ಬೇವಿನಲಿ ಒಂದಿಷ್ಟು ಬೆಲ್ಲ ಕಲಸು…

wallcoocom_2560x1600_widescreen_greenleaves_wallpaper_da035062f
ಸು ರಂ ಎಕ್ಕುಂಡಿ ಅವರ ‘ಒಳಗೆ ಬಾ ಚೈತ್ರ!’ ಕವಿತೆಯ ಆಯ್ದ ಭಾಗ 
ಕರಗವನು ಹೊತ್ತಂತೆ ಹೊತ್ತಿದೆ ವಸಂತವಿದು
ಚಿಗುರಿನಾಸೆಯ ಜೀವ ಜಡಗಳಲ್ಲಿ 
ರಸಯಾತ್ರೆ ಕೈಗೊಂಡು ದಣಿದಂಥ ದುಂಬಿಗಳು
ಕುಡಿದಿಹವು ಪುಷ್ಪರಸ ಕೊಡಗಳಲ್ಲಿ
ಪರಿಮಳದ ಪಲ್ಲಕ್ಕಿಯಲ್ಲಿ ಚೈತ್ರ ಬಂದಿರಲು 
ಮನದ ಮಾಮರದಲ್ಲಿ ಸುರಿದ ಹೂವು
ನಾಗಸ್ವರವ ನುಡಿಸಿ ತಂಬೆಲರು ಸಾಗಿರಲು
ಇನ್ನೆಲ್ಲಿ ಉಳಿಯುವುದು ಹಳೆಯ ನೋವು
ಪಾಲ್ಗುಣದ ಉರಿಯಲ್ಲಿ ಕಹಿಕಷ್ಟಗಳು ಬೂದಿ
ಕಾಡಿನಲಿ ಕಣಿವೆಯಲಿ ಏನು ಹರ್ಷ
ವಸಂತವು ಕಾಲಿಡಲು ಹೂವುಗಳು ಹಾಡುಗಳು
ಕಾಯಲಿಲ್ಲವೇ ಇದಕೆ ಒಂದು ವರ್ಷ ?
ಇಳೆಗೆ ಬಂದಿಳಿದ ಓ ಚೈತ್ರವೇ  ಬಾ ಒಳಗೆ
ಬೇವಿನಲಿ ಒಂದಿಷ್ಟು ಬೆಲ್ಲ ಕಲಸು
ರೇಶಿಮೆಯ ರೆಕ್ಕೆಗಳ ಬಿಡಿಸಿದಾ ಪತಂಗವೇ
ಎಲ್ಲಿಹುದು ನಾವೆಲ್ಲಾ ಕಂಡ ಕನಸು
ಎಲೆಯ ಮರೆಯಲ್ಲಿ ಕುಹೂ ಕುಹೂ ನೀಲ ಬೆಟ್ಟಗಳು
ಹೂಬಿಸಿಲ ಕಾಸುತಿವೆ ಕಣಿವೆ ಹಾಡು
ಹುಲ್ಲಿನಲಿ ಬೆಟ್ಟದಲಿ ಹೊಸತನವ ನೀಡಿರುವ
ಚಿತ್ರವೇ ನಮಗಿಷ್ಟು ಸುಖವ ನೀಡು

‍ಲೇಖಕರು avadhi

March 27, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕೋಟೆ ಬಾಗಿಲಿಗೆ ಬಂದವರು..

ಕೋಟೆ ಬಾಗಿಲಿಗೆ ಬಂದವರು..

ಮಂಜುನಾಥ್ ಚಾಂದ್ ಧರೆಯ ಒಡಲಿನಿಂದತೊರೆಗಳಾಗಿ ಬಂದವರಗುಂಡಿಗೆಗೆ ತುಪಾಕಿಹಿಡಿಯುವ ಮುನ್ನದೊರೆ ತಾನೆಂದು ಬೀಗಿಸೆಟೆಯುವ ಮುನ್ನನಿನ್ನ ದುಃಖ ನನ್ನ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

ನೀನೆಂದರೆ ಭಯ ಅಲ್ಲ…

ನೀನೆಂದರೆ ಭಯ ಅಲ್ಲ…

ರೇಷ್ಮಾ ಗುಳೇದಗುಡ್ಡಾಕರ್  ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದ ಪ್ರಲಾಪವ ಗಾಢ ಕತ್ತಲೆ ಕಾಣಿಸುವದು ನನ್ನೂಳಗಿನ ನನ್ನು ಅಲ್ಲಿನ...

2 ಪ್ರತಿಕ್ರಿಯೆಗಳು

 1. srinivasagowda

  ಎರಡು ಲಕ್ಷ ಮೀರಿದ ನಿಮ್ಮ ಓದುಗರ ಹಿಟ್ ಗಳನ್ನು ನೋಡಿದರೆ ನಿಮಗಿರುವ
  ಕಮಿಟ್ಮೆಂಟ್ ಏನಂತ ಅರ್ಥ ಆಗುತ್ತೆ,
  ಕನ್ನಡದಲ್ಲಿ ನಿಮ್ಮ ಪ್ರಯತ್ನ,ಅವಿಸ್ಮರಣೀಯ ಅನ್ನಬೇಕು…
  ಕನ್ನಡದ ವಾರ ಪತ್ರಿಕೆಗಳಿಗೂ ಅವಧಿಗಿದ್ದಸ್ಟು ಓದುಗರು ಇರಲಿಕ್ಕೆ ಇಲ್ಲ ಅನಿಸುತ್ತೆ.
  ಜೈ ಹೋ ಅವಧಿ,
  ಎಂ.ಬಿ.ಶ್ರೀನಿವಾಸಗೌಡ
  ನವದೆಹಲಿ

  ಪ್ರತಿಕ್ರಿಯೆ
 2. ಚಂದಿನ

  ಅದ್ಭುತ ಚಿತ್ರ,
  ಅತ್ಯದ್ಭುತ ಕವಿತೆ,
  ಈ ಉಗಾದಿಗೆ ಮುನ್ನುಡಿ.
  -ಚಂದಿನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: