ಬ್ರೆಕ್ಟ್, ಅನಂತಮೂರ್ತಿ, ಅಕ್ಷತಾ..

invitation copy copy (1)

‘ಅವಧಿ’ ಯ ಅಂಕಣಕಾರ್ತಿ ಅಕ್ಷತಾ ಮಲೆನಾಡಿನ ಹುಡುಗಿ. ಹುಂಚದಕಟ್ಟೆ ಎಂಬ ಪುಟ್ಟ ಊರಿನಿಂದ ಓದಲೆಂದು ಶಿವಮೊಗ್ಗ ತಲುಪಿಕೊಂಡ ಈಕೆ ಈಗ ಕನ್ನಡದ ಪ್ರಕಾಶನ ಕ್ಷೇತ್ರ ಗಮನಿಸಬೇಕಾದ ಮಹತ್ವದ ಕೆಲಸಕ್ಕೆ ಕೈಹಾಕಿದ್ದಾಳೆ. ಕನ್ನಡದಲ್ಲಿ ಎಣಿಸಿಬಿಡಬಹುದಾದಷ್ಟು ಮಹಿಳಾ ಪ್ರಕಾಶಕರು ಇರುವಾಗ ಅಕ್ಷತಾ ಬರೆಯುವುದರ ಜೊತೆಗೆ ಪುಸ್ತಕ ಪ್ರಕಟಿಸುವ ಕೆಲಸಕ್ಕೂ ಕೈ ಹಾಕಿದ್ದಾಳೆ. ಎಂ ಎಸ್ ಆಶಾದೇವಿ, ಅವಿನಾಶ್ ಕೈಗಳು ಅಕ್ಷತಾಳ ಪ್ರತೀ ಕೆಲಸದ ಹಿಂದಿದೆ. ಮೊದಲ ಪುಸ್ತಕವೇ ಜಿ ಎಚ್ ನಾಯಕರ ‘ಮತ್ತೆ ಮತ್ತೆ ಪಂಪ’. ಈ ಪುಸ್ತಕ ಗಳಿಸಿದ ಮನ್ನಣೆ ಒಂದೆಡೆಯಾದರೆ ಅದು ತಲುಪಬೇಕಾದವರಿಗೆ ತಲುಪುವ ವ್ಯವಸ್ಥೆಯನ್ನು ಶಿವಮೊಗ್ಗದಲ್ಲಿದ್ದೇ ಮಾಡಿದ ಅಕ್ಷತಾ ಕೆಲಸ ಬೆರಗು ಮೂಡಿಸುತ್ತದೆ.

img_18851ಈಗ ಮತ್ತೊಂದು ಮಹತ್ವದ ಕೃತಿ ಅಕ್ಷತಾರ ಅಹರ್ನಿಶಿ ಪ್ರಕಾಶನದಿಂದ ಹೊರಬೀಳುತ್ತಿದೆ. ಬ್ರೆಕ್ಟ್ ನನ್ನು ಇನ್ನಿಲ್ಲದಂತೆ ಧ್ಯಾನಿಸಿದ, ಅರ್ಥ ಮಾಡಿಕೊಂಡ, ಆತನ ಮಾತುಗಳನ್ನು ಇಂದಿನ ಎಲ್ಲರ ಕಿವಿಗೂ ಹಾಕಬೇಕೆಂಬ ಹಂಬಲದಿಂದ ಯು ಆರ್ ಅನಂತಮೂರ್ತಿಯವರು ಬ್ರೆಕ್ಟ್ ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಕನ್ನಡದಲ್ಲಿ ಶಾ ಬಾಲೂರಾಯರು ತಂದ ಬ್ರೆಕ್ಟ್ ಕವಿತೆಗಳ ಅನುವಾದ ಮಾತ್ರವೇ ಇತ್ತು. ಈಗ ಅನಂತಮೂರ್ತಿಯವರ ಅನುವಾದಿಸಿದ್ದಾರೆ. ಬ್ರೆಕ್ಟ್ ನ ನೋಟ, ಚಿಂತನೆ ಜೊತೆ ಒಡನಾಡಿದವರಿಗೆ ಶಾ ಬಾಲೂರಾಯರ ಅನುವಾದದಲ್ಲಿ ಏನೋ ಕೊರೆ ಇದೆ ಅನಿಸುತ್ತಿತ್ತು. ಅನಂತಮೂರ್ತಿ ಅದನ್ನು ತುಂಬಿದ್ದಾರೆ. ಅದಕ್ಕೂ ಮಿಗಿಲಾಗಿ ಕನ್ನಡಕ್ಕೆ ಇನ್ನಷ್ಟು ಬ್ರೆಕ್ಟ್ ನ ಹೊಸ ಪದ್ಯಗಳನ್ನು ತಂದಿದ್ದಾರೆ.

ಬ್ರೆಕ್ಟ್ ಕವಿತೆಗಳಷ್ಟೇ ಮಹತ್ವದ ಮಾತುಗಳನ್ನು ಪುಸ್ತಕಕ್ಕಾಗಿ ಅನಂತಮೂರ್ತಿಯವರು ಬರೆದಿದ್ದಾರೆ. ಬಿನಾಯಕ ಸೇನ್, ಸ್ಯೂಕಿ, ಬರ್ಮಾ, ಚೈನಾ, ಕೇರಳ, ಪಶ್ಚಿಮ ಬಂಗಾಳ, ಫ್ಯಾಸಿಸ್ಟ್ ಅಂಕಣದ ಕನ್ನಡ ಪತ್ರಿಕೆ ಎಲ್ಲವೂ ಬ್ರೆಕ್ಟ್ ನ ಕವಿತೆಗಳ ಹಿನ್ನೆಲೆಯಲ್ಲಿ ಚರ್ಚೆಯ ಅಂಗಳಕ್ಕೆ ಬಂದಿದೆ. ಓದಲೇಬೇಕಾದ ಸಾಕಷ್ಟು ಮಂಥನ ನಡೆಸಬಹುದಾದ ಬರಹ ಇದು.

ಅಕ್ಷತಾ ಅನಂತಮೂರ್ತಿಯವರ ಕವಿತೆಗಳನ್ನು ಚರ್ಚಿಸುತ್ತ ಅದು ಇನ್ನಷ್ಟು ಮೊನಚುಗೊಳ್ಳಲು ಕಾರಣರಾಗಿದ್ದಾರೆ. ಅಷ್ಟೇ ಅಲ್ಲ ಬ್ರೆಕ್ಟ್ ನ ಇನ್ನಷ್ಟು, ಮತ್ತಷ್ಟು ಕವಿತೆಗಳನ್ನು ಕನ್ನಡಕ್ಕೆ ತರಲು ಉತ್ಸಾಹ ತುಂಬಿದ್ದಾರೆ. ಅಚ್ಚುಕಟ್ಟಾಗಿ ಮುದ್ರಿಸಿದ್ದಾರೆ. ಅಕ್ಷತಾ ಮತ್ತೆ ಮತ್ತೆ ಕವಿತೆಯ ಜೊತೆ ಇರಲಿ.

‍ಲೇಖಕರು avadhi

June 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಆತ್ಮೀಯ ಸ್ನೇಹಿತರೇ, ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ....

ಪುಟ್ಟಾರಿ ಆನೆಯೊಂದಿಗೆ…

ಪುಟ್ಟಾರಿ ಆನೆಯೊಂದಿಗೆ…

ತಮ್ಮಣ್ಣಬೀಗಾರ ಪುಟ್ಟಾರಿ ಆನೆ ಪುಟ್ ಪುಟ್’ ಮಕ್ಕಳಿಗಾಗಿ ಕಾದಂಬರಿ. ಲೇಖಕರು: ಡಾ.ಆನಂದ ಪಾಟೀಲ ಮೊದಲ ಮುದ್ರಣ: 2020 ಪುಟಗಳು: 388 ಬೆಲೆ:...

3 ಪ್ರತಿಕ್ರಿಯೆಗಳು

 1. kaviswara shikaripura

  nimma prayathna-galige shubhavaagali akshatha.. nimma uttama prayathna-galige bengaavalaagi sihimogeya manassu-galu sadaa ive… kaadu-thoreya jaadina jothegaathi bahu-munde saagali

  ಪ್ರತಿಕ್ರಿಯೆ
 2. h n eshakumar

  nimmdu uttama prayatna akshataravare,nimma kelasagalu saagali anavarata
  nanagondu pustaka etti idi dayavittu…….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: