ಬಿ೦ಬ ಹೇಗೆ ಭಿನ್ನ…ಸುನಿಲ್ ರಾವ್ ಬರಹ

– ಸುನಿಲ್ ರಾವ್ ಇತ್ತೀಚಿಗೆ ವಿಜಯನಗರ “ಬಿಂಬ” ರಂಗ ಶಿಕ್ಷಣ ಕೇಂದ್ರವು ತನ್ನ ಚಿಣ್ಣರ ಚಾವಡಿ ಬೇಸಿಗೆ ಶಿಬಿರ ಆಚರಿಸಿಕೊಂಡಿತು…ಅದರ ರುವಾರಿಗಳಾದ ಶೋಭಾ ವೆಂಕಟೇಶ್ ಅತ್ಯುತ್ತಮವಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದರು…EDUCATION IS MANIFESTATION OF KNOWLEDGE ALREADY IN MAN ಅಂತ ವಿವೇಕಾನಂದರು ಹೇಳಿದ್ದು ಬಿಂಬ ಕಾರ್ಯಕ್ರಮದ ಪಟ್ಟಿಗಳಿಂದ ಅನ್ನಿಸುತ್ತಿತ್ತು…ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಆ ಕಾರ್ಯಕ್ರಮ ಮಹತ್ವದ್ದು,ಹಾಡು,ನಾಟಕ ಸಂಗೀತ….ಹಾಗು ಇವೆಲ್ಲಕಿನ್ನ ಭಿನ್ನವಾಗಿ ಅನಿಸಿದ್ದು…ಹಿರಿಯ ಪತ್ರಕರ್ತರಾದ ಜೀ.ಏನ್.ಮೋಹನ್ ಅವರ ನೇತೃತ್ವದಲ್ಲಿ ನಡೆದ “ಮೀಡಿಯಾ ಹಬ್ಬ”,ಒಂದು ಪತ್ರಿಕೆ ರೂಪಿಸುವಲ್ಲಿ ಇರುವ ಹಲವಾರು ಆಯಾಮಗಳ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದರು,ಅದಲ್ಲದೆ ರೇಡಿಯೋ,ದೂರದರ್ಶನ ನಿರೂಪಣೆಯ ಬಗ್ಗೆ ಕೂಡ ಬೆಳಕು ಚೆಲ್ಲಲಾಇತು….ಇತ್ತೀಚಿನ ರಾಜಕಾರಣ,ಕೊಲೆ ಹಿಂಸೆ ಗಳನ್ನೂ ಮೀರಿ ಒಂದು ಪತ್ರಿಕೆಯ ವಿಶೇಷತೆ ಹಾಗು ಉಪಯುಕ್ತತೆಯಬಗ್ಗೆ ಮಕ್ಕಳಿಗೆ ಅಂತಹ ಶಿಕ್ಷಣದ ಬಗ್ಗೆ ಅನಿವಾರ್ಯತೆ ಇದೆ ಅನಿಸುತ್ತದೆ…ಆ ಕಾರಣದಿಂದಾಗಿ ಬಿಂಬದ ಈ ಯೋಜನೆ ಫಲಕಾರಿಯಾಗಿದೆ… ಹಾಗೆಯೇ ಜಯಂತ ಕಾಯ್ಕಿಣಿ ನಡೆಸಿಕೊಟ್ಟ “ಪ್ರಶ್ನಾರ್ಥ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೀಡಿಯಾ ಹಬ್ಬದಲ್ಲಿ ಕಲಿತ ವಿಚಾರಗಳನ್ನ ಇಟ್ಟುಕೊಂಡು ಮಕ್ಕಳು ಸಾಹಿತಿಯಾದ ಅವರಲ್ಲಿ ಪ್ರಶ್ನೆಗಳನ್ನು ಕೇಳುವ ಕಾರ್ಯಕ್ರಮ….ಬಹುಷಃ ಇಂತಹ ಕಲ್ಪನೆಗಲಿಂದಲೇ ಬಿಂಬಕ್ಕೆ ತನ್ನದೇ ಆದ ಛಾಪು ಇದೆ…ಸಾಮಾನ್ಯವಾದ ಬೇಸಿಗೆ ಶಿಬಿರಗಳಿಗಿಂತ ಇದು ಭಿನ್ನ….ಇವತ್ತು ಬೇಸಿಗೆ ಶಿಬಿರ ಕೂಡ ಒಂದು ದೊಡ್ಡ ಉದ್ದಿಮೆಯಾಗಿ ತಿರುಗಿರೋವಾಗ….ಬಿಂಬದ ಕಾರ್ಯಕ್ರಮಗಳು ಅರ್ಥಪೂರ್ಣ ಹಾಗು ಒಳ್ಳೆಯ ಸಂಕಲ್ಪದ್ದು ಅನಿಸುತ್ತದೆ… ಎರಡನೆಯದು ಮಕ್ಕಳ ಕಾವ್ಯ ಪ್ರೀತಿ…ಶ್ರೀಯುತರಾದ ಡುಂಡಿರಾಜರು ಬಂದು ಕಾವ್ಯದ ಬಗ್ಗೆ ಕವನ ರಚನೆಗಳ ಬಗ್ಗೆ ಹೇಳಿಕೊಟ್ಟಿದ್ದರು…ತೀರ ನನ್ನ ಗಮನ ಹಿಡಿದು ಕೂಳಿಸಿದ್ದು ಮಕ್ಕಳ ಕವನಗಳು…ಎಷ್ಟೇ train ಮಾಡಿದರು,ಅವರ ಕ್ರಿಯಾತ್ಮಕತೆ ಹಾಗು ಆಲೋಚನಾ ವಿಧಾನ ತೀರ ನಿರುಮ್ಮಳ ಅನಿಸುತ್ತದೆ…ಉದಾಹರಣೆ ನೋಡಿ “ಶಮಂತ” ಅನ್ನುವ ಮಗುವಿಗೆ ಬಿಂಬ ಎಷ್ಟು ಪ್ರೀತಿಯಾಯ್ತು ಅಂದರೆ ಹೀಗೆ ಬರೆಯುತ್ತದೆ… “ಬಿಂಬ ನನಗೆ ತುಂಬಾ ಇಷ್ಟವಾದ ಶಾಲೆ ಎಷ್ಟು ಇಷ್ಟ ಗೊತ್ತ? ಅರ್ಬುದ ಕಾಡಿನ ಕರಡಿಯ ಹೊಟ್ಟೆಯಷ್ಟು ಕಲಿಯ ದುಷ್ಟತನದಷ್ಟು ಕಶ್ಯಪ ಅಣ್ಣನ ತಮಟೆಯ ಶಭ್ದದಷ್ಟು ಬೃಂದಾ ಅಕ್ಕನ ಕೊಪದಷ್ಟು ಸುಷ್ಮಾ ಅಕ್ಕನ ಕಂಠದಷ್ಟು ವಿಜಯನಗರ ಬಿಂಬದ ಪ್ರೀತಿಯಷ್ಟು” ಈ ಸಾಲು ಗಳಲ್ಲಿ ಅಪ್ರತಿಮವಾದ ಜ್ಞಾನ ಏನೂ ಇಲ್ಲವಾದರೂ ಆ ಮಗುವಿನ ಆಲೋಚನಾ ವಿಧಾನ ನೋಡಿ ಹಾಗು ವ್ಯಕ್ತಿಗಳನ್ನು ಅವರ ಗುಣಗಳನ್ನು grasp ಮಾಡುವ ಕಲೆ ಮಾತ್ರ ಚಂದ…ಇಂತಹ ನೂರಾರು ಕವನಗಳನ್ನು ಮಕ್ಕಳು ಬರೆದಿದ್ದಾರೆ..ಇದನ್ನು ಇಳಾ ಮುದ್ರಣಾಲಯ ಹೊರತಂದಿದೆ… ಕೊನೆಯಲ್ಲಿ ಬಿಂಬದ ಮಕ್ಕಳಿಗೆ ಎಂ.ಡಿ.ಪಲ್ಲವಿ ಹಾಡಿರುವ ಡಾ!ಕುರುವ ಬಸವರಾಜ್ ರಚಿಸಿದ “ಕಾಡೋಡಲ ಹಾಡು”ಎಂಬ ಬ್ಯಾಲೆ ಪ್ರದರ್ಶನ ಮಾಡಿದ್ದರು…ಮಕ್ಕಳು ಅದರಲ್ಲಿ ಮಾಡಿದ ಅಭಿನಯ…ವಿಚಾರಗಳನ್ನು ಹೊರಹೊಮ್ಮಿಸಿದ ರೀತಿ ಕಣ್ಣಲ್ಲಿ ನೀರು ತರಿಸಿತ್ತು,ಪ್ರಕೃತಿಯ ಸಂರಕ್ಷಣೆಯ ಬಗ್ಗೆ ಸಂದೇಶ ಇದ್ದ ಈ ಬ್ಯಾಲೆ ಮಾಡಿದ್ದು ಬಹಳವೇ ಸೂಕ್ತ ಹಾಗು ಮಕ್ಕಳಲ್ಲಿ ಒಳ್ಳೆಯ ಜಾಗೃತಿ ಮೂಡಿಸಿತು..ಹಾಗು ಬಿ.ಆರ್.ಲಕ್ಷ್ಮಣ ರಾವ್ ಬರೆದ shame shame ರಾಜ ಎಂಬ ನಾಟಕ ..ಸಾಮಾಜಿಕ ವಿಡಂಬನೆ, ಮೋಸಗಳ ಮಧ್ಯೆ ಸಿಲುಕುವ ಅಮಾಯಕರು ಹಾಗೆ ಪ್ರಜೆಯಂತೆ ಇರುವ ಮೂರ್ಖ ರಾಜನ(ಸಾಮಾನ್ಯವಾಗಿ ಯಥಾ ರಾಜ ತಥಾ ಪ್ರಜಾ ಅನ್ನುತ್ತೇವಲ್ಲ…ಇಲ್ಲಿ ಅದರ ಇನ್ನೊಂದು ಮುಖ) ವಿಷಯವನ್ನು ಇಟ್ಟುಕೊಂಡು ಇತ್ತೀಚಿನ ಪರಿಸ್ತಿತಿಯನ್ನು ನಿರೂಪಿಸುವ ನಾಟಕ ಅದಾಗಿತ್ತು…. ಇವರೆಡೂ ಕಾರ್ಯಕ್ರಮ ADAರಂಗಮಂದಿರದಲ್ಲಿ ಬಹಳವೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು ಮಕ್ಕಳು… ಇಷ್ಟೆಲ್ಲಾ ಕಂಡಮೇಲೆ ಅನ್ನಿಸಿದ್ದು ಇಷ್ಟು ಕೇವಲ ಹದಿನೈದು ದಿನದಲ್ಲಿ ಮಕ್ಕಳನ್ನು ಹೀಗೆಲ್ಲ ತಯಾರಿ ಮಾಡಬಹುದೇ??ನಮ್ಮಲ್ಲಿ ಎಷ್ಟೊಂದು ಕ್ರಿಯಾಶೀಲರಿದ್ದಾರೆ,ಆ ಮಕ್ಕಳ ತರಲೆಗಳ ಮಧ್ಯೆ,ಹಟಗಳ ನಡುವೆ ಅವರಲ್ಲಿರುವ ಕಲೆಯನ್ನು ಒಂದು stage ಮೇಲೆ ಹಿಡಿದಿಡಲು…ಅದೂ ಇಷ್ಟು ಸೊಗಸಾಗಿ ಸಾಧ್ಯವೇ?? ಅನ್ನಿಸಿತು…. ಎಷ್ಟೊಂದು ಬೇಸಿಗೆ ಶಿಭಿರದ ಮಧ್ಯೆ ಬಿಂಬ ಯಾಕೆ ಭಿನ್ನ ಅನಿಸಿತು..ಎಂಬುದಕ್ಕೆ ಇವೆಲ್ಲವೂ ಕಾರಣ ..hats off to you people ….who created wonders….ಶೋಭಾ ವೆಂಕಟೇಶ್ ಅವರ ಯೋಜನೆಯಲ್ಲಿ ಬೆನ್ನೆಲುಬಾಗಿ…ಮೆದುಳಾಗಿ ಕಾರ್ಯ ನಿರ್ವಹಿಸಿದ ಡಾ.ಕಶ್ಯಪ್ ಆಚಾರ್ ನಿಮ್ಮ initiative ಇಷ್ಟವಾಯ್ತು..ಬೃಂದಾ ಹಾಗು ಸುಷ್ಮಾ ಪ್ರಶಾಂತ್ ಅವರಿಗೆ.ಮನಃಪೂರ್ವಕ ಧನ್ಯವಾದ.. ನಿಮ್ಮ ಈ ಚಟುವಟಿಕೆಗಳನ್ನು ನೋಡಿದ ಮೇಲೆ ನನಗು ಮಗುವಾಗ ಬೇಕು ಎಂದು ಅನಿಸಿತು ಅಂತ ನಾನು ಶೋಭಾ ವೆಂಕಟೇಶ್ ಅವರಲ್ಲಿ ಕೇಳಿದಾಗ…ನಾಟಕದ ರಂಗದಲ್ಲಿ ಒಂದು ವರ್ಷದ ಕೋರ್ಸ್ ಅನ್ನು…ಕರ್ನಾಟಕ ಸರ್ಕಾರದ ಸಹಕಾರದಲ್ಲಿ ಶುರು ಮಾಡಿರುವುದಾಗಿ ಹೇಳಿದರು…ರಂಗಾಸಕ್ತರು…ಇಚ್ಚಿಸುವವರು ಅದನ್ನು ಮಾಡಿದರೆ ಉಪಯುಕ್ತ…   ಬಿಂಬದ ಸದಸ್ಯರಿಗೆ ಇದೆ ಭಿನ್ನವ ಇಂತಹ ನೂರಾರು ಕಾರ್ಯಕ್ರಮಗಳು ತಾವು ನಡೆಸಿ ಮಕ್ಕಳನ್ನು ಸದಾ ಹೀಗೆ ಕ್ರಿಯಾಶೀಲರನ್ನಾಗಿ ಮಾಡಲು ಕೋರಿಕೆ…ಜೊತೆಯಲ್ಲಿ ನಮ್ಮನ್ನೂ….ಅಷ್ಟೇ.!!!]]>

‍ಲೇಖಕರು G

May 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

8 ಪ್ರತಿಕ್ರಿಯೆಗಳು

 1. Kala Anand

  ಬರೀ ಓದು ಓದು ಓದು ಎಂದು ಮಕ್ಕಳ ಮೇಲೆ ಒತ್ತಡ ಹೇರುತ್ತಿರುವ ಇಂದಿನ ಕಾಲದಲ್ಲಿ..ಸಾಮಾಜಿಕ ಕಳಕಳಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಈ ಪ್ರಯತ್ನಕ್ಕೆ ಅಭಿನಂದನೆಗಳು…ಅದರ ಕುರಿತಾದ ನಿನ್ನೀ ವಿಮರ್ಶೆ ಕೂಡ ಚೆನ್ನಾಗಿದೆ ಸುನಿಲ್..ನಿನ್ನೀ ವಿಮರ್ಶೆ ಎಲ್ಲ ವರ್ಗದ ಜನರನ್ನು ತಲುಪಿ..ಅವರಲ್ಲೂ ನಮ್ಮೀ ಸಮಾಜವನ್ನು ಅವನತಿಯಿಂದ ಅಭಿವ್ರುದ್ದಿಯೇದೆಗೆ ಕೊಂಡೊಯ್ಯಲು ಸಹಾಯ ಮಾಡಬಹುದು…keep on writing

  ಪ್ರತಿಕ್ರಿಯೆ
 2. Dr.Kashyap

  ನಮ್ಮ ಎಲ್ಲ ಶ್ರಮವನ್ನು ಗುರುತಿಸಿದ ಸುನಿಲ್ ರಾವ್ ಅವರಿಗೆ ತುಂಬು ಹೃದಯದ ಧನ್ಯವಾದಗಳು. ನಮ್ಮ ಹುಮ್ಮಸ್ಸು ಇಮ್ಮಡಿಸಿದೆ. ಉತ್ಸಾಹ ಹೆಚ್ಚಾಗಿದೆ. ಧನ್ಯವಾದಗಳು

  ಪ್ರತಿಕ್ರಿಯೆ
 3. Bharath Sa.Jagannatha

  ಇತ್ತೀಚಿಗೆ ವಿಜಯನಗರ ಬಿಂಬದ ಸುದ್ದಿಗಳು ಅವಧಿಯಲ್ಲಿ ಹರಿದಾಡುತ್ತಿದೆ, ಇದಕ್ಕೆ ಕಾರಣ ಇತ್ತೀಚಿಗಷ್ಟೇ ನಡೆದ ವಿಜಯನಗರ ಬಿಂಬ “ಚಿಣ್ಣರ ಚಾವಡಿ-೨೦೧೨”.
  ಇಲ್ಲಿ ನಾವು ಬಹಳಷ್ಟು ವಿಚಾರಗಳನ್ನು ಆಟವಾಡುತ್ತಾ, ತರಲೆ ಮಾಡುತ್ತಾ , ಹಾಗೂ ಶ್ರದ್ಧೆಯಿಂದ ಕಲಿತೆವು. ೧೫ ದಿನಗಳ “camp” ಅಲ್ಲಿ ನಾವು ಸುಮಾರು ೧೦-೧೧ ದಿನಗಳನ್ನು craft, guest lecturers ಗಳ class ಗಳು , ಕವಿಮೇಳ, ಪ್ರಶ್ನಾರ್ಥ ?, ಹಾಗು ಬಹು ಉಪಯೋಗಕಾರಿ, ಮಾತು ಮರೆಯಲಾಗದ “media ಹಬ್ಬ” ಇದರಲ್ಲೇ ಕಳೆದುಬಿಟ್ಟೆವು. ಇನ್ನು ಕೇವಲ ೫ ದಿನಗಳು ಉಳಿದಿತ್ತು ಅಷ್ಟರಲ್ಲಿ ಒಂದು ನಾಟಕ ಹಾಗು ಒಂದು ಬ್ಯಾಲೆ ಮಾಡಬೇಕಿತ್ತು!!! ಮೊದಲು ಅಸಾಧ್ಯವೆಂದುಕೊಂಡಿದ್ದೆವು. ಆದರೆ ಅದನ್ನು ಕಶ್ಯಪಣ್ಣ ಹಾಗು ಸುಷ್ಮಾ ಅಕ್ಕ ಸುಳ್ಳು ಮಾಡಿದರು ಒಟ್ಟಿನಲ್ಲಿ ಕಾರ್ಯಕ್ರಮದ ಬಗ್ಗೆ ಹಾಗು ನಮ್ಮ show ಹೀಗೆ ಮೂಡಿ ಬಂತು ಎಂದು ನಮಗೆ ಸೊಗಸಾಗಿ ತಿಳಿಸಿರುವ ಸುನಿಲ್ ರಾವ್ ಸರ್ ಗೆ ಧನ್ಯವಾದಗಳು

  ಪ್ರತಿಕ್ರಿಯೆ
 4. umaprakash

  ವಿಜಯನಗರ “ಬಿಂಬ” ರಂಗ ಶಿಕ್ಷಣ ಕೇಂದ್ರದ ಚಿಣ್ಣರ ಚಾವಡಿ ಬೇಸಿಗೆ ಶಿಬಿರದ ಬಗ್ಗೆ ಬರೆದು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸುನಿಲ್

  ಪ್ರತಿಕ್ರಿಯೆ
 5. shobhavenkatesh

  chinnara chavdi ranga karyagarada varadiyannu sundaravagi muudisidiri sunil. sunil hagoo sandya,avadhi mag ge vanadanegalu. inthaha protsaha namage innu garigeduruttade.kannada rangabhoomige innu namma kelasa madalu sahayavaguthade.avadhi antha sundara patrikege mattome sharanu.

  ಪ್ರತಿಕ್ರಿಯೆ
 6. Shylesh

  VijayaNagara Bimba namma kutumbada ondu avibhajya angavaagide ….
  Avara Chinaara Chaavadi aagirabahudu , shanivaarada Rangashaale aagirabahudu mathinyaava kaaryakrama athava shibirave aagirali namma Advance enrolment khaayam aagiruthade .This advance enrolment is for the Next 100 years Minimum ……….
  Three cheers to BIMBA .
  HIP HIP HURRAY ………

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: