ಭಾನುವಾರದ ಕಥೆ

ಕಥೆ

– ಡಾ ಎಸ್.ಬಿ.ಜೋಗುರ

‘ಬಿಸಲಾಗ ತಿರಕ್ಕೋಂತ ಹೋಗಬ್ಯಾಡ..! ಹಂಗೇನರೆ ಹೋದನಂದರ ನನಗ ಹೇಳು’ ಅಂತ ಅಪ್ಪ, ಅವ್ವನ ಮುಂದ ವಾರ್ನಿಂಗ್  ಮಾಡಿ ಹೆಗಲ ಮ್ಯಾಲ ಬಾರುಕೋಲ ಹಾಕೊಂಡು ಎತಗೋಳ ಹಿಂದ ಹೊಲಕ್ಕ ನಡದದ್ದೇ ತಡ ನಾ ಸಣ್ಣಗೆ ಅವ್ವನ ಬಾಜೂ ಹೋಗಿ ಬೆಕ್ಕ ಬಾಲಾ ಸವರ್ತಾ, ಮುದ್ದಿನ ಸೊಕ್ಕು ತೋರಿಸುವಂಗ ಪುಸಲಾಯಿಸಲಿಕ್ಕ ಸುರು ಮಾಡತಿದ್ದೆ. ಅಕಿ ಬ್ಯಾಡ ಅಂದರೂ ಒಲಿ ಮುಂದ ಕುಂತು ಬಣ್ಣದ್ದು ಮಾತಾಡಕೊಂತ ಒಂದೊಂದು ಚಿಪಾಟಿ ತಗದು ಒಲಿ ಪುಟು ಹಚ್ಚತಿದ್ದೆ. ‘ಅಡಗಿಮನ್ಯಾಗ ಕುಂತು ಇಲ್ಲೇನು ಮಾಡ್ತಿ..? ಹೆಂಗಸರಾಗ ಹಿರೋಡ್ಯಾ ಅನ್ನೂವಂಗ, ಹೊರಗ ಹೋಗು’ ಅಂದದ್ದೇ ನಾ ಸಣ್ಣಕ ಕಣ್ಣ ಚಿವುಟತಾ ‘ಹೊರಗಂದ್ರ ಎಲ್ಲಿ..?’ ಅಂತ ಕೇಳಿದ್ದೇ ಅವ್ವ ತುಸು ಸಿಟ್ಟಿಂದ ‘ ಇಲ್ಲೇ ಮನಿ ಬಾಜೂ ಸಂದ್ಯಾಗ ಆಡು, ಅಕಾಡಿ ಇಕಾಡಿ ಹೋಗಬ್ಯಾಡ’ ಅಂತಿದ್ಲು. ನಾನು ‘ಅಪ್ಪನ ಮುಂದ ಹೇಳಬ್ಯಾಡವೋ..’ ಅನ್ಕೋಂತ ಪುಸುಂಗನೇ ಜಿಗಿತಿದ್ದೆ. ‘ಜಗಳಾ ಗಿಗಳಾ ತಗದು ಬರಬ್ಯಾಡ..’ ಅಂತ ಹೇಳೂದರೊಳಗ ಮನಿ ಹೊಸ್ತಿಲಾ ದಾಟಿ ‘ಹುಂ’ ಅಂತಿದ್ದೆ. ಅಟ್ಟು ಹೇಳದಮ್ಯಾಲೂ ನಾ ಆಟದಾಗ ಸೋತೆ ಅಂದ್ರ ಜಗಳ ಇದ್ದಿದ್ದೇ. ಹಂಗಾಗೇ ಬಾಳ ಹುಡುಗರು ನನ್ನನ್ನ ಆಟದಾಗ ಸೇರಸತಿರಲಿಲ್ಲ ‘ವಿಜು ಸೋತ ಅಂದರ ಬರೀ ಜಗಳಾ ತಗೀತಾನ ಅವನ್ನ ಸೇರಸಕೊಬ್ಯಾಡ್ರಿ’ ಅಂತಿದ್ದರು. ನಾನು ಮಾತ್ರ ‘ಇಲ್ಲಿಲ್ಲ ಇವತ್ತ ಜಗಳಾ ತಗದರ ಮತ್ತ ಒಟ್ಟೊಟ್ಟೇ ಸೇರಸಕೋಬ್ಯಾಡ್ರಿ’ ಅಂತ ಹೇಳಿದ ಮ್ಯಾಲೂ ಜಗಳಾ ತಗದೇ ಮನಿಗಿ ಸೇರತಿದ್ದೆ. ಅವ್ವ ಏನರೇ ತರಲಿಕ್ಕ ‘ಏ ವಿಜು ಇಲ್ಲಿ ಬಾ ತುಸು ಅಂಗಡಿಗಿ ಹೋಗಿ ಬರಾಕತ್ತಿ’ ಅಂತ ಕರದರ ನನ್ನ ಜೋಡಿ ಆಟಾ ಆಡೋ ಹುಡುಗರಗಿ ಕಣ್ಣ ಮೂಗು ಚಿವುಟಿ, ನಾ ಇಲ್ಲಿ ಇಲ್ಲಂತ ಹೇಳರಿ ಅಂತಿದ್ದೆ. ಹಿಂಗೇ ಒಂದು ಸಾರಿ ಆಟದಾಗ ಸೋತಮ್ಯಾಗ ಬಾಜಾರಬಾವಿ ಸೀನಪ್ಪನ ಜೋಡಿ ಜಗಳಾ ತಗದು.. ಅಂಗೀ ಹರದು ಮೈ-ಕೈ ಚೂಕರ್ಕೊಂಡು ಆದ ಮ್ಯಾಲ ಆ ಸೀನ ಮಟಮಟ ಮಧ್ಯಾಹ್ನದಾಗ ನಮ್ಮ ಕೋಳಿ ಅವನ ಮನಿ ಕಡಿ ಹೋಗಿದ್ದೇ ಅವನ್ನ ಅಟ್ಟಾಡಿಸಿ ಹಿಡಿದು, ಅವುಕರ ಕಾಲ ಕಟ್ಟಿ ಬಾವ್ಯಾಗ ಒಗದು ಸೇಡು ತೀರಿಸಿಕೊಂಡಿದ್ದ. ಕೋಳಿ ಸಂಜೀ ಮುಂದ ಬಂದು ಗೂಡ ಸೇರಲಿಲ್ಲ ಅನ್ನೂದೇ ಹುಡುಕಾಟ ಶುರು ಆಯ್ತು. ಅಟ್ಟೊತ್ತಿಗಾಗಲೇ ನೀರ ಸೇದಲಿಕ್ಕ ಹೋದವರು ‘ಯಾರೋ ಕುರಸಾಲ್ಯಾಗೋಳು ಬಾವ್ಯಾಗ ಕಾಲ ಕಟ್ಟಿ ಕೋಳಿ ಒಗದಾರ’ ಅಂತ ಸುದ್ದಿ ಹಬ್ಬಿದ್ದೇ ಅವ್ವ ಸೀದಾ ಬಾವಿಕಡೆ ನಡದಲು. ಅಲ್ಲಿ ಹೋದ ಮ್ಯಾಲ ಗೊತ್ತಾಯ್ತು ಅದಕ್ಕ ಕಾರಣ ನಾನು ಸೀನ್ಯಾನ ಜೋಡಿ ಜಗಳಾ ತಗದಿದ್ದಕೇ ಅಂವ ಹಾಂಗ ಮಾಡಿದ್ದ ಅಂತ. ಅವ್ವ ಬಾಳ ಜತ್ತನ ಮಾಡಿ ಕೋಳಿ ಸಾಕಿದ್ದಲು. ಬರಬರ ಬಂದವಳೇ ಹಸೀ ಸಜ್ಜೀ ದಂಟ ತಗೊಂಡು ನನ್ನ ಮೈ ಚರ್ಮಾ ಸುಲಿಯುವಂಗ ತರಗಾಬುರಗ ಹೊಡದಿದ್ದಲು. ಅಪ್ಪ ಹೊಲಕ್ಕ ಹೋಗೂ ಮುಂದ ವಾರ್ನಿಂಗ್ ಮಾಡಿ ಹೋಗಿದ್ದ ಅನ್ನೂ ಕಾರಣಕ್ಕ ಮಧ್ಯಾಹ್ನ ಬರೊಬ್ಬರಿ ಊಟದ ಟೈಮಿಗಿ ಮನಿಗಿ ಹೋದೆ. ಅವ್ವ ‘ ಎಲ್ಲಿ ಹೋಗಿದ್ದೆಪ್ಪ..? ಸೈರಪಟ್ಟ ನಾಯಿಯಂಗ.. ತುಸು ಅಂಗಡಿಗಿ ಹೋಗಿ ಬೆಲ್ಲಾ ತರೂದಿತ್ತು. ಒಂದಕ್ಕರೇ ಆಸರ ಆಗರಿ, ಬರೀ ಕೂಳು ಕತ್ತರಿಸೂದು, ಜಿಗಿಯೋದು ಅಂದ್ರ ಹ್ಯಾಂಗ..?’ ಅಂತ ಒದರಾಡಿದ್ದೇ ನಾನು ಬಾಳ ಸಂಭಾವಿತನಂಗೆ ಸೀದಾ ಹೋಗಿ ಕೋಲಿ0ೊಳಗ ಕಾಟ ಮೇಲೆ ಮಲಗಿಬಿಟ್ಟೆ. ‘ ಒಣಾ ಧಿಮಾಕಿಗೇನು ಕಡಿಮಿಲ್ಲ, ಏಳು ಕೂಳು ತಿನ್ನು, ಅಂಗಡಿಗಿ ಹೋಗಿ ತುಸು ಹವೇಜ, ಜೀರಗಿ ತರೂದೈತಿ’ ಅಂದಾಗ ಎದ್ದು ಅಡುಗೆ ಮನಿಗಿ ಹೋಗಿ ಕುಂತು ಬಿಟ್ಟೆ. ಅವ್ವ ‘ಕೈ-ಕಾಲು ಮುಖಾ ತಕ್ಕೊಳ್ಳೂಮಟ ಊಟಕ್ಕ ಹಾಕಲ್ಲ. 0ಾವ ಸುಡಗಾಡದಾಗ ಆಡಿ ಬಂದಾನೋ ಏನೋ.. ಕೈ ಸೈತ ತಕ್ಕೊಳಿಲ್ಲ ಹಂಗೇ ಕುಂತ’ ಜಬರಿಸಿದ್ದೇ ಎದ್ದು ಕೈತೊಳಕೊತಿದ್ದೆ. ‘ಹಿಂಗೇ ಮಾಡದೆಂದ್ರ ನೋಡು, ಸಂಜೀ ಮುಂದ ನಿಮ್ಮ ಅಪ್ಪನ ಮುಂದೇ ಹೇಳ್ತೀನಿ.. ನಿನ್ನ ವಾಲಗಾನೇ ಊದಸ್ತೀನಿ… ನಿನ್ನ ಚಮರ್ಾನೇ ಸುಲಿತಾರ’ ಅಂತ ಹೆದರಸದ ಮ್ಯಾಲ ಕೈಗಿ ಏನು ಸಿಗುತ್ತೋ ಅದರಿಂದ ಹೊಡಿಯೋ ಅಪ್ಪ ಒಮ್ಮೆಲೇ ನೆನಪಾಗಿಬಿಟ್ಟ. ಅವನು ಮಾತ್ರ ಅಲ್ಲ. ನಮ್ಮ ಶಾಲೆಯ ಸರ್ಗೋಳು ಯಾರಾದರೂ ಸಿಕ್ಕರೂ ಅಪ್ಪ ನೇರವಾಗಿ ‘ ಸರ್, ಅಂವಾ ಸಾಲ್ಯಾಗ ಏನರೇ ಉಡಾಳಗಿರಿ ಮಾಡದರ ಹಾಕೊಂಡು ನಾಕು ವದೀರಿ ನಾ ಏನೂ ಕೇಳುವಂಗಿಲ್ಲ’ ಅಂತಿದ್ದ. ಇಂತಾ ಅಪ್ಪನ ಮುಂದ ಸಂಜಿ ವ್ಯಾಳೆದೊಳಗ ನನ್ನ ಪಿ0ರ್ಾದು ಏನಾದರೂ ಫéೈಲಾದರ ಮುಗೀತು ಬಡತ ಬೀಳೂದು ಗ್ಯಾರಂಟಿ ಅಂತ ಲೆಕ್ಕಾ ಹಾಕಿ ಅವ್ವ ಏನು ಹೇಳ್ತಾಳ ಅದನ್ನು ಕೇಳಕೊಂಡು ಹೋಗೂದು ಚುಲೋ ಅಂತ ಅಂಗಡಿಗಿ ಹೋಗಿ ಅವ್ವ ಹೇಳಿದ್ದ ಎಲ್ಲಾ ಸಾಮಾನೂ ಒಂದು ಚೀಟ್ಯಾಗ ಬರಕೊಂಡು ಹೋಗಿ ತಗೋಂಡುಬಂದಿದ್ದೆ. ಹಂಗ ಕೆಲಸಾ ಮಾಡಿದ್ದಕ ಹತ್ತು ಪೈಸೆ ಕಮೀಶನ್ ಕೂಡಾ ಹೊಡದಿದ್ದೆ. ಹಂಗು ಹಿಂಗಲಿಲ್ಲ.. ಮಧ್ಯಾಹ್ನದೊಳಗ ಊಟಾ ಮುಗಿದಿದ್ಡೇ ಕಿಡಕಿಯೊಳಗ ಸಣ್ಣಕ ಸೀಟಿ ಬೀಳತಾ ಇದ್ವು. ನಾನು ಅಲ್ಲೇ ಕಾಟ್ ಮ್ಯಾಲ ಮಲಕೊಂಡು ಕಿಡಕ್ಯಾಗ ಸೀಟಿ ಊದಿ ನನ್ನನ್ನ ಕರಿಯೋ ಕಾಲಬರ್ಡ್ ಯಾವದು ಅಂತ ನೋಡದರ ಅದೇ ನಮ್ಮ ಕೋಳಿ ಕಾಲು ಕಟ್ಟಿ ಬಾವ್ಯಾಗ ಒಗದ ಸೀನಣ್ಣ.. ತಳವಾರ ಸುಬ್ಯಾ.. ಯಮುನ್ಯಾ, ಗುಡಿ ಹಿಂದಿನ ಮಲಕಾಜಿ ಇವರೆಲ್ಲಾ ನನ್ನನ್ನ ಆಟಕ್ಕ ಕರೀತಿದ್ದರು. ನಾನು ಬರೂದಿಲ್ಲ ಹೋಗ್ರಿ ಅಂತ ಹೇಳೂಮುಂದ ಅವ್ವ ಪ್ರತ್ಯಕ್ಷ. ‘ನಿಮಗೇನು ಹೇಳವರು ಕೇಳವರು 0ಾರೂ ಇಲ್ಲನೂ..? ಮಟ ಮಟ ಮಧ್ಯಾಹ್ನದಾಗ ಅದೇನು ಆಟಾ ಆಡ್ತೀರಿ ಹೋಗ್ರಿ’ ಅಂದದ್ದೇ ಎಲ್ಲರೂ ರನ್ನಿಂಗ್ ಕಾಂಪಿಟೇಶನ್ಲ್ಲಿ ಭಾಗವಹಿಸಿದವರ ಥರಾ ಓಡಿಹೋದರು. ‘ ವಿಜಿ ನೀ ಒಂದೇ ಹೊರಗ ಹೋದರ ನೋಡು..! ಸುಮ್ಮ ಕಣ್ಣ ಮುಚಕೊಂಡು ಬಿದ್ದಕೋ.. ನಾ ಇಲ್ಲೇ ಖಾರಾ ಕುಟ್ಟತಿರತೀನಿ’ ನೀ ಏನಾರೆ ಹೊರಗ ಹೋದರ ನೊಡು ನಿನ್ನ ಸ್ವಾಟೀನೇ ಹರೀತೀನಿ’ ಅಂತ ಅವ್ವ ತಾಕೀತು ಮಾಡಿ ಊಟಾ ಮುಗಿಸಿ, ಖಾರಾ ಕುಟ್ಟಾಕ ತ0ಾರಿ ನಡಸಿದ್ದಲು. ನಾ ಘಾಟ ಬರತೈತಿ ಅಂತ ಸುಳ್ಳೇ ತಕರಾರು ತಗದೆ. ಹಂಗಿದ್ದರ ಬಾಗಿಲು ಹಾಕೊ ಅಂತ ಅವ್ವ ಆ ಕೋಣಿ ಬಾಗಿಲ ಹಾಕಿದ್ಲು. ನನಗ ನೋಡದರ ನಿದ್ದಿ ಬರಾಕತ್ತಿಲ್ಲ. ಕಣ್ಣ ಮುಚ್ಚಿ ತಗದು ಮಾಡದ ಮ್ಯಾಲೂ ನಿದ್ದಿ ಬೀಳಲಿಲ್ಲ. ಅಕಾಡಿದು ಇಕಾಡಿ, ಇಕಾಡಿದು ಅಕಾಡಿ ಹಾಸಿಗಿ0ೊಳಗ ಉರಳಾಡಿದರೂ ನಿದ್ದಿ ಬೀಳಲಿಲ್ಲ. ಮನಿ ಮೂಲ್ಯಾಗಿರೋ ವಳ್ಳು ಮತ್ತು ಹಾರೆ ಎರಡೂ ಖಾರಾ ಕುಟ್ಟಾಕ ಸಜ್ಜ ಆಗಿ ಕುಂತಿದ್ವು. ನಮ್ಮದು ಒಕ್ಕಲುತನದ ಮನಿತನ. ಮನ್ಯಾಗ ಐದು ಮಂದಿ ಮಕ್ಕಳು. ಎಲ್ಲರೂ ಖಾರಾ ತಿನ್ನವರೇ ಅಪ್ಪ ಅಂತೂ ಹಸಿ ಮೆಣಸಿನಕಾಯಿನ್ನೇ ಊಟದಾಗ ಸವತೀಕಾಯಿ ತಿಂದಂಗ ತಿಂತಿದ್ದ. ಎಲ್ಲರೂ ನನಗಿಂತಲೂ ದೊಡ್ಡವರೇ ಹೆಣ್ಣು ಮಕ್ಕಳಂತೂ ಎಲ್ಲರೂ ಲಗ್ನ ಆದವರೇ.. ಅಲ್ಲೇ ಸಿಂದಗಿ ಸುತ್ತ ಮುತ್ತ ಹಳ್ಯಾಗ ಬೀಗಸ್ತನ ಆಗಿದ್ವು. ಆ ಹೆಂಗಸರ ಬೆನ್ನಿಗಿ ಬಿದ್ದಂವ ಹುಟ್ಟೂತಲೇ ಸತ್ತ ಅಂತ ಅವ್ವ ಬ್ಯಾರೇ0ುವರ ಮುಂದ ಮಾತಿಗಿ ಬಂದಾಗ ಹೇಳೂದನ್ನ ನಾ ಕೇಳಿದ್ದೆ. ನನಕಿಂತ ದೊಡ್ಡಂವ ಶರಣು ಅವನು ಸಾಲಿ ಸೂಟಿ ಅಂತ ಹೇಳಿ ಅಕ್ಕನ ಊರಿಗಿ ಹೋಗಿದ್ದ. ಈಗ ಮನ್ಯಾಗ ಇರವಂದ್ರ ನಾನೇ ಒಬ್ಬಂವ ವೀರ ವಿಕ್ರಮ ವಿಜ0ುಕುಮಾರ. ಅವ್ವ ವಳ್ಳ ತೊಳಿ0ುೂ ಅವಾಜ್ ಮಲಗದಲ್ಲೇ ಬುಳುಕ್.. ಬಳಕ್.. ಅಂತ ಕೇಳಸತಿತ್ತು. ಮೊದಲ ಎರಡೆರಡು ಕಿಲೋ ಖಾರಾ ಕುಟ್ಟಿ ಗಾಜಿನ ಬರಣ್ಯಾಗ ತುಂಬಿ ಇಡತಿದ್ದಲು. ಈಗ ಮನ್ಯಾಗ ಇರವರೇ ಕಡಿಮಿ ಮಂದಿ ಅಂತ ಹೇಳಿ ಬರೀ ಒಂದೇ ಕಿಲೋ ಕುಟ್ಟತಿದ್ದಳು. ಅವ್ವ ಖಾರಾ ಕುಟ್ಟಾಕ ಶುರು ಮಾಡದಳು ಅಂತ ಆ ಹೊಡತದಿಂದೇ ಗೊತ್ತಾ0ು್ತು. ಪ್ರತೀ ಸಾರಿ ಹಾರೆ0ು ಹೊಡತ ಬೀಳೊವಾಗೊಮ್ಮೆ ಉಶ್.. ಉಶ್.. ಅಂತಿದ್ದಳು. ಇದ್ಯಾಕ ಹಿಂಗ ಅಂತಾಳ ಅಂತ ನಾನು ಮಲಗದಲ್ಲೇ 0ೋಚನೆ ಮಾಡತಿದ್ದೆ. ಅವ್ವ ಅಟ್ಟೇ ಅಲ್ಲ ಬಾಜೂ ಮನಿ ಸಿನಿಂಗವ್ವನೂ ಖಾರಾ ಕುಟ್ಟಾಗ ಉಶ್.. ಉಶ್.. ಅಂತ ಅನ್ನೋದನ್ನು ಕೇಳಿದ್ದೆ. ಬಹುಷ ಇದೊಂಥರಾ ರಿದಿಮ್ ಇದ್ದಂಗ ಅಂದ್ಕೊಂಡೆ. ಬೀಸೂಕಲ್ ಆದರೆ ಹಾಡ ಹೇಳಕೊಂತ ಅದರ ಬಾಯಿಗಿ ಕಾಳ ಹಾಕ್ತಾರ. ಖಾರಾ ಕುಟ್ಟಾಗ ಹಂಗಲ್ಲ ರಟ್ಯಾಗಿನ ಶಕ್ತಿ ಹೊಡತಾಗಿ ಮೆಣಸಿನಕಾಯಿ ಮೈಗಿ ಬೀಳಬೇಕು. ಅದು ಸಣ್ಣಾಗಬೇಕು. ಅದು ಸಣ್ಣಾಗಬೇಕಂತ ಹೇಳಿನೇ ಕಡಕ್ ಬಿಸಿಲಾಗ ವಾರಗಟ್ಟಲೇ ಒಣಗಸತಿದ್ದಳು. ಹಂಗ ಕುಟ್ಟೂ ಮುಂದ ಒಂದೊಂದು ಸಾರಿ ಹೊಡತ ತಪ್ಪಿ ವಳ್ಳಿನ ಬಾಯಿಗಿ ಬಿದ್ದಾಗ ಕಲ್ಲಿನ ಸೌಂಡ್ ಟಣ್ ಅಂತ ಬರತಿತ್ತು. ಆಗ ಆ ವಳ್ಳಿನ ಬಾಯೀದು ಕಲ್ಲಿನ ಚಕಳಿ ಏನಾದರೂ ಸಿಡೀತನೂ..? ಅನ್ನೂವಂಗ ಅವಾಜ್ ಕೇಳಸತಿತ್ತು. ಸವಕಾಶ ಬಾಗಿಲ ತಗದು ಹೊರಗ ಬಂದೆ. ಅವ್ವ ಉಶ್..ಉಶ್.. ಅನ್ಕೊಂತ ವಳ್ಳೊಳಗಿನ ಮೆಣಸಿನ ಕಾಯಿಗಿ ಬಡತ ಹಾಕತಿದ್ದಲು. ಅಕಿ ಹಣಿ ಮ್ಯಾಗ ನೀರ ಹನಿ ಸಾಲಗಟ್ಟಿದ್ವು. ಅವಾಗೊಮ್ಮ ಇವಾಗೊಮ್ಮ ಟಿಸಕ್.. ಟಸಕ್.. ಅಂತ ಸೀನು ಬರತಿದ್ವು. ಖಾರಾ ಸಣ್ಣ ಆಗೂ ಮಟ ಅವ್ವ ಹಂಗೇ ಉಶ್.. ಉಶ್..! ಅಂತ ಅದನ್ನ ಕುಟ್ಟೇ ಕುಟ್ಟತಿದ್ದಳು. ತುಸು ಹೊತ್ತಿನ ಮ್ಯಾಲ ಪುಡಿಖಾರ ರೆಡಿ ಆಗತಿತ್ತು. ಅದು ಬರೀ ಪುಡಿಕಾರ ಆದರೂ ಟೇಸ್ಟ್ ಅಂತಿಂಥದ್ದಲ್ಲ. ತುಸು ಗುಮ್ಮ ಇರೋ ಕಟಕ್ ರೊಟ್ಟೀ ಹೊಟ್ಯಾಗ ಅದನ್ನ ಹಾಕೊಂಡು, ಅದರ ನಡುವ ಒಂದು ಕುಳ್ಳಿ ಮಾಡಿ, ಅದರೊಳಗ ಒಂದೀಟು ಕುಸುಬೀ ಎಣ್ಣಿ ಜಾರಸಕೊಂಡು ಕಲಸಿ ಹೊಡತಾ ಹೊಡತರ ಅದರ ರುಚಿನೇ ಬ್ಯಾರೆ. ಅವ್ವ ಗಂಟೆಗಟ್ಟಲೆ ಹಂಗೇ ಉಶ್..! ಉಶ್..! ಅಂತ ಕುಟ್ಟಿದ್ದರ ನೆನಪು ಮೂರು ದಶಕದ ಮ್ಯಾಲ ಅವತ್ತೊಂದಿನ ಧಾರವಾಡದೊಳಗಿನ ಹಳಿ0ಾಳ ರಸ್ತೆ0ೊಳಗಿರೋ ಖಾರಾಕುಟ್ಟೊ ದುಖಾನದೊಳಗ ಇದ್ದಕ್ಕಿದ್ದಂಗ ತೇಲಿ ಬಂದಂಗ ಆಗಿತ್ತು.

********************

ಊರಿನ ಸಂಪರ್ಕ ಕಡಕೊಂಡು ಅದಾಗಲೇ ಎರಡು ದಶಕಗಳೇ ಆಗಿದ್ವು. ನಾನು ಧಾರವಾಡದ ಖಾಸಗಿ ಹೈಸ್ಕೂಲ್ ಒಂದರಲ್ಲಿ ಶಿಕ್ಷಕನಾಗಿ ನೌಕರಿ ಮಾಡತ್ತಿದ್ದೆ. ಅವ್ವ ಇರೋಮಟ ಊರಿಂದ ಖಾರಾ ಕುಟ್ಟಿಸಿಕೊಂಡು ತರೂದಿತ್ತು. ಅಕಿ ಹೋದ ಮ್ಯಾಲ ನನಗೂ ಅದ್ಯಾಕೋ ಮತ್ತ ಖಾರಕ್ಕಾಗಿ ಊರಮಟ ಹೋಗೂದು ಸರಿ ಅನಿಸಿರಲಿಲ್ಲ. ಹಿಂಗಾಗಿ ಅಂಗಡಿ0ೊಳಗ ಸಿಗೋ ರೇಡಿಮೇಡ್ ಖಾರಾ ನಂಬಕೊಂಡು ದಿನಾ ದೂಡತಾ ಇದ್ವಿ. ನನ್ನ ಹೆಂಡತಿ ವಿನುತಾ ಪಕ್ಕಾ ರೇಡಿಮೇಡ್ ಕಾಲದವಳು. ಅವಳಿಗೆ ಈ ಹಾರೆ.. ವಳ್ಳು.. ಉಶ್.. ಉಶ್ ಅಂತ ಖಾರಾ ಕುಟ್ಟೂದು.. ಟಿಸಕ್ ಅಂತ ಸೀನೂದು ಎಲ್ಲವೂ ಒಂದು ಔಟ್ಡೇಟೇಡ್ ಕಥೆ ತರಾ, ನಾನೂ ಬಾಳ ತಲಿ ಕೆಡಿಸಿಕೊಂಡಿರಲಿಲ್ಲ. ಕಿರಾಣಿ ಅಂಗಡಿಗಿ ಹೋದಾಗ ಎಲ್ಲಾ ಐಟೆಂಗಳ ಜೋಡಿ ಖಾರದ ಪಾಕೀಟೂ ಒಂದನ್ನು ತಂದು ಬಿಡತಿದ್ದೆ. ನನ್ನ ಮಗ ನವೀನಗಂತೂ ಖಾರಾನೇ ಬೇಕಾಗಿಲ್ಲ. ಅವನು ಎಷ್ಟೇ ಆಗಲಿ ಪಕ್ಕಾ ಹೈಬ್ರಿಡ್ ಸಂತಾನ. ಅಂತೂ ಇಂತೂ ಕಾರಾ ಕುಟ್ಟೋ ಅವಾಜ್ ಕೇಳದೇ ಸುಮಾರು ಇಪ್ಪತ್ತು ವರ್ಷಗಳೇ ಆಗಿತ್ತು. ಆ ಉಶ್..ಉಶ್.. ಅನ್ಕೋಂತೇ ಬೀಳುವ ಹೊಡೆತ, ಅಲ್ಲಿರೋ ರಿದಿಮ್ ಇದ್ಯಾವದೂ ಈಗ ಇಲ್ಲ. ಕೆಂಪು ಮೆಣಸಿನಕಾಯಿ ಚಿತ್ರ ಇರೋ ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ಈಗ ಖಾರಪುಡಿ ಎಲ್ಲೆಂದರಲ್ಲಿ ಸಿಗೋದಂತೂ ಹೌದು. ಅವತ್ತೊಂದಿನ ದೂರದರ್ಶನದಲ್ಲಿ ಈ ಖಾರಪುಡಿ0ುಲ್ಲಿ ಕಲಬೆರಕೆ0ು ಬಗ್ಗೆ ಒಂದು ವಿಶೇಷ ವರದಿ ಬರಾಕತ್ತಿತ್ತು. ನನ್ನ ಹೆಂಡತಿ ಕಿವಿ ಬಾಳ ನೇಟಾಗಿದ್ವು. ಅಂಗಡಿ0ೊಳಗ ಸಿಗೋ ಅಡ್ನಾಡಿ ಬ್ರ್ಯಾಂಡನ ಖಾರಪುಡಿ0ೊಳಗ ಅದೇನೋ ಸುಡಾನ್ ಅನ್ನೋ ಸುಡಗಾಡು ಕೆಮಿಕಲ್ ಹಾಕ್ತಾರ ಅದರಾಗ ಕೈ ಇಟ್ಟರೂ ಕ್ಯಾನ್ಸರ್ ಬರೋ ಚಾನ್ಸ್ ಜಾಸ್ತಿ ಅನ್ನೋ ಸುದ್ಧಿ ಮತ್ತ ಮತ್ತ ತೋರಿಸಿದ್ದೇ ನನ್ನ ಹೆಂಡತಿಗಿ ಅದೆಷ್ಟು ತ್ರಾಸ್ ಆಗತೈತಿ ಆಗಲಿ ಖಾರಾ ಕುಟ್ಟಿಸಿ0ೆು ಬಿಡೋದು ಅಂತ ಪಟ್ಟು ಹಿಡದಳು. ನಾನು ‘ಇದು ನಿನಗೆ ನೀಗೋ ಮಾತಲ್ಲ ಕುಟ್ಟೋದು ದೂರ ಉಳಿತು ಅದಕ್ಕ ಏನೇನು ಎಚ್ಚ ಹಾಕಬೇಕು ಅನ್ನೂದು ಸೈತ ನಿನಗ ಗೊತ್ತಿಲ್ಲ’ ಅಂದ ಮೇಲೂ ನಾನು ಕುಟ್ಟಿಸಿ0ೆು ತೀರವಳು ಅಂತ ಪಟ್ಟು ಹಿಡಿದಳು. ಬಜಾರದಾಗ ಮೆಣಸಿನಕಾಯಿ ತಗೊಳೋಮುಂದ ಅದನ್ನು ಮಾರೋ ಒಬ್ಬಳು ಅಜ್ಜೀಗಿ ‘ಈ ಖಾರಾ ಕುಟ್ಟಾಕ ಏನೇನು ಹಾಕ್ತಾರ’ ಅಂತ ನನ್ನ ಹೆಂಡತಿ ಕೇಳೂದು ನೋಡಿ ಅಕಿ ನಕ್ಕೊಂತೇ ‘ಅ0್ಯು ತಂಗಿ, ಅದರಾಗ ಏನೈತಿ..?’ ಅಂತ ಎಲ್ಲಾ ಮಾಹಿತಿ ಸವಿವರವಾಗಿ ನೀಡಿದ್ದಳು. ನನ್ನ ಹೆಂಡತಿಗೋ ದೊಡ್ಡ ಸುಗ್ಗಿ. ಆ ಮುದುಕಿ ಹೇಳಿದ್ದನ್ನೆಲ್ಲಾ ಖರೀದಿ ಮಾಡಿ ತಂದು ಮನ್ಯಾಗ ಕುಂತು ಮೆಣಸಿನಕಾಯಿ ತುಂಬ ಕಡಿ0ೋಮಟ ಅಕಿ ಕಣ್ಣಾನ ನೀರ ಕಪಾಳಕ ಬಂದಂಗ ಆಗಿತ್ತು. ಇಟ್ಟೆಲ್ಲಾ ಮಾಡಿ ಆದ ಮೇಲೆ ಕುಟ್ಟಸಲಿಕ್ಕ ನಾನೇ ಹೋಗೂದಂತ ಠರಾವು ಆ0ು್ತು. ಧಾರವಾಡದ ಹಳಿ0ಾಳ ರೋಡಲ್ಲಿ ಊರ ಹೊರಗ ಒಂದು ಖಾರಾ ಕುಟ್ಟೊ ಮಶೀನ ಇದ್ದಿದ್ದು ನಾನು ಒಂದು ಬಾರಿ ವಾಕಿಂಗ್ ಹೋದಾಗ ನೋಡಿದ್ದೆ. ಹಂಗಂತ ಹೇಳಿ ನಾನೇ ಕೈ ಕೊಟ್ಟು ಹಗ್ಗ ಕಟ್ಟಿಸಿಕೊಂಡಂತಾಗಿತ್ತು. ಆ ದಿನ ನಾನು ವಾಕಿಂಗ್ ಹೋದಾಗ ಒಬ್ಬಳು ಲಟ್ಟಾ ಹೆಣ್ಣಮಗಳು ಆ ಖಾರಾ ಕುಟ್ಟೂ ಗಿರಣೀಮುಂದ ಕುತಗೊಂಡಿದ್ದಳು. ನನಗ ಅಕಿ ನೆನಪಾಗಿ ಮೆಣಸಿನಕಾಯಿ ಚೀಲ ತಗೊಂಡು ನಡದೆ. ಖಾರಾ ಕುಟ್ಟೊ ಗಿರಣಿ ಸನ್ಯಾಕ ಬಂದಿದ್ದೇ ಕಟ್..ಕಟ್ ಅಂತ ಹೊಡೆತ ಬೀಳೋ ಅವಾಜ ಕೇಳಸತಿತ್ತು. ಅಂತೂ ಗಿರಣಿ ಚಾಲೂ ಐತಿ ಅಂತ ಗಡಬಡಿಸಿ ಒಳಗ ನಡದೆ. ಒಂದೇ ಸಾರಿ ಎರಡು ಮೂರು ಸೀನಗೊಳು ಒಂದರ ಬೆನ್ನಿಗೆ ಒಂದು ಆಕ್ಷೀಂ.. ಆಕ್ಷೀಂ.. ಅಂತ ಆ ಘಾಟಿಗೆ ಹೊರಗ ಜಿಗದ್ವು. ಆ ಖಾರಾ ಕುಟ್ಟೊ ಹೆಣಮಗಳು ಮೂಗು ಬಾಯಿ ಮುಚ್ಚಿ ಎಚ್ 1, ಎನ್ 1 ಇನ್ನೂ ಬೆನ್ನ ಬಿಟ್ಟಿಲ್ಲ ಅನ್ನೂವಂಗ ಬಟ್ಟೆ ಕಟ್ಟಿದ್ದು 0ಾಕ ಅಂತ ಗೊತ್ತಾಯಿತು. ಅಕಿನ ಎರಡೂ ಕೈಗಳು ಒಂದೇ ಸವನೆ ಬ್ಯುಜಿ ಇದ್ವು. ವಳ್ಳಾಗಿನ ಖಾರಾ ಸರಸ್ಯಾಡಕೊಂತ ಅದು ಸಣ್ಣಾಗಲಿಕ್ಕ ಕಸರತ್ತ ಮಾಡತಿದ್ದಳು. ನನ್ನನ್ನ ನೋಡಿದ್ದೇ ಕಣ್ಣಾಗೇ ಎನು..? ಅಂತ ಕೇಳದಳು. ನಾನು ಜೋರಾಗಿ ‘ ಖಾರಾ ಕುಟ್ಟಬೇಕು’ ಅಂದೆ. ಅವಳಿಗೆ ಕೇಳಸಲೇ ಇಲ್ಲ. ಆ ಎರಡೂ ಮಸೀನ್ ಹಾರೆಗಳು 0ಾವದೇ ಉಶ್.. ಉಶ್.. ಅನ್ನೋ ಅವಾಜ್ ಇಲ್ಲದೇ ದಡಲ್.. ದುಡಲ್… ಅಂತ ಹೊಡತ ಹಾಕತಿದ್ವು. ಆ ಗದ್ದಲದಾಗ ಅಕಿಗೆ ಕೇಳಸೋದಿಲ್ಲ ಅಂತ ನನಗ ಗೊತ್ತಾಗಿ ಅಕಿ ಕಿವಿ ಸಮೀಪ ಹೋಗಿ ಜೋರಾಗಿ ‘ಖಾರಾ ಕುಟ್ಟಬೇಕು’ ಅಂದೆ. ಆಗವಳು ಅಲ್ಲಿಂದ ಹಗೂರಕ ಎದ್ದು ಆಪರೇಶನ್ ಥೇಟರಿಂದ ಹೊರಗ ಬಂದು ಡಾಕ್ಟರ್ ಬಾಯಿ ಗ್ಲೌಸು ತಗಿ0ುೂ ಥರಾ ತನ್ನ ಬಾಯಿಗೆ ಬಿಗಿದ ಬಟ್ಟೆ ತೆಗೆದು ನನಗೆ ಗೋಡೆ ಮೇಲಿರುವ ಬೋಡರ್್ ತೋರಿಸಿ ಕೆಂಪು ಬಟನ್ ಒತ್ತು ಅಂತ ಇಶಾರೆ ಮಾಡದಂಗಿತ್ತು. ನಾನು ತಟ್ಟನೇ ಕೆಂಪು ಬಟನ್ ಒತ್ತಿದೆ. ಚಡಪಡಿಸಿ ಕುಟ್ಟುತ್ತಿದ್ದ ದೆವ್ವಿನಂಥಾ ಎರಡೂ ಹಾರೆಗಳು 0ುುದ್ಧ ವಿರಾಮ ಘೋಷಿಸಿದಂತೆ ತುಸು ಹೊತ್ತು ಸೈಲೆಂಟ್ ಆದವು. ‘ಹೇಳ್ರಿ ಏನಾಗಬೇಕು..?’ ಅಂತ ಆ ಹೆಂಗಸು ತನ್ನ ಗಡಸು ಧ್ವನಿಯಿಂದ ಕೇಳದಳು. ‘ ಖಾರಾ ಕುಟ್ಟೂದಿತ್ತು’ ‘ತುಸು ತಡ ಆಗತೈತಿ’ ‘ಎಷ್ಟು ತಡ..?’ ‘ಈಗ ಹಾಕಿದರೆ ಮುಗಿಬೇಕಲ್ಲರೀ..?’ ‘ ಅದನ್ನೇ ಕೇಳಾಕತ್ತೀನಿ ನಾನೂ ಎಷ್ಟು ಹೊತ್ತು..?’ ‘ ಹೆಚ್ಚೂ ಕಮ್ಮಿ ಅರ್ಧ ಘಂಟೆ ಆಗತೈತಿ’ ‘ ಹಂಗಂದ್ರ ಅಡ್ಡಿಯಿಲ್ಲ ನಾ ಹೋಗಿ ಬತರ್ಿನಿ’ ‘ಎಲ್ಲಾ ತಂದೀರಿಲ್ಲೋ..?’ ‘ ಆ ಚೀಲ್ದಾಗ ಅದಾವ ನೋಡ್ರಿ’ ಅಕಿ ಚೀಲದೊಳಗಿನ ಸಣ್ಣ ಸಣ್ಣ ಪ್ಲಾಸ್ಟಿಕ್ ಪೊಟ್ಟಣ ತಗದು ನೋಡದಳು. ಅದರೊಳಗಿರೋ ಬಳ್ಳೊಳ್ಳಿ.. ಕರಿಬೇವು.. ಎಣ್ಣಿ.. ಕೊತಂಬರಿಬೀಜ ಏನೇನು ಅದಾವ ಅಂತ ನೋಡಿ, 0ಾವದೋ ಒಂದು ಐಟೆಂ ಸಿಗಾಕತ್ತಿಲ್ಲ ಅನ್ನೂವಂಗ ಹಣೆಗೆ ಗಂಟ ಹಾಕಿ ಹುಡಕ್ಕೊಂತ ಆ ಹೆಂಗಸು ‘ಉಪ್ಪು ಮತ್ತ ಎಣ್ಣಿ ಕಾಣಾಕತ್ತಿಲ್ಲ’ ಅಂದಳು. ‘ಅಡೂಡಿ0ೊಳಗ ನನ್ನ ಹೆಂಡತಿಗಿ ನೆನಪಾಗಿರಲಿಕ್ಕಿಲ್ಲ ಆ0ು್ತು ನಾನು ಹೋಗಿ ತಗೊಂಡು ಬತರ್ಿನಿ’ ಅಂದೆ ‘ ಮತ್ತೆಲ್ಲಿ ಹೋಗ್ತೀರಿ, ನನ್ನ ಬಳಿ ಐತಿ ಹಾಕ್ತೀನಿ ತಗೋರಿ’ ಅಂದಳು. ‘ ಬ್ಯಾಡ ಬ್ಯಾಡ ನಾ ತಗೊಂಡು ಬತರ್ಿನಿ’ ಅಂತ ನಡದೇ ಬಿಟ್ಟೆ ಮನೆಗೆ ಹೋಗಬೇಕಂದ್ರ ದೂರ, ಅಲ್ಲೇ ಹತ್ತಿರದಲ್ಲೇ ಒಂದು ಕಿರಾಣಿ ಅಂಗಡಿ ಇತ್ತು ಅಲ್ಲಿಗೆ ಹೋಗಿ ‘ಒಂದು ಪಾಕೆಟ್ ಉಪ್ಪು ಕೊಡ್ರಿ’ ಅಂದದ್ದೇ ಆ ಮನುಷ್ಯ ‘ಸಂಜಿ ಮುಂದ ಉಪ್ಪ ಕೊಡುವಂಗಿಲ್ಲರೀ’ ಅಂತ ಖಡಕ್ಕಾಗಿ ಹೇಳಿಬಿಟ್ಟ. ಬಹುಷ: ಅವನು ಹಿಂಗೇ ಹೇಳ್ತಾನ ಅಂತ ಆ ಹೆಂಗಸಿಗೆ ಗೊತ್ತಿತ್ತು ಅಂತ ಕಾಣತೈತಿ ಅದಕ್ಕೇ ಅವಳು ‘ಇಲ್ಲೇ ಐತಿ ಹಾಕ್ತೀನಿ’ ಅಂದಿರಬೇಕು ಅಂತ ತಿರುಗಿ ಗಿರಣಿಕಡೆ ಹೊರಳದೆ. ಅಟೊತ್ತಿಗಾಗಲೇ ಸೂ0ರ್ಾ ಮುಳುಗಿ ಮಬ್ಬ ಕವಿದಿತ್ತು. ಆ ಖಾರಾ ಕುಟ್ಟೊ ಹೆಣಮಗಳು ಲಗೂಲಗೂನೇ ಸವರಸೂದು ನೋಡಿ ಇವಳು ನನ್ನ ಖಾರಾ ಇವತ್ತು ಕುಟ್ಟಲಿಕ್ಕಿಲ್ಲ.. ಅದೂ ಅಲ್ಲದೇ ನಾ ಅವಳಿಗೆ ಉಪ್ಪು ಹಾಕತೀನಿ ಅಂದರೂ ಬ್ಯಾಡ ಅಂದಿದ್ದೆ. ಏನು ಅಬ್ಬಬ್ಬ ಅಂದರೂ ಒಂದೈದು ರೂಪಾಯಿ ಹೆಚ್ಜಿಗಿ ಕೊಟ್ಟರ ಆಗತಿತ್ತು ಅನ್ಕೋಂತ ಹಗೂರಕ ಖಾರಾ ಕುಟ್ತೂ ಹೆಂಗಸಿನ ಸನ್ಯಾಕ ಬಂದು ‘ಆ ಅಂಗಡಿ0ುಂವ ಸಂಜೀಮುಂದ ಉಪ್ಪ ಕೊಡಲ್ಲಂತ, ಮನಿಗೋಗಿ ತಗೊಂಡು ಬರಲೆನೂ..?’ ‘ 0ುಪ್ಪಾ, ಮೊದಲೇ ತಡ ಆಗೈತಿ ನನ್ನ ಮನಿ ಏನು ಇಲ್ಲೇ ಬಾಜೂದಾಗ ಇಲ್ಲ ಕೆಲಗೇರಿಗಿ ಹೋಗಬೇಕು’ ‘ ಈಗ ಹ್ಯಾಂಗೂ ಅವರದು ಮುಗಿತಲ್ಲ..’ ‘ ಅದನ್ನ ತಗದು ಸೋಸಿ ತುಂಬೂಮಟ ಇನ್ನೂ ಅರ್ಧಗಂಟೆ ಆಗತೈತಿ’ ‘ ಆಗಲಿ ಮುಗದ ಮ್ಯಾಲರೇ ಹಾಕರಿ’ ‘ ಒಂದು ಮುಂಜಾನೆನೇ ಕುಂತರತಿನೋ 0ುಪ್ಪಾ..! ಸೊಂಟ ಅನ್ನೂದು ಸೆಟದಂಗ ಆಗೈತಿ’ ‘ಹಂಗ ಮಾಡಬ್ಯಾಡಬೇ.. ಇರೂದೇ ಒಂದು ಕಿಲೋ ಐತಿ. ಅವರಂಗ ಏನು ಐದು ಕಿಲೋ ಐತಾ..?’ ಅಂತ ಈಗಾಗಲೇ ಅಲ್ಲಿ ಖಾರಾ ಕುಟ್ಟಿಸಿ ಗಂಟ ಕಟ್ಟೂ ಹೆಣಮಗಳ ಕಡಿ ನೋಡಿ ಹೇಳಿದ್ದಕ ಆ ಹೆಂಗಸು ನನ್ನ ಕಡೆ ತಿರುಗಿ ನೋಡಿ ‘ ಆ0ು್ತು ಅವರೊಬ್ಬರದೇ ಅಲ್ಲಬೇ ಹಾಕಿ ಕೊಡು’ ಅಂದದ್ದೇ ಆ ಹೆಂಗಸು ‘ಉಶ್ಪಾ’ ಅನ್ಕೋಂತ ಎದ್ದವಳೇ ತುಸು ಹೊರಗ ಹೋಗಿ ಮೈ ಕೈ ಸಡಿಲು ಮಾಡಕೊಂಡು ಬಂದಳು. ಮೆಣಸಿನಕಾಯಿ ಚೀಲದೊಳಗ ಕೈ ಹಾಕಿ ‘ ನೋಡ್ರಿ, ನಿಮ್ಮದು ಕುಟ್ಟೂದಕ ಬಂದಿಲ್ಲ, ಇನ್ನಾ ಮೆಣಸಿನಕಾಯಿ ತುಸು ನರಮ್ ಅದಾವ. ಸರೀ ಮಾಡಿ ಒಣಗಿಸಿಕೊಂಡು ಬರಬೇಕಿತ್ತು ಇಲ್ಲಾಂದ್ರ ಬಾಳ ಟೈಮ್ ತಿಂತೈತಿ’ ‘ ಅದು ಹ್ಯಾಂಗ ಆಗತೈತಿ ಆಗಲಿ ಕುಟ್ಟಿ ಕಳಿಸಿಬಿಡು’ ‘ಆ0ು್ತು ತಗೊರಿ ನನಗೇ ತುಸು ಲೇಟ್ ಆದರ ಆಗಲಿ, ನಿಮ್ಮ ಖಾರಾ ಕುಟ್ಟೇ ಕಳಸತೀನಿ ಅಂತ ಅಕಿ ಕುಂತಿದ್ದೇ ನಾ ತುಸು ಹಗರಾಗಿದ್ದೆ. ಮೊದಲೇ ಅವಳು ಅಗಲ ಹೆಣಮಗಳು. ಅವಳಿಗೆ ಕೂಡಲಾಕೂ ಬಾಳ ಪೈಸಾದ ಜಾಗಾ ಬೇಕಿತ್ತು. ಅಷ್ಟಕ್ಕೂ ಅದು ಮಶೀನ್ ಹಾಂ ಅನ್ನೂದರೊಳಗ ಕುಟ್ಟಿ ಪುಡಿ ಮಾಡತೈತಿ ಎರಡೂ ಕಡಿ ವಳ್ಳಾಗ ಅಷ್ಟ್ಟಷ್ಟು ಮೆಣಸಿನಕಾಯಿ ಹಾಕಿ, ಮ್ಯಾಲ ತುಸು ಉಪ್ಪ ಹಾಕಿ, ಹವೇಜ ಹಾಕದಳು ನನ್ನ ಕಡೆ ಹೊರಳಿ ‘ ಅಪ್ಪಾರ ಆ ಹಸರ ಬಟನ್ ಒತ್ತರಿ’ ಅಂದಳು. ನಾನು ತೀರಾ ಹುರುಪಲೇ ಬಟನ್ ಒತ್ತಿದ್ದೇ ತಡ ಕರಂಟ್ ಪಟ್ಟಂತ ಮಂಗ ಮಾ0ು ಆಗಿ ಇಡೀ ಗಿರಣೀನ್ನ ಕತ್ತಲ ನುಂಗದಂಗ ಆ0ು್ತು. ಆ ಹೆಂಗಸು ನಕ್ಕೊಂತ ‘ ಇವತ್ತು ನಿಮ್ಮ ಖಾರಾ ಕುಟ್ಟೂದು ಆಗೂದಿಲ್ಲ ತಗೋರಿ. ನೀವು ಕೈ ಹಚ್ಚಿದಿರಿ ಕರಂಟೇ ಹೋ0ು್ತು’ ಅಂದಳು. ನನಗೂ ತಿರುಗಿ ಏನು ಮಾತಾಡಬೇಕು ಅಂತ ಗೊತ್ತಾಗಲಾರದೇ ‘ಈಗೇನು ಕರೆಂಟ್ ಬಾಳ ಹೊತ್ತು ಹೊಕ್ಕಾವೇನು..?’ ‘ ಅವುಕರದೇನು ರವ್ವ ಇಲ್ಲ ಬಿಡ್ರಿ. ಬಂದರ ಬಂದ್ವು ಇಲ್ಲಾಂದ್ರ ಇಲ್ಲೇ ಇಲ್ಲ. ಸುಮ್ಮ ನಾಳೆ ಸಂಜೀಕಿ ಬರ್ರಿ ಚುಲೋತನಗೆ ಕುಟ್ಟಿ ಕೊಡತೀನಿ ಈಗಂತೂ ನಾ ನಿಲ್ಲೂದಿಲ್ಲ ಮನಿಗಿ ಹೊಂಟೆ’ ಅಂತ ಹಗೂರಕ ಮೊಣಕಾಲ ಮ್ಯಾಲ ಕೈ ಊರಿ ಮ್ಯಾಲ ಎದ್ದವಳೇ ಬಾಗಿಲ ಹಾಕೇ ಬಿಟ್ಟಳು. ‘ನೀವೇನೂ ಕಾಜೀ ಮಾಡಬ್ಯಾಡ್ರಿ ಮುಂಜಾನೆ ಬಂದಕಿನೇ ನಿಮ್ಮ ಖಾರಾ ಕುಟ್ಟೇ ಮುಂದಿನ ಪಾಳಿ’ ಅನ್ಕೊಂತ ತನ್ನ ಲಟ್ಟಾ ಮೈ ಹೊರಳಿಸಕೋಂತ ಕತ್ತಲಲ್ಲಿ ಕಳಕೊಂಡೇ ಬಿಟ್ಟಳು. ಅವ್ವ ಖಾರಾ ಕುಟ್ಟೂಮುಂದ ಹಿಂಗ ಕರೆಂಟಿನ ಹಂಗಿರಲಿಲ್ಲ. ಹಂಗ ನೋಡದರ ಅದೇ ಚುಲೋ ಇತ್ತು. ನನ್ನ ಹೆಂಡತಿಗೆ ಇಟ್ಟೆಲ್ಲಾ ಕಟಿಬಿಟಿ ಮಾಡಿಸಿ, ಖಾರಾ ಕುಟ್ಟಿಸಿ ತಿನಬೇಕು ಅಂತ ಆಸೆ ಆಗಿತ್ತು. ಕರೆಂಟ್ ನೋಡದರ ಹಿಂಗ ಆ0ು್ತು ಅನ್ಕೊಂತ ಮನಿ ಗೇಟ್ ತಗಿ0ುೂದರೊಳಗ ಹೊರಗಿನ ಲೈಟ್ ಝಗ್ ಅಂತ ಬೊಗಸೀ0ೊಳಗ ಬೆಳಕ ತುಂಬಕೊಂಡು ಮುಖದಮ್ಯಾಲ ಚೆಲ್ಲದಂಗ ಆ0ು್ತು. ಹೆಂಡತಿ ನಾನು ಬರೀಗೈಯಿಂದ ಬಂದಿದ್ದು ನೋಡಿ ಬಾಳ ಖಾರ ಆಗಿದ್ದಳು.]]>

‍ಲೇಖಕರು G

September 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು ನದಿ

ಅವಳು ನದಿ

ಅಂಜನಾ ಗಾಂವ್ಕರ್ ಜುಳುಜುಳು ಸಂಗೀತ ಹಾಡುತ್ತ ಬೆಳ್ಳಿಯ ಕರಗಿಸಿ ಹರಿಸಿದಂತೆ ಹರಿಯುತ್ತಿರುವ ಹೊಳೆಯುತ್ತಿರುವ ಹಳ್ಳದಲ್ಲಿ ನಟ್ಟ ನಡುವಿನ ಬಂಡೆಯ...

ಕಡಲಂತರಾಳವ ಬಲ್ಲವರಾರು?

ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This