-ನಟರಾಜ್ ಹುಳಿಯಾರ್
‘ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ’ನ ಸ್ಥಿತಿಯನ್ನು ನಿಷ್ಠುರ
ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ ತೀರ್ಥಹಳ್ಳಿಯವರ ಥರ ಹೇಳಿದವರು
ಕನ್ನಡದಲ್ಲಿ ತೀರಾ ತೀರಾ ಕಡಿಮೆ. ಮಾನವ ಸಂಬಂಧಗಳಲ್ಲಿನ ಸಣ್ಣಪುಟ್ಟ ಯಾತನೆಗಳಿಂದ
ಹಿಡಿದು ಎಲ್ಲ ಬಗೆಯ ಯಾತನೆಗಳೂ ಕ್ರಮೇಣ ಹೆಣ್ಣನ್ನು ಹಿಂಡಿ, ಅವಳ ಜೀವದ್ರವ್ಯವನ್ನೇ
ಹಿಂಗಿಸಿಬಿಡುವ ರೀತಿಯನ್ನು ಚೇತನಾ ಗಂಭೀರವಾಗಿ, ವ್ಯಂಗ್ಯವಾಗಿ ಅಥವಾ ಪ್ರತಿಭಟನೆಯ
ದನಿಯಲ್ಲಿ ಹೇಳಬಲ್ಲರು; ಹಾಗೆ ಹೇಳಲು ಪುರಾಣ, ದಂತಕಥೆ, ರೂಪಕ ಮುಂತಾಗಿ ಬಗೆಬಗೆಯ
ಭಾಷೆಗಳನ್ನೆಲ್ಲಾ ಬಳಸಬಲ್ಲರು. ಲೇಖಕಿಯೊಬ್ಬಳು ಯಾರ ಹಂಗೂ ಇಲ್ಲದೆ ನಿಜ
ನುಡಿಯತೊಡಗಿದಾಗ, ಇಂಡಿಯಾದ ಕುಟುಂಬಗಳಲ್ಲಿ ಕಂಡೂ ಕಾಣದಂತಿರುವ ಸೂಕ್ಷ್ಮ ಹಿಂಸೆಗಳ
ಲೋಕ ಹೇಗೆ ಸ್ಫೋಟಗೊಳ್ಳುತ್ತದೆ ಎಂಬುದನ್ನು “ಅಂಕಣ ಕಾದಂಬರಿ”
ಸೂಚಿಸುತ್ತದೆ; ಅಂಕಣ ಪ್ರಕಾರದ ಮೂಲಕ ಚೇತನಾ ಮಂಡಿಸಿದ ಬಿಡಿ ಬಿಡಿ ಅಧ್ಯಾಯಗಳ ಒಳಗೆ
ಪ್ರತಿಧ್ವನಿ ಪಡೆಯುತ್ತಿರುವ ತೀವ್ರ ದನಿಯೊಂದು ಈ ವಿಶಿಷ್ಟ ಸ್ತ್ರೀವಾದಿ
ಕಾದಂಬರಿಯನ್ನು ಕಡೆದಂತಿದೆ.
ಹೆಣ್ಣು ಗಂಡುಗಳಿಬ್ಬರ ಕಣ್ಣನ್ನೂ ತೆರೆಸಬಲ್ಲಂತೆ ಬರೆಯುವ, ತಮ್ಮ ಬರಹ ಚಿಮ್ಮಿಸಿದ
ಸ್ಫೂರ್ತಿಯಿಂದಲೇ ದಿಟ್ಟವಾಗಿ ಬದುಕುವ ಶಕ್ತಿ ಪಡೆದಂತಿರುವ ಚೇತನಾ ತೀರ್ಥಹಳ್ಳಿ
ಕನ್ನಡದ ಹೊಸ ತಲೆಮಾರಿನ ಅತ್ಯಂತ ಅರ್ಥಪೂರ್ಣ ಲೇಖಕಿ.
ಚೇತನಾ ತೀರ್ಥಹಳ್ಳಿ ಅವರ ‘ಭಾಮಿನಿ ಷಟ್ಪದಿ’ ಸಂಕಲನಕ್ಕೆ ಬರೆದ ಹಿನ್ನುಡಿ
ಎರಡು ತಿಂಗಳಿಂದ ಕಾಯ್ತಾ ಇದ್ದೇನೆ.
🙂
ಪುಸ್ತಕದ ಬಿಡುಗಡೆ ಯಾವಾಗ ? ನಾನೂ ತುಂಬ ಕಾತರದಿಂದ ಆಸೆಪಟ್ಟು ಕಾಯ್ತಾ
ಇದ್ದೇನೆ . . .
‘ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ’ ಎಂಬುದು ಭಾಮಿನೀಷಟ್ಪದಿಯ ಪದ್ಯವೊಂದರ ಸಾಲೆ?