ಮಣಿಕಾಂತ್ ಬರೆದಿದ್ದಾರೆ: ಹಾಡೊಂದ ಹಾಡುವೆ ನೀ ಕೇಳು ಮಗುವೆ

6213_1079515355773_1462958320_30205965_5660699_n1111ಎ ಆರ್ ಮಣಿಕಾಂತ್
ಚಿತ್ರ : ನಾಂದಿ        ಗೀತರಚನೆ : ಆರ್.ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್      ಗಾಯನ : ಪಿ.ಬಿ. ಶ್ರೀನಿವಾಸ್

ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀ  ಎಂದು ಬರುವೆ? ||ಪ||
ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರಾ ಭೋಗ ನಿನಗಿಲ್ಲಿ ಇಲ್ಲ
ಸಿರಿಯಾಗಿ ನಿಯಾಗಿ ನೀ ಬರುವೆಯಲ್ಲ ||1||
ನಿನ್ನೊಂದು ನುಡಿಮುತ್ತು ಸವಿಜೇನಿನಂತೆ
ಆ ಸುಖದೆ ನಾ ಮರೆವೆ ಈ ಬಾಳ ಚಿಂತೆ
ಅದ ಕೇಳೋ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆ ಎಲ್ಲ ||2||
music-clipart4
`ಭಾವುಕರಾದ ಮನ್ನಾಡೇ ಒಂದು ಗೀತೆಯನ್ನು ಉಚಿತವಾಗಿ ಹಾಡಿದರು’ ಎಂಬ ಶೀಷರ್ಿಕೆಯಲ್ಲಿ ಬರೆದ ಕಳೆದ ವಾರದ ಅಂಕಣದ ಬಗ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಮೂಲತಃ ಕೊಪ್ಪಳದವರಾದ, ಸದ್ಯ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿರುವ ಅಮೃತಾ ಪಾಟೀಲ ಹೀಗೆ ಬರೆದಿದ್ದಾರೆ : `ಅಂಕಣ ಚೆನ್ನಾಗಿದೆ. ಮನ್ನಾಡೇ ಅವರ ಹೆಸರನ್ನೇ ಕೇಳದಿರುವ ಎಷ್ಟೋ ಜನರಿಗೆ ನಿಮ್ಮ ಲೇಖನ ತುಂಬ ಸಹಾಯ ಮಾಡುತ್ತದೆ’.
ಅಂದ ಹಾಗೆ, ಮನ್ನಾಡೇ ಅವರ ಬಗ್ಗೆ ಅಮೂಲ್ಯ ಎಂಬಂಥ ಮಾಹಿತಿ ನೀಡಿದವರು `ಮಲ್ಲಿಗೆ’ ಮಾಸಪತ್ರಿಕೆಯ ಸಂಪಾದಕರಾದ ಶ್ರೀಧರಮೂತರ್ಿಯವರು. ಆರ್.ಎನ್. ಜಯಗೋಪಾಲ್ ರಚನೆಯ ಅದೆಷ್ಟೋ ಹಾಡುಗಳಿಗೆ ಸಂಬಂಸಿದ `ಕಥೆಗಳು’ ಶ್ರೀಧರಮೂತರ್ಿಯವರಿಗೆ ನಾಲಿಗೆಯ ತುದಿಯಲ್ಲಿವೆ.  ಈ ಅಂಕಣದ ಸೊಬಗು ಹೆಚ್ಚಿಸುವಲ್ಲಿ ಅವರ ಕೊಡುಗೆ ದೊಡ್ಡದು. ಈ ಸಂದರ್ಭದಲ್ಲಿ ನೆನೆಯಲೇಬೇಕಾದ ಇನ್ನೊಬ್ಬರು ಚಂದ್ರಶೇಖರ ಆಲೂರು.
****
ಕೆಲವು `ಚಿತ್ರಗೀತೆ’ಗಳಿರುತ್ತವೆ. ಈ ಹಾಡುಗಳಿಗೂ ನಮ್ಮ ಬದುಕಿಗೂ ಯಾವುದೇ ರೀತಿಯಲ್ಲೂ ಸಂಬಂಧವಿರುವುದಿಲ್ಲ ನಿಜ. ಆದರೆ, ಅವುಗಳನ್ನು ಕೇಳಿದಾಗಲೆಲ್ಲ ಯಾಕೋ ಸಂಕಟವಾಗುತ್ತದೆ. ನಮಗೆ ಗೊತ್ತಿಲ್ಲದಂತೆಯೇ ಕಣ್ಣೀರು ಕೆನ್ನೆ ತೋಯಿಸುತ್ತದೆ. ಈ ದುಃಖದ ಮಧ್ಯೆಯೇ ಹಾಡು ಗುನುಗುವ ಮನಸ್ಸಾಗುತ್ತದೆ. ಯಾವುದೋ ಮಾಯೆಗೆ ಒಳಗಾದವರಂತೆ ಹಾಡು ಹೇಳುತ್ತಿದ್ದಂತೆಯೇ ಧ್ವನಿ ಗದ್ಗದವಾಗುತ್ತದೆ. ತಕ್ಷಣವೇ ಹಾಡುವುದನ್ನು ನಿಲ್ಲಿಸಬಹುದು. ಆದರೆ, ಧುಮ್ಮಿಕ್ಕುವ ಕಂಬನಿಯನ್ನು ನಿಲ್ಲಿಸಲು ಆಗುವುದಿಲ್ಲ!
ಅಂಥ ಶಕ್ತಿಶಾಲಿ ಗೀತೆಗಳ ಪೈಕಿ ಪ್ರಮುಖವಾದುದು – `ನಾಂದಿ’ ಚಿತ್ರದ ಹಾಡು : `ಹಾಡೊಂದ ಹಾಡುವೆ ನೀ ಕೇಳು ಮಗುವೆ…’. ಮನೆಮನೆಯ ಅಪ್ಪಂದಿರೆಲ್ಲ ತಮ್ಮ ಕಂದಮ್ಮಗಳ ಮುಂದೆ ನಿಂತು ಒಂದಲ್ಲ ಒಂದು ಬಾರಿ ಹಾಡಿರುವ ಗೀತೆ ಇದು. ಈ ಹಾಡು ಹುಟ್ಟಿದ ಸಂದರ್ಭ ತಿಳಿಯುವ ಮೊದಲು `ನಾಂದಿ’ ಸಿನಿಮಾದ ಹೆಚ್ಚುಗಾರಿಕೆಯ ಬಗ್ಗೆ ನಾಲ್ಕು ಮಾತು ಹೇಳಬೇಕು.
ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಶಕೆಯನ್ನೇ ಹುಟ್ಟುಹಾಕಿದ ಚಿತ್ರ – ನಾಂದಿ. ಮದ್ರಾಸ್ ಚಿತ್ರರಸಿಕರಿಂದ ಅತ್ಯುತ್ತಮ ಕನ್ನಡ ಚಿತ್ರ ಎಂಬ ಪ್ರಶಸ್ತಿ ಪಡೆದ ನಾಂದಿ, ಮುಂದೆ ಬ್ರಿಟಿಷ್ ಫಿಲಂ ಇನ್ಸ್ಟಿಟ್ಯೂಟ್ನ ವಿಮರ್ಶಕರ ಮೆಚ್ಚುಗೆ ಗಳಿಸಿತು. ಹಿಂದೆಯೇ ಕಾಮನ್ವೆಲ್ತ್ ಚಿತ್ರೋತ್ಸವಕ್ಕೆ ಪ್ರವೇಶ ಪಡೆದು, ವಿದೇಶದಲ್ಲಿ ಪ್ರದಶರ್ಿತಗೊಂಡ ಮೊಟ್ಟಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. 60ರ ದಶಕದಲ್ಲಿಯೇ ಒಂದು ಕನ್ನಡ ಸಿನಿಮಾ ಈ ಮಟ್ಟದ ಸುದ್ದಿ ಮಾಡಿದ್ದರಿಂದ ಕುತೂಹಲಗೊಂಡ ಅಂದಿನ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ, ಈ ಸಿನಿಮಾ ನೋಡುವ ಆಸೆ ತೋಡಿಕೊಂಡರು. ಅಷ್ಟೇ ಅಲ್ಲ, ರಾಷ್ಟ್ರೀಯ ಪ್ರದರ್ಶನವೊಂದರಲ್ಲಿ ಚಿತ್ರ ವೀಕ್ಷಿಸಿ – ಐಠಿ ಜಜಿಡಛಿಠ ಚ ಡಛ್ಟಿಢ ಜಟಟಛ ಞಛಿಠಠಚಜಛಿ ಎಂದು ಸಂಭ್ರಮದಿಂದ ಉದ್ಗರಿಸಿದ್ದರು.
ವಾದಿರಾಜ್-ಜವಾಹರ್ ನಿಮರ್ಾಣದ, ಎನ್.ಲಕ್ಷ್ಮೀ ನಾರಾಯಣ್ ನಿದರ್ೇಶನದ ಚಿತ್ರ ನಾಂದಿ. ಅದಕ್ಕೂ ಮೊದಲು ನಂದಾದೀಪ ಹಾಗೂ ನವಜೀವನ ಎಂಬ ಚಿತ್ರಗಳನ್ನು ನಿಮರ್ಿಸಿದ್ದ ವಾದಿರಾಜ್-ಜವಾಹರ್ ಜೋಡಿ, ಆ ಎರಡೂ ಚಿತ್ರಗಳಿಗೆ ಪ್ರಶಸ್ತಿ ಪಡೆದಿತ್ತು. ಮೂರನೇ ಚಿತ್ರವನ್ನೂ ವಿಭಿನ್ನವಾಗಿ ನಿಮರ್ಿಸುವ ಆಸೆಯಿಂದಲೇ ಅವರು ಲಕ್ಷ್ಮಿನಾರಾಯಣ್ ಬಳಿ ಬಂದರು. ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವಂತಿದ್ದ `ನಾಂದಿ’ ಚಿತ್ರದ ಕಥೆ ಅವರಿಗೆ ಬಹುವಾಗಿ ಹಿಡಿಸಿತು. ತಕ್ಷಣವೇ- `ಸಾರ್, ಇದನ್ನೇ ಸಿನಿಮಾ ಮಾಡೋಣ. ನೀವು ಕೆಲಸ ಶುರು ಮಾಡಿ’ ಎಂದರು.
ಈಗ ಒಂದರೆಕ್ಷಣ, ನಾಂದಿ ಚಿತ್ರದ ಕಥೆಯನ್ನೂ, `ಹಾಡೊಂದ ಹಾಡುವೆ ನೀ ಕೇಳು ಮಗುವೆ’ ಹಾಡು ಬರುವ ಸಂದರ್ಭವನ್ನೂ ನೆನಪು ಮಾಡಿಕೊಳ್ಳಿ. ಈ ಚಿತ್ರದ ಕಥಾನಾಯಕ ವೃತ್ತಿಯಿಂದ ಶಿಕ್ಷಕ. ಆತನ ಹೆಂಡತಿ ತೀರಿಕೊಂಡಿರುತ್ತಾಳೆ. ಅವಳ ನೆನಪಿಗೆ ಮಗು ಇರುತ್ತದೆ. ಮಗುವನ್ನು ನೋಡಿಕೊಳ್ಳಲೆಂದು ಆತ ಎರಡನೇ ಮದುವೆ ಮಾಡಿಕೊಳ್ಳುತ್ತಾನೆ. ವಿಶೇಷವೆಂದರೆ, ಬದುಕೇ ಇಲ್ಲದಂಥ ಹೆಣ್ಣೊಬ್ಬಳಿಗೆ `ಬದುಕು’ ಕೊಡಬೇಕು ಎಂಬ ಮಹದಾಸೆಯಿಂದಲೇ ಕಿವುಡಿ ಮತ್ತು ಮೂಗಿಯನ್ನು ಮದುವೆಯಾಗಿರುತ್ತಾನೆ. ಹೀಗಿರುವಾಗ, ಒಮ್ಮೆ ಮೊದಲ ಹೆಂಡತಿಯ ಮಗು, ಆಟವಾಡುತ್ತಾ ಬೆಂಕಿಯ ಬಳಿ ಹೋಗಿರುತ್ತದೆ. ಆಕಸ್ಮಿಕವಾಗಿ ಬೆಂಕಿಗೆ ಸಿಕ್ಕಿಕೊಂಡು ಅದು ಚೀರುತ್ತದೆ. ಈ ಸಂದರ್ಭದಲ್ಲಿ ಎರಡನೇ ಹೆಂಡತಿ ಮನೆಯ ಇನ್ನೊಂದು ಬದಿಯಲ್ಲಿರುತ್ತಾಳೆ. ಕಿವುಡುತನದ ಕಾರಣದಿಂದ ಮಗು ಕಿರುಚಿಕೊಂಡರೂ ಅದು ಈಕೆಗೆ ಕೇಳಿಸುವುದಿಲ್ಲ. ಪರಿಣಾಮ, ಮಗು ತೀರಿಹೋಗುತ್ತದೆ.
ಕೆಲದಿನಗಳ ನಂತರ ಎರಡನೇ ಹೆಂಡತಿ ಗಭರ್ಿಣಿಯಾಗುತ್ತಾಳೆ. ಮೊದಲ ಹೆಂಡತಿಗೆ ಸೀಮಂತ ಮಾಡಿಸಿದ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯ ಹೆಂಗಸರೆಲ್ಲ ಬಂದು ಆರತಿ ಬೆಳಗಿ, ಚಂದ್ರಮುಖೀ, ಪ್ರಾಣಸಖೀ, ಚತುರೆಯೆ ನೀ ಕೇಳೆ/ಮಾನವ ಕೋಟಿಯ ಸಲಹುವ ಶಕ್ತಿ ಯಾವುದು ನೀ ಹೇಳೆ?’ ಎಂದು ಹಾಡಿ, ಹಾರೈಸಿ ಹೋಗಿರುತ್ತಾರೆ. ಆದರೆ, ಎರಡನೇ ಹೆಂಡತಿ ಕಿವುಡಿ ಮತ್ತು ಮೂಗಿಯಾಗಿರುವುದರಿಂದ ಹಾಡು ಅವಳಿಗೆ ಅರ್ಥವೂ ಆಗುವುದಿಲ್ಲ, ಕೇಳಿಸುವುದೂ ಇಲ್ಲ. ಹೀಗಿದ್ದರೂ ಸೀಮಂತ ಮಾಡಿಸಲು ಮುಂದಾದರೆ, ಮನೆಗೆ ಬರುವ ಹೆಂಗಸರು ಕೊಂಕು ನುಡಿಯಬಹುದು ಎಂದು ಸುಮ್ಮನೇ ಉಳಿದುಬಿಡುತ್ತಾನೆ. ಕಡೆಗೊಂದು ದಿನ, ಹೆಂಡತಿ ಕುಚರ್ಿಯ ಮೇಲೆ ಕೂತಲ್ಲೇ ನಿದ್ದೆ ಹೋಗಿರುವುದನ್ನು ಕಂಡು ನಿಟ್ಟುಸಿರುಬಿಟ್ಟು ಹೊಟ್ಟೆಯೊಳಗಿರುವ ಮಗುವಲ್ಲಿ ಕ್ಷಮೆ ಕೇಳುವ ಧಾಟಿಯಲ್ಲಿ ಆ ಮಗುವನ್ನು ತನ್ನ ಮನೆಗೆ, ಮನಕ್ಕೆ ಸ್ವಾಗತಿಸುವ ಭಾವದಲ್ಲಿ ಹಾಡುತ್ತಾನೆ : `ಹಾಡೊಂದು ಹಾಡುವೆ ನೀ ಕೇಳು ಮಗುವೆ/ಬರಿದಾದ ಮನೆ ಬೆಳಗಿ ನೀ ಎಂದು ಬರುವೆ..’
ನಿಜ ಹೇಳಬೇಕೆಂದರೆ, ಈ ಸಂದರ್ಭದಲ್ಲಿ ಹಾಡು ಹಾಕುವ ಉದ್ದೇಶ ನಿದರ್ೇಶಕ ಲಕ್ಷ್ಮಿನಾರಾಯಣ್ ಅವರಿಗೆ ಇರಲೇ ಇಲ್ಲ. ಕೂತಲ್ಲೇ ನಿದ್ರೆ ಹೋದ ಹೆಂಡತಿಯನ್ನು ಕಂಡು, ನಾಯಕ ಸ್ವಾಗತವೆಂಬಂತೆ ಮಾತಾಡಲು ಉದ್ದದ ಡೈಲಾಗ್ ಬರೆಸಿದ್ದರು ಲಕ್ಷ್ಮಿನಾರಾಯಣ್. ಅದನ್ನು ಕಂಡ ವಾದಿರಾಜ್- `ಸಾರ್, ಹೀರೋ ತುಂಬಾ ದುಃಖದಲ್ಲಿರ್ತಾನೆ. ಅಂಥ ಸಂದರ್ಭದಲ್ಲಿ ಉದ್ದುದ್ದದ ಡೈಲಾಗ್, ಹೇಳಿಸುವ ಬದಲು ಒಂದು ಹಾಡು ಹಾಕಿಸಿದ್ರೆ ತುಂಬ ಎಫೆಕ್ಟ್ ಅಗುತ್ತೆ’ ಎಂದರಂತೆ.
ಈ ವಿಷಯವಾಗಿ ವಾದಿರಾಜ್ ಹಾಗೂ ಲಕ್ಷ್ಮಿನಾರಾಯಣ್ಗೆ ಒಂದಿಷ್ಟು ಹೊತ್ತು ವಾಗ್ವಾದ ನಡೆಯಿತು. ಹಾಡು ಬೇಕೇ ಬೇಕು ಎಂದು ಇವರು; ಬೇಡ ಎಂದು ಅವರು! ಕಡೆಗೂ ವಾದಿರಾಜ್ ಹಟವೇ ಗೆದ್ದಿತು. ಹಾಡು ಬರೆಸುವ ಉದ್ದೇಶದಿಂದ ಆರ್.ಎನ್. ಜಯಗೋಪಾಲ್ ಹಾಗೂ ಸಂಗೀತ ನಿದರ್ೇಶಕ ವಿಜಯಭಾಸ್ಕರ್ ಅವರನ್ನು ಚಿತ್ರೀಕರಣದ ಸ್ಥಳಕ್ಕೆ ಕರೆಸಲಾಯಿತು.
ಆಗಿನ ಕಾಲಕ್ಕೆ ಚೆನ್ನೈನ ಜೆಮಿನಿ ಸ್ಟುಡಿಯೋಕ್ಕೆ ವಿಪರೀತ ಡಿಮ್ಯಾಂಡ್ ಇತ್ತು. ಅದಕ್ಕೆ ಪ್ರತಿ ಅರ್ಧಗಂಟೆಯ ಲೆಕ್ಕದಲ್ಲಿ ಬಾಡಿಗೆ ಕೊಡಬೇಕಿತ್ತು. ಈ ಕಾರಣದಿಂದ ಯಾರೇ ಆದರೂ, ಹಾಡು ಹಾಗೂ ಸಂಗೀತವನ್ನು ಬೇರೆ ಕಡೆ ಸಿದ್ಧ ಮಾಡಿಕೊಂಡು, ನಂತರ ಸ್ಟುಡಿಯೋಗೆ ಬಂದು ರೆಕಾಡರ್ಿಂಗ್ ಮುಗಿಸುತ್ತಿದ್ದರು. `ನಾಂದಿ’ಯ ಹೊಸ ಹಾಡಿಗೆ ಹಾಗೆಯೇ ಮಾಡಲು ನಿರ್ಧರಿಸಲಾಯಿತು. ಆರ್.ಎನ್.ಜೆ ಹಾಗೂ ವಿಜಯಭಾಸ್ಕರ್ಗೆ ಸಂದರ್ಭ ವಿವರಿಸಿದ ಲಕ್ಷ್ಮಿನಾರಾಯಣ್- `ಹಾಡು ರೆಡಿ ಮಾಡಿಕೊಂಡು ಬನ್ನಿ’ ಎಂದರು. ಎಲ್ಲವನ್ನೂ ಕುತೂಹಲದಿಂದ ಕೇಳಿಸಿಕೊಂಡ ಡಾ. ರಾಜ್ಕುಮಾರ್- `ನೀವು ಹಾಡು ಬರೆಯುವುದನ್ನು ಹಾಗೂ  ಸಂಗೀತ ಸಂಯೋಜಿಸುವುದನ್ನು ನಾನೂ ನೋಡಬೇಕಲ್ಲ?’ ಎಂದರು.
`ಸರಿ. ಇವಾಗ ವಾದಿರಾಜ್ ಅವರ ಮನೇಲಿ ನೋಡ್ತೀರಂತೆ ಬನ್ನಿ’ ಎಂದರು ಆರ್.ಎನ್.ಜೆ. ನಂತರ ವಾದಿರಾಜ್, ಹರಿಣಿ, ವಿಜಯಭಾಸ್ಕರ್, ರಾಜ್ಕುಮಾರ್ ಮನೆಗೆ ಬಂದರು. `ನಾನು ಕಾಫಿ  ಮಾಡ್ಕೊಂಡು ಬರ್ತೀನಿ ಎಂದು  ಹರಿಣಿ ಅಡುಗೆ ಮನೆಗೆ ಹೋದರು. ರಾಜ್ಕುಮಾರ್ ಹಾಗೂ ವಾದಿರಾಜ್, ಮನೆಯ ವರಾಂಡದಲ್ಲಿ ಮಾತಿಗೆ ಕೂತರು. ಇತ್ತ ಆರ್.ಎನ್.ಜೆಯವರೊಂದಿಗೆ ಮನೆಯ ಒಳಬಂದ ವಿಜಯಭಾಸ್ಕರ್, ಯಾವುದೋ ಮೋಡಿಗೆ ಒಳಗಾದವರಂತೆ ಹಾರ್ಮೋನಿಯಂ ಮುಂದಿಟ್ಟುಕೊಂಡು ಹಾಗೇ ಸುಮ್ಮನೆ ಯಾವುದೋ ಒಂದು ರಾಗವನ್ನು ನುಡಿಸಲು ತೊಡಗಿದರು. ಹಾಗೆ ನುಡಿಸುತ್ತಿದ್ದಾಗಲೇ ಅನಿರೀಕ್ಷಿತವಾಗಿ ಅವರಿಗೆ ಒಂದು ಟ್ಯೂನ್ ಹೊಳೆಯಿತು. ಅದರಿಂದ ಪ್ರಭಾವಿತರಾದಂತೆ, ನಂತರದ ಕೆಲವೇ ಕ್ಷಣಗಳಲ್ಲಿ ಇಡೀ ಹಾಡಿಗೆ ಸಂಗೀತ ಹೇಗಿರಬೇಕೆಂದು ಅಂದಾಜು ಮಾಡಿಕೊಳ್ಳುತ್ತಾ ಭಾವಪರವಶರಾಗಿ ಹಾರ್ಮೋನಿಯಂ ನುಡಿಸುತ್ತಲೇ ಇದ್ದರು ವಿಜಯಭಾಸ್ಕರ್. ಅವರನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ಆರ್.ಎನ್. ಜಯಗೋಪಾಲ್, ತಾವೂ ಯಾವುದೋ ಮೋಡಿಗೆ ಒಳಗಾದವರಂತೆ ಒಂದೊಂದೇ ಪದ ಜೋಡಿಸಿಕೊಂಡು- `ಹಾಡೊಂದ ಹಾಡುವೆ ನೀ ಕೇಳು ಮಗುವೆ’ ಎಂದು ಆರಂಭಿಸಿಬಿಟ್ಟರು.
ಆ ಸಂದರ್ಭದಲ್ಲಿಯೇ- `ಮನೆಗೆ ಒಂದು ಮಗು ಬಂದ್ರೆ ಬೆಳಕು ಬಂದ ಹಾಗೆ. ಮಗುವಿನ ನಗು ಮನೆಯನ್ನೇ ಬೆಳಗಬಲ್ಲದು. ಮಗುವಿರುವ ಮನೆಯಲ್ಲಿ ನಗುವಿಗೆ ಬರವಿಲ್ಲ’ ಎಂಬ ಹಿರಿಯರ ಮಾತುಗಳು ನೆನಪಾದವು. ಅವನ್ನೆಲ್ಲ ಸೇರಿಸಿ ಬರಿದಾದ ಮನೆ ಬೆಳಗೆ ನೀನೆಂದು ಬರುವೆ?’ ಎಂದು ಬರೆದರು. ನಂತರದ ಮೂರೇ ನಿಮಿಷದಲ್ಲಿ ಇಡೀ ಹಾಡು ಸಿದ್ಧವಾಯಿತು. ಇಷ್ಟಾಗುತ್ತಿದ್ದಂತೆ ಅಡುಗೆ ಮನೆಯಿಂದ ಹೊರಬಂದ ಹರಿಣಿ- `ಕಾಫಿ ರೆಡಿ’ ಎಂದರು. ಎಲ್ಲರೂ ಜತೆಯಾಗಿ ಕಾಫಿ ಕುಡಿದದ್ದಾಯಿತು. ನಂತರ ರಾಜ್ಕುಮಾರ್- `ಸರಿ, ಈಗ ಹಾಡು ಬರೆಯುವ, ಅದಕ್ಕೆ ಸಂಗೀತ ಸಂಯೋಜಿಸುವ ಕೆಲಸ ಶುರುವಾಗಲಿ. ನಾನೂ ನೋಡ್ತೇನೆ’ ಎಂದರಂತೆ. ಆಗ ಆರ್.ಎನ್.ಜೆ- `ಇನ್ನೆಲ್ಲಿಯ ಹಾಡು? ಅದನ್ನು ಈಗಷ್ಟೇ ಬರೆದು ಮುಗಿಸಿದ್ದಾಯ್ತು. ಸಂಗೀತ ಸಂಯೋಜಿಸಿದ್ದೂ ಆಯ್ತು’ ಎಂದರಂತೆ.
ಈ ಮಾತು ಕೇಳಿ ಬೆರಗಾದ ರಾಜ್ಕುಮಾರ್, ಹೌದೇ? ಇಷ್ಟು ಬೇಗ ಹೇಗೆ ಸಾಧ್ಯವಾಯ್ತು ಎಂದಿದ್ದಾರೆ. ಆರ್.ಎನ್.ಜೆ. ನಡೆದದ್ದೆಲ್ಲವನ್ನು ವಿವರಿಸಿದರಂತೆ. ಈ ಮಾತಿಂದ ಖುಷಿಯಾದ ರಾಜ್- `ಹಾಗಾದ್ರೆ ಒಮ್ಮೆ ಹಾಡಿ ತೋರಿಸಿ, ಕೇಳೋಣ’ ಎಂದರು. ಆಗ ಆರ್.ಎನ್.ಜೆಯವರೇ ಹಾಡಿದರು. ಹಾಡು ಕೇಳಿದ ರಾಜ್ ಭಾವಪರವಶರಾಗಿ ನಿಂತಲ್ಲೇ ಮೈಮರೆತು, ಕಣ್ತುಂಬಿಕೊಂಡು ಅದ್ಭುತವಾದ ಹಾಡು ಎಂದರು. ಚಿತ್ರ ಬಿಡುಗಡೆಯಾದ ನಂತರ ಇದೇ ಮಾತನ್ನು ಚಿತ್ರಪ್ರೇಮಿಗಳೂ ಹೇಳಿದರು!

‍ಲೇಖಕರು avadhi

October 27, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

2 ಪ್ರತಿಕ್ರಿಯೆಗಳು

 1. ಕೇಶವ

  ಪಿಬಿ ಹಾಡಿದ ಅತ್ತ್ಯುತ್ತಮ ಹಾಡುಗಳಲ್ಲಿ ಇದೂ ಒಂದು ಎಂದು ನಿಸ್ಸಂಶಯವಾಗಿ ಹೇಳಬಹುದು. ನಾಂದಿ ಚಿತ್ರ ನೋಡಿ ದಶಕಗಳೇ ಕಳೆದಿದ್ದರೂ ಇನ್ನೂ ಈ ಹಾಡು ಕಣ್ಣ ಮುಂದೆಯೇ ಇದೆ.
  – ಕೇಶವ

  ಪ್ರತಿಕ್ರಿಯೆ
 2. jogi

  ಲಾಲ್ ಬಹದೂರ್ ಶಾಸ್ತ್ರಿಗಳ ಮೆಚ್ಚುಗೆಯಂತೂ ಅದ್ಭುತ. ತುಂಬಾ ಇಷ್ಟವಾಯ್ತು-
  ಲಾಲ್ಬಹದ್ದೂರ್ ಶಾಸ್ತ್ರಿ, ಈ ಸಿನಿಮಾ ನೋಡುವ ಆಸೆ ತೋಡಿಕೊಂಡರು. ಅಷ್ಟೇ ಅಲ್ಲ, ರಾಷ್ಟ್ರೀಯ ಪ್ರದರ್ಶನವೊಂದರಲ್ಲಿ ಚಿತ್ರ ವೀಕ್ಷಿಸಿ – ಐಠಿ ಜಜಿಡಛಿಠ ಚ ಡಛ್ಟಿಢ ಜಟಟಛ ಞಛಿಠಠಚಜಛಿ ಎಂದು ಸಂಭ್ರಮದಿಂದ ಉದ್ಗರಿಸಿದ್ದರು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: