ಬ್ರೆಕಿಂಗ್ ನ್ಯೂಸ್: ಪಿ ಸಾಯಿನಾಥ್ ಪ್ರಶಸ್ತಿ ಪ್ರಕಟ

ಸಾಮಾಜಿಕ ಸಮಸ್ಯೆಯನ್ನು ಮಾಧ್ಯಮದ ಮೂಲಕ ಪ್ರಚಾರಕ್ಕೆ ತಂದ,

ಆ ಮೂಲಕ  ಮಹತ್ವದ ಬದಲಾವಣೆಗೆ ಕಾರಣರಾದವರಿಗೆ ಪಿ ಸಾಯಿನಾಥ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಮಲ ಹೊರುವ ಪದ್ದತಿ ಇನ್ನೂ ಜಾರಿಯಲ್ಲಿರುವುದನ್ನು ಬೆಳಕಿಗೆ ತಂದು ಆ ಮೂಲಕ ಸರ್ಕಾರ ಹಾಗೂ ಸಮಾಜದ ಮುಂದೆ ಮಂಡಿಸಿದ ಟಿ ಕೆ ದಯಾನಂದ್,

ರೈತರ ಆತ್ಮಹತ್ಯೆ ಹಾಗೂ ಅವರ ಸಂಕಷ್ಟವನ್ನು ಮಾಧ್ಯಮದ ಮೂಲಕ ಬೆಳಕಿ ಗೆ ತಂದ ವಿ ಗಾಯತ್ರಿ ಅವರಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ.

ಪ್ರಶಸ್ತಿ ವಿಜೇತರನ್ನು ಖ್ಯಾತ ಅಭಿವೃದ್ದಿ  ಪತ್ರಕರ್ತ ನಾಗೇಶ್ ಹೆಗಡೆ, ವಾರ್ತಾ ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್, ಪತ್ರಕರ್ತ ಜಿ ಎನ್ ಮೋಹನ್ ಹಾಗೂ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬಿ ಕೆ ರವಿ ಅವರನ್ನೊಳಗೊಂಡ ಸಮಿತಿ ಆಯ್ಕೆ ಮಾಡಿತು. ಜುಲೈ ೧ ರಂದು ಬೆಂಗಳೂರಿನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ. ಪ್ರಶಸ್ತಿ ತಲಾ ೨೫ ಸಾವಿರ ರೂ ನಗದು ಹಾಗೂ ಡಿಜಿಟಲ್ ಕ್ಯಾಮೆರಾವನ್ನು ಒಳಗೊಂಡಿದೆ. ಇಬ್ಬರಿಗೂ ‘ಅವಧಿ’ಯ  ಶುಭಾಶಯಗಳು]]>

‍ಲೇಖಕರು G

June 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ...

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ  ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...

2 ಪ್ರತಿಕ್ರಿಯೆಗಳು

 1. b.m. basheer

  ಅರ್ಹರಿಗೆ ಪ್ರಶಸ್ತಿ ಸಂದಾಗ ಆ ಪ್ರಶಸ್ತಿಯ ಹಿರಿಮೆ ಹೆಚ್ಚಾಗುತ್ತದೆ. ನಮಗೂ ಆ ಪ್ರಶಸ್ತಿ ಸಿಕ್ಕಿದರೆ ಎಂಬ ಆಸೆ(ದುರಾಸೆ) ಹುಟ್ಟುತ್ತದೆ. ಒಟ್ಟು ವ್ಯವಸ್ತೆಯ ಮೇಲೆ ಸಣ್ಣದೊಂದು ವಿಶ್ವಾಸ, ಧೈರ್ಯ ಮೂಡುತ್ತದೆ. ಕನ್ನಡದ ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಅವರಿಗೆ ಕ.ಸಾ.ಪ ನೀಡುವ “ನಾಗಡಿಕೆರೆ-ಕಿಟ್ಟಪ್ಪ ಗೌಡ ರುಕ್ಮಿಣಿ ” ತೀರ್ಥಹಳ್ಳಿ ದತ್ತಿ ಪ್ರಶಸ್ತಿ ಸಿಕ್ಕಿದೆ. ನಿರ್ಭಯ, ಪ್ರಾಮಾಣಿಕ, ವಸ್ತುನಿಷ್ಠ ಪತ್ರಿಕೋದ್ಯಮ ಈ ಪ್ರಶಸ್ತಿಗೆ ಅರ್ಹತೆ.
  ಹಾಗೆಯೇ ಗೆಳೆಯ ಟಿ.ಕೆ. ದಯಾನಂದ್ ಅವರಿಗೆ ಗ್ರಾಮೀಣ ಪತ್ರಿಕೋದ್ಯಮಕ್ಕೆ ನೀಡುವ ಪಿ..ಸಾಯಿನಾಥ್ ಪ್ರಶಸ್ತಿಗೆ ದೊರಕಿದೆ. ಅತ್ಯಂತ ಅರ್ಹ ವ್ಯಕ್ತಿಗೆ ಈ ಪ್ರಶಸ್ತಿ ದೊರಕಿದ್ದು ಪತ್ರಿಕೋದ್ಯಮದ ಭಾಗ್ಯ. ಪ್ರಶಸ್ತಿ ಪಡೆದ ಈ ಇಬ್ಬರು ನನಗೆ ತುಂಬಾ ಹತ್ತಿರದವರು ಎನ್ನೋದು ನನ್ನ ಹೆಮ್ಮೆ.

  ಪ್ರತಿಕ್ರಿಯೆ
 2. D.RAVI VARMA

  ಸರ್,ಇಲ್ಲಿ ಪ್ರಶಸ್ತಿಗಳು ಕೂಡ ಮಾರಕಿಟ್ಟಿರುವ ಈ ಸಂಕ್ಕೆರ್ರ್ಣ ವ್ಯಸ್ತೆಯಲ್ಲಿ ಸೈನಾಥ್ ಅವರ ಸಂವೇದನಾಶೀಲ ಹಾಗು ವಾಸ್ತವ ಚಿಂತನೆ ,ಹಾಗು ಮುಂಬರುವ ಬದುಕಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಇರುವ ಕಾಳಜಿ ಹಾಗು ಎಚ್ಚರಿಕೆ ನಿಜಕ್ಕೂ ಇಂದಿನ social relevence ಅವರ ಹೆಸರಿನ ಪ್ರಶಸ್ತಿಗಳು ನಿಜಕ್ಕೂ ಅರ್ಹರಿಗೆ ಮತ್ತು ಈ ನಾಡಿನ ಕೊನೆಸ್ತರದಲ್ಲಿರುವವರ ಬದುಕಿನ ಬಗ್ಗೆ ಬರೆದಿರುವ ,ಸ್ಪಂದಿಸಿರುವ ಬರಹಕ್ಕೆ ಸಂದಿದೆ. hats off ಟು sainath ಫಾರ್ ಹಿಸ್ ನೊವೆಲ್ ಥಿಂಕಿಂಗ್ ಅಂಡ್ ಅಲ್ಸೋ hearty congratualations ಟು ಗಾಯತ್ರಿ ಮತ್ತು ತ.ಕ ದಯಾನಂದ್, ಮೈ ಫ್ರೆಂಡ್ ಸನತ್ಕುಮಾರ್ ಬೆಳಗಲಿ ಈ ಪ್ರಶ್ಶಸ್ತಿಗಳು ಇವರಿಗೆಲ್ಲ ಈ ನಿಟ್ಟಿನಲ್ಲಿಇನ್ನು ಹೆಚ್ಚಿಗೆ ಆಲೋಚಿಸಲು, ಕೆಲಸಮಾಡಲು, ಹೊಸ ಆತ್ಮಸ್ತೈರ್ಯ, ವಿಸ್ವಾಸ ತರಲೆಂದು ಹೃದಯಪೂರ್ವಕವಾಗಿ ಆಶಿಸುವೆ
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: