ಭಾರತಿ ಮೇಡ೦ ಪುಸ್ತಕ ಕದ್ದರೆ ಹುಷಾರ್!!

– ಬಿ ವಿ ಭಾರತಿ

ನನ್ನ ಅಜ್ಜನ ಮನೆಯಲ್ಲಿ ತುಂಬಾ ಪುಸ್ತಕಗಳು. ಅದರಲ್ಲಿ ಒಂದು ನನ್ನ ಪ್ರಿಯವಾಗಿದ್ದೆಂದರೆ ’ರಾಬಿನ್ಸನ್ ಕ್ರೂಸೋ’. ಅದೆಷ್ಟು ಸಲ ಓದಿದ್ದೆನೋ ನನಗೇ ನೆನಪಿಲ್ಲ. ಪ್ರತಿ ರಜೆಗೆ ಹೋದಾಗಲೂ ಒಂದಿಷ್ಟು ಬಾರಿ ಓದುತ್ತಿದ್ದೆ. ಹಾಗೊಂದು ಸಲ ಹೋದಾಗ ನನ್ನಜ್ಜನ ಸ್ನೇಹಿತನ ಮೊಮ್ಮಗಳು ಮತ್ತು ನನ್ನ ಗೆಳತಿ ಆ ಪುಸ್ತಕವನ್ನ ಓದಿ ಕೊಡ್ತೀನಿ ಕೊಡೇ ಅಂದಾಗ ನಿರಾಕರಿಸುವ ಮನಸ್ಸು. ಆದರೆ ತಪ್ಪು ತಿಳೀತಾಳೇನೋ ಅಂತ ಸಂಕಟಕ್ಕೆ ಕೊಟ್ಟಿದ್ದೆ .. ಅದೂ ಸಾವಿರ ಸಲ ಎಚ್ಚರಿಕೆ ಹೇಳಿ. ನಾಡಿದ್ದು ವಾಪಸ್ ಕೊಡ್ಬೇಕು ಅನ್ನೋ ಕಂಡೀಷನ್ ಜೊತೆಗೆ ಕೊಟ್ಟೆ. ಮಾರನೆಯ ದಿನ ಅವಳು ಬರಲಿಲ್ಲ. ಬುಕ್ ಓದಿ ಮುಗಿಸೋ ಆತುರ ಇರಬೇಕು ಅಂತ ಸುಮ್ನಾದೆ. ಮಾರನೆಯ ದಿನ ಆಯಿತು. ಅವತ್ತೂ ಪತ್ತೆಯಿಲ್ಲ ಅವಳು. ನಾನು ಸಿಟ್ಟು ಶುರುವಾಗಿತ್ತು. ಅದರ ಮರುದಿನವೂ ಅವಳ ಪತ್ತೆಯಿಲ್ಲ. ನನ್ನ ತಾಳ್ಮೆ ಮುಗಿದಿತ್ತು. ಮಾರನೆಯ ದಿನ ಬೆಳಿಗ್ಗೆ ಎದ್ದವಳೇ ಅವಳ ಮನೆಗೆ ಓಡಿದರೆ ಒಂದು ದಿನ ಹುಷಾರಿಲ್ಲ ಅಂದರು, ಮತ್ತೊಂದು ದಿನ ಮನೇಲಿಲ್ಲ ಅಂದರು, ಮತ್ತೊಂದು ದಿನ ಊರಲ್ಲೇ ಇಲ್ಲ ಅಂದರು ಅವಳ ಮನೆಯವರು. ಆಗ ನನಗೆ ಸಂಶಯ ಶುರು ಆಯ್ತು. ಒಂದು ದಿನ ಅವಳನ್ನು ಅಡ್ದ ಹಾಕಿ ಹಿಡಿದೇ ಬಿಟ್ಟೆ. ಜೋರು ಮಾಡಿ ಕೇಳಿದಾಗ ಮೊದಲು ಯಾವ ಪುಸ್ತಕ ಅಂದಳು ! ಆಮೇಲೆ ’ಅವತ್ತೇ ಕೊಟ್ಟೆನಲ್ಲಾ ..’ ಅಂದು ಬಿಟ್ಟಳು. ನನಗೆ ರೋಷ ಉಕ್ಕಿ ಬಂತು .. ಆಗಲೇ ನಿರ್ಧರಿಸಿ ಬಿಟ್ಟೆ ’ಪುಸ್ತಕ ಹಾಳು ಮಾಡಿದ ಇವಳು ಈ ಜಗತ್ತಿನಲ್ಲಿ ಇರಬಾರದು’ ಅಂತ!! ಅವಳನ್ನ ಸಾಯಿಸಿ ಬಿಡೋ ಪ್ಲ್ಯಾನ್ ಹಾಕಿದೆವು ನಾನು ಮತ್ತು ನನ್ನ ಮಾಮನ ಮಗಳು! ಅಜ್ಜನ ಮನೆಯ ಹಿತ್ತಲಲ್ಲಿ ಬರೀ ಕಾಡು ಗಿಡಗಳು. ಅದರಲ್ಲಿ ತೊಗರಿಕಾಯಿಯನ್ನ ಹೋಲುವ ಒಂದು ಕಾಯಿ ತಿಂದು ನನ್ನ ಗೆಳೆಯನೊಬ್ಬ ನಾನು ಮೂರು ವರ್ಷದವಳಿರುವಾಗ ಸತ್ತು ಹೋಗಿದ್ದು ನೆನಪಿತ್ತು ನನಗೆ. ಅದೇ ಸರಿಯಾದ ಮಾರ್ಗ ಅಂತ ತೀರ್ಮಾನಿಸಿದೆವು. ಅಜ್ಜಿಯ ಹತ್ತಿರ ಕಾಡಿ ಬೇಡಿ ಒಂದಿಷ್ಟು ಅಕ್ಕಿ, ಬೇಳೆ, ಖಾರದ ಪುಡಿ ಮತ್ತು ಎರಡು ಪಾತ್ರೆ ಸಂಪಾದಿಸಿ ಕೆಲಸದ ಬೀರನನ್ನ ಹಿಡಿದು ಎರಡು ಇಟ್ಟಿಗೆ ಸೇರಿಸಿ ಒಲೆ ಹೂಡಿದೆವು. ಆ ಕಾಯಿ ಮತ್ತು ಸೊಪ್ಪನ್ನ ಕಿತ್ತು ಅದಕ್ಕೆ ಖಾರ, ಉಪ್ಪು ಸೇರಿಸಿ ಸಾರು ಜೊತೆಗಿಷ್ಟು ಅನ್ನ ತಯಾರಿಸಿದ್ದೂ ಆಯ್ತು ಎರಡು ಪುಟ್ಟ ಪಾತ್ರೆಗಳಲ್ಲಿ! ಎಲ್ಲ ತಯಾರಾದ ಮೇಲೆ ಅವಳ ಮನೆಗೆ ಹೋಗಿ ಅವಳನ್ನ ಕರೆದುಕೊಂಡು ಬಂದಳು ನನ್ನ ಮಾಮನ ಮಗಳು. ಅವಳಿಗೆ ಅದನ್ನ ತಿನ್ನಿಸಿ ಪರಲೋಕ ಸೇರಿಸುವ ಲೆಕ್ಕಾಚಾರ ನಮ್ಮದು! ಅವಳು ಬಂದಮೇಲೆ ನಯವಾಗಿ ಮಾತಾಡಿಸಿದೆವು. ಅವಳಿಗೂ ಧೈರ್ಯ ಬಂತೆಂದು ತೋರುತ್ತದೆ .. ನಿಧಾನವಾಗಿ ಮತ್ತೆ ಮೊದಲಿನ ಹಾಗೆ ಹರಟುತ್ತ ಕೂತಳು. ನಾವು ಮಾಡಿದ ಅಡಿಗೆ ತೋರಿಸಿದೆವು. ಊಟ ಮಾಡಲು ಕರೆದಾಗ ಅವಳು ನಿರಾಕರಿಸಲಿಲ್ಲ. ನಾವಿಬ್ಬರೂ ಈಗಿನ ಸೀರಿಯಲ್‌ಗಳಲ್ಲಿ ಹೆಂಗಸರು ಏನೋ ಸಂಚು ಹೂಡುತ್ತಾ ತುಟಿಯಂಚಿನಲ್ಲಿ ಸೊಟ್ಟಗೆ ನಗುತ್ತಾರಲ್ಲ ಆ ರೀತಿ ಒಬ್ಬರನ್ನೊಬ್ಬರು ನೋಡಿ ನಕ್ಕೆವು ..‘ಸಂಚು ಫಲಿಸಿತು’ ಅನ್ನೋ ಸಂಕೇತದ ಹಾಗೆ! ಅಷ್ಟರಲ್ಲಿ ಅಜ್ಜಿ ಯಾತಕ್ಕೋ ಹಿತ್ತಲಿಗೆ ಬಂದವರು ನಮ್ಮನ್ನು ನೋಡಿ ಅದೇನು ಅಂತ ಕುತೂಹಲದಿಂದ ಅಲ್ಲಿಗೆ ಬಂದರು. ಸುಮ್ಮನೆ ಇದ್ದಿದ್ದರೆ ಎಲ್ಲ ಸರಿಹೋಗಿ ಪಾಪದವಳು ನಮ್ಮ ಬುಕ್ ಕದ್ದ ಘೋರ ಅಪರಾಧಕ್ಕೆ ಸತ್ತೇ ಹೋಗಿರುತ್ತಿದ್ದಳೋ, ಏನೋ. ಅಜ್ಜಿಯನ್ನ ನೋಡಿ ನಮಗೆ ಜಂಘಾಬಲ ಉಡುಗಿತು. ಪೆದ್ದುಪೆದ್ದಾಗಿ ಮುಖ ಮಾಡಿಕೊಂಡು ನಿಂತಾಗ ಅಜ್ಜಿಗೆ ಏನೋ ಸಂಚು ನಡೆದಿದೆ ಅನ್ನೋ ಸುಳಿವು ಸಿಕ್ಕಿ ಬಿಟ್ಟಿತು. ಗಟ್ಟಿಸಿ ಕೇಳಿದಾಗ ನಮ್ಮಿಬ್ಬರ ಪ್ಲ್ಯಾನ್ ಬಾಯಿಬಿಟ್ಟೆವು. ಎಂದೂ ಸಿಟ್ಟುಗೊಳ್ಳದ ಅಜ್ಜಿ ಅಂದು ಕೋಪದಿಂದ ನಮ್ಮ ಅಡಿಗೆಯನ್ನೆಲ್ಲ ಎತ್ತಿ ಚೆಲ್ಲಿಬಿಟ್ಟರು. ಅಲ್ಲಿಗೆ ನಮ್ಮ ಮೊದಲ ಕೊಲೆ ಯತ್ನ ಮಣ್ಣುಪಾಲಾಗಿತ್ತು! ಈಗ ಲಂಡನ್‌ನಲ್ಲಿ ಇರೋ ನನ್ನ ಮಾಮನ ಮಗಳು ಇಲ್ಲಿಗೆ ಬಂದಾಗಲೆಲ್ಲ ಇದನ್ನ ಹಾಸ್ಯ ಅನ್ನೋ ಹಾಗೆ ಹೇಳಿಕೊಂಡು ನಗುತ್ತೀವಾದರೂ ಮರುಕ್ಷಣವೇ ಅಂದು ನಿಜಕ್ಕೂ ಅದನ್ನ ಅವಳಿಗೆ ತಿನ್ನಿಸಿ ಅವಳಿಗೆ ಏನಾದರೂ ಆಗೇ ಹೋಗಿದ್ದರೆ?? ಅಂತ ನೆನೆಸಿಕೊಂಡು ಗಾಬರಿಯೂ ಆಗುತ್ತದೆ. ಆ ಮಟ್ಟದ ಸಿಟ್ಟು ಅದೆಲ್ಲಿಂದ ಬಂದಿತ್ತೋ ಏನೋ .. ಒಂದು ಪುಸ್ತಕ ಕಳೆದಿದ್ದಕ್ಕಾಗಿ ಕೊಲೆ ಸಂಚು ಮಾಡುವ ಆಕ್ರೋಶ ಹೇಗೆ ಬರುತ್ತದೆ? ಅದೂ ಆ ಸಣ್ಣ ವಯಸ್ಸಿನಲ್ಲಿ ಅನ್ನುವುದು ಇಂದಿಗೂ ನಮ್ಮಿಬ್ಬರಿಗೂ ಅದು ಅರ್ಥವಾಗಿಲ್ಲ. ಅಜ್ಜಿ ಅಲ್ಲಿಗೆ ಸಮಯಕ್ಕೆ ಸರಿಯಾಗಿ ಬರದೇ ಹೋಗಿದ್ದರೆ ಬಾಲಾಪರಾಧಿಗಳಾಗಿ ರಿಮ್ಯಾಂಡ್ ಹೋಮ್ ಸೇರಿರುತ್ತಿದ್ದೆವೋ ಏನೋ…    ]]>

‍ಲೇಖಕರು G

July 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. chandu

  ನಮಗೆ ನಿಮ್ಮ ಕಥೆ ಓದಿದರೆ ಮೈ ಜುಂ ಎನ್ನುತ್ತೆ. ಪಾಪ ಆ ಕೆಲಸ ಮಾಡಲಿಲ್ಲ ಅಷ್ಟೆ ಸಾಕು. ನಿಮ್ಮ ಅಜ್ಜಿ ನಿಮಗೆ ಮರು ಜನ್ಮ ನೀಡಿದರು ಅಂದುಕೊಳ್ಳಿ. !!

  ಪ್ರತಿಕ್ರಿಯೆ
 2. santhosh

  nimma kathe twist padeyuththe, sayisuva prayayhna ondu kathe athava kanasirabEku endu bhavisidde. koneyalli adu nijavaada prayathna endu thilidu maijum endithu. nEravaagi heli sakkathu twist kottideeri.

  ಪ್ರತಿಕ್ರಿಯೆ
 3. D.RAVI VARMA

  ಮೇಡಂ, ನಿಮ್ಮ ಬಾಲ್ಯದ ಕಥೆ ಮೈ ಜುಮ್ಮೆನ್ನುವಂತಿದೆ. ನಿಮ್ಮ ಪುಸ್ತಿಕೆ ಪ್ರೀತಿ ನನಗೆ ತುಂಬಾ ಇಸ್ಟವಾಯ್ತು. ಆದರೆ ನೀವು ಆ ಕ್ಷಣದಲ್ಲಿ ಹೂಡಿದ್ದ ಉಪಾಯ ಅದು ಅಸ್ತೆ ಗಮ್ಬೀರವಾದ ಅಪಾಯವು ಆಗಿತ್ತು . ಆ ಕ್ಷಣದಲ್ಲಿ ನಿಮ್ಮಜ್ಜಿ ನಿಮ್ಮನ್ನು ಆ ಅಪಾಯದಿಂದ ಪಾರುಮಾಡಿದ್ದು,ಈಗ ನೀವು ಅದೆಲ್ಲವನ್ನು ಹೇಳಿಕೊಳ್ಳುತ್ತಿರುವುದು ನನಗಂತೂ ಒಂದು ತರದ ಥ್ರಿಲ್ ಕೊಟ್ಟಿದೆ. ಅದಕ್ಕೆ ಹಿರಿಯರು ಹೇಳಿದ ಮಾತು “ಥಿಂಕ್ before ಇನ್ಕ್” ಎಂದು ಅಲ್ಲವೇ, ನಿಮ್ಮ ಬರಹಗಳಲ್ಲಿ ಒಂದು ಮಾನವೀಯ ಸಂವೇದನೆ ಹಾಗು ಬದುಕಿನ ಪ್ರೀತಿ ಇರುತ್ತದೆ ಆದ್ದರಿಂದ ಅವು ಓದುಗರ ಮನಮುಟ್ಟುತ್ತವೆ ಹಾಗು ಮನ ತಟ್ಟುತ್ತವೆ. ಶ್ರಾವಣದ ಶುಭಾಶಯಗಳು .
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Vinayak HegdeCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: