ಬಿಳಿಮಲೆ ಕಾಲ೦: ಗೋಕರ್ಣ ಪರಿಸರದಲ್ಲಿದ್ದುಕೊಂಡು..

ಪ್ರಖರ ವಿಚಾರವಾದಿ ಗೌರೀಶ ಕಾಯ್ಕಿಣಿ ಅವರ ಶತಮಾನೋತ್ಸವ

ಕೃಪೆ : ವಿಜಯ ಕರ್ನಾಟಕ

ಕನ್ನಡದ ವೈಚಾರಿಕ ಚಿಂತನಾಕ್ರಮವನ್ನು 20ನೇ ಶತಮಾನದಲ್ಲಿ ಶಂ.ಭಾ ಜೋಶಿ, ಕುವೆಂಪು, ಶಿವರಾಮ ಕಾರಂತ, ಲಂಕೇಶ್, ಅನಂತಮೂತರ್ಿ    ಮೊದಲಾದವರು ಪ್ರಖರವಾಗಿ ಬೆಳೆಸಿದರು. ಈ ಮಹನೀಯರ ಸಾಲಿನಲ್ಲಿ ಸೇರಬೇಕಾದ ಇನ್ನೊಂದು ಹೆಸರು ಶ್ರೀ ಗೌರೀಶ ಕಾಯ್ಕಿಣಿ ಅವರದು. 12.9.1912ರಲ್ಲಿ ಜನಿಸಿದ ಕಾಯ್ಕಿಣಿಯವರ ಜನ್ಮ ಶತಮಾನೋತ್ಸವದ ವರ್ಷವಿದು. ಅವರ ವೈಚಾರಿಕ ಲೇಖನಗಳು ಹಿಂದೆಗಿಂತಲೂ ಈಗ ಪ್ರಸ್ತುತವಾಗಿರುವುದರಿಂದ ಅವರನ್ನು ನೆನಪಿಸಿಕೊಳ್ಳಬೇಕಾದ್ದು ಮತ್ತು ಹೊಸ ತಲೆಮಾರಿಗೆ ಅವರ ಚಿಂತನೆಗಳನ್ನು ದಾಟಿಸಬೇಕಾದದ್ದು ಇಂದಿನ ಅಗತ್ಯಗಳಲ್ಲಿ ಒಂದು.

ಕಾಯ್ಕಿಣಿಯವರು 1958 ರಷ್ಟು ಹಿಂದೆ ಪ್ರಕಟಿಸಿದ ‘ವಿಚಾರವಾದ’ ಕೃತಿಯಲ್ಲಿ ನಿಜವಾಗಿಯೂ ಮಾನವತೆಯ ಲಕ್ಷಣವೇ ಲಾಂಛನವೇ ವಿಚಾರ ಮತ್ತು ವಿಚಿಕಿತ್ಸೆ ಎಂಬ ಮಾತನ್ನು ಹೇಳಿದ್ದಾರೆ. ಸೂತ್ರ ರೂಪದಂತಿರುವ ಈ ವಾಕ್ಯವನ್ನು ಅವರು ಮುಂದೆ ವಿಸ್ತರಿಸುತ್ತಾರೆ. ನಮಗಿಂದು ಮುಖ್ಯವಾಗಿ, ಮೊತ್ತ ಮೊದಲನೆಯದಾಗಿ ಬೇಕಾಗಿರುವ ಕ್ರಾಂತಿ ವಿಚಾರಕ್ರಾಂತಿ, ಹಟವಾದ, ಮಠವಾದ, ಮತವಾದಗಳೇ ಇದಕ್ಕೆ ಪ್ರತಿಕಕ್ಷಿ ಎಂತಲೂ, ವಿಚಾರಕ್ರಾಂತಿಗೂ ಮೊದಲು ಬೌದ್ಧಿಕ ಅಸಂತೋಷ, ವಿಚಿಕಿತ್ಸೆ ಅಗತ್ಯವೆಂತಲೂ ಅವರು ವಾದಿಸುತ್ತಾರೆ. ಶ್ರದ್ಧೆಗಿಂತ ಸಂದೇಹವೇ ಮನುಷ್ಯನ ಮನಸ್ಸಿನ ಮೂಲಧರ್ಮ. ಸಂದೇಹ ನಿವಾರಣೆಯಾಗದ ಹೊರತು ಕ್ಷೇಮವಿಲ್ಲ. ನೇಮವಿಲ್ಲದೆ, ಮತ್ತು ಸಂದೇಹವನ್ನು ಹತ್ತಿಕ್ಕುವುದು ಕೊನೆಗೂ ಸಾಧ್ಯವಿಲ್ಲ ಎಂಬುದು ಅವರ ಖಚಿತ ಮಾತು. ಜೊತೆಗೆ ವಿಚಾರವಾದದ ವೀಳ್ಯವೆತ್ತಿದವರು ಪಳಗಿಸಬೇಕಾದದ್ದು ಈ ಸಂದೇಹ ಪ್ರವೃತ್ತಿ. ಈ ವಿಚಿಕಿತ್ಸೆಯ ವೃತ್ತಿ ‘ಏಕೆ’ ಮತ್ತು ‘ಹೇಗೆ?’ ಇವೆರಡರ ತೆಕ್ಕೆಯಲ್ಲಿ ಸತ್ಯವನ್ನು ಸೆರೆಹಿಡಿಯದೇ ಸುಖವು ಸಂಪನ್ನವಾಗದು. ಏಕೆಂದರೆ, ಸುಖಕ್ಕೆ ಮೂಲ ಮನಃಶಾಂತಿಯು ಒಂದೇ ಶಾಶ್ವತ ಸಾಧನೆ ಭಯ – ಸಂಶಯಗಳ ನಿವಾರಣೆ. ಅದರ ಒಂದೇ ಸಾಧನ ವಿಚಾರವಾದ. ಬಹುಮಟ್ಟಿಗೆ ಇದು ಕಾಯ್ಕಿಣಿಯವರ ವಿಚಾರವಾದದ ನಿರ್ವಚನೆ. ವಿಚಾರ, ತರ್ಕ ಮತ್ತು ವಿಚಿಕಿತ್ಸೆ ಅವರ ವಿಚಾರವಾದದ ಮುಖ್ಯ ತಳಹದಿ. ಬಾಳಿನ ಗುಟ್ಟು (1943), ಗಂಡು ಹೆಣ್ಣು (1948), ಮಾಕ್ಸರ್್ವಾದ (1949), ವಿಚಾರವಾದ (1958), ಪ್ರಜ್ಞಾನೇತ್ರದ ಬೆಳಕಿನಲ್ಲಿ (1982), ಮತು ನಾಸ್ತಿಕನು ಮತ್ತು ದೇವರು (1989) ಅವರ ವೈಚಾರಿಕತೆಯನ್ನು ಸಾರುವ ಮುಖ್ಯ ಕೃತಿಗಳಾಗಿವೆ. ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ‘ಭಾರತೀಯ ತತ್ತ್ವಜ್ಞಾನ’ (ವೈಚಾರಿಕ ಮತ್ತು ಸಾಮಾಜಿಕ ಸಂದರ್ಭ) ಎಂಬ ಕೃತಿ ಹಲವು ಮುದ್ರಣಗಳನ್ನು ಕಂಡಿದೆ ಕಾಯ್ಕಿಣಿಯವರು ತಮ್ಮ ವಿಚಾರವಾದವನ್ನು ಪ್ರತೀತಗೊಳಿಸಿಕೊಳ್ಳಲು ಅನೇಕ ಆಕರಗಳನ್ನು ಆಧರಿಸುತ್ತಾರೆ. ಪೂರ್ವದ ಭೌತವಾದೀ ಚಿಂತನ ಪರಂಪರೆ, ಪಶ್ಚಿಮದ ಎನ್ಲೈಟನ್ಮೆಂಟ್ ವೈಚಾರಿಕತೆ ಹಾಗೂ ಸ್ವಾತಂತ್ರ್ಯ ಚಳುವಳಿಕಾಲದ ಸುಧಾರಣಾವಾದಿಗಳು ಅವರ ಮೇಲೆ ಪ್ರಭಾವ ಬೀರಿದಿದ್ದಾರೆ. 10 ಸಂಪುಟಗಳಲ್ಲಿ ಪ್ರಕಟವಾದ ಅವರ ಸಮಗ್ರ ಸಾಹಿತ್ಯದ ಮೇಲೆ ಕಣ್ಣಾಡಿಸಿದರೂ ಸಾಕು, ಅವರ ವೈಚಾರಿಕತೆಯ ಆಳ ವಿಸ್ತಾರ ತಿಳಿಯುತ್ತದೆ ನಾನು ಈಗಾಗಲೇ ಹೇಳಿರುವಂತೆ ಗೌರೀಶರ ವಿಚಾರವಾದದ ಮೂಲನೆಲೆಯಿರುವುದು ವಿಚಾರ, ತರ್ಕ ಮತ್ತು ವಿಚಿಕಿತ್ಸೆಗಳಲ್ಲಿ. ಇಲ್ಲಿ ವಿಚಾರಕ್ಕೆ ಕಾರಣವಾಗುವಂಥದ್ದು ಬುದ್ಧಿ. ಆದ್ದರಿಂದ ಬೌದ್ಧಿಕ ವಿಸ್ತರಣೆಯಿಂದ ವಿಚಾರವೂ, ವಿಚಾರದಿಂದ ವಿವೇಕವೂ ಉದಯಿಸುತ್ತದೆ’ ಎಂದು ಅವರು ವಾದಿಸುತ್ತಾರೆ. ಇಲ್ಲಿ ಬೌದ್ಧಿಕ ವಿಸ್ತರಣೆಗೆ ವಿಜ್ಞಾನ ಸಹವತರ್ಿಯಾಗಿ ಬರುವುದರಿಂದಾಗಿ ಕಾಯ್ಕಿಣಿಯವರಿಗೆ ವಿಜ್ಞಾನದ ಬಗೆಗೆಯೂ, ವಿಜ್ಞಾನಿಗಳ ಬಗೆಗೆಯೂ ಇನ್ನಿಲ್ಲದ ಗೌರವ. ‘ಇಂಡಿಯಾಕ್ಕೆ ಮುಂದಿನ ತತ್ತ್ವಜ್ಞಾನವೆಂದರೆ ವಿಜ್ಞಾನ’ ಎಂಬುದು ಅವರ ನೇರ ಮಾತು. ವಿಜ್ಞಾನಕ್ಕೆ ನಿಲುಕದ್ದೆನ್ನೆಲ್ಲ ಅವರು ಖಂಡ-ತುಂಡವಾಗಿ ನಿರಾಕರಿಸುತ್ತಾರೆ, ಗಾಂಧೀವಾದವನ್ನೇ ಅವರು ತಿರಸ್ಕರಿಸುವುದು ಹೀಗೆ – ಗಾಂಧೀಯುಗದಲ್ಲಿ ಧಾಮರ್ಿಕತೆ, ಗೂಢತೆ, ಮೂಢಭಾವನೆ, ಅಂಧಶ್ರದ್ಧೆ, ಬುದ್ಧಿಗೆ ನಿಲುಕದ ಹಟವಾದ ಇವೆಲ್ಲ ಗುಣಗಳಿಂದ ಯುಕ್ತವಾದ ಭಾವೋದ್ರೇಕದ ವಾತಾವರಣ ಮಬ್ಬಿನಂತೆ ದೇಶದ ಚಿದಾಕಾಶದಲ್ಲಿ ಹಬ್ಬಿತು. ನಮಗೆ ಇಂದು ಈ ಅಂಧಕಾರದ ಯುಗದಿಂದ ಹೊರಬರಬೇಕಾಗಿದೆ ನಾವೆಲ್ಲ ಇಂದು ಮುತುವಜರ್ಿಯಿಂದ ಚಚರ್ಿಸುವ ಅನುಭಾವ ಸಾಹಿತ್ಯವನ್ನು ಕಾಯ್ಕಿಣಿಯವರು ಲೇವಡಿ ಮಾಡುವುದು ಹೀಗೆ – ಧಾಳಿಗಳಲ್ಲಿ ಎಲ್ಲಕ್ಕೂ ಮೋಹಕವಾದದ್ದು, ಆದ್ದರಿಂದಲೇ ಅತ್ಯಂತ ಘಾತುಕವಾದದ್ದು ಗೂಢವಾದದ ರಹಸ್ಯ ರಮ್ಯತೆಯ ಅನುಭಾವ ಸಂಪ್ರದಾಯದ ಧಾಳಿ. ಈ ಅನುಭಾವವನ್ನು ವಿಚಾರವಾದಿಗಳು, ವಿವೇಕವಾದಿಗಳು ಬುದ್ಧಿ ಪ್ರಾಮಾಣ್ಯವಾದಿಗಳು ತೆಕ್ಕೆಬಿದ್ದು ಪ್ರತಿಭಟಿಸಬೇಕಾಗಿದೆ. ಇದರ ಮುಂದುವರಿಕೆಯಾಗಿ ಅವರು ತಮ್ಮ ವೈಚಾರಿಕತೆಗಳಿಗೆ ತರ್ಕವನ್ನು ಬಳಸಿಕೊಳ್ಳುತ್ತಾರೆ. ಗೌರೀಶರಿಗೆ ತರ್ಕವೆಂದರೆ ಒಂದು ಬಗೆಯ ತುಂಟತನ; ಆಡಿದ ಮಾತಿನ ವಾಚ್ಯಾರ್ಥವನ್ನೇ ಒತ್ತಿಹಿಡಿದು ಅದರಿಂದ ತಾಕರ್ಿಕವಾಗಿ ಅದನ್ನು ಆಡಿದವನನ್ನು ಪೇಚಿಗೆ ಸಿಲುಕಿಸುವುದು -ಇದರ ತಂತ್ರ. ಅನೇಕ ಸಲ ವಾದದಲ್ಲಿ ಗೆಲ್ಲಲು ಈ ಯುಕ್ತಿಯಿಂದ ಪ್ರಯೋಜನ ಪಡೆಯುವುದುಂಟು ಎಂಬುದು ಗೌರೀಶರ ನಿಲುವು. ಹುಸಿ ವಿಂಗಡಿಸಲು ಬೇಕಾದದ್ದು ತರ್ಕದ ಪ್ರಕ್ರಿಯೆ. ಅದುವೇ ವಿಚಾರ. ವಿಚಾರವು ಹೀಗೆ ತರ್ಕಸಂಗತವಿದ್ದರೇನೇ ಒಪ್ಪಿಗೆ ಆಗುತ್ತದೆ ಎಂದು ಅವರು ಹೇಳುತ್ತಾರೆ. ತಮ್ಮ ತರ್ಕದ ಮೂಲಕ ಅಂಗೀಕೃತ ಸತ್ಯವೊಂದರ ಬಗೆಗಣ ನಮ್ಮ ಶ್ರದ್ಧೆಯನ್ನು ಅವರು ಅಲ್ಲಾಡಿಸಿಬಿಡುತ್ತಾರೆ. ಓಂಕಾರವು ದ್ರಾವಿಡ ಮೂಲದ್ದೇ ಎಂಬ ಲೇಖನವೊಂದರಲ್ಲಿ ಅವರು ಓಂಕಾರವನ್ನು ದೇವನಾಗರಿಯಲ್ಲಿ ಬರೆದಾಗ ಕಾಣುವ ಬಿಂದು ಯುಕ್ತ ಚಂದ್ರರೇಖೆ ಇಸ್ಲಾಮರ ಪವಿತ್ರ ಪ್ರತೀಕವನ್ನು ಹೋಲುವಂತಿದೆ ಎಂದು ಹೇಳಿ ಓದುಗರನ್ನು ಬೆಚ್ಚಿಬೀಳಿಸಿದರು. ಗೌರೀಶರ ವೈಚಾರಿಕತೆಗೆ ಆಧಾರಸ್ತಂಭವಾಗಿರುವ ಅವರ ‘ಚಿಕಿತ್ಸಕ’ ದೃಷ್ಟಿಯನ್ನು ಗಮನಿಸಬೇಕು. ಮಾನವನ ವಿಚಿಕಿತ್ಸಕ ಬುದ್ಧಿಯು ವಾಸ್ತವಿಕ ಸತ್ಯದ ಜ್ಞಾನವನ್ನಷ್ಟೇ ಸಿಗುವಂತೆ ಮಾಡುವುದಿಲ್ಲ. ಅದರಿಂದ ಮಾನವನ ಸೃಜನಶೀಲತೆಯನ್ನು ನವನಿಮರ್ಾಣದ ಶಕ್ತಿಯನ್ನು ಉಂಟುಮಾಡುತ್ತದೆ. ಇದರಿಂದ ಮಾನವನ ಅರಿವಿನ ವ್ಯಾಪ್ತಿಯು ಅಪರಿಮಿತವಾಗಿ ವಿಸ್ತಾರಗೊಳ್ಳುವಂತೆ ಆಗುತ್ತದೆ. ಅವರ ಶೋಧನೆ ಸಾಧನೆಗಳ ಆಯ-ಅಗಲ-ಆಳಗಳನ್ನು ಹಿಗ್ಗಿಸುತ್ತದೆ ಎಂದು ಗೌರೀಶರು ಬಲವಾಗಿ ನಂಬುತ್ತಾರೆ. ಇಂಥ ಅವರ ನಂಬುಗೆಯೇ ಕನ್ನಡಕ್ಕೆ ‘ನಾಸ್ತಿಕನು ಮತ್ತು ದೇವರು’ (1989), ‘ವಾಲ್ಮೀಕಿ ತೂಕಡಿಸಿದಾಗ’ ಗಳಂತಹ ಮಹತ್ತ್ವದ ವೈಚಾರಿಕ ಕೃತಿಗಳನ್ನು ಕೊಡಲು ಸಾಧ್ಯವಾಯಿತು. ಶ್ರೀರಾಮಚಂದ್ರ ಆದರ್ಶ ಮಹಾಪುರುಷರು ಮಾತ್ರವಲ್ಲ, ಶ್ರೀ ವಿಷ್ಣುವಿನ ಅವತಾರವೇ ಎಂಬ ಶ್ರದ್ಧೆ ಭಕ್ತಿಗಳಿಂದ ಸಮನ್ವಿತ ಭೂಮಿಕೆ ನನ್ನದಲ್ಲ. ನಾನೊಬ್ಬ ಪರಮ ನಾಸ್ತಿಕ. ಧಮರ್ಾಧರ್ಮ ಪಾಪ ಪುಣ್ಯಗಳ ಸೂಕ್ಷ್ಮಕ್ಕಿಂತ ಆದಿಕವಿಯ ಮಾನಸಸೃಷ್ಟಿಯ ವಾಕ್ಯ ಸತ್ಯವೇ ನನಗೆ ಈ ವಿಚಾರದಲ್ಲಿ ಮುಖ್ಯ, ಹಾಗೂ ಪ್ರಸ್ತುತ ವಿಷಯಕ್ಕೆ ನನಗೆ ವಾಲ್ಮೀಕಿಯೊಬ್ಬನೇ ಆಧಾರ. ಆತ ರೂಪಿಸಿದ ಶ್ರೀರಾಮನ ವ್ಯಕ್ತಿ ಚಿತ್ರವೇ ಅದಕ್ಕೆ ಆಶ್ರಯ. ಅವತಾರವೆಂದು ಆರಾಧಿಸಲಿ, ಮಹಾಪುರುಷರೆಂದು ಮನ್ನಿಸಲಿ ಅಥವಾ ಮಹಾಕಾವ್ಯದ ನಾಯಕ ಪಾತ್ರವೆಂದು ಮೆಚ್ಚಲಿ -ನಾವು ರಾಮನನ್ನು ಹೇಗೆ ಕಂಡರೂ ಆದಿಯಲ್ಲಿಯೂ, ಅಂತ್ಯದಲ್ಲಿಯೂ (ಮಧ್ಯದಲ್ಲಿಯೂ ಕೂಡಾ) ಆತ ವಾಲ್ಮೀಕಿಯ ಸೃಷ್ಟಿ ರಾಮಾಯಣ ಹೇಗೋ ಹಾಗೇ ರಾಮನ ಪಾತ್ರವೂ ಪ್ರಶ್ನಾತೀತವಾದುದು ಎಂದು ಭಾವಿಸುವ ಜನವರ್ಗದ ನಡುವೆ ವಿದ್ರೋಹಿಯಂತೆ ಕಾಣುವ ಗೌರೀಶರು ವಾಸ್ತವವಾದೀ ನೆಲೆಗಟ್ಟಿನಲ್ಲಿ ನಿಂತು ರಾಮಾಯಣವನ್ನು ಭಂಜನೆ ಮಾಡಿದ ರೀತಿ ಇಂದಿಗೆ ಹೆಚ್ಚು ಹೆಚ್ಚು ಪ್ರಸ್ತುತವಾಗಿ ಕಾಣುತ್ತದೆ. ಕಾಯ್ಕಿಣಿಯವರಿಗೆ ಆಗ ಎತ್ತಲು ಸಾಧ್ಯವಾದ ಪ್ರಶ್ನೆಗಳನ್ನು ನಮಗೆ ಈಗ ಎತ್ತಲು ಸಾಧ್ಯವಾಗದಿರುವುದು ವೈಚಾರಿಕವಾಗಿ ನಾವು ಪತನಮುಖಿಗಳಾಗಿರುವುದರ ಸಂಕೇತವಾಗಿದೆ. ಏನೇ ಇರಲಿ, ಕಾಯ್ಕಿಣಿಯವರು ತಮ್ಮ ವಿಚಾರ, ತರ್ಕ ಮತ್ತು ವಿಚಿಕಿತ್ಸಕತೆಗಳ ಮೂಲಕ ಕನ್ನಡದ ಓದುಗರ ಅರಿವಿನ ವಲಯಗಳನ್ನು ವಿಸ್ತರಿಸಿದರು. ಗೋಕರ್ಣ ಪರಿಸರದಲ್ಲಿದ್ದುಕೊಂಡು ಇವನ್ನೆಲ್ಲ ಅವರಿಗೆ ಮಾಡಲು ಸಾಧ್ಯವಾದುದು ವಿಶೇಷವಾಗಿದೆ.]]>

‍ಲೇಖಕರು G

July 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು

ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು

ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ  ನಿರ್ದೇಶಕ ದೆಹಲಿ ತುಳು ಸಿರಿ ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನವಿದೆ. 1856...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This