ನಿನ್ನೆ ಪ್ರಕಟವಾಗಿದ್ದ ಎಂ ಎಸ್ ಮೂರ್ತಿಯವರ ರೇಖಾ ಚಿತ್ರಕ್ಕೆ ರವಿ ಮೂರ್ನಾಡು ಅವರು ಬರೆದ ಕವನ ನಿಮಗಾಗಿ.

– ಚಿತ್ರ ಎಂ ಎಸ್ ಮೂರ್ತಿ, ಕವನ ರವಿ ಮೂರ್ನಾಡು, ಕ್ಯಾಮರೂನ್
ಕಣ್ಣು ಬಂತು ಚಳಿಬಿಸಿಗೆ
ಮುಲುಕುಗಳು ಆಕಳಿಸಿ
ತೊಟ್ಟಿಕ್ಕಿದ ಹನಿಯಲ್ಲೂ
ತಿಕ್ಕಿ ಸಿಲುಕುಗಳು !
ಶ್ರಾವಣ ಬಂತೆಂದರೆ..
ಮುಚ್ಚಳಿಕೆಯೊಳಗೂ…
ಚಳಿಯನರಸುವ ಬಿಸಿ !
ಖಂಡ ಖಂಡವೂ ಅವನು
ಮಂಜುಗೆಡ್ಡೆ… ಹಗುರ
ಅವಳ ಖಂಡದ ಕೆಂಡಕೆ
ಕರಗಿ ಕಳೆವ ಭಾರ !
ಹೆಣ್ಣೊಂದು ಅರ್ಧ
ಬಂದಾಗ….
ಇನ್ನರ್ಧ ಗಂಡು ಇಳಿದಾಗ
ಭೂಮಿ ದುಂಡಗಿದೆ
ಅರ್ಧಗಳು ಒಂದಾದಾಗ !
ಇಗೋ ಇಲ್ಲಿ ಭುವಿ
ಮೇಲೆ ಭಾನು
ಝಣ ಝಣ ಬಿಸಿಲು
ಜಿಟಿ ಜಿಟಿ ಮಳೆಗೆ
ತೊರೆ-ನೆರೆಯೆದ್ದ ನದಿ
ಹರಿದು ಜೀವದ ಹಸಿರು
ಎಲೆಗೆ ಹನಿ ಬೆವರು !
ತೊಟ್ಟಿಕ್ಕಿ ತೆನೆ ಪೈರು
ಗಾಳಿ ತೀಡಿ ಮುಂಗುರುಳು !
ಈಗ….
ತುಟಿಯಿಟ್ಟ ಮಗುವಿಗೆ
ಬಿಸಿ ಬಿಡದಷ್ಟು ಮಡಿಲ ಪ್ರೀತಿ !
]]>
tumbaa claasic aagide
ಭಾವತೀವ್ರತೆ ಮತ್ತು ಬಹು ಅರ್ಥ ಸಂಹಿತೆ ಈ ಕವನ.