ಬ್ರೇಕಿಂಗ್ ನ್ಯೂಸ್: ಕುಸುಮಾಕರ ದೇವರಗಣ್ಣೂರು ಇನ್ನಿಲ್ಲ..

ಕುಸುಮಾಕರ ದೇವರಗಣ್ಣೂರು (ಶ್ರೀ ವಸಂತ ಅಂತ ದಿವಾಣಜಿ) ಜನನ : 15-2-1930 ನಿಧನ: 17-4-2012 ಪ್ರಖ್ಯಾತ ಕಾದಂಬರಿಕಾರ, ಲೇಖಕ ಕುಸುಮಾಕರ ದೇವರಗೆಣ್ಣೂರು ಅವರು ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿ ನಿಧನರಾದರು. ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಸರಿಸುಮಾರು ಎರಡು ವರ್ಷಗಳಿಂದ ಹಾಸಿಗೆ ಹಿಡಿದ್ದರು. ಅವರು ಇಬ್ಬರು ಹೆಣ್ಣುಮಕ್ಕಳು ಹಾಗೂ ಪುತ್ರ ಪ್ರಸಾದ್ ದಿವಾಣಜಿ ಅವರನ್ನು ಅಗಲಿದ್ದಾರೆ. ಕುಸುಮಾಕರ ದೇವರಗೆಣ್ಣೂರು ಅವರು ಬಿಜಾಪುರ ಜಿಲ್ಲೆಯ ದೇವರಗೆಣ್ಣೂರಿನವರು, ಬಾಲ್ಯ ಕಾಲದ ಕಡುಬಡತನದ ಆದರ್ಶಮಯ ಮನೆಯ ವಾತಾವರಣದ ನಡುವೆ ಬೆಳೆದ ಕುಸುಮಾಕರರ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಾಯಿತು. ಅವರ ಬದುಕಿನಲ್ಲಿ ಸೊಲ್ಲಾಪುರ ಮತ್ತು ಬೇಂದ್ರೆಯವರ ಪಾತ್ರ ಬಹಳ ಮುಖ್ಯವಾದದ್ದು. ಸುಮಾರು ಹನ್ನೆರಡು ವರ್ಷಗಳ ಕಾಲ ಬೇಂದ್ರೆಯವರ ಒಡನಾಟದಲ್ಲಿ ಬೆಳೆದ ಕುಸುಮಾಕರರಿಗೆ ದಿ. ಬೇಂದ್ರೆ ಅವರ ಚಿಂತನೆ ಹಾಗೂ ಸೃಜನಶೀಲತೆ ಪ್ರಭಾವ ಬೀರಿದೆ. ವೃತ್ತಿಯಲ್ಲಿ ಸೊಲ್ಲಾಪುರದ ಕನ್ನಡ ಅಧ್ಯಾಪಕರಾಗಿದ್ದ ಅವರು ತಮ್ಮ ಆರಂಭಿಕ ದಿನಗಳಲ್ಲಿ ಶಾಲೆಯ ಕನ್ನಡ ಶಿಕ್ಷಕರಾಗುವ ಉದ್ದೇಶ ಹೊಂದಿದ್ದರು. ಬೇಂದ್ರೆಯವರ ಸಹವಾಸದಿಂದ ಅವರ ಓದು, ಚಿಂತನೆಗಳ ಪ್ರತಿಭೆ ವಿಸ್ತಾರಗೊಂಡಿತು. ಅಪ್ಪಟ ಓದಾಳು ಆಗಿದ್ದ ದೇವರಗೆಣ್ಣೂರು ಮನಃಶಾಸ್ತ್ರ, ಖಗೋಳಶಾಸ್ತ್ರ, ಹಾಗೂ ಸಾಹಿತ್ಯ ಕುರಿತ ಸಾವಿರಾರು ಪುಸ್ತಕಗಳನ್ನು ಇಂಗ್ಲಿಷ್ ಉಳಿದ ಭಾಷೆಗಳಲ್ಲೂ ಓದಿದ್ದರು. ಜೊತೆಗೆ ಅಪರೂಪದ ನೆನಪಿನ ಶಕ್ತಿಯುಳ್ಳವರೂ ಆಗಿದ್ದರು. ಅವರು ಅನೇಕ ಪುಸ್ತಕಗಳ ವಿಷಯಗಳನ್ನು ತಮ್ಮ ನೆನಪಿನಿಂದಲೇ ಹೇಳಬಲ್ಲಷ್ಟು ಅಸಾಧಾರಣ ಪ್ರತಿಭಾವಂತರು. ಕಾದಂಬರಿಗಳ ಪ್ರಾಕಾರದ ಬಗ್ಗೆ ಅಪರೂಪದ ಶ್ರದ್ಧೆಯಿಂದ, ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಅವನ ಅಂತರಂಗದ ಜಗತ್ತಿನ ಒಳಪದರಗಳನ್ನು ಅತ್ಯಂತ ಸಂಯಮ ಮತ್ತು ನಿರುದ್ವಿಗ್ನತೆಯಿಂದ ಶೋಧಿಸಿರುವ ಅವರ ಬರಹಗಳು ಅನನ್ಯ ಹಾಗೂ ವಿಶಿಷ್ಟವಾದವು. ಕಾದಂಬರಿ ಕ್ಷೇತ್ರಕ್ಕೆ ಅವರ ಕೊಡುಗೆಗಳು: ಮುಗಿಯದ ಕಥೆ(1965), ನಾಲ್ಕನೆಯ ಆಯಾಮ (1966), ನಿರಿಂದ್ರಿಯ (1993), ಫರಿಘ (1995), ಬಯಲು-ಬಸಿರು (2005), ಮೊದಲಾದ ಕಾದಂಬರಿಗಳ ಜೊತೆಗೆ ಅವರ ಕವನ ಸಂಕಲನ ಸ್ವಪ್ನನೌಕೆ (1954) ಮೊದಲ ಕೃತಿ. ಕಾದಂಬರಿಯಷ್ಟೇ ಅಲ್ಲದೆ, ಪುರಂದರ ದಾಸರ ಕುರಿತ ಅವರ ಮಹಾಪ್ರಬಂಧ `ಪ್ರಸಾದ ಯೋಗ'(1972) ಪ್ರಕಟಿತ ಸಂಶೋಧನೆ. ಬೇಂದ್ರೆ ಸಾಹಿತ್ಯ ಸಮೀಕ್ಷೆ `ಗುರು ಪೂಣರ್ಿಮೆ’, ಹಾಗೂ `ಗಾಳಿ ಹೆಜ್ಜೆ ಹಿಡಿದ ಸುಗಂಧ’, `ನಕ್ಷೆಗೆ ಎಟುಕದ ಕಡಲು’ ಅವರ ಉಳಿದ ಬರಹಗಳ ಪ್ರಕಟಣೆಯ ಹಂತದಲ್ಲಿರುವ ಸಂಕಲನ. ಮರಾಠಿಯಿಂದ ಕನ್ನಡಕ್ಕೆ ಅನುವಾದವಾದ ಕೃತಿ `ದುರ್ದಮ್ಯ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ದೇವರಗೆಣ್ಣೂರು ಸಾಹಿತ್ಯ ಕುರಿತು ಅವಗಾಹ ಎಂಬ ಪುಸ್ತಕ ಡಾ. ಎಚ್.ಎಸ್. ರಾಘವೇಂದ್ರರಾವ್ ಸಂಪಾದಿಸಿದ್ದಾರೆ. ಡಾ. ಜಿ.ಎನ್. ಉಪಾಧ್ಯ ಅವರು ದೇವರಗೆಣ್ಣೂರು ಸಾಹಿತ್ಯ ಸಮೀಕ್ಷೆ `ಬೊಗಸಿ ತುಂಬಾ ಭಕ್ತಿ ಹಿಡಿದು’ ರಚಿಸಿದ್ದಾರೆ. ಪ್ರಶಸ್ತಿಗಳು: 1954ರಲ್ಲಿ ಸ್ವಪ್ನನೌಕೆ ಕವನಸಂಕಲನಕ್ಕೆ ಮೈಸೂರು ರಾಜ್ಯ ಸಕರ್ಾರ ಪ್ರಶಸ್ತಿ ನಾಲ್ಕನೆ ಆಯಾಮ ಹಾಗೂ ನಿರಿಂದ್ರಿಯ ಕೃತಿಗಳಿಗೆ ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕನರ್ಾಟಕ ಸಾಹಿತ್ಯ ಆಕಾಡಮೆಯಿಂದ 2002ರ ಗೌರವ ಪ್ರಶಸ್ತಿ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ಮುಂಬೈ 2005 ಕನರ್ಾಟಕ ಶ್ರೀ ಪ್ರಶಸ್ತಿ, ಕಸಾಪ ವತಿಯಿಂದ ಉಡುಪಿ ಸಾಹಿತ್ಯ ಸಮ್ಮೇಳನದಲಿ  ]]>

‍ಲೇಖಕರು G

April 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

2 ಪ್ರತಿಕ್ರಿಯೆಗಳು

  1. lalitha siddabasavaiah

    ಕುಸುಮಾಕರರು ಹೋಗಿಬಿಟ್ಟರೆ ? ಅಪರೂಪದ ಪ್ರತಿಭೆ ಅವರದ್ದು. ಒಮ್ಮೊಮ್ಮೆ ಜಿಗುಟು ಅನ್ನಿಸುತ್ತಿತ್ತು. ಆದರೆ ಪ್ರಖರ ಬುದ್ಧಿಮತ್ತೆಯ ಅವರ ಬರಹಗಳ ಓದುವಿಕೆ ಬೆರಗನ್ನುಂಟು ಮಾಡುತ್ತಿತ್ತು. ವಾಹ್ ಎನ್ನುವ ಮಾತು ತಾನಾಗೆ ಹೊರಬೀಳುತ್ತಿತ್ತು. ೨೦೦೨ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯವರು ನನ್ನದೊಂದು ಪುಸ್ತಕಕ್ಕೆ ಬಹುಮಾನ ಕೊಟ್ಟರು.ಆ ಸಾಲಿನಲ್ಲಿ ಅಕಾಡೆಮಿಯ ಗೌರವ ಪ್ರಶಸ್ತಿ ಭಾಜನರಲ್ಲಿ ಶ್ರೀಯುತ ಕುಸುಮಾಕರರೂ ಇದ್ದರು. ಕುಸುಮಾಕರ ಅವರನ್ನಂತು ಫೋಟೋದಲ್ಲು ಅದುವರೆಗೆ ನೋಡಿರಲಿಲ್ಲ. ಬಾಗಿಲ ಕಡೆ ತಿರುಗೀ ತಿರುಗೀ ಇವರಿರಬಹುದಾ ಇವರಿರಬಹುದಾ ಅಂದುಕೊಳ್ಳುತ್ತಿದ್ದೆ. ಆದರೆ ಅಂದು ಅವರು ಬರಲಿಲ್ಲ. ಅನಾರೋಗ್ಯದ ದೆಸೆಯಿಂದ ಗೈರಾಗಿ ಅವರ ಪುತ್ರ ಅವರ ಪರವಾಗಿ ಗೌರವ ಸ್ವೀಕರಿಸಿದರು. ಅಕಾಡೆಮಿ ಅವರನ್ನು ಬಹಳ ತಡವಾಗಿ ಗುರುತಿಸಿತು ಎಂದು ನನಗೆ ಆಗಲೂ ಈಗಲೂ ಅನ್ನಿಸಿದೆ. ಅವರ ಬರಹಗಳು ಅವರ ನೆನಪನ್ನು ಕನ್ನಡದಲ್ಲಿ ಶಾಶ್ವತವಾಗಿರಿಸುತ್ತವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: