ಮಕ್ಕಳಿಗಾಗಿ ಎರಡು ಪದ್ಯಗಳು!

– ಸಿ. ವಿ. ಶೇಷಾದ್ರಿಹೊಳವನಹಳ್ಳಿ

 

ಆ ಅರಸ ನಾನೇನೆ

ಮಾವಿನ ಹಣ್ಣಿಗೆ ಒಂದೆ ವಾಟೆ.

ನಮ್ಮೂರಲ್ಲು ಇದೆ ಕೋಟೆ.

 

ಎಲ್ಲಾ ನದಿಗೆ ಎರಡೇ ತೀರ.

ಕೋಟೆ ತುಂಬ ಸುಂದರ.

 

ತೆಂಗಿನ ಕಾಯಿಗೆ ಮೂರೇ ಕಣ್ಣು.

ಕೋಟೆಯ ಒಳಗೆ ಬರಿ ಮಣ್ಣು.

 

ಬೆಲ್ಲದ ಅಚ್ಚಿಗೆ ನಾಲ್ಕೇ ಮೂಲೆ.

ಮಣ್ಣಿನ ಮೇಲಿದೆ ಉಯ್ಯಾಲೆ.

 

ಪಂಚಾಮೃತಕ್ಕೆ ಐದೇರಸ.

ಉಯ್ಯಾಲೆ ಮೇಲೊಬ್ಬ ಅರಸ.

 

ಋತುಗಳು ಎಂದರೆ ಆರು ತಾನೆ?

ಆ ಅರಸ ನಾನೇನೆ.

 

ನಿಂದಲ್ಲ

ಕೆನ್ನೆಕೊಡು .ನಿಂದಲ್ಲ.

ಮಾವಿನ್ ಹಣ್ಣಿಂದು

 

ಬಟ್ಟೆ ಬಿಚ್ಚು ನಿಂದಲ್ಲ

ಬಾಳೆ ಹಣ್ಣಿಂದು.

 

ಕಣ್ ಕೀಳು ನಂದಲ್ಲ

ಹಲಸಿನ್ ಬೀಜದ್ದು.

 

ಕೈ ಕೊಡು ನಿಂದಲ್ಲ

ಅನ್ನ ಹಾಕೋದು.

 

ಬಾಯ್ ಮುಚ್ಚು ನಿಂದಲ್ಲ

ಹಾಲಿನ್ ಕ್ಯಾನಿಂದು.

 

ಕಾಲ್ ಮಡ್ಸು ನಿಂದಲ್ಲ

ಚೇರಿಂದು.

 

ಬಾಯ್ ಬಡಿ ನಿಂದಲ್ಲ

ಮಣ್ಣಿನ್ ಮಡಕೆಯದು.

 

ಊದಿ ಬಿಡು ಬಲೂನಲ್ಲ.

ಪಿಳ್ಳಂಗೋವಿ.

 

ನೇಣ್ ಹಾಕು ನಂಗಲ್ಲ

ಬಿಂದಿಗೆಗೆ.

 

ಕಲ್ಲೆಸಿ ನಂಗಲ್ಲ

ಎಳಚಿಮರಕ್ಕೆ.

 

ನೂಕಿ ಬಿಡು ನನ್ನಲ್ಲ

ಸೈಕಲ್ಲು.

 ]]>

‍ಲೇಖಕರು G

July 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

  • Gururaj

   ಶೇಷಾದ್ರಿಯವರ ಕವನಗಳು ಚೆನ್ನಾಗಿವೆ , ಭಿನ್ನವಾಗಿಯೂ ಇವೆ. ತುಂಬಾ ಇಷ್ಟವಾಯಿತು.
   ಶೇಷಾದ್ರಿಯವರಿಗೆ ಅಭಿನಂದನೆಗಳು.

   ಪ್ರತಿಕ್ರಿಯೆ
 1. ಎಚ್. ಸುಂದರ ರಾವ್

  ಆಗಲಿ, ಮಕ್ಕಳ ಪದ್ಯಗಳಿಗೂ ಒಂದು ಜಾಗ ಕೊಟ್ಟಿದ್ದೀರಿ, ತುಂಬ ಸಂತೋಷ.
  ಶೇಷಾದ್ರಿಯವರ ಕವನಗಳು ಚೆನ್ನಾಗಿವೆ, ಭಿನ್ನವಾಗಿಯೂ ಇವೆ. ಸಾಮಾನ್ಯವಾಗಿ ಮಕ್ಕಳ ಪದ್ಯಗಳಲ್ಲಿ ಕಾಣುವ ಉಪದೇಶ, ಆದರ್ಶಗಳಿಂದ ಹೊರಗೆ ಬಂದಿವೆ. ಲವಲವಿಕೆ ಇದೆ.
  ಮಕ್ಕಳ ಪದ್ಯಗಳನ್ನು ರಾಗವಾಗಿ ಹಾಡಲು ಸಾಧ್ಯವಾದರೆ ಚೆನ್ನ. ಹಾಗಿರಬೇಕಾದರೆ ಪದ್ಯ ಛಂದೋಬದ್ಧವಾಗಿರಬೇಕು. “ನಿಂದಲ್ಲ” ಪದ್ಯದಲ್ಲಿ ಕೆಲವು ಕಡೆ ಛಂದಸ್ಸನ್ನು ಬಿಡುವುದರಿಂದ, ಓದುವಾಗ ಎಡವಿದಂತಾಗುತ್ತದೆ. ಉದಾಹರಣೆಗೆ: “ಬಾಯ್ ಬಡಿ ನಿಂದಲ್ಲ, ಮಣ್ಣಿನ ಮಡಕೆಯದು” ಎಂಬ ಚರಣದ ನಂತರ “ಊದಿ ಬಿಡು ಬಲೂನಲ್ಲ, ಪಿಳ್ಳಂಗೋವಿ” ಎಂಬ ಚರಣ ಇದೆ. ಇಲ್ಲಿ ಛಂದಸ್ಸು ತಪ್ಪುತ್ತದೆ. ಪಿಳ್ಳಂಗೋವಿ ಎಂದರೆ ಕೊಳಲು ತಾನೆ? ಕೊಳಲು ಶಬ್ದವನ್ನೇ ಇಲ್ಲಿ ಕೂರಿಸಬಹುದು. ಪಿಳ್ಳಂಗೋವಿ ಎಂಬುದು ಮಕ್ಕಳಿಗೆ ಸ್ವಲ್ಪ ಕಷ್ಟದ ಶಬ್ದವೂ ಹೌದು. ಇನ್ನು ಬಲೂನಿನ ಉದಾಹರಣೆಯೂ ಅಷ್ಟು ಸಮಂಜಸವಾಗುವುದಿಲ್ಲ. ಮಕ್ಕಳಿಗೆ ಬಲೂನು ಊದುವುದು ಸಂತೋಷದ ಕೆಲಸ. ಅದನ್ನು ನಿಷೇಧಿಸುವುದು ಅಷ್ಟು ಚೆನ್ನಾಗಿ ಕಾಣುವುದಿಲ್ಲ.
  “ಆ ಅರಸ ನಾನೇನೆ” ಪದ್ಯ ಹತ್ತು ಎಣಿಸುವವರೆಗೂ ಮುಂದುವರಿದಿದ್ದರೇ ಚೆನ್ನಾಗಿತ್ತು. ಲೆಕ್ಕದಲ್ಲಿ ಹತ್ತು ಒಂದು ಹಂತ ತಾನೆ? ಅಲ್ಲದೆ “ಪಂಚಾಮೃತ”, “ರಸ”ಗಳನ್ನು ಹೊರಗಿಡಬಹುದಿತ್ತು. ಆ ವಸ್ತುಗಳು ಮಕ್ಕಳ ಪ್ರಪಂಚಕ್ಕೆ ಹತ್ತಿರವಾದವು ಅಲ್ಲ.
  ಏನಿದ್ದರೂ ಶೇಷಾದ್ರಿಯವರಿಗೆ ಅಭಿನಂದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: