ಬೇಡ ಮುರಿದ ಭಾಷೆಯನ್ನು ಸಾಕ್ಷಿ ಮಾಡಿಕೊಳ್ಳುವುದು..

ಪುರಾವೆ

– ಬಸವರಾಜ ಸೂಳಿಬಾವಿ

ಲಡಾಯಿ ಪ್ರಕಾಶನ

ನನ್ನ ಮುಂದೆ ಏನೂ ಇಲ್ಲ ಹಿಂದೆಯೂ.. ಈಗ ಕೂಡುವ ಮಾತನ್ನಷ್ಟೇ ಅಡೋಣ ಬೇಡ ಮುರಿದ ಭಾಷೆಯನ್ನು ಸಾಕ್ಷಿ ಮಾಡಿಕೊಳ್ಳುವುದು ಗುಳೆಹೋದ ಸ್ವಪ್ನಗಳ ಕರೆದು ಮಾತಿಗೆ ಕೂಡೋಣ ಬಾ.. ಆಡುವ ಮನಸಿರದಿದ್ದರೂ ಮಾತು ಮರೆತು ಎದುರುಬದುರಾಗಿ ಒಂದು ಕ್ಷಣ ನಿಲ್ಲೋಣ ಎದೆಯ ನಿಜರೂಪ ತೋರುವ ಕಂಗಳ ತೆರೆದಿಟ್ಟು ಒಮ್ಮೆ ಸುಮ್ಮನೆ ನೀನು ನನಗಾಗಿ ನಾನು ನಿನಗಾಗಿ ಬರೆದ ಕವಿತೆ ಸಂಜೆಗೆ ರಂಗೇರಿಸಿದ ನಿನ್ನ ಹಾಡು ಕೈತೋಟದ ಒಂಡಿಯ ಮೇಲೆ ಕಲೆತ ದೇಹಗಳ ಪಿಸುಮಾತು ನೆನೆಯೋಣ! ಕೊನೆಯ ಸಲ ಅಂದುಕೊಂಡೇ ಜಡಿಮಳೆಗಿಂತ ರಭಸವಾಗಿ ನಮ್ಮ ನಡುವೆ ಹರಿದಾಡಿದ ಸಂದೇಶ ಅಕ್ಷರಗಳ ತೆಪ್ಪದಲಿ ಒಂದು ಸುತ್ತು ತೇಲೋಣ! ನಮ್ಮ ಅಗಣಿತ ಪತ್ರಗಳ ಅಕ್ಷರಗಳೊಡಲಲ್ಲಿ ನಗುವ ರಾಗರತಿಯ ಸದ್ದು ಕೇಳದಷ್ಟು ನಮ್ಮ ಕಿವಿಗಳಿನ್ನೂ ಕಿವುಡಾಗಿಲ್ಲ! ನಮ್ಮ ಮಿಲನದ ಹಾಸಿಗೆಯ ಸುಕ್ಕು ಬದಲಾಗುವ ಮುನ್ನ ತುಸುದೂರ ನಿಂತೇ ನೋಡೋಣ! ಇದ್ದಲ್ಲಿಗೇ ಬಂದು ನಿನ್ನ ಪಾವು ಜಾಗದಲ್ಲಿ ನನ್ನ ಚಿಗುರಲು ಬಿಡು ಬದುಕು ಕಟ್ಟಲು ಅವಕಾಶ ಕೊಡು ಅಂದವಳ ದನಿಗೆ ಅರಳಿದ ದೇಹದ ಸಂಭ್ರಮ ಇನ್ನೂ ಅಳಿದಿಲ್ಲ ಛಪ್ಪನ್ನಾರು ಬಣ್ಣ ಕಲಿಸಿ ಮೆಲ್ಲನೆ ಬೆನ್ನ ಸವರಿ ಉಳಿದ ಚಳಿಗಾಲಕ್ಕಿರಲೆಂದು ನೀ ಕೊಟ್ಟ ಕಂಬಳಿ ಹಳೆಯದಾಗಿಲ್ಲ! ಬೆರಳ ತುದಿಯಲಿ ಬದುಕಿನ ಪುರಾವೆಗಳು ಕಂದುಗಟ್ಟುವ ಸಮಯ ಬಂದಿದೆ ಈ ಗಳಿಗೆಯಲ್ಲಿ ನಸೀಬಿನ ಮಾತು ಬೇಡ ನಿನ್ನ ನಂಬುತ್ತೇನೆ ನೀ ನನಗೆ ಹೊಸ ಜನ್ಮ ಕೊಟ್ಟಾಕೆ ಅದನ್ನು ಮರಳಿಸಿಬಿಡು ಎಂದರೆ ಇಲ್ಲವೆನ್ನಲು ನಾನ್ಯಾರು?! ಇಷ್ಟಾದಮೇಲೂ ಬರಬಾರದೆನಿಸಿದರೆ ಅಲ್ಲೇ ಇರು ನಿನ್ನ ಗೈರುಹಾಜರಿಯಲ್ಲಿ ಹೃದಯ ಜೀವಂತವಿದೆ ಎಂದಾದರೆ ನೀನಿನ್ನೂ ಇರುವೆ ಸಖಿ, ಈ ಜನ್ಮಕ್ಕಿಷ್ಟು ಸಾಕು!]]>

‍ಲೇಖಕರು G

April 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

ಮೋಹ ಇದಿರುಗೊಳ್ಳದ ದಿನ

ಮೋಹ ಇದಿರುಗೊಳ್ಳದ ದಿನ

ಕೆ ಜೆ ಕೊಟ್ರಗೌಡ ತೂಲಹಳ್ಳಿ ಪೋಲಿಯಾಗಿ ಬಿಡಬೇಕುಯಾವ ಶಿಲಾಬಾಲೆಯೂಎದುರುಗೊಳ್ಳದ ಕಾರಣ ಅತೀ ಆಸೆಯ ಹೊಂದಿಯೂಅಮಾಯಕತೆಯಪ್ರದರ್ಶನಕೆಯಾವ...

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: