ಬೇಕೆ ಮತ್ತೊ೦ದು ಚೆರ್ನೋಬಿಲ್, ಮತ್ತೊ೦ದು ಭೋಪಾಲ್…?

ಪರಮಾಣು ಸ್ಥಾವರಗಳ ಪರಮ ಸತ್ಯ!

– ಕು.ಸ.ಮಧುಸೂದನ್

  ಸ್ಥಳಿಯರ ಎಲ್ಲ ಪ್ರತಿರೋಧಗಳ ನಡುವೆಯೂ ಸರಕಾರ ತಮಿಳುನಾಡಿನ ಕಂದುಂಕುಲಂನಲ್ಲಿ ಅಣುಸ್ಥಾವರ ಸ್ಥಾಪನೆಗೆ ಮುಂದಾಗಿದೆ.ಅಮೇರಿಕಾದ ಹಿತಾಸಕ್ತಿಗಳಿಗೆ ಮಣಿದಿರುವ ಸರಕಾರ ನಮಗೆ ಅಣುಶಕ್ತಿ ಅನಿವಾರ್ಯವೆಂದು ಸಾರ್ವಜನಿಕರನ್ನು ನಂಬಿಸಲು ಹರಸಾಹಸ ಮಾಡುತ್ತಿದೆ.ಅದರ ಈ ಪ್ರಯತ್ನಕ್ಕೆ ವೈಜ್ಞಾನಿಕ ಅಧ್ಯಯನದ ಗಂಧಗಾಳಿಯೂ ಇರದ ನೇತಾರರು,ಪಟ್ಟಭದ್ರ ಹಿತಾಸಕ್ತಿಯ ಅಧಿಕಾರಶಾಹಿ ವರ್ಗ ಮತ್ತು ಎಲ್ಲ ಗೊತ್ತಿದ್ದೂ ಬಾಯಿಬಿಡದ ವಿಜ್ಞಾನಿಗಳು ಕೈ ಜೋಡಿಸಿದ್ದಾರೆ. ಸರಕಾರ ಅಣುಶಕ್ತಿಯ ಬಗ್ಗೆ ಹೇಳುವ ಸುಳ್ಳುಗಳೆಂದರೆ ಅವು ಮಿತವ್ಯಯಕಾರಿ ಮತ್ತು ಅಪಾಯರಹಿತವಾದ ಪರಿಸರ ಸ್ನೇಹಿಯಾದವೆಂದು: ಆದರಿದು ಹಸಿ ಸುಳ್ಳು! ಒಂದು ಅಣುಸ್ಥಾವರದಿಂದ ನಾವು ಉತ್ಪಾದಿಸುವ ವಿದ್ಯುತ್ತಿಗೆ ತಗಲುವ ವೆಚ್ಚವು ಇತರೇ ಮೂಲಗಳಿಂದ( ಜಲ,ಗಾಳಿ,ಸೋಲಾರ್) ತಯಾರಿಸುವ ವಿದ್ಯುತ್ ಗಿಂತ ಶೇಕಡಾ ನಲವತ್ತರಷ್ಟು ಅಧಿಕವಾಗಿರುತ್ತದೆ. ನೀವೇ ನೋಡಿ ಯೋಜನೆಗೆ ಒಪ್ಪಿಗೆ ನೀಡಿದಾಗ ಕುಂದುಂಕುಲಂನ ಅಂದಾಜು ವೆಚ್ಚ ಇದ್ದದ್ದು ಆರು ಸಾವಿರ ಕೋಟಿ ರೂಪಾಯಿಗಳು ಆದರೀಗ ಅದರ ಅಂದಾಜುವೆಚ್ಚ ಸುಮಾರು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ. ಈ ವೆಚ್ಚದಲ್ಲಿ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿಡುವ-ವಿಲೇವಾರಿ ಮಾಡುವವೆಚ್ಚ ಸೇರಿಲ್ಲ. ಜೊತೆಗೆಪರಿಸರದ ಮೇಲಾಗುವ ಹಾನಿಯಿಂದಾಗುವ ನಷ್ಟವನ್ನು ಸರಿದೂಗಿಸುವ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಆದರೂ ಅಣುಸ್ಥಾವರಗಳನ್ನು ಸ್ಥಾಪಿಸಲುಉತ್ಸುಕವಾಗಿರುವ ಕೆಲವು ಸ್ವಹಿತಾಶಕ್ತಿಗಳು ಕಡಿಮೆ ವೆಚ್ಚದಲ್ಲಿ ಹಾನಿಕಾರಕವಲ್ಲದ ತಂತ್ರಜ್ಞಾನವೆಂಬ ಘೋಷಣೆಯೊಂದಿಗೆ ಲಾಭಿ ನಡೆಸುತ್ತಿವೆ.ವಿಪರ್ಯಾಸವೆಂದರೆ ಆಣುಶಕ್ತಿಯ ಬಗ್ಗೆ ಇಷ್ಟೊಂದು ಆಶಾದಾಯಕ ಮಾತುಗಳನ್ನಾಡುವ ಅಮೇರಿಕಾದಲ್ಲಿ 1980ರಿಂದ ಇತ್ತೀಚೆಗೆ ಒಂದೇ ಒಂದು ಅಣುಸ್ಥಾವರವೂ ಸ್ಥಾಪನೆಯಾಗಿಲ್ಲ.   ಇನ್ನು ಇದು ಕಡಿಮೆ ಅಪಾಯಕಾರಿಯೆಂಬ ಮಾತುಗಳ ಬಗ್ಗೆ ನೋಡೋಣ: ವರ್ಷಗಳ ಹಿಂದಿನ ಸೋವಿಯತ್ ಒಕ್ಕೂಟದ ಚೆರ್ನೋಬಿಲ್ ದುರಂತವನ್ನು ಯಾರಾದರು ಮರೆಯಲು ಸಾದ್ಯವೇ? ಇತ್ತೀಚೆಗಿನ ಜಪಾನಿನ ಪುಕೋಶಿಮಾ ಸ್ಥಾವರದ ಉದಾಹರಣೆ ನಮ್ಮ ಕಣ್ಮುಂದೆಯೇ ಇದೆ. ಚೆರ್ನೋಬಿಲ್ ದುರಂತವೊಂದೇ ತನ್ನ ಆಸುಪಾಸಿನ ಎಂಟು ದಶಲಕ್ಷ ಜನರನ್ನು ಅಣುವಿಕಿರಣದ ಅಪಾಯಕ್ಕೆ ಒಡ್ಡಿದೆ. ಈ ವಿಕಿರಣದ ಪ್ರಭಾವ ಸುಮಾರು ಎರಡು ಲಕ್ಷ ಚದರ ಕಿಲೋಮೀಟರ್ ವರೆಗೂ ಹರಡಿದೆ.ಅಂದಾಜು ಐವತ್ತು ಸಾವಿರ ಹೆಕ್ಟೇರಿನಷ್ಟು ಕೃಷಿಭೂಮಿ ಸರ್ವ ನಾಶವಾಗಿ ಹೋಯಿತು. ಆ ತಕ್ಷಣದಲ್ಲಿ ಐದೂವರೆ ಲಕ್ಷ ಜನರಿಗೆ ಸರಕಾರ ಪುನರ್ವಸತಿ ಕಲ್ಪಿಸ ಬೇಕಾಗಿ ಬಂತು. ಇಷ್ಟಾದರು ಇವತ್ತಿಗೂ ಅಲ್ಲಿ ಜನರು ವಿಕಿರಣದ ಅಪಾಯದಲ್ಲಿ ಸಿಲುಕಿ ಮಾನಸಿಕ ದೈಹಿಕ ಕಾಯಿಲೆಗಳಿಂದ ನರಳುತ್ತದ್ದಾರೆ. ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಅಣುಸ್ಥಾವರವೊಂದು ದಿನಕ್ಕೆ ಮುವತ್ತು ಟನ್ ನಿರುಪಯುಕ್ತ ತ್ಯಾಜ್ಯಗಳನ್ನು ಸೃಷ್ಠಿಸುತ್ತದೆ. ಇಂತಹ ತ್ಯಾಜ್ಯಗಳನ್ನು ಸಂಗ್ರಹಿಸಿಟ್ಟು,ನಂತರ ವಿಲೇವಾರಿ ಮಾಡುವ ಸಮಯದಲ್ಲಾಗುವ ಅಪಾಯದ ಮಟ್ಟವನ್ನು ಊಹಿಸಲೂ ಸಾದ್ಯವಿಲ್ಲ. ಅಣುಸ್ಥಾವರಗಳ ಬಗ್ಗೆ ಇಷ್ಟು ದೊಡ್ಡ ದನಿಯಲ್ಲಿ ಮಾತಾಡುವ ಅಮೇರಿಕಾದ ಬಗ್ಗೆ ನೋಡಿ:ಉತ್ತರ ಅಮೇರಿಕಾದ ಯುರೇನಿಯಂ ಗಣಿಗಾರಿಕೆಯಲ್ಲಿ ಸಕ್ರಿಯವಾಗಿದ್ದ ಜನರಲ್ಲಿ ಶೇಕಡ ಎಪ್ಪತ್ತರಷ್ಟು ಅಧಿಕ ಜನ ಶ್ವಾಸಕೋಶದ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ. ಮನುಕುಲಕ್ಕೆ ಇಷ್ಟೊಂದು ಅಪಾಯಕಾರಿಯಾದ ಅಣುಸ್ಥಾವರಗಳನ್ನು ಭಾರತದಂತಹ ರಾಷ್ಟ್ರಗಳಿಗೆ ಮಾರಲು ಹೊರಟಿರುವ ಅಮೇರಿಕಾಕ್ಕೆ ಯಾವ ಪಾಪ ಪ್ರಜ್ಞೆಯೂ ಇಲ್ಲ. ಆದರೆ ಅಮೇರಿಕೆಯಂತಹ ಬಲಾಢ್ಯ ಬಂಡವಾಳಶಾಹಿ ಶಕ್ತಿಗಳ ಸಂತೃಪ್ತಿಗಾಗಿ ತನ್ನದೇ ಜನತೆಯನ್ನು ಸಾವಿನ ದವಡೆಗೆ ನೂಕಲು ಸಿದ್ದವಾಗಿ ನಿಂತಿರುವ ನಮ್ಮ ನೇತಾರರ ಮನಸ್ಥಿತಿಯನ್ನು ಏನೆಂದು ವರ್ಣಿಸುವುದು?  ]]>

‍ಲೇಖಕರು G

August 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

4 ಪ್ರತಿಕ್ರಿಯೆಗಳು

 1. Umesh

  “ಅಮೇರಿಕಾದಲ್ಲಿ 1980ರಿಂದ ಇತ್ತೀಚೆಗೆ ಒಂದೇ ಒಂದು ಅಣುಸ್ಥಾವರವೂ ಸ್ಥಾಪನೆಯಾಗಿಲ್ಲ.” ಅಂತ ಬರೆದಿದ್ದಾರೆ ಆದರೆ ಇತ್ತೀಚಿಗೆ ೨೦೧೨ ರಲ್ಲಿ Georgia ರಾಜ್ಯದಲ್ಲಿ ಎರೆಡು ಹೊಸ ಅಣು ಸ್ಥಾವರ ಸ್ಥಾಪನೆಗೆ ಅಮೆರಿಕ ಸರ್ಕಾರ ಅನುಮತಿ ಕೊಟ್ಟಿದೆ.ಇನ್ನೂ ಒಂಬತ್ತು ಹೊಸ ಸ್ಥಾವರಕ್ಕೆ ವಿಚಾರಮಾಡುತ್ತಿದೆ. ಎರಡನೆಯದಾಗಿ ಕೂದಕುಲಂ ಅಣುಸ್ಥಾವರ ಅಮೆರಿಕಾದ್ದಲ್ಲ ಬದಲಾಗಿ ರಷ್ಯ ಸರ್ಕಾರದ್ದು.

  ಪ್ರತಿಕ್ರಿಯೆ
 2. asha

  A factually incorrect article. The escalation in cost of Koondankulam project is because of the delay in construction…it has taken over 20 years to complete this project…this is mainly due to red tapism of the government….Even though US helped India to get into the nuclear club, it has so far not recieved a single order from GOI to setup a nuclear plant. Only russia (in Kundankulam) and France (in Jatiapur) have bagged the orders from GOI. Please get your facts right before writing half baked articles like these.

  ಪ್ರತಿಕ್ರಿಯೆ
 3. Sharadhi

  Umesh, thanks for pointing this out. Accuracy of the facts, and numbers is of paramount importance.

  ಪ್ರತಿಕ್ರಿಯೆ
 4. ಅವಿನಾಶ ಕನ್ನಮ್ಮನವರ

  ಆದ ಗಾಯಗಳಿಂದ ನಾವು ಯಾವತ್ತು ಪಾಠ ಕಲಿಯೋದೇ ಇಲ್ಲಾ, ನಮ್ಮನ್ನು ನುಕ್ಲಿಯರ್ ಎಂಬ ಕೆಟ್ಟ ಕನಸಿಗೆ ನೂಕುತ್ತಿರುವ ಅಮೇರಿಕೆಯು ಎಷ್ಟೋ ವರ್ಷಗಳಿಂದ ಹೊಸ ರಿಯಾಕ್ಟರ್ ಗಳನ್ನ ನಿರ್ಮಿಸಿಲ್ಲ, ಜರ್ಮನಿ ಅಂತಹ ದೇಶವೂ ಕೂಡ ನುಕ್ಲಿಯರ್ ಮೇಲಿನ ಅವಲ೦ಭನೆಯನ್ನ ಭವಿಷ್ಯದಲ್ಲಿ ಇಲ್ಲವಾಗಿಸುವ ಪಣ ತೊಟ್ಟಿದೆ, ಎಲ್ಲದರಲ್ಲೂ ವೆಸ್ಟ್ ಕಡೆ ಮುಖ ಮಾಡುವ ನಾವು, ಇಂತಹ ಒಳ್ಳೆ ಕೆಲಸಗಳನ್ನ ದೊಡ್ಡ ದೊಡ್ಡ ದೇಶದಿಂದ ಕಾಪಿ ಮಾಡಿಕೊಳ್ಳೋಲ್ಲ, ಪ್ರಜಾವಾಣಿ ಪತ್ರಿಕೆಯಲ್ಲಿ ನಾಗೇಶ್ ಹೆಗಡೆ ಯವರು, ಹೊಸ ಬಿಜೆಪಿ ಸರ್ಕಾರ ಆಡಳಿತ ಬಂದಾಗ “ಕರ್ನಾಟಕದಲ್ಲಿ ಎಲ್ಲೆಲ್ಲಿ ರೆನಿವೆಬಲ್ (ಗಾಳಿ, ಚಿಕ್ಕ ಚಿಕ್ಕ ನೀರು ಎಂತ್ರಗಳಿಂದ ) ಅದು ಹೇಗೆ ಕರ್ನಟಕದ ವಿದ್ಯುತ್ ಶಕ್ತಿಯನ್ನು ಸ್ವವಲ೦ಭನೆಯಿಂದ ಪಡೆಯ ಬಹುದು” ಅನ್ನೋದರ ಬಗ್ಗೆ ಇಡೀ ಪುಟ ತುಂಬಾ ಬರೆದರು, ಕಮಿಷನ್ ರೋಗಕ್ಕೆ ಒಳಗಾದ ಡೊಂಕು ಬಾಲದ ರಾಜಕೀಯ ನಾಯಕರಿಗೆ ಇದೆಲ್ಲ ಎಲ್ಲಿ ಅರ್ಥ ಆಗಬೇಕು ಹೇಳಿ? 🙁

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: