ್ಯಂತ ವಿನಯದಿಂದ ಈ ಕೆಲಸ ಮಾಡಬೇಕಾದ ಅಗತ್ಯವಿದೆ.   ಇಂಥ ಪರಿಸ್ಥಿತಿಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ತುಂಬ ತುತರ್ಾಗಿ ಸರಕಾರವು ಈ ಕೆಳಗಿನ ಅಂಶಗಳಿಗೆ ಗಮನಕೊಡಬೇಕೆಂದು ನಾನು ಬಯಸುತ್ತೇನೆ 1. ಕನರ್ಾಟಕದಲ್ಲಿಯೇ ನೆಲೆ ತಪ್ಪುತ್ತಿರುವ ಕನ್ನಡ ಶಾಲೆಗಳಿಗೆ ಆದ್ಯತೆ ನೀಡಿ ಕನ್ನಡವನ್ನು ಬೆಳೆಸುವುದು. ಇದಕ್ಕಾಗಿ ಕನ್ನಡ ಶಾಲೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಸರಕಾರ ತುತರ್ು ಕ್ರಮಗಳನ್ನು ಕೈಗೊಳ್ಳುವುದು. ಕನ್ನಡದಲ್ಲಿ ಓದುವ ಮಕ್ಕಳ ಆತ್ಮ ವಿಶ್ವಾಸ ಹೆಚ್ಚಬೇಕು, ಅವರಲ್ಲಿ ಯಾವುದೇ ಕೀಳರಿಮೆ ಮೂಡದಂತ ವಾತಾವರಣ ನಿಮರ್ಾಣ ಮಾಡಬೇಕು. ಕನ್ನಡ ಭಾಷೆಯಲ್ಲಿ ಸರಕಾರ ನಡೆಸುವವರು ಇದನ್ನು ಮಾಡದೆ ಬೇರೆ ಯಾರು ಮಾಡಬೇಕು? 2. ಪ್ರಜಾಪ್ರಭುತ್ವ ಮತ್ತು ರಾಷ್ಟ್ರದ ಪರಿಕಲ್ಪನೆಗಳನ್ನು ನಾವು ಒಪ್ಪಿಕೊಂಡಿರುವುದರಿಂದ ಅದರ ಪೂರ್ಣ ಪ್ರಯೋಜನ ಪಡೆಯಲು ತೀವ್ರ ಪ್ರಯತ್ನ ನಡೆಸಬೇಕು. ಮುಖ್ಯವಾಗಿ ರಾಜ್ಯದ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಸಮರ್ಥವಾಗಿ ಮಂಡಿಸಿ, ಕೇಂದ್ರ ಸರಕಾರವನ್ನು ಹೇಗೋ ಹಾಗೆ, ಇತರ ಭಾಷಿಕ ಸಂಸದರನ್ನು ತನ್ನೆಡೆಗೆ ಆಕಷರ್ಿಸುವಂತ ಪ್ರತಿಭಾವಂತ ರಾಜಕಾರಣಿಗಳನ್ನು ಕನ್ನಡದ ಜನತೆ ಲೋಕ ಸಭೆಗೆ ಆರಿಸಿ ಕಳಿಸಬೇಕು. ಈ ಸಂಸದರಿಗೆ ರಾಜ್ಯ, ರಾಷ್ಟ್ರ, ಭಾಷೆ, ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ ಮತ್ತಿತರ ವಿಷಯಗಳ ಬಗೆಗೆ ಆಳವಾದ ತಿಳುವಳಿಕೆ ಇರಬೇಕು. ಇದಕ್ಕಾಗಿ ದೆಹಲಿಯಲ್ಲಿ ಕನರ್ಾಟಕ ಅಧ್ಯಯನ ಕೇಂದ್ರವೊಂದನ್ನು ತೆರೆದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನರ್ಾಟಕದ ಘನತೆ ಎತ್ತರಿಸಲು ಕ್ರಮ ಕೈಗೊಳ್ಳಬೇಕು . ಜಗತ್ತಿನ ಜೊತೆಗೆ ಒಂದು ಬಗೆಯ ಬೌದ್ಧಿಕ ಅನುಸಂಧಾನ ಏರ್ಪಡಬೇಕಾದ್ದು ಕನರ್ಾಟಕದ ಇಂದಿನ ಅಗತ್ಯಗಳಲ್ಲೊಂದು. ಈ ಬಗೆಯ ಅನುಸಂಧಾನವು ಕನರ್ಾಟಕವನ್ನು ದೋಚಲು ಅನಿಮತಿ ನೀಡುವ ಪ್ರಕ್ರಿಯೆಯಲ್ಲ. ವಿದೇಶದ ಬಹಳ ವಿಶ್ವವಿದ್ಯಾಲಯಗಳಲ್ಲಿ ದಕ್ಷಿಣ ಏಷಿಯಾದ ಬಗ್ಗೆ ಅದರಲ್ಲೂ ವಿಶೇಷವಾಗಿ ಹಿಂದಿ, ಬಾಂಗ್ಲಾ, ಪಂಜಾಬಿ ಉದರ್ು ಮತ್ತು ತಮಿಳಿನ ಬಗ್ಗೆ ಬಗೆ ಬಗೆಯ ಅಧ್ಯಯನಗಳೂ ನಡೆಯುತ್ತಿವೆ. ಹೀಗಾಗಿ ಈ ಬಾಷೆಗಳಿಗೆ ಅಂತಾರಾಷ್ಟ್ರೀಯ ವಿದ್ವಾಂಸರ ಒಂದು ದೊಡ್ಡ ಪಡೆಯೇ ಇದ್ದು ಭಾಷಾಂತರ ಮತ್ತಿತರ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಕನ್ನಡಕ್ಕೆ ಅಂಥ ಭಾಗ್ಯವಿಲ್ಲ. ಹೀಗಾಗಿ ರಾಜ್ಯ ಸರಕಾರವು ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕಲಿಯಲು ಕೆಲವು ಶಿಷ್ಯ ವೇತನಗಳನ್ನು ನೀಡಬೇಕು. ಒಟ್ಟಿಂದ ಕನರ್ಾಟಕದ ಅಭಿವೃದ್ಧಿಯ ಬಗೆಗ ಹೆಚ್ಚು ಸೂಕ್ಷ್ಮವಾಗಿ ಮತ್ತು ವಿಸ್ತಾರವಾಗಿ ಈಗ ಯೋಚಿಸಬಾಕಾಗಿದೆ.  ]]>

‍ಲೇಖಕರು G

August 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು

ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು

ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ  ನಿರ್ದೇಶಕ ದೆಹಲಿ ತುಳು ಸಿರಿ ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನವಿದೆ. 1856...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This