ಮಣಿಕಾಂತ್ ಬರೆದಿದ್ದಾರೆ: ಅಮೆರಿಕ ಅಮೆರಿಕಾ!

ಎ ಆರ್ ಮಣಿಕಾಂತ್
ಒಂದು ಹಾಡಿಗಾಗಿ ಐವತ್ತು ಟ್ಯೂn gaಳನ್ನು ತಂದಿದ್ದರು ಮನೋಮೂತರ್ಿ
ನೂರು ಜನ್ಮಕೂ ನೂರಾರು ಜನ್ಮಕೂ…
ಚಿತ್ರ ಅಮೆರಿಕ ಅಮೆರಿಕಾ! ಗೀತೆರಚನೆ: ನಾಗತಿಹಳ್ಳಿ ಚಂದ್ರಶೇಖರ್.
ಸಂಗೀತ: ಮನೋಮೂತರ್ಿ. ಗಾಯನ: ರಾಜೇಶ್ ಕೃಷ್ಣನ್, ಸಂಗೀತಾ ಕಟ್ಟಿ.
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರೆಯೇ ಒಲಿದೊಲಿದು ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ ||ಪ||
ಬಾಳೆಂದರೆ ಪ್ರಣಯಾನುಭಾವ
ಕವಿತೆ ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ
ಸುತ್ತೇಳು ಲೋಕದಲಿ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೆ ||1||
ಬಾ ಸಂಪಿಗೆ ಸವಿಭಾವ ಲಹರಿ
ಹರಿಯೇ ಪನ್ನೀರ ಜೀವನದಿ
ಬಾ ಮಲ್ಲಿಗೇ ಮಮಕಾರ ಮಾಯೆ
ಲೋಕದ ಸುಖವೆಲ್ಲಾ ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೆ ಕಣ್ಣಾಗಿ ||2||
ಸದಭಿರುಚಿಯ ಚಿತ್ರಗಳ ನಿದರ್ೇಶಕ ಎಂದೇ ಹೆಸರಾದವರು ನಾಗತಿಹಳ್ಳಿ ಚಂದ್ರಶೇಖರ್. ಅವರ ನಿದರ್ೇಶನದ `ಅಮೆರಿಕ ಅಮೆರಿಕಾ!’ `ನನ್ನ ಪ್ರೀತಿಯ ಹುಡುಗಿ’, `ಬಾ ನಲ್ಲೆ ಮಧುಚಂದ್ರಕೆ’ ಹಾಗೂ `ಅಮೃತಧಾರೆ’ ಚಿತ್ರಗಳನ್ನು ಮೆಚ್ಚಿಕೊಳ್ಳದ ಪ್ರೇಕ್ಷಕರಿಲ್ಲ.
ಮೈಸೂರು ವಿ.ವಿ.ಯಿಂದ ಕನ್ನಡ ಎಂ.ಎ.ಯಲ್ಲಿ ಒಂಬತ್ತು ಚಿನ್ನದ ಪದಕಗಳೊಂದಿಗೆ ರ್ಯಾಂಕ್ ಪಡೆದವರು ನಾಗತಿಹಳ್ಳಿ. ನಂತರದಲ್ಲಿ ಅವರು ಕಥೆ ಬರೆದರು. ಕಾದಂಬರಿ ಬರೆದರು. ಪರಿಸರ ಚಳವಳಿ ಆಂದೋಲನದಲ್ಲಿ ಜಾಥಾ ಹೊರಟರು. ಒಂದಷ್ಟು ವರ್ಷ ಲಂಕೇಶ್ ಪತ್ರಿಕೆಯ ವರದಿಗಾರನಾಗಿಯೂ ದುಡಿದರು. ಆಮೇಲೆ ಉಪನ್ಯಾಸಕರಾದರು. ಈ ಮಧ್ಯೆ `ಅಭಿವ್ಯಕ್ತಿ’ ಎಂಬ ಸಾಂಸ್ಕೃತಿಕ ಸಂಘಟನೆ ಹುಟ್ಟುಹಾಕಿದರು. ಹೀಗಿದ್ದಾಗಲೇ ಶಿವಮೊಗ್ಗದ ಮನೋವೈದ್ಯ ಡಾ. ಅಶೋಕ್ ಪೈ ತಮ್ಮ ನಿಮರ್ಾಣದ ಹೊಸ ಚಿತ್ರ ನಿದರ್ೇಶಿಸಲು ಆಫರ್ ನೀಡಿದರು. ಇದು 1989ರ ಮಾತು. ಆಗಿನ್ನೂ ನಾಗತಿಹಳ್ಳಿ ಚಿತ್ರರಂಗಕ್ಕೆ ಹೊಸಬರು. ಈ ಕಾರಣದಿಂದಲೇ ಅವರು ಚಿತ್ರಕಥೆ ಹಾಗೂ ಹಾಡುಗಳನ್ನಷ್ಟೇ ಬರೆಯಲು ಒಪ್ಪಿಕೊಂಡರು. ನಿದರ್ೇಶನದ ಹೊಣೆ, ಸುರೇಶ್ ಹೆಬ್ಳೀಕರ್ ಅವರ ಹೆಗಲೇರಿತು. ಹೀಗೆ ತಯಾರಾದ ಚಿತ್ರವೇ ನಾ. ಡಿಸೋಜ ಅವರ ಕಥೆ ಆಧರಿಸಿದ `ಕಾಡಿನ ಬೆಂಕಿ’.
`ಕಾಡಿನ ಬೆಂಕಿ’ಯ ಕಥೆ ಒಬ್ಬ ಮನೋರೋಗಿಗೆ ಸಂಬಂಸಿದ್ದು. ಈ ಕಥೆಯ ಬಗ್ಗೆ ಚಚರ್ಿಸುತ್ತಾ ಅಶೋಕ್ ಪೈ, ಸುರೇಶ್ ಹೆಬ್ಳೀಕರ್ ಜತೆ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು ನಾಗತಿಹಳ್ಳಿ. ಹೀಗೆ ಹೋಗುವಾಗ ಮಲೆನಾಡಿನ ಅದ್ಭುತ ಪ್ರಕೃತಿ ಸೊಬಗು; ಗೆಳತಿಯ ಸಿಟ್ಟಿನಂತೆ- ಹೀಗೆ ಬಂದು ಹಾಗೆ ಹೋಗಿ ಬಿಡುತ್ತಿದ್ದ ಮಳೆ, ಮಟಮಟ ಮಧ್ಯಾಹ್ನದಲ್ಲೂ ಬೀಳುತ್ತಿದ್ದ ಮಂಜಿನ ದೃಶ್ಯ ಕಣ್ತುಂಬಿತು. ಈ ಮಧ್ಯೆಯೇ ಮನುಷ್ಯನ ನೀಚತನ, ದುರಾಸೆಯಿಂದ ಧರೆಗುರುಳಿದ ಮರಗಳೂ ಕಾಣಿಸಿದವು. ಎಲ್ಲವನ್ನೂ ನೋಡುತ್ತ ಮೈಮರೆತರು ನಾಗತಿಹಳ್ಳಿ.
ಈ ಸಂಭ್ರಮದ ಮಧ್ಯೆಯೇ ಹೆಬ್ಳೀಕರ್ರನ್ನು ಮಾತಿಗೆಳೆದು- ಈ ಪ್ರಕೃತಿ ವೈಭವವನ್ನು ನೋಡ್ತಾ ಇದ್ದರೆ ಒಂದು ಋತುಮಾನವೇ ಬದಲಾದ ಹಾಗೆ ಕಾಣುತ್ತೆ. ಕಾಡಿನ ಮಧ್ಯೆ ಸಿಗೋ ಖುಷಿ ಮಹಾನಗರಗಳಲ್ಲಿ ಎಂದೆಂದೂ ಸಿಗೋದಿಲ್ಲ’ ಎಂದರು. ಆಗಲೇ ಅವರಿಗೆ `ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ…’ ಎಂಬ ಸಾಲು ಹೊಳೆಯಿತು. ಇಲ್ಲಿ ಕಾಡನ್ನು `ವನಮಾತೆ’ ಎಂದು ಅಥರ್ೈಸಿಕೊಂಡು ಈ ಸಾಲು ಬರೆದ ನಾಗತಿಹಳ್ಳಿ, ಮುಂದೆ ಅದನ್ನು ಪ್ರಕೃತಿಗೀತೆಯಾಗಿ ಮುಂದುವರಿಸಿದರು. ಮುಂದೆ ಶೂಟಿಂಗ್ ಆರಂಭಿಸಿದಾಗ, `ಕಾಡಿನ ಬೆಂಕಿ’ ಸಿನಿಮಾದಲ್ಲಿ ಪ್ರಕೃತಿವೈಭವ ವಣರ್ಿಸುವ ಒಂದು ಹಾಡಿದ್ದರೆ ಚೆಂದ ಅನ್ನಿಸಿತು ಹೆಬ್ಳೀಕರ್ಗೆ. ಅದನ್ನೇ ನಾಗತಿಹಳ್ಳಿಗೆ ವಿವರಿಸಿ ‘ಒಂದು ಹಾಡು ಕೊಡ್ರಿ’ ಅಂದರು. ಮೊದಲೇ ಸಿದ್ಧವಾಗಿದ್ದ `ಋತುಮಾನ ಸಂಪುಟದಿ’ ಗೀತೆಯನ್ನು ಅಲ್ಲಿ ಬಳಸಿದ್ದಾಯಿತು.
ಮುಂದೆ `ಉಂಡೂ ಹೋದ ಕೊಂಡೂ ಹೋದ’ ಚಿತ್ರದ ಮೂಲಕ ನಿದರ್ೇಶಕರಾದರು ನಾಗತಿಹಳ್ಳಿ. ನಂತರ ಬಂದ `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಅವರಿಗೆ ಸ್ಟಾರ್ವ್ಯಾಲ್ಯೂ ತಂದುಕೊಟ್ಟಿತು.
ಹೀಗೆ, ಯಶಸ್ಸಿನ ಒಂದೊಂದೇ ಮೆಟ್ಟಿಲೇರಿ ಬಂದ ನಾಗತಿಹಳ್ಳಿ, `ಅಮೆರಿಕ ಅಮೆರಿಕಾ’ ಎಂಬ ಹೊಸ ಚಿತ್ರದ ನಿದರ್ೇಶನಕ್ಕೆ ಮುಂದಾದರು. ನಿಮರ್ಾಣದ ಹೊಣೆ ಜಿ. ನಂದಕುಮಾರ್ ಅವರದಾಗಿತ್ತು. ಆ ಚಿತ್ರದಲ್ಲಿ ತ್ರಿಕೋನ ಪ್ರೇಮಕತೆಯಿತ್ತು. ಇಬ್ಬರು ಹುಡುಗರ ಪ್ರೀತಿ ಒಂದು ಹುಡುಗಿಯ ಸುತ್ತಲೂ ಗಿರಗಿಟ್ಲೆ ಹೊಡೆಯುತ್ತದೆ ಎಂಬುದನ್ನು ಸೂಚ್ಯವಾಗಿ ವಿವರಿಸಲು ಆ ಪಾತ್ರಗಳಿಗೆ ಸೂರ್ಯ, ಶಶಾಂಕ್ ಎಂದು ಹೆಸರಿಟ್ಟರು. ಕಥಾನಾಯಕಿಯ ಹೆಸರು `ಭೂಮಿ’ ಎಂದಾಯಿತು. `ಭೂಮಿ’ಯ ಸುತ್ತಲೂ ಸೂರ್ಯ ಹಾಗೂ ಚಂದ್ರ (ಶಶಾಂಕ್) ಸುತ್ತುತ್ತಾರೆ ಎಂಬುದನ್ನು ಉಪಮೆಯ ಥರಾ ಹೇಳಿದರು ನಾಗತಿಹಳ್ಳಿ. ಸೂರ್ಯನ ಪಾತ್ರದಲ್ಲಿ ರಮೇಶ್ ಅರವಿಂದ್, ಶಶಾಂಕ್ ಪಾತ್ರದಲ್ಲಿ ಹಿಂದಿಯ ಕಿರುತೆರೆ ನಟ ಅಕ್ಷಯ್ ಆನಂದ್ ಹಾಗೂ `ಭೂಮಿ’ಯಾಗಿ ಹೇಮಾ ಪಂಚಮುಖಿ ಅಭಿನಯಿಸಿದರು.
`ನೂರು ಜನ್ಮಕೂ…’ ಹಾಡಿನ ಸಂದರ್ಭವನ್ನು ನೆನಪು ಮಾಡಿಕೊಳ್ಳಿ. ಆ ಚಿತ್ರದಲ್ಲಿ ರಮೇಶ್ ಹಾಗೂ ಹೇಮಾ- ಬಾಲ್ಯ ಸ್ನೇಹಿತರು. ಪ್ರಾಪ್ತವಯಸ್ಕರಾದ ನಂತರ ರಮೇಶ್ಗೆ `ಅವಳ’ ಮೇಲೆ `ಪ್ರೀತಿ’ ಮುಡುತ್ತದೆ. ಅವಳೊಂದಿಗೆ ತುಂಬಾ ಸಲಿಗೆಯಿರುತ್ತೆ ನಿಜ. ಆದರೂ ರಮೇಶ್ಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಳ್ಳಲು ಸಂಕೋಚ. ಬೈಛಾನ್ಸ್ -ತನ್ನ ಪ್ರಪೋಸಲ್ ಕೇಳಿದ ನಂತರ- ಅವಳು ತಿರಸ್ಕಾರದ ಮಾತಾಡಿದರೆ ಗತಿಯೇನು ಎಂಬ ಹಿಂಜರಿಕೆ. ಈ `ಪ್ರೀತಿಯ ಕಾರಣದಿಂದಲೇ’ ತಮ್ಮ ಮಧುರ ಗೆಳೆತನಕ್ಕೆ ಕತ್ತರಿ ಬಿದ್ದರೆ ಎಂಬ ಭಯ. ಹಾಗಂತ ಏನೋ ಹೇಳದೇ ಉಳಿದುಬಿಟ್ಟರೆ- ನನ್ನ ಹುಡುಗಿ ಕೈತಪ್ಪಿ ಹೋಗಬಹುದು ಎಂಬ ಚಡಪಡಿಕೆ!
ಹೀಗಿರುವಾಗಲೇ- ಮನಸ್ಸಿನ ಎಲ್ಲ ಭಾವವನ್ನೂ ಪತ್ರದಲ್ಲಿ ಬರೆದುಕೊಟ್ಟರೆ ಹೇಗೆ ಅಂದುಕೊಳ್ಳುತ್ತಾನೆ ರಮೇಶ್. ಆ ನಂತರದಲ್ಲಿ ತುಂಬ ಕಾವ್ಯಾತ್ಮಕವಾಗಿ ಒಂದು ಪತ್ರ ಬರೆದೂಬಿಡುತ್ತಾನೆ. ಅದನ್ನು ಹೇಗೆ ತಲುಪಿಸುವುದು ಎಂದು ಈತ ಗೊಂದಲಗೊಂಡಿದ್ದಾಗಲೇ ಕಥಾನಾಯಕಿಯೇ ಅಲ್ಲಿಗೆ ಬಂದುಬಿಡುತ್ತಾಳೆ. `ಏನೋ ಬರೆದಿದ್ದೀಯಲ್ಲ, ಕೊಡೋ ನೋಡ್ತೀನಿ ಅನ್ನುತ್ತಾಳೆ’. ಪತ್ರವನ್ನು ಇಡಿಯಾಗಿ ಓದಿಬಿಟ್ಟರೆ, ಆಕೆ ಬೇಸರಗೊಂಡು ಮಾತಾಡುವುದನ್ನೇ ನಿಲ್ಲಿಸಿಬಿಡ್ತಾಳೇನೋ ಎಂಬ ಸಂಕಟದಲ್ಲಿ ಇವನು `ಏನಿಲ್ಲ ಏನಿಲ್ಲ’ ಎಂದು ತೇಲಿಸಿ ಮಾತಾಡ್ತಾನೆ. ಅವಳದು ಒಂದೇ ಪಟ್ಟು- `ಸುಮ್ನೇ ಪತ್ರ ಕೊಟ್ರೆ ಸರಿ..!’ ಇವನು ಕೊಡೋದಿಲ್ಲ, ಅವಳು ಬಿಡೋದಿಲ್ಲ.
ಕಡೆಗೂ ಅವಳ ಹಠಕ್ಕೆ ನಾಯಕನೇ ಸೋಲುತ್ತಾನೆ. ಮುಂದೆ ಹೇಗೋ ಏನೋ ಎಂದುಕೊಂಡು ನಡುಗುತ್ತಲೇ ಅವಳಿಗೆ ಪತ್ರ ಕೊಡುತ್ತಾನೆ. ಕುತೂಹಲದಿಂದಲೇ ಅವಳು ಪತ್ರ ಪಡೆಯಲು ಕೈಚಾಚುತ್ತಾಳೆ. ಆಗ ಆಕಸ್ಮಿಕವಾಗಿ ಬೀಸಿದ ಗಾಳಿಗೆ ಸಿಕ್ಕು ಪತ್ರ ಕೆರೆಯ ನೀರಿಗೆ ಬಿದ್ದುಹೋಗುತ್ತೆ. ಅಲ್ಲಿಗೆ ದಡಬಡಿಸಿಹೋಗುವ ನಾಯಕಿ. ನೀರಲ್ಲಿ ಬಿದ್ದ ಕಾರಣಕ್ಕೆ ಅಕ್ಷರಗಳೆಲ್ಲ ಮಸಕಾಗಿರೋದನ್ನು ಕಂಡು- `ನೋಡೋ…’ ಹೀಗಾಗಿಬಿಡ್ತು. ಅದೇನು ಬರ್ದಿದ್ದೆ ಅಂತ ಈಗ ನೀನೇ ಓದಿ ಹೇಳು. ತಗೋ’ ಎನ್ನುತ್ತಾ ಮಸಕು ಅಕ್ಷರಗಳ ಆ ಪತ್ರವನ್ನು ರಮೇಶ್ಗೆ ದಾಟಿಸುತ್ತಾಳೆ. ಆಗ ಅವಳ ಮೇಲೆ ತನಗಿದ್ದ ಪ್ರೀತಿಯನ್ನೆಲ್ಲ ಕೊರಳಲ್ಲಿ ತುಂಬಿಕೊಂಡವನಂತೆ ನಾಯಕ ಹಾಡುತ್ತಾನೆ: `ನೂರು ಜನ್ಮಕೂ ನೂರಾರು ಜನ್ಮಕೂ… ಒಲವ ಧಾರೆಯೇ ಒಲಿದೊಲಿದು ಬಾರೆಲೇ…’
ಈ ಹಾಡು ಸೃಷ್ಟಿಯಾದ ಸಂದರ್ಭವನ್ನು ನಾಗತಿಹಳ್ಳಿಯವರು ವಿವರಿಸಿದ್ದು ಹೀಗೆ: ಪ್ರೀತಿಯ ಹೊಳೆಗೆ ಬಿದ್ದ ಸಂದರ್ಭದಲ್ಲಿ, ನನ್ನ ಹುಡುಗಿ ತ್ರಿಲೋಕ ಸುಂದರಿ ಎಂದು ಎಲ್ಲ ಹುಡುಗರೂ ಭಾವಿಸುತ್ತಾರೆ. ಅದನ್ನೇ ಅವಳಿಗೆ ಪತ್ರ ಬರೆದು ಹೇಳಿಯೂಬಿಡುತ್ತಾರೆ. ಏಳು ಜನ್ಮವಲ್ಲ, ನೂರು ಜನ್ಮಗಳಲ್ಲೂ ಈ ಹುಡುಗಿಯೇ ನನಗೆ ಸಿಗಲಿ. ಅವಳಿಗೆ ಸಣ್ಣದೊಂದು ಕಷ್ಟವೂ ಬಾರದಿರಲಿ. ಆಕೆ ನನ್ನೊಬ್ಬನಿಗೇ ಮೀಸಲಾಗಿರಲಿ. ಜಗತ್ತಿನ ಅಷ್ಟೂ ಸಂತೋಷವೂ ಅವಳಿಗೇ ಸಿಗಲಿ ಎಂದೆಲ್ಲ ಆಸೆಪಡುತ್ತಾರೆ. ಇಂಥ ಮಧುರ ಭಾವಗಳನ್ನೆಲ್ಲ ಹಾಡೊಳಗೆ ತರಬೇಕು. ಈ ಹಾಡು ಸಿನಿಮಾದ ವ್ಯಾಪ್ತಿಯನ್ನು ಮೀರಿ ನಿಲ್ಲುವಂಥ ಹಾಡಾಗಬೇಕು’ ಎಂದು ಆಸೆಪಟ್ಟೆ. ಅಮೆರಿಕ ಅಮೆರಿಕಾ ಚಿತ್ರದಿಂದ ಆರಂಗೇಟ್ರಂ ಆರಂಭಿಸಿದ ಸಂಗೀತ ನಿದರ್ೇಶಕ ಮನೋಮೂತರ್ಿ ಅವರಿಗೂ ಇದನ್ನೆಲ್ಲ ಹೇಳಿ- `ಒಂದಷ್ಟು ಟ್ಯೂನ್ ಕೇಳಿಸಿ. ನಂತರ ಹಾಡು ಬರೀತೇನೆ’ ಅಂದೆ.
`ಸರಿ’ ಎಂದಷ್ಟೇ ಹೇಳಿ ಹೋದ ಮನೋಮೂತರ್ಿ, ಕೆಲದಿನಗಳ ನಂತರ ಐವತ್ತು ಟ್ಯೂನ್ಗಳೊಂದಿಗೆ ಹಿಂತಿರುಗಿದರು. ಒಂದೊಂದೇ ಟ್ಯೂನ್ ಕೇಳಿಸುತ್ತಾ ಹೋದರು. ಕೀರವಾಣಿ ರಾಗದಲ್ಲಿದ್ದ 49ನೇ ಟ್ಯೂನ್ ನನಗೆ ತುಂಬಾ ಹಿಡಿಸಿತು. ತಕ್ಷಣವೇ `ಇದೇ ಇರಲಿ’ ಎಂದೆ. ಆಗ ಮನೋಮೂತರ್ಿ- `ಸಾರ್, ಇದು ತುಂಬಾ ಸರಳವಾಗಿರುವ ಟ್ಯೂನ್. ಇದು ಬೇಡ. ಬೇರೆಯದು ಆಯ್ಕೆ ಮಾಡಿಕೊಳ್ಳಿ’ ಎಂದರು. ಅವರ ಮಾತು ಕೇಳಿದ ನಂತರವೂ ಆ ಟ್ಯೂನ್ ಬಿಡಲು ನನಗೆ ಮನಸ್ಸಾಗಲಿಲ್ಲ. `ಇಲ್ಲ. ನನಗೆ ಇದೇ ಬೇಕು’ ಎಂದು ಪಟ್ಟುಹಿಡಿದೆ. ನಂತರ- ಒಬ್ಬ ಪ್ರಿಯತಮ ತನ್ನ ಹುಡುಗಿಯನ್ನು ತನ್ನ ಬದುಕಿಗೆ ಹೇಗೆ ಸ್ವಾಗತಿಸಬಹುದು? ಅವಳ ಮೇಲಿರುವ ತನ್ನ ಪ್ರೀತಿಯನ್ನು ಹೇಗೆಲ್ಲ ಹೇಳಿಕೊಳ್ಳಬಹುದು? ವರ್ತಮಾನ ಮತ್ತು ಹಳೆಯ ನೆನಪುಗಳನ್ನು ಒಟ್ಟಿಗೆ ಸೇರಿಸಿಕೊಂಡು ಹೇಗೆ ಹಾಡಬಹುದು ಎಂದು ಅಂದಾಜು ಮಾಡಿಕೊಂಡೆ. ಆ ಕ್ಷಣಕ್ಕೆ ನಾನು ನಾಗತಿಹಳ್ಳಿ ಚಂದ್ರಶೇಖರ್ ಆಗಿರಲಿಲ್ಲ, ಒಬ್ಬ ರೋಮಿಯೊ ಆಗಿದ್ದೆ. ಯೌವನದ ದಿನಗಳಲ್ಲಿ ನನ್ನೊಳಗಿದ್ದ ನವಿರು ಭಾವಗಳನ್ನೆಲ್ಲ ನೆನಪು ಮಾಡಿಕೊಂಡು- `ನೂರು ಜನ್ಮಕೂ… ನೂರಾರು ಜನ್ಮಕೂ…’ ಹಾಡು ಬರೆದೆ…
ಈ ಹಾಡು ಸೂಪರ್ಹಿಟ್ ಆಯಿತು. ಚಿತ್ರದ ಯಶಸ್ಸಿಗೂ ಕಾರಣವಾಯಿತು. ನಂತರ ಯುವ ಪ್ರೇಮಿಗಳ ಎದೆಯ ರಾಗವಾಯಿತು. ಹುಡುಗರ ಪ್ರೇಮಪತ್ರಗಳಿಗೆ `ಪ್ರಪೋಸಲ್’ನ ಸಾಲಾಯಿತು. ಇದನ್ನು ಮೀರಿದ ಆಶ್ಚರ್ಯದ ಇನ್ನೊಂದು ಸುದ್ದಿಯಿದೆ. ಏನೆಂದರೆ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ 60 ದಾಟಿದ ಮಹಿಳೆಯೊಬ್ಬರಿದ್ದಾರಂತೆ. ಆಕೆಯ ಪಾಲಿಗೆ `ನೂರು ಜನ್ಮಕೂ…’ ಹಾಡೇ ಸುಪ್ರಭಾತ. ದಿನಾ ಬೆಳಗ್ಗೆ ಆ ಹಾಡು ಕೇಳಿದ ನಂತರವೇ ಮುಂದಿನ ಕೆಲಸಕ್ಕೆ ತೊಡಗುತ್ತಾರಂತೆ! ಈ ವಿಷಯ ತಿಳಿದಾಗ `ಧನ್ಯೋಸ್ಮಿ’ ಅನ್ನಿಸ್ತು’ ಎಂದರು ನಾಗತಿಹಳ್ಳಿ.
* * *
ಒಬ್ಬ ಪರಿಣತ ಸಂಗೀತಗಾರ ಒಂದೇ ಟ್ಯೂನನ್ನು ಎರಡು ಭಿನ್ನ ಹಾಡುಗಳಿಗೆ ಹೇಗೆ ಬಳಸುತ್ತಾನೆ ಎಂಬುದಕ್ಕೂ ಇದೇ ಸಂದರ್ಭದಲ್ಲಿ ಉದಾಹರಣೆ ನೀಡಿದರು ನಾಗತಿಹಳ್ಳಿ. ಅಮೃತಧಾರೆ ಚಿತ್ರದ `ನೀ ಅಮೃತಧಾರೆ’ ಹಾಡಿನ ಚರಣದ ಸಾಲು ಗಮನಿಸಿ; `ನೆನಪಿದೆಯ ಮೊದಲಾ ನೋಟ, ನೆನಪಿದೆಯ ಮೊದಲ ಸ್ಪರ್ಶ…’ ಮುಂದೆ ಇದೇ ಸಾಲಿನ ಟ್ಯೂನ್ ಬಳಸಿ `ಅನಿಸುತಿದೆ ಯಾಕೋ ಇಂದು…’ ಪಲ್ಲವಿ ಸೃಷ್ಟಿಸಿದ್ದಾಯಿತು!
ಸುಳ್ಳಲ್ಲಿ: ಕಾಡುವ ಹಾಡುಗಳಿಗೆ ಕನ್ನಡಿ ಹಿಡಿದರೆ ಯಾವುದಾದರೂ ಒಂದು ಸ್ವಾರಸ್ಯದ ಸುದ್ದಿ ಸಿಕ್ಕೇ ಸಿಗುತ್ತೆ! ಹೀಗೇ…

‍ಲೇಖಕರು avadhi

November 28, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. ಪಾರ್ಥ

  “ಒಬ್ಬ ಪರಿಣತ ಸಂಗೀತಗಾರ ಒಂದೇ ಟ್ಯೂನನ್ನು ಎರಡು ಭಿನ್ನ ಹಾಡುಗಳಿಗೆ ಹೇಗೆ ಬಳಸುತ್ತಾನೆ ಎಂಬುದಕ್ಕೂ ಇದೇ ಸಂದರ್ಭದಲ್ಲಿ ಉದಾಹರಣೆ ನೀಡಿದರು ನಾಗತಿಹಳ್ಳಿ. ಅಮೃತಧಾರೆ ಚಿತ್ರದ `ನೀ ಅಮೃತಧಾರೆ’ ಹಾಡಿನ ಚರಣದ ಸಾಲು ಗಮನಿಸಿ; `ನೆನಪಿದೆಯ ಮೊದಲಾ ನೋಟ, ನೆನಪಿದೆಯ ಮೊದಲ ಸ್ಪರ್ಶ…’ ಮುಂದೆ ಇದೇ ಸಾಲಿನ ಟ್ಯೂನ್ ಬಳಸಿ `ಅನಿಸುತಿದೆ ಯಾಕೋ ಇಂದು…’ ಪಲ್ಲವಿ ಸೃಷ್ಟಿಸಿದ್ದಾಯಿತು! ”
  << ನಿಜ , ಬಡಪಾಯಿ ಪ್ರೇಕ್ಷಕರಾದ ನಮಗೂ ಅರೆ ..ರೆ , ಮನೋ ಮೂರ್ತಿ ತಮ್ಮ ಹಾಡನ್ನ ತಾವೇ ಕದಿಯೋಕೆ ಶುರು ಮಾಡಿದ್ದಾರೆ ಅಂತನೂ ಅನ್ನಿಸುತ್ತೆ.

  ಪ್ರತಿಕ್ರಿಯೆ
  • Ganesh

   ಮಣಿಕಾಂತರ ಕೈಯಲ್ಲಿ ಮೂಡುವ ಪ್ರತಿ ಅಕ್ಷರದ ಹಿಂದಿರುವ ಪ್ರೀತಿ ಎಂಥವರನ್ನೂ
   ಸಮ್ಮೋಹಿತರನ್ನಾಗಿಸುತ್ತದೆ. ಹಾಡಿನ ಬಗ್ಗೆ ಬರೆಯಲು, ಹಾಡಿನ ಹಿನ್ನೆಲೆಯ ಬಗ್ಗೆ,
   ಹಾಡಿನ ಸೃಷ್ಟಿಯ ಬಗ್ಗೆ ಬರೆಯಲು ಶುರು ಮಾಡಿದಾಗಿನಿಂದ ಅವರೆಡೆಗಿನ
   ಪ್ರೀತಿ ನೂರ್ಮಡಿಸಿದೆ.
   ಮಣಿಕಾಂತರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು.
   ಗಣೇಶ್

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: