ಬಿಳಿಮಲೆ ಕಾಲ೦ : ಇಲಿಗಳು, ಬಿದಿರಕ್ಕಿ ಮತ್ತು ಕಾಡಿನ ಹುಳುಗಳು

ಇಲಿಗಳು, ಬಿದಿರಕ್ಕಿ ಮತ್ತುಕಾಡಿನ ಹುಳುಗಳು

– ಪುರುಷೋತ್ತಮ ಬಿಳಿಮಲೆ

ಕೃಪೆ : ವಿಜಯಕರ್ನಾಟಕ

ನನ್ನ ಎಳವೆಯನ್ನು ನಾನು ಕಳೆದದ್ದು ವಾಟೆಕಜೆ ಎಂಬ ಪ್ರದೇಶದಲ್ಲಿ. ಬಂಟಮಲೆಕಾಡಿನ ನಡುವೆಇರುವ ಈ ಪ್ರದೇಶದಲ್ಲಿಒಂದೇ ಮನೆ.  ಆ ಮನೆಗೆ ಎರಡೇ ಮಾಡು.ಮಣ್ಣಿನಗೋಡೆಯ ಮೇಲೆ ಬಿದಿರು ಇರಿಸಿ, ಅದರ ಮೇಲೆ ಎಲ್ಲಿಂದಲೋಕಾಡಿ ಬೇಡಿತಂದಅಡಿಕೆ ಮರದ ಸೋಗೆ ಹಾಸಿ ಕಟ್ಟಿದ ಮನೆಯದು.ಅಪ್ಪಯಕ್ಷಗಾನ, ತಾಳಮದ್ದಳೆ ಮತ್ತಿತರ ಕಾರಣಗಳಿಂದ  ಮನೆಯಿಂದ ದೂರವೇಇರುತ್ತಿದ್ದರು.ಅಮ್ಮ ಸೊಪ್ಪು ಸೌದೆತರಲು ಕಾಡಿನೊಳಕ್ಕೆ ಹೋಗುವಾಗ ನನ್ನನ್ನು ಮನೆಯೊಳಕ್ಕೆ ಇರಲು ಹೇಳಿ ಹೊರಗಿನಿಂದ ಬಾಗಿಲು ಮುಚ್ಚುತ್ತಿದ್ದರು.ಆ ಕತ್ತಲು ಕೋಣೆಯೊಳಗೆ ನಾನು ಏಕಾಂಗಿಯಾಗಿದ್ದೆಎಂದು ಹೇಳಲು ಧೈರ್ಯ ಬಾರದು. ಏಕೆಂದರೆ ಮನೆಯೆಒಡೆದಗೋಡೆಯತುಂಬಾ ವಾಸಮಾಡುತ್ತಿದ್ದ ಇಲಿಗಳು ಅಮ್ಮ ಬಾಗಿಲು ಮುಚ್ಚಿದತಕ್ಷಣ ಕ್ರಿಯಾಶೀಲವಾಗುತ್ತಿದ್ದವು.ಗೋಡೆಯ ಸಂದುಗೊಂದುಗಳಿಂದ ಸರಕ್ಕನೆ ಇಳಿದು ನೆಲದ ಮೇಲೆ ಓಡಾಡುವಚಿಕ್ಕದೊಡ್ಡ ಇಲಿಗಳನ್ನು ಕಂಡು ನಾನು ದಿಗಿಲಿನ ಜೊತೆಗೆ ಖುಷಿಗೊಳ್ಳುತ್ತಿದ್ದೆ.ಅವುಗಳನ್ನು ಮುಟ್ಟಲು ಪ್ರಯತ್ನಿಸುತ್ತಿದ್ದೆ.ಅವುಗಳ ಹಿಂದೆಓಡುತ್ತಿದ್ದೆ.ಕ್ಯಗೆ ಸಿಗದ ಅವುಗಳ ಚುರುಕುತನಕ್ಕೆಅಸೂಯೆ ಪಡುತ್ತಿದ್ದೆ.ಜೊತೆಗೆ ಅನೇಕ ಬಾರಿ ಇಲಿಗಳೊಡನೆ ಮಾತಾಡಲೂ ಪ್ರಯತ್ನಿಸಿದ್ದುಂಟು. ನನ್ನನ್ನು ಅವು ಎಂದೂಗಂಭೀರವಾಗಿ ಪರಿಗಣಿಸಲೂಇಲ್ಲ, ನನ್ನೊಡನೆ ಅವು ಮಾತಾಡಲೂಇಲ್ಲ. ನನಗೆ ಪ್ರಿಯವಾಗಿದ್ದ ಈ ಇಲಿಗಳ ಸಹವಾಸ ಭಯಾನಕವಾಗುತ್ತಿದ್ದುದು ಅವುಗಳನ್ನು ಹಿಡಿಯಲು ಹಾವುಗಳು ಬರುತ್ತಿದ್ದಾಗ.ಮನೆಯ ಮಣ್ಣಿನಗೋಡೆಒರಟಾಗಿದ್ದುದು ಮಾತ್ರವಲ್ಲಅದರತುಂಬಾ ಬಿರುಕುಗಳಿದ್ದುದರಿಂದ ಹಾವುಗಳು ಸುಲಭವಾಗಿಅದರ ಮೂಲಕ ಮನೆಯ ಮಾಡನ್ನೇರುತ್ತಿದ್ದುವು. ಹಾವುಗಳಲ್ಲಿ ಕೇರೆ ಹಾವು ಎಂಬ ಪ್ರಭೇದವೊಂದಿದ್ದು ಅವುಗಳಿಗೆ ಇಲಿ ಅಂದರೆ ಪ್ರಾಣ. ಇಲಿಗಳನ್ನು ಕಂಡೊಡನೆ ಅವುಗಳನ್ನು ವೇಗವಾಗಿ ಅಟ್ಟಿಸಿಕೊಂಡು ಹೋಗಿ, ಹಿಡಿದು ನುಂಗಿ ಬಿಡುವಕೇರೆ ಹಾವುಗಳು ಮನುಷ್ಯರ ಮಟ್ಟಿಗೆ ನಿರಪಯಕಾರಿ.ಅಮ್ಮ ಮನೆಯೊಳಕ್ಕೆ ನನ್ನನ್ನು ಬಿಟ್ಟು ಹೋಗುವಾಗ ಎಷ್ಟೋ ಬಾರಿ ಈ ಕೇರೆ ಹಾವುಗಳು ಮಣ್ಣಿನಗೋಡೆಯನ್ನೇರಿ ಮೆಲ್ಲನೆ ಮನೆಯೊಳಕ್ಕೆ ಇಣುಕುತ್ತಿದ್ದವು. ಹಾವುಗಳ ಆಗಮನದ ಸೂಚನೆ ದೊರೆತ ಇಲಿಗಳು ಅಡ್ಡಾದಿಡ್ಡಿಯಾಗಿಓಡುವಾಗ ನನಗೂ ಅಪಾಯದಅರಿವುಂಟಾಗುತ್ತಿತ್ತು. ಒಮ್ಮೊಮ್ಮೆ ಈ ಕೇರೆ ಹಾವುಗಳು ಆಯತಪ್ಪಿ ಮಾಡಿನಿಂದಧೊಪ್ಪನೆ ನೆಲದ ಮೇಲೆ ಬಿದ್ದು ಬಿಡುತ್ತಿದ್ದುವು.ಬಿದ್ದು ಸ್ವಲ್ಪ ಹೊತ್ತು ಸುಮ್ಮನಿರುತ್ತಿದ್ದುವು. ಹೊರಗೆ ಹೋಗಲಾಗದ ನಾನು ಮುದುರಿ ಕುಳಿತುಕೊಂಡು, ಹಾವನ್ನು ಹೊರಗೆ ಹೋಗಲು ಬೇಡಿಕೊಳ್ಳುತ್ತಿದ್ದೆ. ಜಾರಿಬಿದ್ದಕಾರಣ ನಾಚಿಕೊಂಡಿತೋಎಂಬಂತೆ ಸ್ವಲ್ಪ ಹೊತ್ತಿನಆನಂತರಕೇರೆ ಹಾವು ಮೆಲ್ಲಗೆ ಹರಿದು, ಗೋಡೆಯ ಬಿರುಕಿನ ಮೂಲಕ ಹೊರಗೆ ಹೋಗುತ್ತಿತ್ತು. ಹಾವಿನ ಬಾಲ ಗೋಡೆಯ ಬಿರುಕಿನಿಂದ ಮಾಯವಾಗುತ್ತಲೇ ನಾನು ಇಲಿಗಳನ್ನು ಮತ್ತೆ ಹೊರಗೆಕರೆಯುತ್ತಿದ್ದೆ. ಬಂಟಮಲೆಯಲ್ಲಿ ಕಾಳಿಂಗ ಸರ್ಪ, ನಾಗರ ಹಾವು ಸೇರಿದಂತೆ ಅನೇಕ ಬಗೆಯ ಭಯಾನಕ ವಿಷದ ಹಾವುಗಳಿವೆ.ಆದರೆ ಅವು ಮನೆಯ ಅಂಗಳದವರೆಗೆ ಬರುತ್ತಿದ್ದರೂ ಮನೆಯೊಳಕ್ಕ ಬರುತ್ತಿರಲಿಲ್ಲ, ಬರುತ್ತಿದ್ದರೆಇವನ್ನೆಲ್ಲಾ ಬರೆಯಲು ನಾನು ಇರುತ್ತಿರಲಿಲ್ಲ.

ನಾನು ಸ್ವಲ್ಪದೊಡ್ಡದಾದಾಗ ಮನೆಯೊಳಕ್ಕೆ ಇರಲುಒಪ್ಪದೆಅಮ್ಮನೊಡನೆ ಸೊಪ್ಪು ಸೌದೆತರಲು ಕಾಡಿನೊಳಕ್ಕೆ ಬರುವುದಾಗಿ ಹಠ ಹಿಡಿಯತೊಡಗಿದೆ. ನಿಗೂಢವಾದಕಾಡು ನನಗೊಂದುಕುತೂಹಲ.ಮಳೆಗಾಲದಲ್ಲಿ ಬೀಸುವ ಭಯಾನಕ ಗಾಳಿಗೆ ನಡುರಾತ್ರಿಯಲ್ಲಿಧರೆಗೊರಗುವ ಮರಗಳ ಸದ್ದಿಗೆ ಮನೆಯೊಳಗೆ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ನಾನು ಬೆಚ್ಚಿ ಬೀಳುತ್ತಿದ್ದೆ. ಆ ಮರಗಳು ನೆಲಕ್ಕೊರಗುವಾಗತನ್ನೊಡನೆಇತರ ಮರಗಳನ್ನೂ ನೆಲಕ್ಕೊರಗಿಸುತ್ತವೆ. ಮರಗಳನ್ನು ಗಾಢವಾಗಿಅಪ್ಪಿಕೊಂಡಿರುವ ಬಳ್ಳಿಗಳಿಗೂ ಉಳಿಗಾಲವಿಲ್ಲ. ಒಂದು ಮರವನ್ನುಅಪ್ಪಿಕೊಂಡು ಮೇಲೇರುವ ಬೃಹತ್ ಬಳ್ಳಿಗಳು ಮೇಲೇರುತ್ತಲೇಇನ್ನೊಂದು ಮರದಕಡೆಗೆಚಾಚಿಕೊಂಡು ವಿಸ್ತಾರವಾಗಿ ಬೆಳೆಯುತ್ತವೆ. ಹೀಗಾಗಿ ಒಂದು ಮರ ಬಿದ್ದರೆ ಈ ಬಳ್ಳಿಗಳು ಇನ್ನೊಂದನ್ನು ಬರಸೆಳೆದು ಬೀಳಿಸುತ್ತವೆ. ಹೀಗೆ ಬೀಳುವಾಗ ಮರದ ಮೇಲೆ ಆಶ್ರಯ ಪಡೆದಿದ್ದ ಕೆಲವು ಹಕ್ಕಿಗಳು ಮತ್ತು ಪ್ರಾಣಿಗಳು ನಡುರಾತ್ರಿಯಲ್ಲಿಕಿರುಚಿಕೊಂಡುಅತ್ಯಂತ ಭಯಾನಕ ವಾತಾವರಣವೊಂದು ನಿಮರ್ಾಣವಾಗುತ್ತಿತ್ತು. ಜೊತೆಗೆ ಆಳುಪಕ್ಕಿ ಎಂಬ ಹಕ್ಕಿಯೊಂದು ಮಗುವಿನ ಹಾಗೆ ಕೂಗುವುದೆಂಬ ನಂಬಿಕೆ ಸೇರಿಕೊಂಡು ನನ್ನ ಭಯಇನ್ನಿಲ್ಲದಷ್ಟು ಹೆಚ್ಚಾಗುತ್ತಿತ್ತು. ಆದರೂ ಸಾಮಾನ್ಯವಾಗಿ ಮಳೆಗಾಲದಲ್ಲಿ ಬೀಳುವ ಈ ಮರಗಳನ್ನು ನೋಡಲು ಕಾಡಿನೊಳಕ್ಕೆ ಹೋಗಬೇಕೆಂದು ಆಸೆ ಮಾತ್ರ ಮುರುಟುತ್ತಿರಲಿಲ್ಲ. ಕೊನೆಗೆ ಒಂದು ಬೇಸಗೆಯಲ್ಲಿ ನನ್ನ ಹಠಕ್ಕೆಒಪ್ಪಿಕಾಡಿಗೆಕರೆದೊಯ್ಯಲುಅಮ್ಮಒಪ್ಪಿದರು.ಕೈಯಲ್ಲಿಒಂದು ಪುಟ್ಟಕತ್ತಿ ಹಿಡಿದು ನಾನು ಅಮ್ಮನನ್ನು ಹಿಂಬಾಲಿಸಿದೆ.ಆಮ್ಮ ನೇರವಾಗಿ ಬಿದಿರು ಹಿಂಡಿಲುಗಳಿರುವ ಸಮತಟ್ಟಾದ ಪ್ರದೇಶವೊಂದಕ್ಕೆ ಹೋಗಿ ಬಿದಿರಕ್ಕಿಯನ್ನು ಹೆಕ್ಕಲು ಆರಂಭಿಸಿದರು.ಈ ಬಿದಿರಕ್ಕಿಗೆರಾಜನಕ್ಕಿ ಎಂಬ ಹೆಸರೂಇತ್ತು.ಸಣ್ಣಆಕಾರದ ಈ ಬಿದಿರಿನ ಭತ್ತವನ್ನು ಮನೆಗೆ ತಂದುಅದರ ಸಿಪ್ಪೆಯನ್ನು ತೆಗೆದುಗಂಜಿ ಮಾಡಿಉಣ್ಣುವುದು ನಮ್ಮ ನಿತ್ಯದ ಕೆಲಸವಾಗಿತ್ತು.ತರಗೆಲೆಗಳ ನಡುವೆಅಡಗಿಹೋಗುವ ಆ ಅತಿ ಸಣ್ಣ ಭತ್ತದಂತಿರುವ ಬಿದಿರಕ್ಕಿಯನ್ನು ಹೆಕ್ಕಲು ತುಂಬಾ ತಾಳ್ಮೆ ಬೇಕು.ನಾನು ಆ ಕೆಲಸಕ್ಕೆ ಸಹಾಯ ಮಾಡಬಹುದೆಂದುಅಮ್ಮ ಭಾವಿಸಿರಬೇಕು.ಆದರೆ ನನಗೋ ಕಾಡಿನೊಳಕ್ಕೆ ಮತ್ತಷ್ಟು ನುಗ್ಗುವ ತವಕ.ಮೆಲ್ಲನೆಅಮ್ಮನಕಣ್ಣು ತಪ್ಪಿಸಿ ಆಚೀಚೆ ನಡೆದು, ಕಾಡಿನೊಳಕ್ಕೆ ನೀಳವಾಗಿ, ಅನಾಥವಾಗಿ, ಎಲ್ಲವನ್ನುಕಡಿದುಕೊಂಡು ಬಿದ್ದಿರುವ ಬೃಹತ್ ಮರಗಳ ಬಳಿ ಸುಳಿದಾಡುತ್ತಿದ್ದೆ.ಆ ಬಿದ್ದ ಮರಗಳ ಒಂದು ಬದಿಯಲ್ಲಿ ನಿಂತರೆ ಮತ್ತೊಂದು ಬದಿ ಕಾಣುತ್ತಿರಲಿಲ್ಲ. ಅದಕ್ಕೆ ಸುತ್ತು ಹಾಕಬೇಕಾದರೆ ಭಾರೀ ಶ್ರಮ ಪಡಬೇಕು.ಬಿದ್ದ ಮರದ ಬೇರುಗಳು ಅಕರಾಳ ವಿಕರಾಳವಾಗಿ ಆಕಾಶದೆತ್ತರಕ್ಕೆಚಾಚಿಕೊಂಡಿರುತ್ತದ್ದುವು.ಮಳೆಗಾಲದಲ್ಲಿ ಬಿದ್ದ ಈ ಮರಗಳ ತೊಗಟೆಯು ಬಂಟಮಲೆಯತೇವಾಂಶದಲ್ಲಿ ನಿಧಾನವಾಗಿಕರಗುತ್ತಿದ್ದವು. ಹಾಗೆ ಕರಗುತ್ತಿದ್ದಂತೆತೊಗಟೆಯ ಒಳಗಿನಿಂದ ಬಗೆ ಬಗೆಯ ಹುಳುಗಳು ಹೊರಬರುತ್ತಿದ್ದವು. ಹಲವು ಬಣ್ಣಗಳ, ವಿವಿಧ ಆಕಾರಗಳ ಆ ಹುಳುಗಳನ್ನು ನೋಡಿಆರಂಭದಲ್ಲಿ ನಾನು ಹೆದರಿದೆನಾದರೂ ನಿಧಾನವಾಗಿ ಅವುಗಳೊಡನೆಯೂ ಗೆಳೆತನ ಬೆಳೆಸಿದೆ. ಪ್ರೀತಿಯಿಂದಕೈಯಲ್ಲಿ ಸಣ್ಣ ಕೋಲು ಹಿಡಿದು ಆ ಹುಳುಗಳನ್ನು ಕೆಣಕುತ್ತಿದ್ದೆ.ಆಗೆಲ್ಲತಮ್ಮ ಪುಟ್ಟ ಹೆಡೆಬಿಚ್ಚಿ ಪ್ರತಿಭಟನೆತೋರುವ ಅವು ತೆವಳುತ್ತಾ ಮತ್ತೆ ಮರೆಗೆ ಸರಿಯುತ್ತಿದ್ದುವು.ಆ ಹುಳುಗಳಿಗೆ ನಾನು ಬಗೆ ಬಗೆಯ ಹೆಸರಿಡುತ್ತಿದ್ದೆ.ಆ ಹೆಸರಿಂದ ಅವುಗಳನ್ನು ಕರೆಯುವಾಗ ಅವು ತಲೆಯಾಡಿಸುತ್ತಿರುವಂತೆ ನನಗಂತೂಅನ್ನಿಸುತ್ತಿತ್ತು. ಹುಳುಗಳ ಜೊತೆಗಣ ನನ್ನ ಸಂಭಾಷಣೆಗಳಿಂದ ಅಮ್ಮನಿಗೆ ಸಮಾಧಾನವಾಗುತ್ತಿತ್ತು. ಯಾಕೆಂದರೆ ಬಿದಿರಕ್ಕಿ ಹೆಕ್ಕುತ್ತಿದ್ದ ಆಕಗೆ ನಾನು ಪಕ್ಕದೆಲ್ಲೆಲ್ಲೋಕ್ಷೇಮವಾಗಿರುವ ಬಗ್ಗೆ ಇದರಿಂದ ಸೂಚನೆ ದೊರೆಯುತ್ತಿತ್ತು. ಇದೆಲ್ಲ ಕಳೆದು ಅರ್ಧ ಶತಮಾನ ಕಳೆದಿದೆ.ಆಗ ಕಾಡಲ್ಲಿ ನೋಡಿದ ಬಣ್ಣ ಬಣ್ಣದ ಹುಳುಗಳೇ ಮುಂದೆರಾತ್ರಿಕಾಲದಯಕ್ಷಗಾನದ ವೇಷಗಳಾಗಿ ನನ್ನ ಮನಸೆಳೆದವೋ, ಆಗ ಹುಳುಗಳೊಡನೆ ನಿರರ್ಗಳವಾಗಿ ಮಾತಾಡಿದ್ದೇ ಮುಂದೆ ತಾಳಮದ್ದಳೆಯ ಕಡೆ ನನ್ನನ್ನು ಆಕಷರ್ಿಸಿತೋ ಎಂಬ ಸಂಶಯ ನನಗೆ.  ]]>

‍ಲೇಖಕರು G

July 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

  1. D.RAVI VARMA

    ಸರ್ ನಮಸ್ಕಾರ ಹೇಗಿದ್ದೀರಿ . ನಿಮ್ಮ ಸರಣಿ ಓದುತ್ತಿರುವೆ. ತುಂಬಾ ಕುತೂಹಲ ಕೆರಳಿಸುತ್ತಿದೆ .ನನಗೆ ಆಶ್ಚರ್ಯ ಅಗ್ತಾ ಇರೋದಂದ್ರೆ ನಿಮ್ಮ ೫೦ ವರ್ಷದ ಹಿಂದಿನ ಬದುಕು ಈಗ ನೆನಪಾಗ್ತಾ ಇರೋದು .ಅದನ್ನು ನೀವು ತುಂಬಾ ತನ್ಮಯರಾಗಿ ಬರೆಯುತ್ತಿರೋದು .ಅನನ್ಯ ಹೇಗಿದ್ದಾನೆ .ಆ ಕಾಡಿನ ಸಂಭಂದವೇ ಹಾಗೇನೂ. ಅದು ಕಾಡಲ್ಲ ಅದು ಬದುಕು ಹಾಗಾಗಿಯೇ ಅದು ನಿಮ್ಮನ್ನು ಹೆಚ್ಹು ಕಾಡುತ್ತಿರುವುದು ಅನಿಸುತ್ತೆ ಮುಂದಿನ ಸರಣಿಯ ನಿರೀಕ್ಷಿಸುತ್ತ………
    ರವಿ ವರ್ಮ ಹೊಸಪೇಟೆ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: