ಬ್ಲಾಗ್ ಮಂಡಲದ ಬಂಧುಗಳ ಬಳಿ…

 lateenu.jpg

ಪ್ರಿಯ ಬ್ಲಾಗ್ ಓದುಗರೆ,

ನಿಮಗೆ ಗೊತ್ತಿರುವ ಹಾಗೆ, ಆರಂಭವಾದ ಕೆಲವೇ ತಿಂಗಳುಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ಬ್ಲಾಗ್ “ಅವಧಿ“. ಭಾರತದಲ್ಲಿ ಮಾತ್ರವಲ್ಲದೆ, ಅಮೆರಿಕಾ, ಇಂಗ್ಲೆಂಡ್, ಜರ್ಮನಿ, ದುಬೈ, ಸಿಂಗಪೂರ್, ಆಸ್ಟ್ರೇಲಿಯಾ, ಸ್ವೀಡನ್, ಕೆನಡಾ, ನೈಜೀರಿಯಾ, ಲ್ಯಾಟಿನ್ ಅಮೆರಿಕಾ ಮೊದಲಾದ ದೇಶಗಳಲ್ಲಿ ಅವಧಿಯ ದೊಡ್ಡ ಓದುಗ ಬಳಗವೇ ಹುಟ್ಟಿಕೊಂಡಿದೆ. ಬ್ಲಾಗ್ ಎಂದರೆ ಒಬ್ಬ ವ್ಯಕ್ತಿಯ ಪರ್ಸನಲ್ ಡೈರಿ ಎಂಬ ಮಾಮೂಲಿ ಕಲ್ಪನೆಯನ್ನು “ಅವಧಿ” ಇಲ್ಲವಾಗಿಸಿದ್ದು ಬಹುಶ: ಇದಕ್ಕೆ ಪ್ರಮುಖ ಕಾರಣವಾಗಿರಬಹುದು.

ನಿಜ. ಅವಧಿ ಮೊದಲಿಂದಲೂ ಕಾಯ್ದುಕೊಂಡು ಬಂದ ಧೋರಣೆಯೇ ಆರೋಗ್ಯಕರ ಸಾಂಸ್ಕೃತಿಕ ಮತ್ತು ರಾಜಕೀಯ ಚರ್ಚೆಯನ್ನು ಬೆಳೆಸಬೇಕೆಂಬುದು. ಎಲ್ಲರನ್ನೂ ಒಳಗೊಂಡ ಚರ್ಚೆಗೆ ವೇದಿಕೆಯಾಗಬೇಕು ಎಂಬುದು ಅವಧಿಯ ಹೆಬ್ಬಾಸೆ. ಅವಧಿಯ ಪ್ರತಿಯೊಂದು ಅಂಕಣಗಳೂ ಈ ಹೆಬ್ಬಾಸೆಯಿಂದಲೇ ಕಣ್ಣು ಬಿಟ್ಟವುಗಳಾಗಿವೆ. ಬ್ಲಾಗ್ ಮಂಡಲ, ಫ್ರೆಂಡ್ಸ್ ಕಾಲೊನಿ, ವೆಂಕಿ ಬರ್ಗರ್, ಡೋರ್ ನಂ ೧೪೨, ಭಾಮಿನಿ ಷಟ್ಪದಿ, ಕನ್ನಡ ಟೈಮ್ಸ್ ಝೋನ್ ಎಲ್ಲವೂ ಚರ್ಚೆಯ ಬೇರೆ ಬೇರೆ ಎಳೆ ಹಿಡಿದು ಹೊರಟವುಗಳೇ ಆಗಿವೆ. ಅವಧಿ ಹೊಂದಿರುವ ಲಿಂಕ್ ಗಳನ್ನು ನೋಡಿದರೂ ಇದು ಮತ್ತೊಮ್ಮೆ ಮನದಟ್ಟಾಗುತ್ತದೆ. ಭಾವನಾತ್ಮಕ ಆಯಾಮದೊಂದಿಗೆ ಹೊಸ ಮಾತುಕತೆಗೂ ಕೈಮರವಾಗುವಂತಿರುವ ಬ್ಲಾಗುಗಳ ಕಡೆ ನಮ್ಮ ಆಸಕ್ತಿ. ಜೋಗಿಮನೆ, ಋಜುವಾತು, ವ್ಹಾ ಕ್ಯೂಬಾ -ಹೀಗೆ ಅಕ್ಷರ ಲೋಕ ಕಟ್ಟಿಕೊಡುವ ಹೊಸ ಸಾಧ್ಯತೆಯನ್ನು ನಿಚ್ಚಳವಾಗಿ ಕಾಣಿಸಬಲ್ಲ ಬ್ಲಾಗುಗಳ ಜೊತೆಗಿನ ಸಂಬಂಧ ಕೂಡ ಚರ್ಚೆಯನ್ನು ವಿಸ್ತರಿಸಿಕೊಳ್ಳುವ ಆಸೆಯದ್ದು.

ನಾವು ಈಗಾಗಲೇ ಹೇಳಿದಂತೆ, ಅವಧಿಯ ಯಾವುದೇ ಬರಹ ಅಥವಾ ಟಿಪ್ಪಣಿಯನ್ನೇ ನೆಪವಾಗಿಸಿಕೊಂಡು ಅಥವಾ ಇದರಾಚೆಗಿನ ವಿಷಯವನ್ನೂ ಇಟ್ಟುಕೊಂಡು ಮಾತುಕತೆಯನ್ನು ಮುನ್ನಡೆಸುವ ಬಳಗವನ್ನು ಕಟ್ಟುವ ಕಡೆ ಅವಧಿಯ ನೋಟ. ಬ್ಲಾಗ್ ಓದುಗರು ಮಾತ್ರವಲ್ಲದೆ, ಈಗಾಗಲೇ ತಮ್ಮದೇ ಬ್ಲಾಗ್ ರಚಿಸಿಕೊಂಡು ಅಭಿವ್ಯಕ್ತಿಸುತ್ತಿರುವ ಎಲ್ಲರೂ ಈ ಚರ್ಚೆಯ ಚಾವಡಿಯ ಸದಸ್ಯರಾಗಬೇಕೆಂಬುದು ಅವಧಿಯ ಆಸೆ. ಇದಕ್ಕಾಗಿ, ಪ್ರತಿಯೊಬ್ಬರಿಂದಲೂ ಬರಹ ಆಹ್ವಾನಿಸುತ್ತಿದ್ದೇವೆ. ಇಷ್ಟವಾದ ಪುಸ್ತಕ, ಯಾವುದೇ ಕೃತಿಯಲ್ಲಿ ತುಂಬಾ ಕಾಡಿದ ಪಾತ್ರ, ಇವತ್ತಿನ ವಿದ್ಯಮಾನ, ಪರಿಸರ, ನೆನಪಿನ ಲೋಕ ಇವಾವುದರ ಮೇಲೇ ಆದರೂ ನಿಮಗೆ ಹೇಳಬೇಕೆನ್ನಿಸಿದ್ದನ್ನು ಪುಟ್ಟ ಟಿಪ್ಪಣಿ ರೂಪದಲ್ಲಿ ಬರೆದು ನಮಗೆ ಇಮೈಲ್ ಮಾಡಬೇಕಾಗಿ ವಿನಂತಿ. ಅದನ್ನು ಸೂಕ್ತ ರೀತಿಯಲ್ಲಿ ಓದುಗರ ಮುಂದೆ ಮಂಡಿಸಲು, ಓದಿದವರನ್ನೂ ಚರ್ಚೆಯ ಅಂಗಳಕ್ಕೆ ಬರಮಾಡಿಕೊಳ್ಳಲು ಅವಧಿ ಯತ್ನಿಸಲಿದೆ. 

ಮಾತು ಹಂಚಿಕೊಳ್ಳುವುದು, ಮನಸ್ಸು ತೆರೆದಿಡುವುದು, ಅದಕ್ಕೆ ಸ್ಪಂದಿಸುವವರ ಸ್ನೇಹದಲ್ಲಿ ಕರಗುವುದು, ಈ ಎಲ್ಲ ಭಾವನಾತ್ಮಕ ಗಳಿಗೆಗಳಲ್ಲೇ ತಂತಾನೇ ಒಂದು ಸಾಂಸ್ಕೃತಿಕ ಬಿಡಾರ ಕಟ್ಟುವಲ್ಲಿ ಪಾಲುದಾರರಾಗುವುದು ಎಂಥ ಖುಷಿಯ ಕೆಲಸ ಅಲ್ಲವೇ? ಬನ್ನಿ, ಈ ಅಕ್ಷರ ಕಾಯಕದಲ್ಲಿ ಕೈಜೋಡಿಸಿ. ಈವರೆಗೆ ಬ್ಲಾಗ್ ಲೋಕ ಗೊತ್ತಿರದ ನಿಮ್ಮ ಮಿತ್ರರಿದ್ದರೆ ಅವರನ್ನೂ ಈ ಲೋಕಕ್ಕೆ ಕರೆತನ್ನಿ.

ನಿಮ್ಮ ಬರಹಗಳ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಇಮೈಲ್ ವಿಳಾಸ: [email protected]

(ಚಿತ್ರ ಸೌಜನ್ಯ: ಅರವಿಂದ ನಾವಡ ಅವರ “ಚಂಡೆಮದ್ದಳೆ” ಬ್ಲಾಗ್)  

‍ಲೇಖಕರು avadhi

November 30, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This