ಮತ್ತೆಂದೂ ಹುಟ್ಟದ ಮಗಳು!

chetana2.jpg

 “ಭಾಮಿನಿ ಷಟ್ಪದಿ”

ಚೇತನಾ ಚೈತನ್ಯ 

ಹೆಣ್ಣು ಭ್ರೂಣದ ಪಾಡಿಗೆ ಬಂದ ಪ್ರತಿಕ್ರಿಯೆಗಳು ಸೆಳೆದವು. ಕರುಳು ಚುರುಕ್ ಎಂದಿತು. ಮೂರು ವರ್ಷದ ಕೆಳಗೆ ಬರೆದಿದ್ದ ಲೇಖನ ನೆನಪಾಯ್ತು. ಗೆಳತಿಯೊಬ್ಬಳ ಅನುಭವದ ನೋವಿದು. ನೆನಪಿರುವಷ್ಟು ಮಟ್ಟಿಗೆ ಇಲ್ಲಿ ಮೂಡಿಸಿದ್ದೇನೆ. ನಿಮ್ಮೊಂದಿಗೆ ಹಂಚಿಕೊಳ್ಳಲು…

*

ದೆಂಥದೋ ಮಂಪರು ತರುವ ಸ್ಮೆಲ್ಲು. ಅನಸ್ತೇಷಿಯಾ?
ಒಳ ಕೋಣೆಯಲ್ಲಿ ಅತ್ತೆ ಮಾತಾಡಿದ್ದು ಏನು?
ಲೇಬರ್ ಕಾಟಿನ ಮೇಲೆ ಕಾಲು ಕೆಳ ಸರಿಸಿ, ಈ ಇವಳೇನು ಮಾಡ್ತಿದಾಳೆ?
ಥೂ! ಗಾಜಿನ ಕೊಳವೆ!!
ಶ್ಶೀ…ನೋವಿಗೆ ಮುಲುಗಿದ್ದಕ್ಕೆ ಅವಳೆಂಥ ಅಂದಿದ್ದು?
“ಆಗ ಆಗದ ನೋವು ಈಗ ಆಗ್ತದಾ?”
ಅವಳಿಗೇನು ಗೊತ್ತು? ಬೀಜ ಬಿತ್ತುವ ನೋವು, ಬೇರು ಬಗೆಯುವ ನೋವು- ಎರಡೂ ಬೇರೆ ಬೇರೆ ಅಂತ!?
“ಬೆಳೆದುಬಿಟ್ಟಿದೆ…ರಿಸ್ಕು ಬೇಕಾ?”
“ಆಮೆಲಿನ ರಿಸ್ಕಿಗಿಂತ ಇದು ವಾಸಿ!”

ಮೊಳಕೆಯಲ್ಲೇ ಚಿವುಟದಿರಿ….ಕೆಂಪು ಬಸ್ಸಿನ ಮೇಲೆ ಹಳದಿ ಬೋರ್ಡು. ಅಂವ ಕೆನ್ನೆ ಚಿವುಟಿ ನಕ್ಕಿದ್ದ. ಈಗ ಆ ಮಖೇಡಿ ಎಲ್ಲಿ? ಅಮ್ಮನ ಸೆರಗಲ್ಲಿ ಅವಿತಿರುವನೇನೋ?

ನನ್ನ ದನಿ ಎಲ್ಲಿ? ವೀರಾವೇಶದ ಮಾತುಗಳೆಲ್ಲಿ? ಓ…ಅವೆಲ್ಲ ಎಲ್ಲಿ ಸತ್ತವು?

06sun6.jpgಕರ ಕರ ಕರ್ಕಶ ಸದ್ದು! ಕೊಯ್ಯುತ್ತಿರಬೇಕು ಕರುಳ ಕುಡಿಯನ್ನ.
ಎಳೆದೆಳೆದು, ತುಂಡರಿಸಿ… ಮುಗಿದುಹೋದೆ ನಾನು?

ದೊಡ್ಡತ್ತೆಗೆ ಮೊಮ್ಮಗ ಹುಟ್ಟಿದ. ಅತ್ತಿಗೆ ಹೊಟ್ಟೆ ಅಳಿಸಿಕೊಂಡಳು.

ಇನ್ಫೆಕ್ಷನ್ ಆಗದಿರಲು ಎರಡೆರಡು ಮಾತ್ರೆ, ಪ್ರತಿ ರಾತ್ರಿ…

ಅಗೋ! ಆ ಮೂಲೆಯ ರಕ್ತಸಿಕ್ತ ಟಬ್ಬಲ್ಲಿ ಏನು?
ಇಂಚಿಂಚು ಹೆರೆದು ಬಿಸಾಡಿದ, ಮತ್ತೆಂದೂ ಹುಟ್ಟದ ನನ್ನ ಮಗಳು!?

ಚಿತ್ರ: ಪ ಸ ಕುಮಾರ್

‍ಲೇಖಕರು avadhi

August 8, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This