ಬ್ಲಾಗ್ ಲೋಕಕ್ಕೆ ಬನ್ನಿ

ಕನ್ನಡದ ಬ್ಲಾಗಿಗರನ್ನೆಲ್ಲಾ ಒಂದೆಡೆ ಸೇರಿಸುವ, ಚರ್ಚಿಸುವ, ಗೆಳೆಯರಾಗುವ ಒಂದು ಯೋಚನೆ ಧಾಪುಗಾಲಿಟ್ಟು ನಡೆಯುತ್ತಿದೆ. ‘ಕನ್ನಡಪ್ರಭ’ದ ಕಾರ್ಯ ನಿರ್ವಾಹಕ ಸಂಪಾದಕಾರಾದ ರವಿ ಹೆಗಡೆ ಅವರ ಪರೋಕ್ಷ ಒತ್ತಾಸೆಯಾಗಿ ಆರಂಭವಾದ Kannada bloggers-ಕನ್ನಡ ಬ್ಲಾಗಿಗರ ಕೂಟ ಈಗ 1000 ಸದಸ್ಯರನ್ನು ಹೊಂದಿದೆ.
ಬ್ಲಾಗ್ ಕೂಟ ಆರಂಭವಾದ ಎರಡು ದಿನದಲ್ಲೇ ಸದಸ್ಯರ ಸಂಖ್ಯೆ 200 ಸಮೀಪಿಸುತ್ತಿದ್ದಾಗ ರವಿ ಹೆಗಡೆ ಈ ತಾಣಕ್ಕೆ ಕನಿಷ್ಠ ಎಂದರೂ 1000 ಸದಸ್ಯರು ಸಿಗುತ್ತಾರೆ ಎಂದಿದ್ದರು. ಅದು ನಿಜವಾಗಿದೆ.
ಈ ತಾಣಕ್ಕೆ ಇನ್ನೂ ಭೇಟಿ ಕೊಡದವರು ತಕ್ಷಣ ಭೇಟಿ ಕೊಡಿ. ಭೇಟಿ ಕೊಟ್ಟರೂ ಸದಸ್ಯರಾಗಿಲ್ಲದವರು ಖಂಡಿತಾ ಸದಸ್ಯರಾಗಿ ಬ್ಲಾಗ್ ಲೋಕದವರಾಗಿ.
ಸದಸ್ಯರಾಗಲು ಇಲ್ಲಿ ಕ್ಲಿಕ್ಕಿಸಿ.
ತೆರೆದಿದೆ ಮನೆ ಓ….
 
inkwatercol_pencil1
ಸಾವಿರದ ನೆರಳಲ್ಲಿ….
ರವಿ ಹೆಗಡೆ kannada bloggers ಹೋಗುತ್ತಿರುವ ವೇಗ ನೋಡಿದರೆ ಸಾವಿರ ಸದಸ್ಯರ ಸಂಖ್ಯೆ ದಾಟುತ್ತದೆ ಎಂದಾಗ ಅದನ್ನು ಖಂಡಿತಾ ನಾನು ಬುಡುಬುಡಿಕೆ ಭವಿಷ್ಯದಂತೆ ಸ್ವೀಕರಿಸಿದ್ದೆ.
ಕಾರಣ ಇಷ್ಟೇ, ಇತ್ತೀಚಿಗೆ ನಾನು, ಶ್ರೀದೇವಿ, ವಿಕಾಸ್, ಸುಶ್ರುತ, ಶ್ರೀನಿಧಿ ಕೂತು ನಮ್ಮೆಲ್ಲಾ ಬೆರಳುಗಳನ್ನೂ ಮಡಿಚಿ ತೆಗೆದು, ಗುಣಾಕಾರ ಭಾಗಾಕಾರ ಮಾಡಿ ನೋಡಿದರೂ ಕನ್ನಡ ಬ್ಲಾಗರ್ ಗಳ ಸಂಖ್ಯೆ 600 ದಾಟಲಿಲ್ಲ. ಈ ಆರು ನೂರರಲ್ಲೂ ನಿದ್ದೆ ಮಾಡುತ್ತಿರುವ, ತಾತ್ಕಾಲಿಕ ರಜಾ ಹಾಕಿರುವ, ಸಿಟ್ಟು ಬಂದಾಗ ಬಂದ್ ಮಾಡಿ ಮನಸ್ಸು ಸರಿಯಾದಾಗ ನಡೆಸುವ ಬ್ಲಾಗ್ ಗಳ ಸಂಖ್ಯೆಯೂ ಸಾಕಷ್ಟಿತ್ತು. ಹಾಗಿರುವಾಗ 1000 ! ಏರಲಾಗದ ಹಿಮಾಲಯದಂತೆ ಕಂಡಿತ್ತು.
ರವಿ ಹೆಗಡೆ ಹೇಳಿ ಕೇಳಿ ಕನ್ನಡ ಬಲ್ಲ, ಕನ್ನಡದಲ್ಲಿ ಟೆಕ್ನಾಲಜಿ ಬಲ್ಲ, ಅದಕ್ಕಿಂತಲೂ ಮಿಗಿಲಾಗಿ ಯಾರಿಗಾದರೂ ನೆರವಿನ ಕೈ ಚಾಚಬಲ್ಲ ವ್ಯಕ್ತಿ. ಅವರ ಭವಿಷ್ಯ ನಿಜವಾಗಿದೆ. ಅವರಿಗೆ ಮೊದಲನೆಯ ಸಲಾಂ. ರಾಮೋಜಿ ಫಿಲಂ ಸಿಟಿಯೊಳಗೆ ಇದ್ದ ನನಗೆ ಇದ್ದ ಕೋಣೆಯೊಳಗಿಂದಲೇ ಜಗತ್ತನ್ನು ನೋಡುವ ಈ ಜಾಲಿಗ ವಿದ್ಯೆಯನ್ನು ಕಲಿಸಿದವಳು ಶ್ರೀದೇವಿ ಉರುಫ್ ‘ಶ್ರೀ’. ‘ನಮ್ಮಿಬ್ಬರ ಕಿತ್ತಾಟದ ಲೆಕ್ಕ ಇಡಲಾಗದೆ ಆ ಭಗವಂತನೂ ನಕ್ಕ’ ಎನ್ನಬಹುದೇನೋ. ಅಷ್ಟು ಜಗಳ ಸದಾ ಜಾರಿಯಲ್ಲಿಟ್ಟಿದ್ದೇವೆ. ಜೊತೆಗೆ ಅಗಾಧ ಪ್ರೀತಿಯನ್ನೂ…ಅವಳಿಗೂ ಒಂದು ಸಲಾಂ.
ವಿಕಾಸ್, ಶ್ರೀನಿಧಿ, ಸುಶ್ರುತ, ಟಿ ಜಿ ಶ್ರೀನಿಧಿ, ಅಶೋಕ್ ಕುಮಾರ್ ಎ, ಡಿ ಜಿ ಮಲ್ಲಿಕಾರ್ಜುನ್, ಶಿವೂ, ಪ್ರಕಾಶ್ ಹೆಗಡೆ, ಟೀನಾ, ಮಾಲತಿ ಶೆಣೈ, ಚೇತನಾ ಇವರೆಲ್ಲಾ ಈ ತಾಣಕ್ಕೆ ಜೀವ ನೀಡುತ್ತಿದ್ದಾರೆ. ಇನ್ನು ಬ್ಲಾಗಿಗರು ಅವರ ನಿರಂತರ ಪ್ರೀತಿ, ನೆಚ್ಚಿಗೆ ..ಇವೆಲ್ಲವೂ ನನ್ನನ್ನು ಮೂಕನನ್ನಾಗಿಸಿದೆ. ಬ್ಲಾಗಿಗರು ಮಾತ್ರ ಇರಲಿ ಎನ್ನುವಾಗ ಬ್ಲಾಗ್ ಓದುಗರಿಗೂ ಬಾಗಿಲು ತೆರೆಯಲಾಯಿತು. ಪರಿಣಾಮ ಇವತ್ತು ಓದುಗರಾಗಿದ್ದ ಹಲವರು ಬ್ಲಾಗಿಗರಾಗಿದ್ದಾರೆ. ಬ್ಲಾಗಿಗರ ಬಲ ಹೆಚ್ಚುತ್ತಿದೆ.
ಈ ಬ್ಲಾಗ್ ಲೋಕ ಯಾರದು ಎಂಬ ಪ್ರಶ್ನೆ ಹಲವು ಬಾರಿ ನಾವು ಕೇಳಿಕೊಂಡಿದ್ದೇವೆ. ಇತ್ತೀಚಿಗೆ ಬ್ಲಾಗ್ ಗೆಳೆಯರೆಲ್ಲರೂ ಸೇರಿ ಮಾತನಾಡುವಾಗಲೂ ನಾವು ಸ್ಪಷ್ಟವಾಗಿ ಕಂಡುಕೊಂಡಿದ್ದು ಇಷ್ಟೇ- ಸಿದ್ಧಾಂತ, ಒಲವು, ನಿಲವು ಏನೇ ಇರಲಿ. ಇಲ್ಲಿ ಬರುವವರಿಗೆ ಬ್ಲಾಗ್ ಪ್ರೀತಿ ಒಂದೇ ಆಧಾರ.
ಅಂತಹ ಪ್ರೀತಿಯ ಎಳೆಯೊಂದು ಇಂದು ಸಾವಿರ ಸದಸ್ಯರನ್ನು ಒಂದೆಡೆ ಸೇರಿಸಿದೆ. ಇದು ಮೇಫ್ಲವರ್ ಅರಳುವ ಕಾಲ. ನಮ್ಮ ಎಷ್ಟೊಂದು ಕನಸಿನ ತೋಟದಲ್ಲಿ ಒಂದು ಹೂ ಬಿಟ್ಟಿದೆ. ಇನ್ನಷ್ಟು ಹೂ ಅರಳಿಸಲೂ ನಾವು ನಿಮ್ಮತ್ತಲೇ ನೋಡುತ್ತಿದ್ದೇವೆ.
-ಜಿ ಎನ್ ಮೋಹನ್


‍ಲೇಖಕರು avadhi

May 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

5 ಪ್ರತಿಕ್ರಿಯೆಗಳು

 1. Kirankumari

  ಅಭಿನ೦ದನೆಗಳು..ಕನ್ನಡ ಬ್ಲಾಗ್ ಲೋಕದಿ೦ದ ಮತ್ತಷ್ಟು ಮೇಪ್ಲವರ್ ಗಳು ಅರಳಲಿ..ಬಣ್ಣ ಬಣ್ಣದ ಹೂದೋಟ ವಿಸ್ತರಿಸಲಿ..ದೇಶ-ಕಾಲ ಗಳಾಚೆಗೆ..ಪ್ರಜ್ನ್ಯಾವ೦ತರ ತೀವ್ರ ತಮವಾದ ವೈಚಾರಿಕತೆ..ಬದ್ದತೆ..ನಿಲುವು..ಗಳನ್ನು ವ್ಯಕ್ತಪಡಿಸುವ ಮುಕ್ತ ಸ೦ವಾದ ನೆಲೆಯಿದಾಗಲಿ..ಎ೦ದು ಆಶಿಸುತ್ತೇನೆ.

  ಪ್ರತಿಕ್ರಿಯೆ
 2. ಶ್ರೀ

  ಸರ್, ನಿಮ್ಮ ಇಚ್ಛಾಶಕ್ತಿಗೆ ಅಭಿನಂದನೆಗಳು…
  ನಾನು ಇನ್ನೊಂದು ಭವಿಷ್ಯ ಹೇಳುತ್ತೇನೆ ಕೇಳಿ. ಅರ್ಥಪೂರ್ಣವಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಯೋಜಿತ ರೀತಿಯಲ್ಲಿ ಮುನ್ನಡೆದರೆ ಬ್ಲಾಗರ್ಸ್ ಗುಂಪಿನ ಸದಸ್ಯರ ಸಂಖ್ಯೆ 4500-5000ವಾದರೂ ಮುಟ್ಟುವ ಸಾಧ್ಯತೆಯಿದೆ. ದಿನೇದಿನೇ ಆನ್ಲೈನ್ ಕನ್ನಡಿಗರ ಸಂಖ್ಯೆ ಹೆಚ್ಚಾಗುವ ಕಾರಣ ಇನ್ನೊಂದು ವರ್ಷದಲ್ಲಿ ಈ ಸಂಖ್ಯೆ ನಾನು ಹೇಳಿದ್ದಕ್ಕಿಂತಲೂ ಹೆಚ್ಚಾದರೂ ಆಶ್ಚರ್ಯವಿಲ್ಲ.
  ಇನ್ನೊಂದು ಮಾತು… ಸುಮ್ಮಸುಮ್ಮಗೆ ನನ್ನನ್ನು ಜಗಳಗಂಟಿಯೆಂದು ದೂರಿರುವುದಕ್ಕೆ ನಂಗೆ ಬೇಸರವಾಗಿದೆ 🙁 ನಾನ್ಯಾವಾಗ ಜಗಳಾಡಿದೆ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: