’ಮಗುವಿಗೆ ಗ್ರೈಪ್ ವಾಟರ್….’ – ಮಣಿಕಾ೦ತ್ ನೆನೆಸಿಕೊ೦ಡಿದ್ದು

ಎ ಆರ್ ಮಣಿಕಾಂತ್ ಅದು ೨೦೦೦ ದ ಇಸವಿಯ ಏಪ್ರಿಲ್ ೧.ಅವತ್ತು ಜಗತ್ತೇ ನಗುತ್ತಿತ್ತು.ಗೆಳೆಯರು ಮಾತಿಗೊಮ್ಮೆ ಏಪ್ರಿಲ್ ಫೂಲ್ ಎಂದು ಹೇಳಿ ಖುಷಿಪಡುತ್ತಿದ್ದರು.ಆದರೆ ಅವತ್ತು ನಾನು ನಗುವ ಸ್ಥಿತಿಯಲ್ಲಿ ಇರಲಿಲ್ಲ.ಕಾರಣ,ಅವತ್ತೇ ನಾನು ನೌಕರಿಯಿಂದ ವಜಾ ಆಗಿದ್ದೆ..ಸಂಯುಕ್ತ ಕರ್ನಾಟಕದಲ್ಲಿದ್ದ ಕೊಳಕು ಮನಸ್ಸುಗಳ ತಂತ್ರಕ್ಕೆ ಬಲಿಯಾಗಿದ್ದೆ.ಮನೆ ಬಿಡುವ ಮುನ್ನವೇ- ಮಗುವಿಗೆ ಗ್ರ್ಯಫ್ ವಾಟರ್ ಇಲ್ಲ.ಸಂಜೆ ತಪ್ಪದೆ ತನ್ನಿ ಎಂದು ಹೆಂಡತಿ ಹೇಳಿದ್ದಳು.ರೈಲಿನ ಪಾಸ್ ಹಿಂದಿನ ದಿನವೇ ಮುಗಿದಿತ್ತು.ಹೊಸದಾಗಿ ಪಾಸ್ ಮಾಡಿಸಲೂ ಜೇಬಲ್ಲಿ ದುಡ್ಡು ಇರಲಿಲ್ಲ.ಅಂತ ಸಂಕಟದ ಕಾಲದಲ್ಲಿ ನೌಕರಿ ಹೋಗಿತ್ತು.ಆಗೆಲ್ಲ,ಸಂಯುಕ್ತ ಕರ್ನಾಟಕದಲ್ಲಿ ಸಂಬಳ ಆಗುತ್ತಿದ್ದುದು ೭ ನೆ ತಾರೀಖು.ನೌಕರಿಯೇ ಹೋದ ಮೇಲೆ ಸಂಬಳವೂ ಹೋದ ಹಾಗೆ ಎಂಬುದು ಗ್ಯಾರಂಟಿ ಆಯ್ತು.ನನ್ನ ಅಸಹಾಯಕತೆ,ಕೆಟ್ಟ ಜನ ಕೊಟ್ಟ ಕಾಟ,ಆಡಿದ ಕೆಟ್ಟ ಮಾತು,ಮಾಡಿದ ನಿರಂತರ ವಂಚನೆ ನೆನೆದು ವಿಪರೀತ ಅಳು ಬಂತು.ಬಸ್ ಹತ್ತಿ ಕೂತು ಸಮಾಧಾನ ಆಗುವಷ್ಟು ಅತ್ತೆ. ಮಂಡ್ಯಕ್ಕೆ ಟ್ರೈನ್ ಇದ್ದುದು ಸಂಜೆ ೬ ಗಂಟೆಗೆ.ನಾನು ಮಜೆಸ್ಟಿಕ್ ತಲುಪಿದಾಗ ೪ ಗಂಟೆ ಆಗಿತ್ತು.ಸಂಜೆ ತನಕ ಹೇಗಾದರೂ ಕಾಲ ತಳ್ಳೋಣ ಅಂದುಕೊಂಡು ಮಜೆಸ್ಟಿಕ್ ನಲ್ಲಿ ಹುಚ್ಚನಂತೆ ತಿರುಗುತ್ತಿದ್ದಾಗ ಅವನು ಸಿಕ್ಕಿಬಿಟ್ಟ… ಅವನು ದೀಕ್ಷಿತ್.ಅವನ ಪೂರ್ತಿ ಹೆಸರು ನಾಗರಾಜ ದೀಕ್ಷಿತ್. ಈಗ ಜನಶ್ರೀ ಚಾನೆಲ್ ನಲ್ಲಿದ್ದಾನೆ.ಬಹುಶ ಮೈಸೂರಿನವನು.ನನ್ನೂರು ಮಂಡ್ಯದಲ್ಲಿ ಪರಿಚಯ ಆದವನು.ಅದ್ಯಾವ ಕಾರಣವೋ ಕಾಣೆ,ಈ ದೀಕ್ಷಿತ್ ಗೆ ನನ್ನ ಮೇಲೆ ವಿಪರೀತ ಅಭಿಮಾನ.ಎಲ್ಲಿ ಸಿಕ್ಕರೂ ಅಕ್ಕರೆಯಿಂದ ಮಾತಾಡುತ್ತಾನೆ.ನಾನು ನಿನ್ನ ಫ್ಯಾನ್ ಮಣೀ ಅನ್ನುತ್ತಾನೆ.ಯಾವುದೋ ಬರಹ ನೆನೆದು ಮೆಚ್ಚುಗೆಯ ಮಾತು ಹೇಳುತ್ತಾನೆ.ಅಂತ ದೀಕ್ಷಿತ್ ಅವತ್ತು ಸಿಕ್ಕ.ನೀವು ಏನೇ ಹೇಳಿ,ಸಂಕಟ ಅನ್ನೋದು ಮನುಷ್ಯನಿಗೆ ಬೇಡಲು ಕಲಿಸುತ್ತದೆ.ಬಡತನ ಮನುಷ್ಯನನ್ನು ನಾಚಿಕೆ ಬಿಟ್ಟು ಯಾಚಿಸಲು ಕಲಿಸುತ್ತದೆ.ಅವತ್ತು ದೀಕ್ಷಿತ್ ಸಿಕ್ಕಾಗ ನಾನು ಸಂಕೋಚದಿಂದ ಕೇಳಿದ್ದೆ….೨೦೦ ರುಪಾಯಿ ಬೇಕಿತ್ತು..! ದೀಕ್ಷಿತ್ ತಕ್ಷಣ ಕೊಟ್ಟಿದ್ದ.ಆ ದುಡ್ಡು ಮಗುವಿಗೆ ಗ್ರ್ಯಫ್ ವಾಟರ್ ಖರೀದಿಸಲು, ಟ್ರೈನ್ ನ ಪಾಸ್ ನವೀಕರಿಸಲು ಸರಿಹೋಯಿತು. ವಾರದ ಹಿಂದೆ ಕೋರಮಂಗಲದಲ್ಲಿ ಆಕಸ್ಮಿಕವಾಗಿ ದೀಕ್ಷಿತ್ ಸಿಕ್ಕಿದ್ದ. ಏನ್ ಮಣಿ ಇಷ್ಟು ದೂರಾ ಅನ್ನುತ್ತ ಆತ್ಮೀಯವಾಗಿ ತಬ್ಬಿಕೊಂಡ. ನೀಲಿ ಹೇಗಿದ್ದಾಳೆ ಎಂದು ವಿಚಾರಿಸಿದ. ಹೊಸದೇನು ಬರೆದೆ ಅಂತ ಕೇಳಿದ.ಜಾಸ್ತಿ ಬರಿಬೇಕೂ ಅಂತ ಆರ್ಡರ್ ಮಾಡಿದ.ಬೀಳ್ಕೊಡುವ ಮುನ್ನ ಬಾಚಿ ತಬ್ಬಿಕೊಂಡ.ತಕ್ಷಣವೇ ನನಗೆ ಅವನು ಕೊಟ್ಟಿದ್ದೆ ೨೦೦ ರುಪಾಯಿ…ಅವತ್ತು ಹೇಳಿದ್ದ ಧೈರ್ಯದ ಮಾತು ಎಲ್ಲಾ ನೆನಪಾಯ್ತು….ಈಗ ಹಳೆಯದನ್ನೆಲ್ಲ ನೆನಪು ಮಾಡಿಕೊಂಡು ನಾನು ಹೇಳೋದು ಇಷ್ಟೇ…ನಮ್ಮ ದೀಕ್ಷಿತ್ ಎಂದೆಂದೂ ಖುಷಿಯಾಗಿರಲಿ…ಚೆನ್ನಾಗಿರಲಿ…]]>

‍ಲೇಖಕರು G

February 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

7 ಪ್ರತಿಕ್ರಿಯೆಗಳು

 1. Gopal Wajapeyi

  ಹೌದು ಮಣಿ… ‘ಆ ದಿನಗಳು’ ನಿಜಕ್ಕೂ ಕರಾಳ, ಬರ್ಬರ. ಆ ಸಂದರ್ಭದಲ್ಲಿದ್ದ ಒಬ್ಬೊಬ್ಬನ ಅನುಭವವೂ ಒಂದೊಂದು ಕೆಟ್ಟ ಕಾದಂಬರಿ. ಆ ಪುಣ್ಯಾತ್ಮ ನಾಗರಾಜ ದೀಕ್ಷಿತ ಸದಾಕಾಲ ನಗುನಗುತ್ತಲೇ ಇರಲಿ.

  ಪ್ರತಿಕ್ರಿಯೆ
 2. Sritri

  ಹೃದಯ ಸ್ಪರ್ಶಿ ಬರಹ. ಗ್ರ್ಯಫ್ ವಾಟರ್ ಕುಡಿದ ಮಗುವೂ, ನಿಮ್ಮ ಗೆಳೆಯನೂ ಎಂದೂ ಖುಷಿಯಾಗಿರಲಿ.

  ಪ್ರತಿಕ್ರಿಯೆ
 3. prakash hegde

  ಮಣಿ ಸರ್..
  ಓದಿ ಸಂಕಟವಾಯಿತು….
  ಕಷ್ಟಗಳೇ ಹೀಗೆ…
  ಬೇಡುವದನ್ನು ಕಲಿಸುತ್ತವೆ….

  ಪ್ರತಿಕ್ರಿಯೆ
 4. Roopa Sathish

  Sir,
  odi.. namma maneya, nanna tande taayiya hindina sthithi gathi nenapaaythu…….!
  ,,,kashtagaLu jeevanadalli tumbaa paatagaLannu kalisibidtave

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: