ಈ ದಿನ ಕಡೆಯ ದಿನ..ವೋಟಿಂಗ್ ಮಾಡಿ

ನಮಗೆ ಬಂದ 130 ಕ್ಕೂ ಹೆಚ್ಚು ಮುಖಪುಟಗಳಲ್ಲಿ ಅಂತಿಮ ಸುತ್ತನ್ನು ತಲುಪಿದವು 30. ಈ ಎಲ್ಲಾ ಮೂವತ್ತು ಮುಖಪುಟಗಳನ್ನು ನೋಡಲು ಹಾಗೂ ಮತ ಚಲಾಯಿಸಲು ಭೇಟಿ ಕೊಡಿ (ಅಪಾರ- unlimited) ಇವನ್ನು ಆರಿಸಿಕೊಟ್ಟವರು ಈ ಸಲದ ಛಂದಪುಸ್ತಕ ಮುಖಪುಟ ವಿನ್ಯಾಸ ಸ್ಪರ್ಧೆಯ ತೀರ್ಪುಗಾರರಾದ ಕತೆಗಾರ ಜಯಂತ ಕಾಯ್ಕಿಣಿ. ತಮ್ಮ ಅಪರೂಪದ ಕಲಾಪ್ರಜ್ಞೆಯಿಂದ ಕನ್ನಡಕ್ಕೇ ಹೊಸತೆನಿಸುವಂತೆ ಭಾವನಾದ ಪುಟಗಳನ್ನು ರೂಪಿಸಿದ ಜಯಂತ್‌ ತೀರ್ಪುಗಾರರಾಗಿರುವುದು ನಮಗೆ ಸಂತಸ.

ಈ ಮೂವತ್ತರಲ್ಲಿ ಒಂದನ್ನು ಜಯಂತ್‌ ಬಹುಮಾನಕ್ಕಾಗಿ ಆರಿಸಿಕೊಡಲಿದ್ದಾರೆ. ಅಷ್ಟರೊಳಗೆ ನಿಮಗೊಂದು ಆಕರ್ಷಕ ಸ್ಪರ್ಧೆಯೂ ಇದೆ. ಈ ಮುಖಪುಟಗಳಲ್ಲಿ ಯಾವುದಕ್ಕೆ ಬಹುಮಾನ ಸಿಗಬಹುದು ಎಂದು ಊಹಿಸಿ. ಛಂದಪುಸ್ತಕ ಮತ್ತು ಮೇಫ್ಲವರ್‌ ಮೀಡಿಯಾ ಹೌಸ್‌ ವತಿಯಿಂದ ೧೦೦೦ ರೂ ಮೌಲ್ಯದ ಬಹುಮಾನ ಗೆಲ್ಲಿರಿ.
ನಿಯಮಗಳು ಹೀಗಿವೆ: ನಿಮ್ಮ ಆಯ್ಕೆಯ ಮುಖಪುಟದ ಸಂಖ್ಯೆಯನ್ನು ನಿಮ್ಮ ಕಾಮೆಂಟ್‌ನಲ್ಲಿ ಸೂಚಿಸಿ. ಪ್ರತಿ ಮುಖಪುಟವನ್ನು ಅದರ ಬಲ ಮೇಲ್ತುದಿಯಲ್ಲಿರುವ ಸಂಖ್ಯೆಯಿಂದ ಗುರುತಿಸಬಹುದು. ಕಾಮೆಂಟ್‌ ಹಾಕುವಾಗ ನಿಮ್ಮ ಬ್ಲಾಗ್‌ ಐಡಿ ಬಳಸಿ. ಅಥವಾ ಬ್ಲಾಗ್‌ ಇಲ್ಲದಿದ್ದರೆ ಇಮೇಲ್‌ ಐಡಿ ಕೊಡಿ. ಒಬ್ಬರು ಒಂದೇ ಮುಖಪುಟ ಆಯ್ಕೆ ಮಾಡಲಿ ಎಂಬುದಕ್ಕಾಗಿ ಈ ನಿಯಮ. ನಿಮ್ಮ ಕಮೆಂಟ್‌ನಲ್ಲಿ ಒಂದು ಮುಖಪುಟವನ್ನು ಮಾತ್ರ ಸೂಚಿಸಿ. ಹೆಚ್ಚು ಮುಖಪುಟಗಳನ್ನು ಸೂಚಿಸಿದರೆ ಅನರ್ಹಗೊಳ್ಳುತ್ತೀರಿ ಎಂಬುದು ನೆನಪಿರಲಿ.
ಎಲ್ಲ ವಿಷಯಗಳಲ್ಲೂ ಛಂದಪುಸ್ತಕದ್ದೇ ಅಂತಿಮ ತೀರ್ಮಾನ. ಬರುವ ಶನಿವಾರದವರೆಗೆ ಮಾತ್ರ ಅವಕಾಶ. ಭಾನುವಾರ ಫಲಿತಾಂಶ ಪ್ರಕಟ. ಗುಡ್‌ಲಕ್‌!

‍ಲೇಖಕರು avadhi

January 16, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

5 ಪ್ರತಿಕ್ರಿಯೆಗಳು

 1. Vijaylaxmi

  ನನ್ನ ಆಯ್ಕೆ 25.. ಎಲ್ಲಾ ಚಿತ್ರಗಳು ತುಂಬಾ ಚೆನ್ನಾಗಿವೆ,

  ಪ್ರತಿಕ್ರಿಯೆ
 2. ಸಂಶಯಾತ್ಮಾ

  ಛಂದ ಮುಖಪುಟ ಸ್ಪರ್ಧೆಗೆ ಅದ್ಭುತ ಎನ್ನಿಸುವಂತಹ ಪ್ರತಿಕ್ರಿಯೆ ಬಂದಿರುವುದು ಸ್ವಸ್ಥ ಸಾರಸ್ವತ ಲೋಕದ ಸಂಕೇತ. ಇಂತಹ ಸ್ಪರ್ಧೆಯನ್ನು ಆಯೋಜಿಸಿದ ಛಂದ ನಿಜಕ್ಕೂ ಅಭಿನಂದನಗೆ ಅರ್ಹ.
  ಆದರೂ……………. ಕೊನೆಯ 30 ಮುಖಪುಟಗಳನ್ನು ನೋಡಿದಾಗ ನನಗೆ ಬಂದ ಪ್ರಶ್ನೆಗಳು ಇವು.
  1. ಟೈಟಲ್ ಹಾಗೂ ಲೇಖಕರ ಹೆಸರನ್ನು ಇಂಗ್ಲೀಷ್ ನಲ್ಲಿ ಬರೆಯಲು ಅನುಮತಿಯಿತ್ತೆ?
  2. ಕೆಲವೊಂದು ಮುಖಪುಟದಲ್ಲಿ ಲೇಖಕರ ಹೆಸರು ಇಲ್ಲ. ಹೀಗಿದ್ದರೂ ಅದು ಟಾಪ್ 30 ಯಲ್ಲಿ ಹೇಗೆ ಬಂತು? ಡಿಸೈನ್ ಅಷ್ಟೇ ಮಾನದಂಡವೆ?
  3. ಕೆಲವು ಪುಸ್ತಕಗಳಲ್ಲಿ ವ್ಯಕ್ತಿಯೊಬ್ಬ ಕೂತಿರುವ ರೀತಿಯ ಲೋಗೋ ಬಳಸಲಾಗಿದೆ. ಇದು ಕೆಲವುದರಲ್ಲಿ ಇಲ್ಲ. ಈ ರೀತಿಯ ಲೋಗೋ ಕಡ್ಡಾಯವಾಗಿತ್ತೆ?
  4. ಒಂದು ವೇಳೆ ಲೇಖಕರ ಹೆಸರು ಇಲ್ಲದ ಕವರ್ ಪೇಜ್ ಗಳು ಪ್ರಶಸ್ತಿ ಗೆದ್ದರೆ, ಪ್ರಶಸ್ತಿ ಘೋಷಿತವಾದ ಬಳಿಕ ಲೇಖಕರ ಹೆಸರನ್ನು ಮುಖಪುಟದಲ್ಲಿ ಹಾಕಾಲಾಗುವುದೆ ಅಥವಾ ಹಾಗೆಯೇ ಪ್ರಿಂಟ್ ಮಾಡಲಾಗುವುದೆ?
  5. ಕೊನೆಯದಾಗಿ, ಈ ಎಲ್ಲ ಅಂಶಗಳನ್ನು ಮೊದಲೇ ನಿಯಮಗಳಲ್ಲಿ ಏಕೆ ಸ್ಪಷ್ಟಪಡಿಸಲಾಗಿಲ್ಲ?
  ಈ ಪ್ರಶ್ನೆಗಳನ್ನು ಛಂದದ ಉತ್ಸಾಹಕ್ಕೆ ನೀರೆರಚುವ ಪ್ರಯತ್ನ ಎಂದೂ ದಯವಿಟ್ಟು ಯಾರೂ ಭಾವಿಸಬಾರದು. ಹಾಗೆಯೇ ಇಲ್ಲಿ ಛಂದದ ನಿರ್ಣಯವೇ ಅಂತಿಮವಾಗಿರುವುದರಿಂದ ಈ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕೆಂಬ ಕಡ್ಡಾಯವೇನೂ ಇಲ್ಲ…
  ಯಾರೊಡನೆಯೂ ನಿಷ್ಠುರ ಕಟ್ಟಿಕೊಳ್ಳಲು ಬಯಸುವುದಿಲ್ಲವಾದ್ದರಿಂದ ಕೇವಲ ‘ಅವಧಿ’ಗೆ ಮಾತ್ರ ಪರಿಚಯ ಹೇಳಿ, ನನ್ನ ಗುರುತನ್ನು ಗುಪ್ತವಾಗಿಡುತ್ತಿದ್ದೇನೆ. ಕ್ಷಮೆಯಿರಲಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: