ಭಾರತಿ ಮೇಡ೦ ಹೇಳಿದ ಒ೦ದು ಮಧ್ಯಾಹ್ನದ ಕಥೆ..

– ಬಿ.ವಿ.ಭಾರತಿ

ಮಟ ಮಟ ಮಧ್ಯಾಹ್ನ ಬಾಗ್ಲು ತಟ್ಟಿದ ಸದ್ದಾದಾಗ ಬಯ್ಕೊಂಡು ಬಾಗಿಲು ತೆಗೆದ್ರೆ ಪಾಪ ಬೆಳಗ್ಗಿಂದ ಮಕ್ಕಳ ಜೊತೆ ಅರಚಿ ಸುಸ್ತಾಗಿ ಡ್ಯೂಟಿ ಮುಗ್ಸಿ BBMP Census ಗೋಸ್ಕರ ಕಾಲೆಳೆದ್ಕೊಂಡು ಬಂದಿದ್ದ ಪ್ಯಾದೆ ಮುಖದ ಟೀಚರ್. ಕೈಲಿ lap top !! ಅಬ್ಬಾ ನಮ್ಮ ದೇಶ ಎಷ್ಟೊಂದು ಮುಂದುವರೆದಿದೆ … ಮೇರಾ ಭಾರತ್ ಮಹಾನ್ ಅಂತ ಹೃದಯ ತುಂಬಿ ಬಂತು. ಪ್ರಶ್ನೆ ಶುರುವಾಯ್ತು .. ಮನೇಲಿ ಮೂರು ಜನ .. ನನ್ ಗಂಡ, ನಾನು, ಮಗ ಅಂದೆ. ಹೆಸ್ರು, ಅಪ್ಪ ಅಮ್ಮನ ಹೆಸ್ರು, ಏನ್ ಓದ್ಕೊಂಡಿದೀರ, ಕೆಲ್ಸ .. etc etc … ಎಲ್ಲ ಹೇಳಿದ್ದಾಯ್ತು .. ಆಯಪ್ಪ ಪಾಪ ಕೀ ಬೋರ್ಡ್‌ನಲ್ಲಿ ಅಕ್ಷರ ಹುಡುಕ್ತಾ ಬೆವರೊರೆಸಿಕೊಂಡು ಬರ್ಕೊಂಡ್ರು. ಮುಂದಿನ ಪ್ರಶ್ನೆ ‘ಜಾತಿ?’ .. ನಾನು ‘ಅಯ್ಯೋ lap top ನೋಡಿ ಏನೇನೋ ಭ್ರಮೆ ಇಟ್ಕೊಂಡ್ನಲ್ಲಾ ತಂದೆ .. ಅದೇ ಕಿತ್ತೋಗಿರೋ ಹಳೇ ಪ್ರಶ್ನೆಗಳೇ! ಜಾತಿ ಯಾವುದಾದ್ರೇನ್ ….’ ಟೀಚರಪ್ಪ ನನ್ನ ಮಾತನ್ನ ತುಂಡರಿಸಿ ‘ಪ್ರಶ್ನೆಗೆ ಉತ್ತರ ಕೊಡ್ದಿದ್ರೆ ಮುಂದಿನ್ ಉತ್ತರ ತಗೊಳಲ್ಲಮ್ಮ ಈ lap top … ಬೇಗ ಹೇಳಿ’ ಅಂದರು .. ಪಾಪ ಅವರವರ ಕಷ್ಟ ಅವರವರಿಗೆ!   ‘ಮನೇಲಿ ಮೊಬೈಲ್ ಇದ್ಯಾ, ಲ್ಯಾಂಡ್ ಲೈನ್ ಇದ್ಯಾ’ ‘ಇದೆ’ ‘fridge?’ `ಇದೆ’ ‘internet?’ `ಇದೆ’ ‘electricity?’ `ಹ್ಹಿ ಹ್ಹಿ ಹ್ಹಿ … ಇದೆ’ ಅಂದೆ. `AC?’ `ಇದೆ .. window ನಾ, split ಆ ಅಂತ್ಲೂ ಹೇಳ್ಬೇಕಾ?’ ಅಂದೆ .. ತಲೆ ಎತ್ತಿ ಒಂದ್ಸಲ ನೋಡಿದ್ರು … ‘washing machine?’ `ಇದೆ ಆದ್ರೆ ಬಟ್ಟೆ ಹೊದೆಸಿ ಇಟ್ಟಿದೀನಿ .. ಚೆನ್ನಾಗ್ ಒಗೆಯಲ್ಲ’ ಅಂದೆ ‘ಅಷ್ಟೆಲ್ಲ ಡೀಟೈಲ್ಸ್ ಬೇಡಾ’ shut up ಅಂದ್ರೆ ಬಾಯ್ ಮುಚ್ಚು ಸಾರ್ ಅಂತ ಸೂಚನೆ ಅಂದ್ಕೊಂಡೆ .. ‘ಸಾರ್ ಮೂರ್ ಜನದಲ್ಲಿ ಇಬ್ರದ್ದೇ ಬರ್ಕೊಂಡ್ರಿ ..’ ಪಕ್ಕದಲ್ಲಿದ್ದ ಶಿಷ್ಯ ಟೀಚರಪ್ಪನಿಗೆ ನೆನಪಿಸಿದ. ಟೀಚರಪ್ಪ ಮುಗೀತು ಅಂತ ಖುಷ್ಯಾಗಿದ್ದವ್ರು ಪಾಪ ಮತ್ತೆ ಬೇಜಾರಲ್ಲಿ ಶುರು ಮಾಡಿದ್ರು .. ‘ಹೆಸ್ರು?’ .. ಹೇಳಿದ್ದಾಯ್ತು. ‘ವಿದ್ಯೆ?’ .. ಹೇಳಿದ್ದಾಯ್ತು .. ಹುಟ್ಟಿದ ದಿನ ಹೇಳಿದ್ದಾಯ್ತು .. ‘ತಂದೆ ಹೆಸ್ರು?!’ ಅಂದರು … ನಾನು ಆಗ ನಗಕ್ಕೆ ಶುರು ಮಾಡಿದವ್ಳು ಇನ್ನೂ ಬಾಯಿ ಮುಚ್ಚಿಲ್ಲಾ …….]]>

‍ಲೇಖಕರು G

February 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

 1. Anuradha.rao

  ನೀವು ಇನ್ನೂ ನಗಲು ಪ್ರಾರಂಭಿಸಿದವರು ಬಾಯಿ ಮುಚ್ಚಿಲ್ಲ ಅಂದ್ರೆ ,ಅವರ ಪ್ರಶ್ನೆಗಳು ಇನ್ನೂ ಮುಗಿದಿಲ್ಲ …ಮುಂದುವರೆಯುವುದು .ಅಭಿನಂದನೆಗಳು ..

  ಪ್ರತಿಕ್ರಿಯೆ
 2. renuka manjunath

  namma maneyallu idella aytu. namma mane edurigiruva dodda site nallondu watchman goodu ide. avanalli aa site nodikoLLlu iddane …hendathi hagu 5 makkaLondige. ee team namma maneyinda allige hogi heege eneno baredukoLLuva nataka adide. nanthara avara godeya mele ondashtu geechide. yakendu keLida allina gruhiNige, nimagella innu mele prathi thingaLu 10 kg akki, 5 kg ragi, 1pkt eNNe kodthare andranthe. hagagi eaga 30 rupayi kodabeku andranthe . avaLu manegelasadalli uLisiddu kottiddaLe. namma mane thorisi alliruva dodda maneyavaru 100 rupayi kodthare..idu govt fee andranthe! yarige complaint madali…madala bedva antha yochisthiddiini!

  ಪ್ರತಿಕ್ರಿಯೆ
  • bharathi

   avru yaro fraud irbeku .. receipt kotraa avru? nange receipt kotru …hope tht receipt too is not gol maal ..!!!

   ಪ್ರತಿಕ್ರಿಯೆ
 3. Poornima Girish

  inna haage nagtiro haagide bha… alla kaNe, ee census vishyana ashtu chennagi bardu, neenu nakku, ellaru nago haage bardideeya.. hmmm nadeeli ide taraha naguva, nagisuva ninna baraha

  ಪ್ರತಿಕ್ರಿಯೆ
 4. Ashok Shettar

  ಈ ಬರಹ ಕಳೆಕಳೆಯಾಗೇ ಇದೆ.ಇದಕ್ಕೆ ನಮ್ಮ ಫೇಸ್ ಬುಕ್ ಫ್ರೆಂಡ್ ಅಂಜಲಿ ರಾಮಣ್ಣೋರ್ದು ಒಂದ್ ಪ್ರತಿಕ್ರಿಯೆ ಇದೆ.ಅದನ್ನ ಹೇಳದೇ ಇದು ಪೂರ್ತಿ ಕಳೆಗಟ್ಟೋದು ಹ್ಯಾಗೆ? ಅದು ಹೀಗಿದೆ: “ಅಯ್ಯೋ ಮೇಡಮ್ಮೋರೇ..ಇದು ಬೆಂಗಳೂರು ಮತ್ತು ಇಂಟರ್ ನೆಟ್ ಯುಗ.ಸೋ ಆ ಪ್ರಶ್ನೆಗೆ ಉತ್ತರ ಬೇರೆ ಬೇರೆಯೇ ಇರುವ ಅನುಭವ ಆ ಟೀಚರ್ ಗೆ ಇದ್ದರೆ…ಅಯ್ಯೋ… ಸಾರಿ ಸಾರಿ!:)”

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: