ಬೀದಿ ಪಾಲಾಗುವ ಬೀದಿ ವ್ಯಾಪಾರಿಗಳು

ಹೊರದೇಶದವರನ್ನು ಓಡಿಸಿ ತುಂಬಾ ವರ್ಷಗಳು ಆಯ್ತಾಲ್ಲಾ..?

– ಮಂಜುನಾಥ ದಾಸನಪುರ

‘ಸೊಪ್ಪೊ……!ಸೊಪ್ಪೊ….!ಪ್ರೆಶ್ ಮಾಲ್…..,ಮುಗಿತು ಮುಗಿತು… ಬಿಟ್ರೆ ಸಿಗಲ್ಲ….’ ಎನ್ನುವವರು ಮಾರುವವರಾದರೆ, ಕೊಂಡುಕೊಳ್ಳುವವರು ‘ಈ ಸೊಪ್ಪಿಗೆ ಬೆಲೆ ಹೆಚ್ಚಾಯ್ತು… ಇನ್ನು ಸ್ವಲ್ಪ ಕಡಿಮೆ ಮಾಡಿಕೊ ಪರವಾಗಿಲ್ಲ ಎನ್ನುತ್ತಾ…..ಸೊಪ್ಪನ್ನು ಹಾಗೆಯೇ ತಮ್ಮ ಬುಟ್ಟಿಗೆ ಇಳಿಸಿಕೊಂಡು, ಇಬ್ಬರಿಗೂ ಸರಿ ಎನಿಸಿದ ಸೂಕ್ತ ಬೆಲೆಯನ್ನು ಕೊಡುತ್ತಾರೆ. ಈ ದೃಶ್ಯಗಳನ್ನು ನಮ್ಮ ಮನೆಯ ರಸ್ತೆಗಳಲ್ಲಿ, ಸಂತೆಗಳಲ್ಲಿ ಪ್ರತಿಯೊಬ್ಬರು ಕಂಡಿರುತ್ತೇವೆ. ಇನ್ನೂ ಮುಂದೆ ಇಂತಹ ಕೂಗಾಟಗಳು ದಿನೇ ದಿನೇ ಕ್ಷೀಣವಾಗಲಿವೆ. ಇದರ ಬದಲಾಗಿ ಜಗಮಗಿಸುವ ವಿದ್ಯುತ್ ದೀಪಗಳ ಅಡಿಯಲ್ಲಿ ಸೊಪ್ಪುಗಳು ಬಿದ್ದಿರುತ್ತವೆ, ಅದರ ಮೇಲೆ ಆ ಸೊಪ್ಪಿಗೆ ಬೆಲೆ ಕಟ್ಟಿರುತ್ತಾರೆ. ಇಲ್ಲಿ ಮಾರುವವನ ಹಾಗೂ ಕೊಂಡುಕೊಳ್ಳುವವರ ಮದ್ಯೆ ಯಾವುದೇ ಮಾತು ಇರುವುದಿಲ್ಲ. ಎಲ್ಲವೂ ಮೂಖ ಭಾಷೆಯಲ್ಲಿ ನಡೆದು ಹೊಗುತ್ತದೆ.

ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿಯರು ನೇರವಾಗಿ ತಮ್ಮ ಅಧಿಪತ್ಯವನ್ನು ಸಾಧಿಸುವುದಕ್ಕೆ, ಕೇಂದ್ರ ಸಕರ್ಾರವೂ ಮುಕ್ತ ಅವಕಾಶವನ್ನು ನೀಡಲು ಹೊರಟಿದೆ. ಭಾರತದ ಜನಸಮುದಾಯ ವಿದೇಶೀ ಮಾಲುಗಳಿಗೆ ಹೊಗಿ ತಮ್ಮ ದಿನ ನಿತ್ಯದ ವಸ್ತುಗಳನ್ನು ಖರೀದಿ ಮಾಡುವಷ್ಟು ಸಬಲರಾಗಿದ್ದರಾ ಎಂಬುದು ನಮ್ಮನ್ನಾಳುವ ಸಕರ್ಾರಕ್ಕೆ ಗೊತ್ತಿಲ್ಲವೇ. ಈಗಲೂ ನಗರದ ಗಲ್ಲಿ ಗಲ್ಲಿಗಳಲ್ಲಿ, ಪ್ರತಿಹಳ್ಳಿಯಲ್ಲಿ ಬೀದಿ ವ್ಯಾಪಾರಿಗಳು ಇರುವಾಗ……

ಬೀದಿ ವ್ಯಾಪಾರಿಗಳು ಸೈಕಲ್ನಲ್ಲಿ ಮಕ್ಕರಿ ಕಟ್ಟಿಕೊಂಡು ತರಕಾರಿ, ಸೊಪ್ಪು, ಹೂ……ಇತರೆ ದಿನ ಬಳಕೆಯ ಸಾಮಾಗ್ರಿಗಳನ್ನು ಮಾರುವವರು ನಮ್ಮ ಮನೆಯ ಅಕ್ಕಪಕ್ಕದಲ್ಲಿಯೆ ಸುಮಾರು ಹತ್ತಕ್ಕಿಂತ್ತಲೂ ಹೆಚ್ಚು ಮನೆಗಳಿವೆ. ಇವರಿಗೆ ಈ ಕೆಲಸವನ್ನು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಇವರ ವಯಸ್ಸು ಸರಾಸರಿ 35 ರಿಂದ 45 ವರ್ಷಗಳ ಅಂತರ ಇದೆ. ಪ್ರತಿಯೊಬ್ಬರಿಗೂ ಎರಡರಿಂದ ಮೂರು ಮಕ್ಕಳಿವೆ. ಈ ಮಕ್ಕಳೆಲ್ಲಾರು ಸಕರ್ಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇವರ ಮನೆಯ ಆದಾಯದ ಮೂಲ ವೆಂದರೇ ಸೈಕಲ್, ಅವರ ದೈಹಿಕ ಶಕ್ತಿ ಹಾಗೂ ಇವರ ವಸ್ತುಗಳನ್ನು ಕೊಂಡುಕೊಳ್ಳುವ ಗ್ರಾಹಕರು.

ಇದಕ್ಕೆ ಸಂಬಂಧ ಪಟ್ಟಹಾಗೆ ಸುಮಾರು 20 ವರ್ಷಗಳಿಂದ ಸೈಕಲ್ನಲ್ಲಿ ಬೀದಿ ವ್ಯಾಪಾರ ಮಾಡುತ್ತಿರುವ ಮುನಿಯಪ್ಪನನ್ನು ಪ್ರಶ್ನಿಸಿದೆ. ‘ನಿಮ್ಮ ವ್ಯಾಪಾರಕ್ಕೆ ಪೈಪೊಟಿಯಾಗಿ ಹೊರದೇಶದವರು ಬರ್ತಾ ಅವ್ರೆ ಈ ವಿಷಯ ಗೊತ್ತಾ ನಿಮಗೆ ಎಂದೆ. ಹೊರದೇಶದವರು ಅಂದ ತಕ್ಷಣ ಅವರಿಗೆ ಆಶ್ಚರ್ಯ ಆಯ್ತು! ಅರೆ….! ‘ಹೊರದೇಶದವರ. ಅವರನ್ನು ಓಡಿಸಿ ತುಂಬಾ ವರ್ಷಗಳು ಆಯ್ತಾಲ್ಲಾ…. ಮತ್ತೆ ಬರ್ತಾ ಅವ್ರ. ನಮ್ಮ ಸಕರ್ಾರ ಅವರ ವಿರುದ್ದ ಏನು ಮಾಡುತ್ತಿಲ್ವ, ಅದು ನಮ್ಮ ಕೆಲಸಕ್ಕೆ ಕೈ ಆಕ್ತಾ ಅವ್ರ….ಯಾಕೆ? ಅವರ ದೇಶದವರು ಅಷ್ಟೊಂದು ಬಡವರಾಗಿದ್ದರಾ’ ಇನ್ನೂ ಹಲವು ಪ್ರಶ್ನೆಗಳನ್ನು ನನ್ನನ್ನೆ ಕೇಳಿ ಆಶ್ಚರ್ಯ ಚಕಿತರಾದರೂ. ನಮ್ಮ ವ್ಯವಸ್ಥೆ ಜನತೆಯನ್ನು ಆಥರ್ಿಕವಾಗಿ ಸಬಲರನ್ನಾಗಿ ಮಾಡದೆ, ವಿದೇಶಿಯರನ್ನು ಹಣವಂತರನ್ನಾಗಿ ಮಾಡಲು ಹೊರಟಿದೆ.

ವಿದೇಶಿ ಕಂಪನಿಗಳ ಆಕ್ರಮಣದಿಂದಾಗಿ ‘ಬೀದಿ ಪಾಲಾಗುವ ಬೀದಿ ವ್ಯಪಾರಿಗಳ’ ಸಂಖ್ಯೆ ಲಕ್ಷಾಂತರ ಜನಸಂಖ್ಯೆ ಆಗುತ್ತದೆ. ಇವರೆಲ್ಲಾರಿಗೂ ಉದ್ಯೊಗವನ್ನು ದೊರಕಿಸಿಕೊಡಲು ಸಾದ್ಯವಿದೆಯೇ. ಹೀಗಾಗಲೇ ಬರಗಾಲ, ಬೆಳೆದ ಬೆಲೆಗೆ ಸೂಕ್ತ ಬೆಲೆ ಸಿಗದಿರುವುದು, ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವು ಲಕ್ಷಾಂತರ ಮಂದಿಗೆ ಸರಿಯಾದ ಮೂಲಭೂತ ಅವಶ್ಯಕತೆ ಇನ್ನೂ ದೊರಕಿಲ್ಲ. ಇದೆಲ್ಲವುಗಳ ನಡುವೆ ವಿದೇಶಿ ಕಂಪನಿಗಳ ದಾಳಿ ಭಾರತದ ವಿರುದ್ದದ್ದ ಯುದ್ದ ವಲ್ಲದೆ ಮತ್ತೇನು ಅಲ್ಲ.

 

 

‍ಲೇಖಕರು G

September 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

4 ಪ್ರತಿಕ್ರಿಯೆಗಳು

 1. Vinayak Hegde

  I dont think foreign retail companies can affect these small time traders. Indian business even today runs on trust. You will get credit facility in the near by kirana store, not in the Wallmart. (I hardly go to these big retail shops to buy items). So, the kiranawala will not lose his loyal customers. In my opinion, these people need not to worry. Who really needs to worry is retail stores like Big Bazaar, Megaamart, Total Mall etc. as the foreign retail stores will acquire these companies customers. Indian retail stores are in business since many years and they already acquired all the customers, who are passionate about shopping in malls. So, only these customers can buy in newcoming foreign companies.

  ಪ್ರತಿಕ್ರಿಯೆ
 2. ಡಿ ಎಸ್ ರಾಮಸ್ವಾಮಿ

  ಚಿಲ್ಲರೆ ಕ್ಷೇತ್ರದಲ್ಲಿ ವಿದೇಶೀ ಬಂಡವಾಳ ಎನ್ನುವುದು ಚಿಲ್ಲರೆಯ ಮಾತಲ್ಲ. ಈಗಾಗಲೇ ಜಾಗತೀಕರಣದಿಂದಾಗಿ ಹೈರಾಣಾಗಿರುವ ನಮ್ಮ ಆರ್ಥವ್ಯವಸ್ಥೆ ಚಿಲ್ಲರೆ ವ್ಯಾಪಾರವನ್ನು ಪಾರ್ಶ್ವ ವಾಯುವಿನಂತೆ ಕಾಡಲಿದೆ. ವಿಶ್ವ ಬ್ಯಾಂಕಿನ ಹುನ್ನಾರ ಮತ್ತು ಜಾಗತಿಕ ವ್ಯಾಪಾರದ ಘನ ಉದ್ದೇಶ ಈ ಒಡಂಬಡಿಕೆಯ ಹಿಂದಿವೆ. ಈಗಾಗಲೇ ತಳಕಂಡಿರುವ ನಮ್ಮ ಕೃಷಿಕ್ಷೇತ್ರದ ಮೇಲೂ ಇದು ಮರಣಾಂತಿಕ ಹಲ್ಲೆ ಮಾಡಲಿದೆ. ಗ್ರೀಸ್ ಮತ್ತು ಅರ್ಜೈಂಟನಾ ದೇಶಗಳ ಪರಿಸ್ಥಿತಿ ಅರಿತವರಿಗೆ ಇದು ಅರ್ಥವಾಗಲಿಕ್ಕೆ ಸಾಧ್ಯ. ಅವಧಿ ವಿತ್ತೀಯ ಪ್ರಪಂಚದ ಆಗು ಹೋಗುಗಳನ್ನು ಆಗೀಗ ಪರಿಚಯಿಸುವುದು ಒಳ್ಳೆಯದು

  ಪ್ರತಿಕ್ರಿಯೆ
 3. Adithya

  ಇವರಿಗೆ ಈ ಕೆಲಸವನ್ನು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. does it mean that these are the group of people who did not evolve from hunter gatherers but are the direct descendants of new cavemen tribe called homo-brokers, one will only support foreign direct investment after witnessing the APMC yard drama by our own Indian brokers, any one who have had grown highly price volatile crops like tomato chilli and who in distress have thrown their crops on the streets of market after being offered 5rs/100kg bag should know what is FDI, unfortunately they aren’t literate enough to use internet or financially fit enough to do so, a broker is clever enough to find out alternatives, but the farmer is distressed enough to hang himself. whom does the drought affect most the farmer or a broker?
  There is something beautiful called farmers market in the USA and here we have sleeping HOPCOMS and the dead & rotten APMC yards. Do we still need 3 brokers between us and the producer, or is 1 broker enough for our good? All right if FDI in retail is such a massive threat to our vegetable vendors then India is in a critical position where it can give life to either the dying farmer or to the vegetable vendor,
  In newspapers we have read about series of farmers suicides in the far east of Maharashtra and the rise of skyscraper house of Ambanis on the far west coast of Maharashtra. We have also witnessed Star Bazaar by Bharatratna JRD Tata’s family.

  Do we really need to press the panic button or don’t we have the option of wait and watch.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: