ಬ್ಲಾಗ್ ಮಂಡಲಕ್ಕೆ ಒಂದು ‘ಪಂಚ್’

prakash-shetty-caricature.jpgಇವರು ಪಂಚ್ ಎಕ್ಸ್ಪರ್ಟ್. ಇವರ ಪಂಚ್ ಅಂತಿಂತಹ ಹೊಡೆತಗಳನ್ನಲ್ಲ, ಸರಿಯಾಗಿ ತಡಕಿ ನೋಡಿಕೊಳ್ಳುವಂತಹ ಹೊಡೆತಗಳನ್ನೇ ಕೊಟ್ಟಿದೆ. ಅದೇ ‘ಪ್ರಕಾಶ್ ಶೆಟ್ಟಿ ಪಂಚ್’. ಇವರು ರೇಖೆಗಳ ಮೂಲಕ ನೀಡುವ ಪಂಚ್ ಹಲವು ದಶಕಗಳಿಂದ ಒಂದು ಬಗೆಯ ಎಚ್ಚರವನ್ನು ಮೂಡಿಸುತ್ತಾ ಬಂದಿದೆ.

ಪ್ರಕಾಶ್ ಶೆಟ್ಟಿ ಒಂದಾನೊಂದು ಕಾಲದಲ್ಲಿ ಬರುತ್ತಿದ್ದ ‘ಸಂತೋಷ’ ಎಂಬ ಕಡಲ ತಡಿಯ ಮಾಸಿಕದಿಂದ ಪತ್ರಿಕೋದ್ಯಮ ಕಂಡವರು. ನಂತರ ಬೆಂಗಳೂರು ಸಹವಾಸ. ಟೈಮ್ಸ್ ಆಫ್ ಡೆಕ್ಕನ್ ಎಂಬ ಅಲ್ಪ ಆಯಸ್ಸಿನ ಇಂಗ್ಲಿಶ್ ದೈನಿಕದಲ್ಲಿದ್ದು ಮತ್ತೆ ಕಡಲ ತಡಿಗೆ ‘ಮುಂಗಾರು’ ಕಟ್ಟಲು ಹೋದರು. ಆ ನಂತರ ನೆರೆಯ ಕೇರಳಕ್ಕೆ-‘ದಿ ವೀಕ್’ ನಲ್ಲಿ ಇವರು ಬರೆದ ಚಿತ್ರಗಳು ದೇಶದ ಗಮನ ಸೆಳೆದವು.

ಹೋಟೆಲ್ ನಲ್ಲಿ ಕುಳಿತು ಊಟ ಮಾಡುವವರ ಚಿತ್ರ ಬರೆದು ಅವರಲ್ಲಿ ಒಂದು ಬೆರಗು ಹುಟ್ಟಿಸುವಲ್ಲಿ ಇವರು ಎಕ್ಸ್ಪರ್ಟ್. ಇದನ್ನೇ ಸೈಡ್ ಉದ್ಯೋಗವಾಗಿಯೂ ಮಾಡಿಕೊಂಡರು. ಸ್ಟಾರ್ ಹೋಟೆಲ್ ಗಳು ಇವರನ್ನು ಕೈ ಬೀಸಿ ಕರೆದವು. ಯಾವುದೇ ಪಾರ್ಟಿಗಳಲ್ಲೂ ನಗೆಯ ಅಲೆ ಉಕ್ಕುವಂತೆ ಮಾಡಬಲ್ಲರು. ಫ್ಯಾಮಿಲಿ ಫೋಟೋ ಎಂಬ ಕಲ್ಪನೆಯನ್ನೇ ಬದಲಿಸಿ ಫ್ಯಾಮಿಲಿ ಕ್ಯಾರಿಕೇಚರ್ ರೂಢಿ ಮಾಡಿಸಿದರು. ಮಾಲ್ ಗಳಲ್ಲಿ ನಿಂತು ಕಣ್ಣು ಮುಚ್ಚಿ ತೆಗೆಯುವುದರೊಳಗೆ ಚಿತ್ರ ಬರೆದು ಹೆಸರಾದರು. ಅದಕ್ಕೆ ‘ರುಂಡ ತಗೊಂಡ್ರೆ ಮುಂಡ ಫ್ರೀ’ ಎಂಬ ಆಕರ್ಷಕ ಸ್ಲೋಗನ್ ನೀಡಿದರು.

prakash-shetty-photo.jpgದಿಸ್ ಈಸ್ ಪ್ರಕಾಶ್ ಶೆಟ್ಟಿ. ಈಗ ಈಟಿವಿಯಲ್ಲಿ ಇವರ ಕಾರ್ಟೂನ್ ಗಳು ಹೆಸರು ಮಾಡುತ್ತಿವೆ. ಇದರಿಂದ ಇವರಿಗೂ ಕಿಕ್ ಸಿಕ್ಕಿದೆ. ಇದರ ಸಂತೋಷಕ್ಕಾಗಿ ನಮಗೂ ಕಿಕ್ ನೀಡಲು ಬ್ಲಾಗ್ ಆರಂಬಿಸಿದ್ದಾರೆ. ಅವರಿಗೆ ಯಶಸ್ಸು ತಂದು ಕೊಟ್ಟ  ‘ಪ್ರಕಾಶ್ ಶೆಟ್ಟಿ ಪಂಚ್’ ಎಂದೇ ಹೆಸರಿಟ್ಟಿದ್ದಾರೆ. ಪಂಚ್ ಬೇಕಾ ಅಲ್ಲಿಗೆ ಭೇಟಿ ಕೊಡಿ. ಪರಚಬೇಕ- ಇಲ್ಲಿಗೆ ಮೈಲ್ ಮಾಡಿ[email protected] ಆರ್ಡರ್ ಕೊಡಬೇಕಾ ಇಲ್ಲಿಗೆ ಫೋನ್ ಮಾಡಿ: 94495 00294, 080-28606030

aishvarya-rai-with-caricature.jpg

‍ಲೇಖಕರು avadhi

February 18, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಲಾ.. ರವಿಕಿರಣ

ಕಾಲಾ.. ರವಿಕಿರಣ

ಕಲಾವಿದ ರವಿ ಕೋಟೆಗದ್ದೆ ಅವರ ಸುಂದರ ಪೇಂಟಿಂಗ್ ನ ಒಂದು ಝಲಕ್...

ಸತೀಶ್ ಆಚಾರ್ಯ ಹೇಳ್ತಾರೆ: ‘ಹೆಣಾ ಒಂಚೂರ್ ಹಲ್ಲ್ ಕಿಸಿ ಕಾಂಬ!’

ಸತೀಶ್ ಆಚಾರ್ಯ ಹೇಳ್ತಾರೆ: ‘ಹೆಣಾ ಒಂಚೂರ್ ಹಲ್ಲ್ ಕಿಸಿ ಕಾಂಬ!’

'ವಿಶ್ವ ಕುಂದಾಪ್ರ ಕನ್ನಡ ದಿನ' ಆಗಿ ಹೋಯ್ತು. ಆ ನೆನಪಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಬರೆದ ಒಂದಷ್ಟು ವ್ಯಂಗ್ಯಚಿತ್ರಗಳು...

೧ ಪ್ರತಿಕ್ರಿಯೆ

  1. Akma

    Aishvarya is more beautiful on life, and smart woman. I am proud that we are same age and both are beautiful. She is moviestar, i am а surgeon star:)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: