ಬೆಳ್ಳಿ ಗೆಜ್ಜೆಯಲ್ಲಿ ಪಿ ಬಿ

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಈ ಮಾಸದ “ಬೆಳ್ಳಿಹೆಜ್ಜೆ” ಯಡಿ ಸಿರಿಕಂಠದ ಗಾಯಕ ಡಾ. ಪಿ. ಬಿ. ಶ್ರೀನಿವಾಸ್ ಅವರೊಂದಿಗೆ ಸಂವಾದವನ್ನು ಏರ್ಪಡಿಸಿದೆ. ಸೆ. 4 ರಂದು ಶನಿವಾರ ಸಂಜೆ 4. 30 ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಬಾದಾಮಿ ಹೌಸ್ ನಲ್ಲಿ ಪಿ.ಬಿ. ಶ್ರೀನಿವಾಸ್ ತಮ್ಮ ಅನುಭವಗಳನ್ನು ಹಂಚಿಕೊಳ್ಳುವರು. ಕನ್ನಡ ಚಲನಚಿತ್ರಗೀತೆಗಳಿಗೆ ಮಾಂತ್ರಿಕ ಹಾಗೂ ಮಾಧುರ್ಯದ ಸ್ಪರ್ಶ ನೀಡಿದ್ದ ಡಾ. ಪಿ. ಬಿ. ಶ್ರೀನಿವಾಸ್, ಶಾಲಾ ದಿನಗಳಲ್ಲೇ ಸಂಗೀತದ ಮೋಹಕ್ಕೆ ಬಿದ್ದವರು. ನಂತರ ಅಭ್ಯಾಸ ಮಾಡಿದ್ದು ಕಾನೂನು ಶಾಸ್ತ್ರ. ಆರ್. ನಾಗೇಂದ್ರರಾಯರ ‘ಜಾತಕ ಫಲ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಇವರು, ನಂತರ ಹೊಸ ಗಾಯನ ಪರಂಪರೆಯನ್ನೇ ಆರಂಭಿಸಿದರು. “ಕನಕದಾಸ” ಚಿತ್ರದ ಮೂಲಕ ಡಾ. ರಾಜ್ ಕುಮಾರ್ ಅವರಿಗೆ ಹಿನ್ನೆಲೆಗಾಯನ ನೀಡಲಾರಂಭಿಸಿದ ಪ್ರತಿವಾದಿ ಭಯಂಕರ, ಇದುವರೆಗೆ ಹಾಡಿರುವ ಗೀತೆಗಳ ಸಂಖ್ಯೆ 3, 450 ಕ್ಕೂ ಹೆಚ್ಚು.ಡಾ. ರಾಜ್ ಕುಮಾರ್ ಶರೀರ ಪಿ.ಬಿ. ಶ್ರೀನಿವಾಸ್ ಶಾರೀರ ಎಂಬ ಮಾತೂ ಚಾಲ್ತಿಯಲ್ಲಿತ್ತು. ಇದು ಪಿಬಿಎಸ್ ಪ್ರತಿಭೆಗೆ ಸಂದ ಗೌರವ. ಕನ್ನಡ ಸೇರಿದಂತೆ ಎಂಟು ಭಾಷೆಯ ಗೀತೆಗಳನ್ನು ಹಾಡಿರುವ ಇವರು ಸ್ವತಃ ಗೀತ ರಚನೆಕಾರರು. ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಕಾರ್ಯಕ್ರಮ ಕುರಿತ ಹೆಚ್ಚಿನ ಮಾಹಿತಿಗೆ 080-22133441, 22133410]]>

‍ಲೇಖಕರು avadhi

August 31, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This