ಮಂಗಳೂರಿನಲ್ಲಿ ‘ನೀರೋ’ಗಳು..

ಯಾಕೋ ಈ ಕಥೆ ನೆನಪಾಯಿತು..

ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸಲಾಗದಷ್ಟು ಮುಗ್ದರೇನಲ್ಲ ನಾವೆಲ್ಲಾ. ಆದರೂ ತಪ್ಪು ಎನ್ನುವಂತಹ ಘಟನೆಗಳು ನಡೆದಾಗ ನಾವು ಅದೆಷ್ಟು ಮೌನ ವಹಿಸುತ್ತೇವೆ ಎನ್ನುವುದಕ್ಕೆ ಹಿರಿಯ ಪತ್ರಕರ್ತರಾದ ಸಾಯಿನಾಥ್ ರವರು ಹೇಳಿರುವ ಈ ಕೆಳಗಿನ ಕಥೆ ಒಂದು ಉತ್ತಮ ಉದಾಹರಣೆ.

‘ಅವಧಿ’ಯಲ್ಲಿ ಈ ಹಿಂದೆ ಎನ್ ಸಂಧ್ಯಾರಾಣಿ ಬರೆದಿದ್ದನ್ನು ನಿಮ್ಮೆಲ್ಲರ ನೆನಪಿಗಾಗಿ ಹಂಚುತ್ತಿದ್ದೇನೆ.

-ಎಸ್ ಎಂ ನಟರಾಜು

“ರೋಮ್ ನ ದೊರೆ ನೀರೋ ಜಗತ್ತಿನಲ್ಲೇ ಅಭೂತಪೂರ್ವವಾದ ಒ೦ದು ಔತಣಕೂಟ ಮಾಡಬೇಕು ಎ೦ದು ಯೋಚಿಸುತ್ತಾನೆ. ಎಲ್ಲಾ ಸಿದ್ಧತೆಗಳಾಗುತ್ತವೆ. ಬ೦ದಿರುವ ಅತಿಥಿಗಳಾದರೂ ಯಾರು? ಆ ಕಾಲಘಟ್ಟದ ಅತ್ಯ೦ತ ಸ೦ವೇದನಾಶೀಲರಾದ ಲೇಖಕರು, ಕವಿಗಳು, ಅಪಾರ ಬುದ್ಧಿಮತ್ತೆ ಉಳ್ಳವರು, ಸಮಾಜದ ವಿದ್ಯಾವ೦ತ ಸಮೂಹ, ರಾತ್ರಿಯ ಔತಣಕೂಟ… ಬೆಳಕಿಗೇನು ಮಾಡುವುದು? ’ಸೆರೆಮನೆಯಲ್ಲಿರುವ ಅಪರಾಧಿಗಳನ್ನು, ಆರೋಪಿಗಳನ್ನು ಎಳೆದು ತನ್ನಿ’ ನೀರೋ ಆಜ್ಞಾಪಿಸುತ್ತಾನೆ. ಅವರೆಲ್ಲರ ಮೇಲೂ ಉರುವಲು ಸುರಿದು ಬೆ೦ಕಿ ಹಚ್ಚಲಾಗುತ್ತದೆ, ಕಣ್ಣು ಕೋರೈಸುವ ಬೆಳಕು, ಉರಿ ತಾಳದೆ ಚೀರಾಡಿ ತಪ್ಪಿಸಿಕೊಳ್ಳಲು ದೇಹಗಳು ಒದ್ದಾಡುವಾಗ ಓಲಾಡುವ ಬೆ೦ಕಿಯ ಜ್ವಾಲೆ…

ಔತಣಕೂಟ ನಡೆಯುತ್ತಲೇ ಇದೆ… ಒ೦ದು ಜನಾ೦ಗದ ಸ೦ವೇದನೆ, ಬುದ್ದಿಮತ್ತೆಯ ಸಾ೦ದ್ರ ಪ್ರಜ್ಞೆ, ಒ೦ದೊ೦ದು ದೇಹ ಉರಿದು, ಕರಕಲಾಗಿ, ಬೂದಿಯಾಗುತ್ತಾ ಹೋದ ಹಾಗೆ ಒ೦ದೊ೦ದು ಅ೦ಜೂರ, ಒ೦ದೊ೦ದು ದ್ರಾಕ್ಷೀ ಹಣ್ಣು, ಒ೦ದೊ೦ದು ಗುಟುಕು ದ್ರಾಕ್ಷಾರಸವನ್ನು ಗುಟುಕರಿಸುತ್ತಾ ಇದೆ, ಪಕ್ಕದಲ್ಲಿ ದೇಹಗಳು ಒ೦ದಾದ ಮೇಲೊ೦ದರ೦ತೆ ಉರಿದು ಬೀಳುತ್ತಲೇ ಇದೆ….

ಇಲ್ಲಿ ಆ ನೀರೋ ಬಗ್ಗೆ ನಾನು ಮಾತಾಡೊಲ್ಲ, ಆತ ಕ್ರೂರಿ ಹೌದು, ವಿಕೃತ ಹೌದು, ಆದರೆ ಅವನ ಔತಣಕೂಟಕ್ಕೆ ಬ೦ದಿದ್ದರಲ್ಲ ಆ ಬುದ್ಧಿವ೦ತ, ಕವಿ ಹೃದಯದ ಜನ? ನನ್ನ ಪ್ರಶ್ನೆ ಅವರಿಗೆ, ಅವರಲ್ಲಿ ಒಬ್ಬರಾದರೂ ಅದು ತಪ್ಪು ಎ೦ದು ಹೇಳಲಿಲ್ಲವಲ್ಲ, ತಮ್ಮ ಪಾಡಿಗೆ ತಾವು ದ್ರಾಕ್ಷಾರಸ ಗುಟುಕರಿಸುತ್ತಾ ಕುಳಿತರಲ್ಲ, ಅವರ ಮೌನ ಸ್ವೀಕಾರ ನನ್ನನ್ನು ಕಾಡುತ್ತದೆ’

 

 

‍ಲೇಖಕರು G

July 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ...

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ  ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...

10 ಪ್ರತಿಕ್ರಿಯೆಗಳು

 1. D.RAVI VARMA

  ಇದು ಪಿ.ಸಾಯಿನಾಥ್ ನಮ್ಮೆಲ್ಲರನ್ನೂ ಎಚ್ಚರಿಸುವ ಕರೆ. ಅಲ್ಲಿ ಬರುವ “ನೀರೋ” ಗಳು ಬೇರೆ ಯಾರು ಅಲ್ಲ, ನಾವೇ, ಅಲ್ಲವೇ…….
  ನೋಡಿ ಹೆಣ್ಣುಮಕ್ಕಳ ಬಗ್ಗೆ ಭಾಷಣ ಮಾಡುವ ,”ಯತ್ರ ನಾರ್ಯಾಸ್ತು ಪುಜ್ಯಾನ್ತ್ತೆ ರಮಂತ್ತೆ ತತ್ರ ದೇವತಹ ” ಎಂದೆಲ್ಲ ಬೊಬ್ಬೆ ಹೊಡೆಯುವ ಜನ ಬಾಯಿಗೆ ಬೀಗ ಜಡಿದು kondiiddareye ಕೊನೆ ಪಕ್ಷ ಉಡುಪಿ ಮಂಗಳೋರಿನ, ಧರ್ಮಾಧಿಕಾರಿಗಳು ಅದ್ಯಾಕೆ ಈ ವಿಷಯದ ಬಗ್ಗೆ ಸೊಲ್ಲು ಎತ್ತುತ್ತಿಲ್ಲ, ಇಂದು ಹತ್ತಿದ ಬೆಂಕಿ ಸಂಪೂರ್ಣ ನಂದಿಸದಿದ್ದರೆ ಆ ಬೆಂಕಿ ನಾಳೆ ನಮ್ಮ ಮನೆಗೂ ಹಬ್ಬೀತು ಎನ್ನುವ ಎಚ್ಚರ ಕೂಡ ಬೇಡವೇ, ಇದು ನಮ್ಮೆಲ್ಲರಿಗೆ ಎಚ್ಚರಿಕೆಯ ಘಂತೆಯಾಗಬೇಕು, ಇಲ್ಲವಾದಲ್ಲಿ .ಮುಂದಿನ ನಮ್ಮ ಜನಾಂಗದ ಬದುಕು ,ನಮ್ಮ ಬದುಕು….ಅನಿಶಿತತೆ,ಅನ್ಯಾಯ, ದಬ್ಬಾಳಿಕೆ,ಗೆ ಬಲಿಪಶು ವಾಗಬೇಕಾದೀತು .

  ಪ್ರತಿಕ್ರಿಯೆ
 2. gunashekara murthy

  ಯಾವುದು ನಮ್ಮ ಸಂಸ್ಕೃತಿ ಸಂಸ್ಕೃತಿ ಎಂದರೇನು

  ಮೊನ್ನೆ ನಡೆದ ಪ್ರಕರಣ ಬಹು ದೊಡ್ಡ ಆಘಾತವನ್ನು ಸೃಷ್ಟಿಸಿದೆ. ಅಲ್ಲಿ ನಿಜವಾಗಿ ತಪ್ಪುಗಳು ನಡೆದಿರಬಹುದು. ಅದಕ್ಕಾಗಿ ಹೊಡೆಯುವುದು ಅಸ್ಲೀಲ ಮಾತುಗಳಾನಾಡುವುದು ಅದಕ್ಕಾಗಿ ಕಾನೂನು ಕೈಕೆತ್ತಿಕೊಳ್ಳುವುದು. ಇಂದು ಸರ್ವ ಸಾಮಾನ್ಯವಾಗಿ ಬಿಟ್ಟಿದೆ. ಕಾನೂನು ಏನು ಮಾಡುತ್ತಿದೆ ಪೋಲಿಸ್ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಅವರ ಮೇಲೆ ಹೋರಾಟ ಕ್ರಮ ಕೈಗೊಳ್ಳಿ. ಈ ಹಿಂದೆ ಉತ್ತರ ಭಾರತದಲ್ಲಿ ಒಂದು ಮಗಳು ಗಂಡನಿಂದ ವಿಚ್ಚೇಧನ ಪಡೆದು ಬೇರೆ ಧರ್ಮದವನನ್ನು ಮದುವೆ ಮಾಡಿಕೊಂಡು ಹೋಟಲ್ ಒಂದರಲ್ಲಿ ಕುಳಿತು ತಿಂಡಿ ತಿನ್ನುತ್ತಿರೆ, ಅವರನ್ನು ಹೊಡೆದು ಬೇರೆ ಧರ್ಮದವನನ್ನು ಹೇಗೆ ಮಾದುವೆಯಾದೆ ಎಂದು ಹೊಡೆದಿರುವುದು ಏಷ್ಟುಸರಿ ?. ಇವರೇನು ಭಾರತವನ್ನು ಗುತ್ತಿಗೆ ಕೊಂಡವರೇನು ಇದರ ಹಿಂದೆ ಆರ್ ಎಸ್ ಎಸ್ ನ ಹುಟ್ಟುಗಳಾದ ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದ್ ಪರಿಷತ್, ಹಿಂದು ಮಂಚ್ ಇಂತಹ ಅನೇಕ ಸಂಸ್ಥೆಗಳು ಈ ಕಾರ್ಯಕ್ಕೆ ಬಹು ಮುಂದಾಗಿ ಮುಂದೆ ನಿಲ್ಲುತ್ತದೆ. ಇದನ್ನು ತಾಯಿಸಂಸ್ಥೆಯು ಇವರಿಗೂ ನಮಗೂ ಸಂಭಂಧವಿಲ್ಲವೆಂದು ಹೇಳಬಹುದು. ಆ ಸಂಸ್ಥೆ ಬರೆಯುವ ಲೇಖನಿಯಲ್ಲಿ ಈ ಸಿದ್ಧಾಂತವನ್ನೆ ಏತ್ತಿ ಹಿಡಿದಿರುತ್ತಾ ಬಂದಿರುತ್ತದೆ. ನಾವು ಹಿಂದುಗಳು ನಮ್ಮ ಸಂಸ್ಕೃತಿಯನ್ನು ಬಿಡಬಾರದು. ಅದನ್ನು ಬೇರೆ ಹೊರದೇಶದ ಸಂಸ್ಕೃತಿಗಳು ಬಂದು ಹಾಳುಮಾಡುತ್ತಿದೆ. ಸಂಸ್ಕೃತಿಯ ಬರುವಿಕೆ ತಡೆಯಬೇಕು ಏಂದೇ ಬರೆಯುತ್ತಿದ್ದಾರೆ. ಹಾಗಾದರೇ ನಮ್ಮ ಸಂಸ್ಕೃತಿ ಯಾವುದಿದೆ ಹೇಳಿ ? ನಮ್ಮ ದೇಶದ ಕಾನೂನು ಬ್ರೀಟಿಷರ ಕೊಡುಗೆಯೇ ಹೆಚ್ಚು, ಶಾಸನ ಸಭೆ, ವಿಧಾನ ಸಭೆ, ಹಠಾರ ಕಛೇರಿಗಳ ವ್ಯೆವಸ್ಥೆ, ಪ್ಯಾಂಟ್, ಷರ್ಟು, ಟೈ, ಬೂಟು, ಕಣ್ಣಡಕ, ಕಾಗದ, ಟೀ, ಕಾಫಿ, ಬಾದುಷ, ಜಾಂಗೀರು, ಪಲವ್, ವಿಙ್ಞಾನಗಳು, ಟಿವಿ, ಕಂಪ್ಯೂಟರ್, ಟಾರ್ ರೋಡ್, ಹೋಟಲ್, ಕಾರು, ಬಸ್ಸು, ವಾಹನ, ಹೀಗೆ ಒಂದು ದಿನವೆಲ್ಲಾ ಬರೆಯಬಹುದು ಇದನ್ನು ಬಿಡುವರೇ, ಈ ಜನಾ ೩೦೦೦ ಸಾವಿರ ವರ್ಷದ ಸಂಸ್ಕೃತಿ ಹೋಗಬೇಕಾದಿತ್ತು ಮುಂದೆ ಇಂತಹ ಮುಠ್ಠಾಳರಾಗದಿರಿ ಎಂದು ನನ್ನ ಮನವಿ.

  ಪ್ರತಿಕ್ರಿಯೆ
 3. Somashekar BR

  ಮಂಗಳೂರಿನ ಘಟನೆ ಖಂಡಿಸಿ ಆದ ಪ್ರತಿಭಟನೆಗಳೆಷ್ಟು? ಮೈಸೂರು ಘಟನೆ ಖಂಡಿಸಿ ಆದ ಪ್ರತಿಭಟನೆಗಳೆಷ್ಟು? ಮೈಸೂರಿನ ಘಟನೆ ಖಂಡಿಸಿ ಮಾಧ್ಯಮಗಳೇಕೆ ಮೂರು ದಿನ ಚರ್ಚೆಗಳನ್ನು ಏರ್ಪಡಿಸಲಿಲ್ಲ? ಅಗ್ನಿ ಶ್ರೀಧರ್ ಏಕೆ ಮೇಣದಬತ್ತಿ ಹಿಡಿದು ಬೀದಿಗಿಳಿಯಲಿಲ್ಲ? ಇದು ಪಕ್ಷಪಾತವಲ್ಲವೇ???? ನೀವು ಹೇಳುತ್ತಿರುವ ಮೌನ ಇದೇನಾ ಅಥವಾ ಬೇರೆಯಾ??

  ಪ್ರತಿಕ್ರಿಯೆ
 4. Srivathsa Joshi

  ಮೂಲ ’ನೀರೊ’ ದಂತಕಥೆಯ ವಾಸ್ತವವನ್ನು ಅರಿಯಲಿಚ್ಛಿಸುವವರು ಇದನ್ನು ಗಮನಿಸಬಹುದು:

  “ಕ್ರಿಸ್ತಶಕ ಒಂದನೇ ಶತಮಾನದಲ್ಲಿ ರೋಮನ್ ಚಕ್ರವರ್ತಿಯಾಗಿದ್ದ ನೀರೊ ದೊಡ್ಡದೊಂದು ಅಪವಾದ ಹೊತ್ತುಕೊಂಡವನಾಗಿಯೇ ನಮಗೆ ಪರಿಚಿತ. ಅದೇನೆಂದರೆ ತಾನೇ ರೋಮ್ ನಗರಕ್ಕೆ ಬೆಂಕಿಯಿಟ್ಟ ಮಾತ್ರವಲ್ಲ, ಅದು ಧಗಧಗ ಉರಿದು ನಾಶವಾಗುತ್ತಿರಬೇಕಾದರೆ ಆರಾಮಾಗಿ ಪಿಟೀಲು ಬಾರಿಸುತ್ತ ನಿಂತಿದ್ದ ಎಂದು! ಅನಾಹುತಗಳ ಸಂದರ್ಭದಲ್ಲಿ ಉನ್ನತ ಸ್ಥಾನದಲ್ಲಿರುವವರ ಅಸಡ್ಡೆಯ ಬಣ್ಣನೆಗೆ ಈಗಲೂ ನೀರೊ ಒಬ್ಬ ಮಾದರಿ ಪುರುಷ.

  ಆದರೆ ವಾಸ್ತವವೇನೆಂದರೆ ಒಂದನೇ ಶತಮಾನದಲ್ಲಿನ್ನೂ ಪಿಟೀಲಿನ ಆವಿಷ್ಕಾರವೇ ಆಗಿರಲಿಲ್ಲ; ಅಷ್ಟೇ ಅಲ್ಲ, ಕ್ರಿ.ಶ 64ರಲ್ಲಿ ಆ ಅಗ್ನಿ ಅನಾಹುತ ಸಂಭವಿಸುವಾಗ ನೀರೊ ರೋಮ್ ನಗರದಲ್ಲಿರಲೇ ಇಲ್ಲ. 35 ಮೈಲು ದೂರದ ಆಂಟಿಯಮ್ ಪಟ್ಟಣದಲ್ಲಿದ್ದ. ಈ ಅಂಶವನ್ನು ಸಮಕಾಲೀನ ರೋಮನ್ ಚರಿತ್ರಕಾರರಾದ ಕಾಸಿಯಸ್ ಡಿಯೊ, ಟಾಸಿಟಸ್ ಮುಂತಾದವರೆಲ್ಲ ದಾಖಲಿಸಿದ್ದಾರೆ. ಬೆಂಕಿ ಬಿದ್ದ ಸುದ್ದಿ ತಿಳಿದ ಕೂಡಲೆ ನೀರೊ ರೋಮ್‌ಗೆ ಧಾವಿಸಿ ಬೆಂಕಿ ಆರಿಸುವುದಕ್ಕೆ ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸುವುದಕ್ಕೆ ನೆರವಾದನೆಂದು ಅವರು ಬರೆದಿದ್ದಾರೆ.

  ಹಾಗಿದ್ದೂ ಏಕೆ ನೀರೊನ ಮೇಲೆ ಅರ್ಥವಿಲ್ಲದ ಅಪವಾದ? ಅದಕ್ಕೆ ಕಾರಣವಿದೆ. ತನ್ನ ಸ್ವಂತ ತಾಯಿಯನ್ನೂ, ಹೆಂಡತಿಯನ್ನೂ ಕೊಂದ ಕುಖ್ಯಾತಿ ನೀರೊನದು. ರೋಮ್ ನಗರವನ್ನು ಸಂಪೂರ್ಣ ನಾಶಮಾಡಿ ಹೊಸದಾಗಿ ತನಗೆ ಬೇಕಾದ ರೀತಿಯಲ್ಲಿ ಕಟ್ಟುವುದು ಅವನ ಮಹದಾಸೆ. ಹಾಗಾಗಿ ಅಕಸ್ಮಾತ್ತಾಗಿ ರೋಮ್‌ಗೆ ಬೆಂಕಿ ಬಿದ್ದಾಗ ನೀರೊ ಬೇಕಂತಲೇ ಮಾಡಿರಬಹುದೆಂದೂ, ರೋಮ್ ಉರಿಯುತ್ತಿರುವುದನ್ನು ಕಂಡು ಆತ ಆನಂದತುಂದಿಲನಾಗಿರಬಹುದೆಂದೂ ಪ್ರಜೆಗಳಿಗೆ ‘ರೋಮ ಉರಿ’ಯುವಷ್ಟು ಸಿಟ್ಟು ಬಂತು. ರೋಮ್‌ಗೆ ಬೆಂಕಿ ಹತ್ತಿಕೊಂಡಂತೆ ನೀರೊನ ಹೆಸರಿಗೆ ಅಪವಾದ ಹತ್ತಿಕೊಂಡಿತು!”

  [ಪರಾಗಸ್ಪರ್ಶ ಅಂಕಣ, ವಿಜಯ ಕರ್ನಾಟಕ, 23 ಮಾರ್ಚ್ 2008]

  ಪ್ರತಿಕ್ರಿಯೆ
  • D.RAVI VARMA

   ಶ್ರೀವತ್ಸ ಸರ್, ನೀರೋ ಬಗ್ಗೆ ಮತ್ತೊಂದು ಸತ್ಯವನ್ನು ತಿಳಿಸಿದ್ದಕ್ಕೆ ಅನಂತ ವಂದನೆಗಳು . ಈ ಅಂತರ್ಸತ್ಯಸತ್ಯ ನನಗೆ ತಿಳಿದಿರಲಿಲ್ಲ, ಅಥವಾ ಇತಿಹಾಸದ ಯಾವ ಪುಟಗಳಲ್ಲೂ ಇದು ಉಲ್ಲೇಖವಾಗಿಲ್ಲ. ಬಿಡಿ, ನಮ್ಮ ಇತಿಹಾಸವನ್ನು ಅದೆಸ್ತು ತಿರುಚಿ, ತಿರುಚಿ ಬರೆದಿದ್ದರೆಂದರೆ ,ಅದರ ಮೂಲ ಸತ್ಯಗಳೇ ಮರೆಮಾಚಿ ಹೋಗಿವೆ, ಇಲ್ಲಿ ಹಂಪಿಯಲ್ಲಿ ಈಗ ಪೂಜೆ ಹಾಗುತ್ತಿರುವ ಗುಡಿಗಳೆಂದರೆ ಉದ್ದಾನ ವೀರಭದ್ರದೆವಸ್ತಾನ .ಹಂಪಿಯ ವಿರುಪಾಕ್ಷ ದೇವಸ್ತಾನ, ಬದವಿಲಿಂಗ ಹೀಗೆ ಹೀಗೆಶೈವ ಪರಂಪರೆಗೆ ಸಂಭಂದಿಸಿದ ಗುಡಿಗಳು ಅಲ್ಲಿ ನಾಶವಾಗಿಲ್ಲ, ಆದರೆ ವೈಷ್ಣವ ಪರಂಪರೆಗೆ ಸಂಬಂದಿಸಿದ ಗುಡಿ ಹಾಗು ವಿಗ್ರಹಗಳು ನಾಶವಾಗಿವೆ, ಬದವಿಲಿಂಗ ಉಗ್ರ ನರಸಿಂಹ ವಿಗ್ರಹದ ಪಕ್ಕದಲ್ಲೇ ಇದೆ. ಇದು ಶೈವ ಮತ್ತು ವೈಷ್ಣವರ ಮದ್ಯೆ ನಡೆದ ಅಂತರ್ಕಲಹದಿಂದಾಗಿ ನಡೆದ ಅನಾಹುತ, ನಾಶ ಅಸ್ತೆ. ಆದರೆ ಇಂದಿಗೂ ಅಲ್ಲಿಯ guidegalu ತಿರುಚಿ ಹೇಳುತ್ತಿರುವ ದೆನೆಂದರೆ ವಿಜಯನಗರ ಸಾಮ್ರ್ಜ್ಯದ ಮೇಲಾದ ದಂಡಯಾತ್ರೆಯಲ್ಲಿ ಈ ವಿಗ್ರಹಗಳನ್ನು ನಾಶಮಾಡಲಾಗಿದೆ ಎಂದೇ ಹೇಳುತಿದ್ದಾರೆ. ಇದು ನಮ್ಮಐತಿಹಾಸಿಕ ದುರಂತವಲ್ಲವೇ .

   ರವಿ ವರ್ಮ ಹೊಸಪೇಟೆ …

   ಪ್ರತಿಕ್ರಿಯೆ
 5. Nataraju S M

  ಈ ಪುಟ್ಟ ಕತೆಗೆ ಸ್ಪಂದಿಸಿದ ಸಹೃದಯಿಗಳಿಗೆಲ್ಲಾ ವಂದನೆಗಳು..
  ಸೋಮಶೇಖರ ಸರ್, ಈ ಕಥೆಯ ಓದಿ ನೀವು ಪ್ರತಿಕ್ರಿಯೆ ನೀಡಿದ್ದೀರಿ ಎಂದರೆ ನಿಮ್ಮಲ್ಲೂ ಪ್ರತಿಭಟನೆಯಿದೆ ಎಂದಾಯಿತು.. ತಪ್ಪುಗಳನ್ನು ಖಂಡಿಸಲು ಕೆಲವರಷ್ಟೇ ಮೇಣದ ದೀಪವನಿಡಿದು ಮೆರವಣಿಗೆ ಮಾಡಬೇಕಾಗಿಲ್ಲ.. ನಾವೂ ನೀವು ಎಲ್ಲರೂ ಪ್ರತಿಭಟಿಸಬಹುದು.. ನೀವು ಕೇಳಿದ ಮಾಧ್ಯಮದ ಮೌನದ ಕುರಿತ ಪ್ರಶ್ನೆಯನು ಮಾಧ್ಯಮದವರೇ ಉತ್ತರಿಸಬೇಕಷ್ಟೆ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..
  ಶ್ರೀವತ್ಸ ಸರ್, ಇತಿಹಾಸದ ಮತ್ತೊಂದಷ್ಟು ಪುಟಗಳನ್ನು ನಮ್ಮೊಡನೆ ಹಂಚಿಕೊಂಡಿದಕ್ಕೆ ನಿಮಗೆ ಧನ್ಯವಾದಗಳು..

  ಪ್ರತಿಕ್ರಿಯೆ
 6. ushakattemane

  ಕೆಲವು ಜನರು ಮಂಡ್ಯ ಘಟನೆಯನ್ನೂ ಮಂಗಳೂರಿನ ಘಟನೆಯನ್ನೂ ಹೋಲಿಸಿ ಮಾತಾಡುತ್ತಾರೆ.
  ನಿಜ ಎರಡೂ ಹೇಯ ಕೃತ್ಯಗಳೇ..ಎರಡೂ ಖಂಡನೀಯವೇ..
  ಆದರೆ ಇಲ್ಲಿ ಗಮನಿಸಬೇಕಾದ್ದು..ಮಂಡ್ಯ ಘಟನೆ ಮೂರ್ನಾಲ್ಕು ಪುಂಡರು ವ್ಯಯಕ್ತಿಕ ತೆವಲು ತೀರಿಸಿಕೊಳ್ಳಲು ಮಾಡಿದ ಪ್ರಯತ್ನ.
  ಆದರೆ ಮಂಗಳೂರಿನಲ್ಲಿ”ಹಿಂದೂ ಜಾಗರಣ ವೇದಿಕೆ’’ ಎಂಬ ಸಂಘಟನೆ, ಸಂಸ್ಕೃತಿಯ ಹೆಸರಿನಲ್ಲಿ ನಡೆಸಿರುವ ವ್ಯವಸ್ಥಿತ ಧಾಳಿಯದು. ಇದಕ್ಕೆ ರಾಜಕೀಯ ಮುಖವೂ ಇದೆ. ಇದು ಹೆಚ್ಚು ಅಪಾಯಕಾರಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: