ಭಾರತಿ ಬರಹ: ಯುಗಾದಿ ಹಬ್ಬವೂ, ಶುಭಾಶಯಗಳ ಮಳೆಯೂ..

ಭಾರತಿ ಬಿ ವಿ

ಹೀಗೊಂದು ಜ್ಞಾನೋದಯ …

ಈ ಶುಭಾಷಯಗಳನ್ನು ಕೋರೋದು ಕೂಡಾ ಎಷ್ಟೊಂದು ಯಾಂತ್ರಿಕವಾಗ್ತಿದೆ ಅಲ್ವಾ ಅನ್ನಿಸ್ತು ನೆನ್ನೆಯೇ ಶುರುವಾದ ಯುಗಾದಿ ಹಬ್ಬದ ಶುಭಾಷಯಗಳ ಮೆಸೇಜ್‌ಗಳನ್ನ ನೋಡಿ. ಹಬ್ಬದ ದಿನ sms ಗೆ ದುಡ್ಡು ಕೊಡಬೇಕಾಗತ್ತೆ ಅನ್ನೋ ದೂರದೃಷ್ಟಿಯಿಂದ ಹಿಂದಿನ ದಿನವೇ ಮೆಸೇಜ್ ಕಳಿಸಿ ಕೈ ತೊಳೆದುಕೊಳ್ಳೋ ಈ ಹೊಸ ಅಭ್ಯಾಸ ಶುರುವಾಗಿದೆ ! ಸರಿ, ಹಿಂದಿನ ದಿನವೇ wish ಮಾಡೋ ಹಾಗಿದ್ರೆ ಯಾವತ್ತೋ ಒಂದಿನ ಮಾಡಿದ್ರೂ ಆಯ್ತು, ಅಥವಾ ವರ್ಷ ಶುರುವಾದ ದಿನವೇ ಎಲ್ಲ ಹಬ್ಬಕ್ಕೂ wish ಮಾಡಿಬಿಡೋದು ಇನ್ನೂ ಒಳ್ಳೇದಲ್ವಾ?! ಇನ್ನೂ ಜಾಸ್ತಿ ದುಡ್ಡು ಉಳಿಸಬಹುದು … ಆಗೆಲ್ಲ ಇನ್ನೂ ಪತ್ರ – ಮಣ್ಣು ಮಸಿ ಅಂತ ಬರೆದುಕೊಂಡು ಸಂಭ್ರಮ ಪಡ್ತಿದ್ದ ಕಾಲ. ಯಾವುದೋ ಗೆಳತಿ ಹುಟ್ಟಿದ ದಿನಕ್ಕೆ ಅಥವಾ ಮದುವೆ ಆದ ದಿನಕ್ಕೆ ಪೇಜ್‌ಗಟ್ಟಳೆ ಲೆಟರ್ ಬರೆದು ಧನ್ಯರಾಗೋದರ ಜೊತೆಗೊಂದು greeting card ನ ಕೊಸರು ಬೇರೆ ! ಅದನ್ನ ಸೆಲೆಕ್ಟ್ ಮಾಡೋದಿಕ್ಕೆ ಅದೆಷ್ಟು ಪಾಡು. ಆ ಕಾರ್ಡ್ ಮೇಲಿನ ಮೆಸೇಜ್ ನಾವೇ ಹೇಳಿದ ಹಾಗಿರ್ಬೇಕು ಅನ್ನೋ ನಿರೀಕ್ಷೇಲಿ ಅಂಗಡಿ ಅಂಗಡಿ ಹುಡುಕಿ, ತಡಕಿ ಬಿಡ್ತಿದ್ವಿ. ನನಗೆ ಬಂದ greetings card ಗಳು, ಲೆಟರ್‌ಗಳ ದೊಡ್ಡ ಕಂತೆ ಇವತ್ತಿಗೂ ನನ್ನ ಹತ್ತಿರ ಇದೆ. ನನ್ನ ಗಂಡ ನಾನು ಊರಿಗೆ ಹೋಗಿದ್ದಾಗ ಕಳಿಸಿದ್ದ ಮರಳಿನ ಮೇಲೆ ಪಾದಗಳ ಗುರುತು ಮೂಡಿದ್ದ ಕಾರ್ಡ್, ಗೆಳತಿಯರು ಕಾರ್ಡ್ ಮಧ್ಯೆ ಇಟ್ಟು ಕಳಿಸಿದ ಒಣ (ಈಗ ಒಣಗಿರುವ) ಹೂಗಳ ಪಕಳೆಗಳು, ಅರಳಿ ಮರದ ಎಲೆಗಳ ಹಂದರ … ಎಲ್ಲ ಈಗ್ಲೂ intact … ಆಮೇಲಾಮೇಲೆ ಪತ್ರಗಳು ಸತ್ತು ಹೋದವು. greeting card ಒಂದು ಕುಟುಕು ಜೀವ ಇಟ್ಕೊಂಡು ಬದ್ಕಿತ್ತು ಹಾಗೂ, ಹೀಗೂ. ಆಮೇಲೆ ಬಂದಿದ್ದು ಈ ಮೊಬೈಲ್! ಕೂತ ಕಡೆ ದುಡ್ಡು ಬಿಚ್ಚದೇ ಮೆಸೇಜ್‌ಗಳ ಹರಿದಾಟ ಶುರುವಾಯ್ತು. ಆದರೆ ಈ ಮೊಬೈಲ್ ಕಂಪನಿಗಳು ದುಡ್ಡು ಸಂಪಾದಿಸೋ ಹೊಸ ಮಾರ್ಗ ಕಂಡು ಹಿಡಿದ್ರು. ಹಬ್ಬದ ದಿನ special rates ಹಾಕೋದಿಕ್ಕೆ ಶುರು ಮಾಡಿದ್ರು. ದಿನಾ ಬಿಟ್ಟಿ ಮೆಸೇಜ್ ಕಳಿಸಿ ಅಭ್ಯಾಸ ಆದ ಮನಸ್ಸಿಗೆ ದುಡ್ಡು ಕೋಡೋದು ಸಂಕಟದ ವಿಷ್ಯ ಅಲ್ವಾ ನೀವೇ ಹೇಳಿ ! ಅದಕ್ಕೇ ಈ ಉಪಾಯ ಹೊಳೆದಿದ್ದು .. ಹಿಂದಿನ ದಿನವೇ ಮೆಸೇಜ್ ಕಳಿಸಿ ನಿಟ್ಟುಸಿರು ಬಿಡೋದಿಕ್ಕೆ ಶುರು ಮಾಡಿದೆವು … ಆಮೇಲೀಗ social networking site ಗಳ ಸಂತೆ ಶುರುವಾಯ್ತು. ಗೊತ್ತಿರೋರು, ಗೊತ್ತಿಲ್ದೇ ಇರೋರು ಎಲ್ರಿಗೂ ಶುಭಾಷಯ ಕೋರೋ ಹೊಸ ಕಥೆ ಶುರುವಾಯ್ತು. ಒಬ್ಬೊಬ್ಬರಿಗೂ ಸಾವಿರ, ಸಾವಿರ ಸ್ನೇಹಿತರ ಪಟ್ಟಿ. ಹುಟ್ಟಿದ ದಿನವೊಂದು ಅಲ್ಲಿ ಹಾಕಿದ್ರೆ ಮುಗೀತು .. ಎಂದೂ ನಮ್ಮ ಜೊತೆ ಯಾವ ಸಂಪರ್ಕಾನೂ ಇಲ್ಲದೇ ಇರೋರಿಂದೆಲ್ಲ wishಗಳ ಸುರಿಮಳೆ ! ಹೃದಯದಿಂದ ಸುಮ್ಮನೇ ನಿನ್ನ ನೆನಪಾಯ್ತು ಈ ದಿನ ಅಂದ್ರೂ ಸಾಕು ಖುಷಿ ಆಗತ್ತೆ. ಸ್ನೇಹಿತರು ಅನೇಕರು ದಿನಗಟ್ಟಳೆ, ತಿಂಗಳುಗಟ್ಟಳೇ ಸಂಪರ್ಕದಲ್ಲಿ ಇಲ್ಲದೇ ಹೋದ್ರೂ ಅವರ ಮನಸಲ್ಲಿ ನಾವು ಮತ್ತು ನಮ್ಮ ಮನಸಲಿ ಅವ್ರು ಇದಾರೆ ಅನ್ನೋ ಬೆಚ್ಚಗಿನ ಭಾವ ಖುಷಿ ಪಡಿಸುತ್ತೆ. Formal ಆಗಿ ವಿಷ್ ಮಾಡ್ಲೇ ಬೇಕು ಅಂತೇನೂ ರೂಲ್ಸ್ ಇಲ್ಲ ಅಲ್ವಾ? ನಮ್ಮ ಹಾರೈಕೆಗಳ ಸ್ವರೂಪ ಗಮನಿಸಿ .. good morning ಅನ್ನೋದು gm ಆಗಿ, good night ಅನ್ನೋದು gn ಆಗಿ, birthday ಅನ್ನೋದು b’day ಆಗಿ, take care ಅನ್ನೋದು tc ಆಗಿಹೋಗಿದೆ ! ನಮ್ಮ ಹಾರೈಕೆಗಳ ಪೂರ್ತಿ ರೂಪ ಬರೆಯೋದಿಕ್ಕೂ ನಮಗೆ ಬೇಜಾರು ! ಅಬ್ಬಾ ಸೋಮಾರಿ ಮನಸ್ಸೇ …! ಅಲ್ಲಾ ಒಂದೆರಡು ಪದ ಕೂಡಾ ಪೂರ್ತಿ ಬರೆಯೋದಿಕ್ಕೆ ಬೇಜಾರು ಪಟ್ಕೊಳ್ಳೋ ನಾವು ಇನ್ನು ಆ ಗೆಳೆಯ/ಗೆಳತಿಗೇನಾದ್ರೂ ಕಷ್ಟ ಅಂದ್ರೆ ಹೋದೇವಾ ಹೇಳಿ … ನೆನ್ನೆ ಮಧ್ಯಾಹ್ನದಿಂದ್ಲೇ ಶುರುವಾದ ಯುಗಾದಿ ಹಬ್ಬದ ಶುಭಾಷಯಗಳ ಮೆಸೇಜ್‌ ಮಳೆಯಲ್ಲಿ ಮಿಂದು ಪಾವನಳಾದ ನಂತರ ನೋಡಿ ಇಷ್ಟೆಲ್ಲ ಜ್ಞಾನೋದಯ ನನ್ಗೆ …  ]]>

‍ಲೇಖಕರು G

March 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

5 ಪ್ರತಿಕ್ರಿಯೆಗಳು

 1. malathi S

  🙂
  i got a ‘happy navarathri’ msg on Yugadi from an acquaintance…
  malathi S

  ಪ್ರತಿಕ್ರಿಯೆ
 2. Ravi Murnad

  ಈ ಕೆಳಗಿನ ಮಾತನ್ನು ನಿಮ್ಮ ಲೇಖನದಿಂದ ಆಯ್ದುಕೊಂಡಿದ್ದೇನೆ ಭಾರತಿ ಅಕ್ಕ. ಗಣಕ ಯಂತ್ರದ ಮುಂದೆ ಕುಳಿತು ನಮ್ಮತನವನ್ನು ಕಳೆದುಕೊಂಡ ತಂತ್ರಜ್ಞಾನ ಯುಗದ ಪರಕಾಷ್ಠತೆಯನ್ನು ಎತ್ತಿ ನಿಲ್ಲಿಸಿದ್ದೀರಿ. ಒಂದು ನಗು , ಒಂದು ಪ್ರೀತಿಯ ಮಾತಾಡಲು ವ್ಯಾಪಾರಿ ಮನೋಭಾವನೆ ಬಂದರೂ ಬರಬಹುದು ಮುಂದಿನ ಕಾಲ.ಮೇಜು ಕುಟ್ಟಿ ಆನಂದಿಸಿದ್ದೇನೆ ನಿಮ್ಮ ಈ ಮಾತಿಗೆ. ಹ್ಯಾಟ್ಸ್ ಅಪ್..!
  “ಅಲ್ಲಾ ಒಂದೆರಡು ಪದ ಕೂಡಾ ಪೂರ್ತಿ ಬರೆಯೋದಿಕ್ಕೆ ಬೇಜಾರು ಪಟ್ಕೊಳ್ಳೋ ನಾವು ಇನ್ನು ಆ ಗೆಳೆಯ/ಗೆಳತಿಗೇನಾದ್ರೂ ಕಷ್ಟ ಅಂದ್ರೆ ಹೋದೇವಾ ಹೇಳಿ …!”

  ಪ್ರತಿಕ್ರಿಯೆ
 3. D.RAVI VARMA

  ನಾವು ಎಲ್ಲೋ ಕಳೆದುಹೊಗಿದ್ದೇವೆ,ನಮ್ಮ ದಿನನಿತ್ಯದ ಜಂಜಡದಲ್ಲಿ,ಒತ್ತಡದಲ್ಲಿ, ಬೇಸರದಲ್ಲಿ,ಹಾಗಿದ್ದರು ಸುಮ್ಮನೆ ಗೆಳೆಯ,ಗೆಳತಿಯರೊಂದಿಗೆ ಒಂದು ಫುಜುಲ್ ನಾಟಕ ಮಾಡುತ್ತೇವೆ, ಅಲ್ಲಿ ಗೆಳೆತನದಲ್ಲಿ ಗಮ್ಬೀರಥೆಯಿಲ್ಲ,attachment ಇಲ್ಲ, ಫಾಲ್ಸೆ ಡಿಗ್ನಿಟಿ ಗೋ ಇಲ್ಲವೇ ಕಾಲಕಳೆಯಲೋ, ಹಾಗೆ ಸುಮ್ಮನೆ ……………
  ನಾನು ಕಾಲೇಜಿನಲ್ಲಿದ್ದಾಗ ಒಂದು ಕವನ ಬರೆದಿದ್ದೆ
  ಅದ್ಯಾಪಕರ ಅರ್ಥವಾಗದ, ಉಪಯೋಗವಿರದ ಈ ಪಾಠ
  ವರ್ಷಗಟ್ಟಲೆ ನೋಡಿದರು ಪ್ರತಿಕ್ರಿಯಸದ ಈ ಜಡೆಗಳು,
  ದಿನದ ಹತ್ತಾರು ತಾಸು ಜೊತೆ ಕಳೆದರು
  arthisikollalarada ಈ ಸ್ನೇಹಿತರು ,,ಹೀಗೇ ಹೀಗೇ ,,ಇನ್ನು ಹಲವರು
  ನಿಮ್ಮ ಬರಹಗಳಲ್ಲಿ ಬದುಕಿನ ಬಗೆಗಿರುವ ಅನನ್ಯ ಪ್ರೀತಿ ಎದ್ದು ಕಾಣುತ್ತೆ, ನಾನು ಅದನ್ನು ತುಂಬಾ ಇಷ್ಟ ಪಡುತ್ತೇನೆ, ಶುಭಾಶಯಗಳು
  ರವಿ ವರ್ಮಾ ಹೊಸಪೇಟೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: