‘ಮದ್ಯಸಾರ’ ಬರೀತಾ ಇರೋ ಅಪಾರ ಈಗ ‘ಗುಂಡ್ ಮಾಸ್ಟರ್’ ಅಂತಾನೇ ಫೇಮಸ್. ಅವರು ಗುಂಡು ಹಾಕ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಗುಂಡು ಹಾಕ್ದೋರು ಕಾಣೋದಕ್ಕಿಂತ ಜಾಸ್ತಿ ಲೋಕ ಕಂಡಿದಾರೆ. ರೀಸೆಂಟಾಗಿ ಒಬ್ಬ ಕಲಾವಿದರು- ‘ಅಪಾರ ಬರೀತಾ ಇದಾರಲ್ಲ ನಾಲ್ಕು ಕಾಲಿನ.. ಸಾರಿ, ನಾಲ್ಕು ಸಾಲಿನ ಕವನ ಅದನ್ನ ಕನ್ನಡ ಸಾಹಿತ್ಯದಲ್ಲಿ ಏನಂತ ಕರೀತಾರೆ?’ ಅಂತ ಕೇಳಿದ್ರು. ಜೊತೆಯಲ್ಲಿದ್ದವರು ತಕ್ಷಣ ಹೇಳಿದರು- ಅಪಾರಂ ಅಂದ್ರೆ ಅಪಾ’ರಂ’ ಅಂತ.
ಡುಂಡಿರಾಜ್ ಒಂದ್ಸಲ ಹೇಳಿದ್ರು-
ಅಪ್ಪಾ ಕುಮಾರವ್ಯಾಸ
ನಾನು ನಿನ್ನ ದಾಸ
ನೀನು ಬರೆದದ್ದು ಭಾಮಿನಿ
ನನ್ನದೋ ಬರೀ ‘ಮಿನಿ’
ಅಂತ. ಹಾಗೆ ನೋಡಿದ್ರೆ –
ಅಪಾರ ಕವಿಗಳು ಬರೆದಿದ್ದಾರೆ
ಹನಿಗವನ
ಆದರೆ ಎಲ್ಲರ್ಗೂ ಗೊತ್ತು
ಅಪಾರ ಬರೆದಿದ್ದು ಮಾತ್ರ
‘ಹನಿ’ಗವನ
ಇಂತಹ ‘ಹನಿ’ಗವನಗಳನ್ನು ವಸುಧೇಂದ್ರ ತಮ್ಮ ಛಂದ ಪ್ರಕಾಶನದಿಂದ ಚಂದಾಗಿ ಬಿಡುಗಡೆ ಮಾಡುತ್ತಿದ್ದಾರೆ. ಪಾಪ!. ವಸುಧೇಂದ್ರ ರಿಗೂ ‘ಹನಿ’ಗಳಿಗೂ ಎತ್ತನಿಂದೆತ್ತ ಸಂಬಂಧವಯ್ಯ?..
ತೀರಾ ದಿಫೆರೆಂಟ್ ಆಗಿ ಈ ಸಂಕಲನ ಬರುತ್ತಿದೆ. ವಿನ್ಯಾಸ ತೀರಾ ತೀರಾ ಹೊಸದು.
ಪ್ರಕಾಶಕರು ಹೇಳೋ ಪ್ರಕಾರ
ವೈನ್ ಅಪಾರ- ಲೈನ್ ಪ ಸ ಕುಮಾರ
ಕನ್ನಡದಲ್ಲಿ ಹೇಳ್ಬೇಕೂ ಅಂದ್ರೆ
ಸೆರೆ-ಅಪಾರ ಗೆರೆ- ಪ ಸ ಕುಮಾರ
ಏಪ್ರಿಲ್ ನಲ್ಲಿ ಬಿಡುಗಡೆ. ತುಂಬಾ ಖರ್ಚು ಬೀಳುತ್ತಲ್ವಾ ವಸುಧೇಂದ್ರ ‘ಮದ್ಯಸಾರ’ ಬಿಡುಗಡೆಗೆ ಅಂದ್ರೆ ಡೋಂಟ್ ವರಿ ಕಾರ್ಯಕ್ರಮದಲ್ಲಿ ಒಂದು ಪೆಗ್ ಕಾಫೀ ಉಚಿತ ಅಂತಾರೆ. ಇದೇ ಪ್ರಶ್ನೆ ಅಪಾರನಿಗೆ ಹಾಕಿದ್ರೆ ಪುಸ್ತಕದಲ್ಲಿ ೯೦ ಹನಿಗಳಿವೆ. ಹಾಗಾಗಿ ನೈಂಟಿ ಗ್ಯಾರಂಟಿ ಅಂತಾರೆ.
ಅಪಾರನ ಅಪಾರ ನಾಚಿಕೆ ಗೊತ್ತಿರೋ ವಸುಧೇಂದ್ರ ಈಗಾಗಲೇ ಅವರ ಹಿಂದೆ ಬಾಡಿ ಗಾರ್ಡ್ ಬಿಟ್ಟಿದಾರೆ. ಇಲ್ಲದೆ ಹೋದ್ರೆ ಅಪಾರ ಪುಸ್ತಕ ಬಿಡುಗಡೆಗೂ ಬರದೆ ಕಾಣೆ ಆಗ್ತಾರೆ ಅಂತ ಎಲ್ಲರಿಗೂ ಗೊತ್ತು.
0 ಪ್ರತಿಕ್ರಿಯೆಗಳು