ಮತ್ತೆ ‘ಜೋಗಿ’ ಹಾಡು

 

ವಿರಹ

 

-ಜೋಗಿ

ವಿರಹಕ್ಕೆ ರೂಪಕ

ಚಾತಕ ಪಕ್ಷಿ

ಸುಡುವ ಬೆಳದಿಂಗಳು

ಸರಿಯದ ಕಾಲ

ಚಳಿಗಾಲದ ಸುದೀರ್ಘ ರಾತ್ರಿ

ಚಂದನದ ಮರಗಳ ಕಾಡಿಂದ ಬೀಸುವ

ತಂಗಾಳಿ

ಅವನ ತೋಳಮೇಲೆ ಪವಡಿಸಿದ

ಇರುಳಿನ ನೆನಪು

 

ಮಿಲನಕ್ಕೆ ರೂಪಕಗಳೇ ಇಲ್ಲ.

ಅಲ್ಲಿ ಕಾಲದೇಶ

ನೆಲೆಕಳಕೊಂಡು

ಕಣ್ರೆಪ್ಪೆ ತಾನೇ ತಾನಾಗಿ ಮುಚ್ಚಿ

ಎದೆ ಸೆಟೆದು ಇಡಿದೇಹ

ಹಿಡಿಯಾಗಿ

ಹಿಡಿಯಾಗಿದ್ದದ್ದುಬಿಡಿಬಿಡಿಯಾಗಿ

ನಿನ್ನೆನಾಳೆಗಳ ಅಕಾಲ ಅವಸಾನ.

 

ಸುರತದ ಕಂಪುಹೊತ್ತಲ್ಲಿ

ಮನಸುಗಳ ಕಲಸುಮೇಲೋಗರ

ಕ್ಯಾನ್ವಾಸಿನ ತುಂಬ

ಅವರ್ಣನೀಯ ವರ್ಣವೈಭವ,

ಮನೆಯ ಮಾಳಿಗೆ ಸೋರಿ

ಗುಡ್ಡ ಗವಿಯನ್ನು ನುಂಗಿ

ಸಿರಿಗೆರೆಯ ನೀರಲ್ಲಿ

ಉಂಗುರದ ಪುಳಕ.

 

ಕವಿ ಕವಿಯಲ್ಲ.

ಭವಿ ಭವಿಯಲ್ಲ.

ದೀಪೋತ್ಸವದ ರಾತ್ರಿ

ಕತ್ತಲೆಬೆಳಕಿನ ನಡುವೆ

ದಾಟಲಾಗದ ಹೊಸಿಲು.

ಅಂಗಾಗಕ್ಕೆ ಆಗಷ್ಟೇ ಮೂಡಿದ

ಮತ್ತೊಂದು ಟಿಸಿಲು.

 

ಓಂ ಸಹನಾವವತುಃ

ಸಹನೌಭುನಕ್ತು.

 

‍ಲೇಖಕರು avadhi

October 7, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತುಂಬು ತಿಂಗಳಿನ ಹಾಲು ಬೆಳದಿಂಗಳು ನೀ

ತುಂಬು ತಿಂಗಳಿನ ಹಾಲು ಬೆಳದಿಂಗಳು ನೀ

ಪ್ರಕಾಶ.ಬಿ ಉಪ್ಪನಹಳ್ಳಿ ಕನಸುಗಳ ಕಟ್ಟಿದ ಹಟ್ಟಿಕೊರಳು ಹೊಟ್ಟೆ ಬಟ್ಟೆ ಕಟ್ಟಿನಿಂತ ಹೆಜ್ಜೆಗಳು ಗುರುತಾಗುವಂತೆಲೋಕದೆದುರು ತಲೆ ಎತ್ತಿ...

ನಿಜವಾದ ಸುಳ್ಳು!

ನಿಜವಾದ ಸುಳ್ಳು!

ಲಕ್ಷ್ಮೀದೇವಿ ಪತ್ತಾರ ಇಷ್ಟು ದಿನ ಹೌದಾಗಿದ್ದು ಇಂದು ಅಲ್ಲವಾಗಿದೆಇಲ್ಲವೆನ್ನುವುದು ಎದ್ದು ಕಾಣುತ್ತಿತ್ತು ಯಾವುದೊ ಭಯ, ಚಿಂತೆಗಳ...

ಈ ಆಸೆಯ ಬಸುರು ಬಲು ಭಾರ…

ಈ ಆಸೆಯ ಬಸುರು ಬಲು ಭಾರ…

ಹೇಮಂತ್ ಎಲ್ ಚಿಕ್ಕಬೆಳವಂಗಲ ಇದು ಇಂದು ನಿನ್ನೆಯದಲ್ಲ! ಸಾಗರದಂತಹ ನಿನ್ನೂರಿಗೆನಾನು ಬರುವಾಗಲೆಲ್ಲಾನಿನಗೆಹೇಳಿಯೇ ಇರುತ್ತೇನೆ.. ಎಲ್ಲ ಕೆಲಸಗಳ...

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ rjCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: