ಮಣಿಕಾಂತ್ ಬರೆದಿದ್ದಾರೆ: ಈಗಲೂ ಆ ಬಾಲ್ ಪೆನ್ನನ್ನು ಇಟ್ಟುಕೊಂಡಿದ್ದಾರೆ

ಎ ಆರ್ ಮಣಿಕಾಂತ್
ಹೀರೋ ಹೀರೋ ಹೀರೋ…
ಚಿತ್ರ: ಅಜೇಯ.  ಗೀತೆರಚನೆ: ಶ್ಯಾಮ ಸುಂದರ ಕುಲಕಣರ್ಿ
ಸಂಗೀತ: ಇಳಯರಾಜ  ಗಾಯನ:  ಜೇಸುದಾಸ್
ಹೀರೋ ಹೀರೋ ಹೀರೋ ಹೀರೋ
ನಾನೆ ನಾನೆ ನಾನೆ ನಾನೇ…
ಚೆಲುವಿನ ನನ್ನ ಅರಗಿಣಿ
ಸೊಬಗಿನ ನನ್ನ ರಸಮಣಿ
ನಾನೇ ನಿನ್ನ ಪ್ರಿಯತಮ ನಮ್ಮ ಜೋಡಿ ಅನುಪಮಾ
ಕಳ್ಳನಾ ಮಾತನೆಂದು ಕೇಳಬೇಡವೆ, ಸುಳ್ಳನಾ ಸಂಗವನ್ನು ಮಾಡಬೇಡವೆ  ||ಪ||
ಕರೆದಲ್ಲಿ ಬರುವೆನು ಜೊತೆಯಲ್ಲಿ ಇರುವೆನು
ಒಂಟಿಯಾಗಿ ಏಕೆ ಕೊರಗುವೆ
ನಿನ್ನನ್ನು ನೆಲದಲಿ ಓಡಾಡ ಬಿಡದೆಲೆ
ಹೆಗಲ ಮೇಲೆ ಹೊತ್ತು ತಿರುಗುವೆ
ಎಣ್ಣೆಯಾ ಒತ್ತುವೆ ಬೆನ್ನನು ತಿಕ್ಕುವೆ
ಜಡೆಯ ಹಾಕಿ ಹೂವ ಮುಡಿಸುವೆ
ಈ ನಿನ್ನ ಚೆಲುವಿನ ಮೈಯೆಲ್ಲ ಬಳಸಿದ
ಬಟ್ಟೆಯಾಗಿ ಸುತ್ತಿಕೊಳ್ಳುವೆ
ಕಸವ ಗುಡಿಸುವೆ ದಿನಾ ಮುಸುರೆ ತೊಳೆಯುವೆ
ಅಡುಗೆ ಮಾಡುವೆ ಕೈ ತುತ್ತು ಹಾಕುವೆ
ಸದಾ ನಿನ್ನ ಸೇವೆ ಮಾಡಿ ರಾಣಿಯಂತೆ ನೋಡಿಕೊಳ್ಳುವೇ ಹೇ… ||1||
ನನ್ನಂಥ ಚೆಲುವನು ನಿನಗೆಲ್ಲಿ ಸಿಗುವನು
ಮನಸು ಮಾಡು ಮದುವೆಯಾಗುವೆ
ಮನೆಯಲ್ಲಿ ಕಿಲಕಿಲ ನಗುವಂಥ ಮಗುವನು
ವರುಷದೊಳಗೆ ನಿನಗೆ ನೀಡುವೆ
ನೀ ನನ್ನ ಮಡದಿಯು ಆದಾಗ ಅನುದಿನ
ಭೂಮಿಯಲ್ಲೆ ಸ್ವರ್ಗ ಕಾಣುವೆ
ಹತ್ತಾರು ಮಕ್ಕಳ ಮಡಿಲಲ್ಲಿ ಹಾಕುತ
ನಿನ್ನ ಮಹಾತಾಯಿ ಮಾಡುವೆ
ಎರಡು ಮಕ್ಕಳ ನಡುವಿರಲಿ ಅಂತರ
ಮಿತಿಯು ನಮಗಿರೆ ಹಾಯ್ ಬದುಕು ಸುಂದರ
ಎಷ್ಟು ಮಕ್ಕಳ ಹೆತ್ರೂ ನೀನು ಸಾಕಿ ಸಲಹೊ ಧೈರ್ಯ ನನ್ನದೇಹೇ             ||2||
ಕಾಕತಾಳೀಯ ಅಂತೀವಲ್ಲ? ಅಂಥ ಪ್ರಸಂಗಗಳು ಚಿತ್ರರಂಗದಲ್ಲಿ ಆಗಿಂದಾಗ್ಗೆ ನಡೀತಾನೇ ಇರ್ತವೆ. ಅದಕ್ಕೆ ಒಂದು ಉದಾಹರಣೆ ಕೇಳಿ: ಸಾಹಿತಿ ಶ್ಯಾಮಸುಂದರ ಕುಲಕಣರ್ಿಯವರು ಅದೊಮ್ಮೆ ಫಣಿ ರಾಮಚಂದ್ರ ಅವರಿಗೆ ಒಂದು ಕಥೆ ಹೇಳಿದರು. ಅದನ್ನು ತುಂಬ ಮೆಚ್ಚಿಕೊಂಡ ಫಣಿ `ಕುಲಕಣರ್ಿಯವರೆ, ಈ ಕಥೇನ ನೀವು ಬೇಗ ಬರೆದುಕೊಡಿ. ಶೂಟಿಂಗ್ ಶುರುಮಾಡೋಣ’ ಎಂದರು. `ಸರಿ’ ಎಂದರು  ಕುಲಕಣರ್ಿ. ಈ ಸಂದರ್ಭದಲ್ಲಿಯೇ ಅವರ ಗಮನ ನಿಮರ್ಾಪಕ ರಾಮಮೂತರ್ಿ ಅವರ ಕಡೆಗೆ ಹೋಯಿತು. ಅವರ ಜೇಬಲ್ಲಿದ್ದ ಗೋಲ್ಡ್ ಕಲರಿನ ಬಾಲ್ಪಾಯಿಂಟ್ ಪೆನ್ ಕಂಡ ಕುಲಕಣರ್ಿಯವರು-`ನಿಮ್ಮ ಪೆನ್ನು ಚನ್ನಾಗಿದೆ’ ಅಂದರು.
ಹೌದಾ? ಕುಲಕಣರ್ಿಯವರೆ, ಒಂದು ಮಾತು. ಪೆನ್ನು  ನನಗಿಂತ ನಿಮಗೇ ಅನುಕೂಲಕ್ಕೆ ಬರುತ್ತೆ. ಹಾಗಾಗಿ ತಗೊಂಡು ಬಿಡಿ ಎಂದು ಒತ್ತಾಯಿಸಿ, ಕೊಟ್ಟೇಬಿಟ್ಟರು ರಾಮಮೂತರ್ಿ. ಒಂದೆರಡು ನಿಮಿಷಗಳ ನಂತರ ರಾಮಮೂತರ್ಿಯವರ ಮನಸ್ಸು ಬದಲಾಯ್ತು. ಈಗಾಗಲೇ ಬಳಸಿರುವ ಸೆಕೆಂಡ್ ಹ್ಯಾಂಡ್ ಪೆನ್ನನ್ನು ಒಬ್ಬ ಸಾಹಿತಿಗೆ ಕೊಡುವುದು ತಪ್ಪು ಎನಿಸಿತು. ತಕ್ಷಣವೇ ಕುಲಕಣರ್ಿಯವರ ಬಳಿ ಹೋಗಿ-`ಸಾರ್, ಈಗಾಗಲೇ ಈ ಪೆನ್ನು ಬಳಸಿದೀನಿ. ಹಾಗಾಗಿ ಇದನ್ನು ವಾಪಸ್ ಕೊಡಿ. ಮನೇಲಿ ಇಂಥದೇ ಇನ್ನೊಂದು ಹೊಸಾ ಪೆನ್ ಇದೆ. ಅದನ್ನು ತಂದುಕೊಡ್ತೀನಿ’ ಎಂದರು. `ಅಯ್ಯೋ, ಅಷ್ಟೆಲ್ಲಾ ತೊಂದರೆ ಬೇಡ. ಈ ಪೆನ್ನೇ ಇರಲಿ ಬಿಡಿ’ ಎಂದರು ಕುಲಕಣರ್ಿ.
ಅವತ್ತೇ ರಾತ್ರಿ ಫಣಿರಾಮಚಂದ್ರ ಅವರಿಗೆ-`ಒಂದು ಸಿನಿಮಾ ಕಥೆ’ ಚಿತ್ರದ ಕಥೆ ಬರೆಯಲು ಕೂತರು ಕುಲಕಣರ್ಿ. ತಕ್ಷಣವೇ ಅವರಿಗೆ ರಾಮಮೂತರ್ಿಯವರಿಂದ ಪಡೆದ ಪೆನ್ನ ನೆನಪಾಯಿತು. ಅದನ್ನು ಕೈಗೆತ್ತಿಕೊಂಡು ರಾತ್ರಿಯಿಡೀ ನಿದ್ದೆಗೆಟ್ಟು ಇಡೀ ಕಥೆಯನ್ನು ಬರೆದು ಮುಗಿಸಿದರು. ಕೊನೆಯಲ್ಲಿ ಶುಭಂ ಎಂದು ಬರೆಯುತ್ತಲೇ, ಮುಂದೆ ಒಂದೇ ಒಂದು ಅಕ್ಷರವನ್ನೂ ಬರೆಯಲಾಗದಂತೆ ರೀಫಿಲ್ನಲ್ಲಿದ್ದ ಇಂಕು ಮುಗಿದುಹೋಗಿತ್ತು. (ಒಂದು ಸಿನಿಮಾದ ಇಡೀ ಕಥೆ ಬರೆದು ಮುಗಿಸಿದ ತಕ್ಷಣ ಇಂಕು ಖಾಲಿಯಾಗೋದು ಅಂದ್ರೆ ಸುಮ್ನೇನಾ?) ಒಂದೇ ರೀಫಿಲ್ನಿಂದ ಇಡೀ ಚಿತ್ರದ ಕಥೆ ಬರೆದ ತೃಪ್ತಿ ಕುಲಕಣರ್ಿಅವರಿಗಾಗಿತ್ತು. ಆ ಸವಿನೆನಪಿಗಾಗಿ ಕುಲಕಣರ್ಿಯವರು ಈಗಲೂ ತಮ್ಮೊಂದಿಗೆ ಆ ಬಾಲ್ ಪಾಯಿಂಟ್ ಪೆನ್ನನ್ನೂ ಇಟ್ಟುಕೊಂಡಿದ್ದಾರೆ.
ಇಂಥ ಹಿನ್ನೆಲೆಯ ಶ್ಯಾಮಸುಂದರ ಕುಲಕಣರ್ಿ ಅವರಿಗೆ ನಿದರ್ೇಶಕ ಸಿದ್ಧಲಿಂಗಯ್ಯನವರ ಗೆಳೆತನ ದಕ್ಕಿದ್ದು `ಪರಾಜಿತ’ ಚಿತ್ರದಿಂದ. ಮೊದಲ ಚಿತ್ರದಿಂದಲೇ ಕುಲಕಣರ್ಿಯವರ `ಹಾಡು ಬರೆವ ಕಲೆಗಾರಿಕೆಗೆ ಮರುಳಾದ ಸಿದ್ದಲಿಂಗಯ್ಯನವರು ನಂತರದಲ್ಲಿ ತಮ್ಮ ಎಲ್ಲ ಸಿನಿಮಾಗಳಲ್ಲೂ ಕುಲಕಣರ್ಿಯವರಿಗೆ ಅವಕಾಶ ಕೊಟ್ಟರು. 80ರ ದಶಕದ ಕೊನೆಯಲ್ಲಿ, ಬಿ.ಎಲ್. ವೇಣು ಅವರ ಕಾದಂಬರಿ ಆಧರಿಸಿದ `ಅಜೇಯ’ ಸಿನಿಮಾ ತಯಾರಿಸಲು ಮುಂದಾದರು. ಸಿದ್ಧಲಿಂಗಯ್ಯ ಅದಕ್ಕೆ ಅವರ ಮಗ ಮುರುಳಿಯೇ ಹೀರೋ. ಈ ಚಿತ್ರವನ್ನು ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ತಮಿಳಿನಲ್ಲೂ ತಯಾರಿಸಲು ನಿರ್ಧರಿಸಿದ ಸಿದ್ಧಲಿಂಗಯ್ಯ, ಸಂಗೀತ ನಿದರ್ೇಶನಕ್ಕೆ ಇಳಯರಾಜ ಅವರನ್ನು  ಆಯ್ಕೆಮಾಡಿಕೊಂಡರು. ಹಾಡು ಬರೆಯಲೆಂದು ದೊಡ್ಡರಂಗೇಗೌಡ ಹಾಗೂ ಕುಲಕಣರ್ಿಯವರನ್ನು ಮದ್ರಾಸಿಗೆ ಕರೆಸಿಕೊಂಡರು. ಸಿನಿಮಾವನ್ನು ಹೇಗಿದ್ದರೂ ತಮಿಳು ಹಾಗೂ ತೆಲುಗಿನಲ್ಲೂ ತಯಾರಿಸ್ತಾ ಇದ್ದಾರೆ. ಹಾಗಾಗಿ ಮೊದಲೇ ತಮಿಳಿನಲ್ಲಿ ಹಾಡು ಬರೆಸಿರ್ತಾರೆ. ಅದನ್ನೇ ಅನುಸರಿಸಿ ಹಾಡು ಬರೆಯುವಂತೆ ನಮಗೂ ಹೇಳ್ತಾರೆ. ಹಾಗಾಗಿ ಅಷ್ಟೇನೂ ಜಾಸ್ತಿ ಕೆಲಸ ಇರೋದಿಲ್ಲ ಅಂದುಕೊಂಡೇ `ಇವರಿಬ್ಬರೂ’ ಮದ್ರಾಸಿಗೆ ಹೋದರು. ಹಾಗೆಯೇ ಆಯಿತು. ಗೀತೆ ರಚನೆಕಾರರನ್ನು ಎದುರು ಕೂರಿಸಿಕೊಂಡ ಸಿದ್ಧಲಿಂಗಯ್ಯ ಹೇಳಿದರು: `ಈ ಚಿತ್ರದಲ್ಲಿ ನಾಯಕಿ ಆಗರ್ಭ ಶ್ರೀಮಂತೆ. ಅವಳ ಪ್ರೀತಿ ಪಡೆಯಲು ಒಂದೇ ರೂಪಿನ ಇಬ್ಬರು ಯುವಕರು ಹಿಂದೆ ಬಿದ್ದಿರ್ತಾರೆ. ತಮ್ಮ ಪ್ರೀತಿ ಎಂಥಾದ್ದು ಎಂಬುದನ್ನು ಅವರಿಬ್ರೂ ಹಾಡಲ್ಲಿ ವಿವರಿಸುತ್ತಾ ಅವಳ ಮನಗೆಲ್ಲಲು ಸರ್ಕಸ್ ಮಾಡಬೇಕು… ಅಂಥ ಹಾಡು ಕೊಡಿ’.
ಸಂದರ್ಭ ಕೇಳಿಸಿಕೊಂಡ ತಮಿಳು ಸಾಹಿತಿಗಳು-ನೀವು ರೀ ರೆಕಾಡರ್ಿಂಗ್ಗೆ ಸಿದ್ಧತೆ ಮಾಡಿಕೊಳ್ಳಿ ಸಾರ್. ನೀವು `ರೆಡಿ’ ಅಂದ ದಿನವೇ ನಾವು ಹಾಡಿನೊಂದಿಗೆ ನಿಮ್ಮಲ್ಲಿಗೆ ಬರ್ತೇವೆ’ ಎಂದರು. ನಂತರ `ಇವರ’ ಕಡೆ ತಿರುಗಿದ ಸಿದ್ಧಲಿಂಗಯ್ಯ,-`ನೀವು ಸ್ವತಂತ್ರವಾಗಿ ಹಾಡು ಬರೆಯಿರಿ’ ಎಂದರು.
ನಂತರದ ಸಂದರ್ಭವನ್ನು ಕುಲಕಣರ್ಿಯವರು ವಿವರಿಸುವುದು ಹೀಗೆ: ತಕ್ಷಣವೇ ನನಗೆ ಡಾ. ರಾಜ್ಕುಮಾರ್ ಅಭಿನಯದ `ಶಂಕರ್ಗುರು’ ಚಿತ್ರ ನೆನಪಾಯಿತು. ಆ ಚಿತ್ರದಲ್ಲಿ ನಾಯಕಿಯನ್ನು ಒಲಿಸಿಕೊಳ್ಳಲು ಅಣ್ಣಾವ್ರು ಹಾಡುವ `ಲವ್ ಮಿಆರ್ ಹೇಟ್ ಮೀ’, `ಚಿನ್ನ ಬಾಳಲ್ಲಿ ಈ ರಾತ್ರಿ.. ‘ ಹಾಡುಗಳು ನೆನಪಾದವು. ಹೆಚ್ಚು ಕಡಿಮೆ ಅದೇ ರೀತಿಯಲ್ಲಿ `ಅಜೇಯ’ ಚಿತ್ರದ ನಾಯಕನೂ ಹಾಡಬೇಕಿತ್ತು. ಸ್ವಲ್ಪ ತಮಾಷೆಯಾಗಿ ಹಾಡು ಬರೆದರೆ ಅದು ಜನರಿಗೆ ಇಷ್ಟವಾಗಬಹುದು ಅನ್ನಿಸ್ತು. ಅದನ್ನೇ ನಿದರ್ೇಶಕ ಸಿದ್ದಲಿಂಗಯ್ಯ ಅವರಿಗೂ ಹೇಳಿದೆ. ಅವರು `ಹಾಗೇ ಮಾಡಿ’ ಎಂದರು.
ಹಾಡು ಬರೆಯಲು ಕೂತೆ ನೋಡಿ: ಆಗ ನನಗೆ ಯುವಕರೆಲ್ಲರ ಮನದ ಮಾತು ನೆನಪಾಯಿತು. ಲವ್ ಮಾಡುವ ಹುಡುಗರೆಲ್ಲ ಅವಾಗವಾಗ- ಅವಳು ಒಪ್ಪಿಬಿಟ್ರೆ ಸಾಕು, ಅವಳಿಗೆ ಬೆಡ್ ಕಾಫಿ ತಯಾರಿಸಲಿಕ್ಕೂ ನಾನು ರೆಡಿ,  ಬಟ್ಟೆ  ಒಗೆಯೋಕೂ  ರೆಡಿ, ಮನೆ ಕಸ ಗುಡಿಸಲಿಕ್ಕೂ ರೆಡಿ, ಅಡುಗೆ ಮಾಡುವುದಕ್ಕಾದ್ರೂ ರೆಡಿ ಎಂದು ಕನವರಿಸುತ್ತಾರೆ ತಾನೆ? ಅದನ್ನೇ ಯಾಕೆ ಹಾಡಿನ ಸಾಲಾಗಿಸಬಾರದು ಅನ್ನಿಸ್ತು. ಹಾಗನ್ನಿಸಿದ ತಕ್ಷಣವೇ ಎಲ್ಲವನ್ನೂ ಬರೆದಿಟ್ಟುಕೊಂಡೆ.
ಈ ಹಾಡು, ಒಂದೇ ಥರ ಇದ್ದ ಇಬ್ಬರು ನಾಯಕರನ್ನು ಕಂಡು ನಾಯಕಿ, ಕಕ್ಕಾಬಿಕ್ಕಿಯಾಗಿದ್ದ ಸಂದರ್ಭದಲ್ಲಿ ಬರುತ್ತೆ. ಆ ಇಬ್ಬರ ಪೈಕಿ ಒಬ್ಬ ಅಸಲಿ, ಇನ್ನೊಬ್ಬ ನಕಲಿ. ಯಾರು ಅಸಲಿ, ಯಾರು ನಕಲಿ ಎಂದೇ ನಾಯಕಿಗೆ ಗೊತ್ತಿರುವುದಿಲ್ಲ. ಆಗ ಇಬ್ಬರೂ ನಾನೇ ಅಸಲಿ, ನಾನೇ ಅಸಲಿ ಎಂದು ಹಾಡಿಕೊಂಡು ಅವಳ ಮುಂದೆ ನಿಲ್ಲಬೇಕು. ಈ ಸಂದರ್ಭಕ್ಕೆ `ಹೀರೊ ಹೀರೊ ಹೀರೊ ಹೀರೋ, ನಾನೆ ನಾನೆ ನಾನೆ ನಾನೇ…’ ಎಂಬ ಪಲ್ಲವಿ ಹಾಕಬೇಕು ಅನ್ನಿಸ್ತು. ಅವನ ಮಾತು ನಂಬಬೇಡ ಅಂತ ಇವನು, ಇವನನ್ನೇ ನಂಬಬೇಡ ಅಂತ ಅವನು ನಾಯಕಿಗೆ ದುಂಬಾಲು ಬೀಳ್ತಾರಲ್ಲ? ಅದನ್ನೂ ಪಲ್ಲವಿಯಲ್ಲೇ ತರಬೇಕು ಅನ್ನಿಸ್ತು. ಹಾಗೇ ಮಾಡಿದೆ.
ನಂತರದ ಸ್ವಾರಸ್ಯ ಕೇಳಿ: ಹಾಡು ಗಮನಿಸಿದ ಇಳಯರಾಜ-`ಕನ್ನಡದಲ್ಲಿ ಬರೆದಿರುವ ಹಾಡು ಸೊಗಸಾಗಿದೆ. ಮತ್ತು ಅದನ್ನೇ ತಮಿಳಿಗೂ ತಜರ್ುಮೆ ಮಾಡಿಸಿ’ ಅಂದರು. ಹಾಗೇ ಮಾಡಿದ್ದಾಯಿತು. ಈ ಹಾಡು ಬರೆವ ಸಂದರ್ಭದಲ್ಲಿ ನಾನು ತುಂಬಾ ಅವಸರದಲ್ಲಿದ್ದೆ. ನನಗೆ ಆಗ ಬೆಂಗಳೂರಿನ `ಸಂಯುಕ್ತ ಕನರ್ಾಟಕ`ದಲ್ಲಿ ನೌಕರಿಯಿತ್ತು. ದೊರಕಿದ್ದುದು ಒಂದೇ ದಿನದ ರಜೆ. ಅಂದು ರಾತ್ರಿಯೇ ಮದ್ರಾಸ್ ಬಿಟ್ಟು, ಮರುದಿನ ನಾನು ಕೆಲಸಕ್ಕೆ ಹಾಜರಾಗಲೇ ಬೇಕಿತ್ತು. ಈ ಅವಸರದ ಮಧ್ಯೆಯೇ ಹರೆಯದ ಹುಡುಗರ ತುಂಟಾಟ ಹಾಗೂ ಚೆಲ್ಲು ಚೆಲ್ಲು ಮಾತುಗಳನ್ನು ನೆನಪು ಮಾಡಿಕೊಂಡೆ. ಎರಡನೇ ಚರಣದಲ್ಲಿ  ಪ್ರತಿ  ಸಾಲನ್ನೂ  ತಮಾಷೆಯಾಗಿ ಬರೆಯುತ್ತಾ, ಕಡೆಯಲ್ಲಿ ಕುಟುಂಬ ಯೋಜನೆಯ ಒಂದು ಸಾಲನ್ನೂ ಸೇರಿಸಿಬಿಟ್ಟೆ.  ಹಾಡು ಬರೆಯುತ್ತಾ ಮೈಮರೆತವನು ಊಟ ಮಾಡುವುದನ್ನೇ ಮರೆತುಬಿಟ್ಟಿದ್ದೆ.
ಈ ಸೂಕ್ಷ್ಮ ಅರ್ಥಮಾಡಿಕೊಂಡ ಸಿದ್ಧಲಿಂಗಯ್ಯನವರು ಅನ್ನದ ತಟ್ಟೆಯೊಂದಿಗೆ ಬಳಿ ಬಂದು  ಕೈ ತುತ್ತು ತಿನ್ನಿಸಿದರು!  ಅವರ ಕೈ ತುತ್ತಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಾ  ಹಾಡು ಮುಗಿಸಿಕೊಟ್ಟೆ. ಅದನ್ನು ಓದಿದ ಸಿದ್ಧಲಿಂಗಯ್ಯನವರ ಕಂಗಳ ತುಂಬ ಮೆಚ್ಚುಗೆಯ ಹೊಂಬೆಳಕಿತ್ತು….’
***
ಈಗೊಮ್ಮೆ, ಹಾಗೇ ಸುಮ್ಮನೆ ನೆನಪು ಮಾಡಿಕೊಳ್ಳಿ. 80ರ ದಶಕದ ಕೊನೆಯ ಭಾಗದಲ್ಲಿ ಎಲ್ಲರಿಗೂ ಹುಚ್ಚು ಹಿಡಿಸಿದ್ದ ಹಾಡಿದು. ಪ್ರೀತಿಸಿದ ಹುಡುಗಿ ಕಾಣಿಸಿದರೆ ಸಾಕು ಆಗ ಎಲ್ಲರೂ `ಹೀರೋ ಹೀರೋ…’ ಹಾಡಿಗೆ ಮೊದಲಾಗುತ್ತಿದ್ದರು. `ಎಣ್ಣೆಯಾ ಒತ್ತುವೆ, ಬೆನ್ನನೂ ತಿಕ್ಕುವೆ, ಜಡೆಯ ಹಾಕಿ ಹೂವ ಮುಡಿಸುವೇ…’ ಎಂದು ಹಾಡಿ ಕಿಸಕ್ಕನೆ ನಗುತ್ತಿದ್ದರು. ಸ್ವಾರಸ್ಯವೆಂದರೆ, ಹುಡುಗರ ಈ ಹಾಡು ಕೇಳಿ ಒಂಥರಾ ನಾಚಿಕೆಯಾದರೂ ಹುಡುಗಿಯರೂ ನಕ್ಕು ಹಗುರಾಗುತ್ತಿದ್ದರು. ಅಷ್ಟೇ ಅಲ್ಲ, ಈಗಲೂ ಆ ಹಾಡು ಕೇಳಿದರೆ, ಕೈತಪ್ಪಿ ಹೋಗಿರುವ ಹುಡುಗಿಯೂ ಖುಷಿಯಿಂದ ನಗುತ್ತಾಳೆ.
ಬೇಕಿದ್ದರೆ ಹಾಡಿ ನೋಡಿ….

‍ಲೇಖಕರು avadhi

February 26, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This