ಮತ್ತೆ 'ತುಕಾರಾಂ'

ಸುನಿಲ್  ರಾವ್

ಯಾವುದೇ ನಾಟಕವಾಗಲಿ,ಪುಸ್ತಕವಾಗಲಿ ಅದಕ್ಕೆ ಎರಡು ದರ್ಶನಗಳು ಇರುತ್ತವೆ ಒಂದು ಲೇಖಕ ಅಥವಾ ನಿರ್ದೇಶಕನ ದರ್ಶನ, ಇನ್ನೊಂದು ನೋಡುಗ ಅಥವಾ ಓದುಗನ ದರ್ಶನ… “ನಾ ತುಕಾರಾಂ ಅಲ್ಲ ” ನಾಟಕ ಇಬ್ಬರ ದರ್ಶನಕ್ಕೂ ಮೀರಿ ಬೆಳೆಯುವ ಬದಲು ಅಥವಾ ಒಂದು ಗ್ಯಾಪ್ ತರುವ ಬದಲು…ಒಟ್ಟಿಗೆ ಪ್ರೇಕ್ಷಕನನ್ನು ಜೊತೆಗೆ ಸಾಗಿಸಿಕೊಂಡು ಹೋಗುತ್ತದೆ. ಒಂದು ಏಣಿಯ ಬುಡದಲ್ಲಿರುವ ಶ್ರೀಸಾಮಾನ್ಯ -ಬಾಹ್ಯ ಅಧಿಕಾರ ಹಾಗು ಸತ್ತೆಗಳ ಮೇಲೆ ಅವಲಂಬಿತನಾಗುತಾನೆ,ಯೋಗ್ಯವಾದ ರೀತಿಯಲ್ಲಿ ಜೀವನವನ್ನು ಅಳವಡಿಸಿಕೊಳ್ಳಲು ಆಗದೆ ಇರುವಂತಹ ನೈತಿಕ ವ್ಯವಸ್ಥೆಗೆ ತನ್ನನು ಒಗ್ಗಿಸಿಕೊಂಡು ಬದುಕಿಬಿಡುತ್ತಾನೆ….ಜೀವನದಲ್ಲಿ ಏರಿಳಿತಗಳೇ ಇಲ್ಲ..ಗುಮ್ಮಾಸ್ತನಾಗಿ ಕೆಲಸಕ್ಕೆ ಸೇರಿ..ಗುಮ್ಮಾಸ್ತನಾಗೆ ನಿವೃತ್ತಿಯಾಗೋದು…ಅದೊಂಥರ ಬದುಕಿಯೂ ಸತ್ತಂತೆ ಇರುವ ಜೀವನ…. ಇನ್ನೊಂದು charecter ಮೇಲಿನವನಿಗೆ ತದ್ವಿರುದ್ದ…ನಿಮಿಷಕ್ಕೊಂದು ಸುಳ್ಳು,ಬರೀ ಸುಳ್ಳಲ್ಲ ಸುಖಾ ಸುಮ್ಮನೆ ಸುಳ್ಳು…..ಒಬ್ಬೆ ವ್ಯಕ್ತಿ ಹಲವಾರು ಹೆಸರು ಇಟ್ಟುಕೊಂಡು ಸುಳ್ಳು ಹೇಳಿಕೊಂಡು ಸ್ವೆಚ್ಚಾಚಾರಿಯಂತೆ ಬದುಕುವ ನೋಟ..ಆತ್ಮ ನಿರೀಕ್ಷಣೆಗೆ “ಇದ್ದುದ್ದನ್ನು” ಬದಲಾವಣೆ ಮಾಡಿ…”ಇಲ್ಲದ್ದನ್ನು” ಸೃಷ್ಟಿಸಿಕೊಂಡು…ಧೈರ್ಯವಾಗಿ ಕಾರ್ಯರೂಪಕ್ಕೆ ತಂದುಬಿಡುವ ಪ್ರಕ್ರಿಯೆ… ಒಮ್ಮೆ ಡಾಕ್ಟರಾಗಿ..ಇನ್ನೊಮ್ಮೆ ಲಾಯರ್ ಆಗಿ…ಇನ್ನೊಮ್ಮೆ ಪ್ರೊಫೆಸರ್ ಆಗಿ….ಇನ್ನೊಮ್ಮೆ MLA ಆಗಿ….ಅಬ್ಬ..ಸುಳ್ಳುಗಳ ಕಂತೆ…ಅಪ್ರತಿಮ ಹಾಸ್ಯ….ಹಾಸ್ಯದ ಮಧ್ಯದಲ್ಲೂ ಕಣ್ಣ ಅಂಚಲಿ ನೀರು ತರಿಸುವ ಸನ್ನಿವೇಶಗಳು…really wonderfull… ಇಷ್ಟೂ ಸನಿವೇಶಗಳು..ಲಾಲ್ ಭಾಗ ನ ಮರದ ಮೇಜಿನ ಮೇಲೆ ನಡೆಯುತ್ತದೆ,ಬೋನಸ್ ಗಾಗಿ ಕಾಯುವ ಒಬ್ಬ ವೃದ್ಧನೊಂದಿಗೆ..ಕೂತು ಜೀವನದ ಮಜಲುಗಳನ್ನು ಹರಟುವ ಇನ್ನೊಬ್ಬ ವೃದ್ಹ… ವೃದ್ದರರಕ್ಷಣೆ ಅನ್ನೋ ಹೆಸರಲ್ಲಿ ಯಾವೂನೋ ರೌಡಿ ಚಂದಾ ಎತ್ತುವುದು,ಸುಳ್ಳಿನ ಮುದುಕ ಕೈ ಮಿಲಾಯಿಸಿ ನಿಂತು ಹೊಡೆತ ತಿಂದು ಬರೋದು…ಮಧ್ಯೆ ಅವತರಿಸುವ ಇದೇ ವೃದ್ಧನ ಮಗಳು..ವಾತ್ಸಲ್ಯ ಪ್ರೀತಿ ಎಂಬ ಹೆಸರಲ್ಲಿ ಅವನನ್ನು ಕಾಣುವ ರೀತಿ,ಅವಳ ಮಾತಿನಿಂದ ಉಸಿರುಗಟ್ಟಿದಂತಾಗುವ ತಂದೆ….ವೃದ್ಧಾಶ್ರಮಕ್ಕಾದ್ರು ಹೋಗ್ತೀನಿ..restrict ಮಾಡುವ ನಿನ್ನ ಮನೆಗೆ ಬರೋಲ್ಲ ಅನ್ನುವ ವೃದ್ಧ….ಇಷ್ಟೂ ಸನ್ನಿವೇಶ ನನ್ನೊಳಗೆ ಒಂಥರಾ ತಂದೆ ತಾಯಿಯರೆಡೆಗಿನ ಜವಾಬ್ದಾರಿಗೆ ಎಚ್ಚರಿಸಿತು…. “ನಾ ತುಕಾರಾಮ ಅಲ್ಲ…” ಇದರ ಪ್ರಯೋಗ ಸಮಂಜಸವಾಗಿ ಆಗಿದೆ….ಶರಣಾಗತಿಯಿಂದ ಹೇಳುವ ಒಬ್ಬ ‘ವ್ಯಕ್ತಿ’ ಹಾಗು ಮಗಳು ಎಂಬ ಪಾತ್ರದಲ್ಲಿರುವ ಹೇಳುವ ಇನ್ನೊಬ್ಬ ‘ ವ್ಯಕ್ತಿ’….ಬಹಳ ಅರ್ಥವನ್ನು ತಿಳಿಸಿ ಹೋಗುತ್ತಾರೆ….. ಕೊನೆಯಲ್ಲಿ ಸುಳ್ಳಿನ ವೃದ್ದ ಸೇವಾಶ್ರಮಕ್ಕೆ ಸೇರುತ್ತಾನೆ …ತನ್ನ ಸುಳ್ಳುಗಳನ್ನೆಲ್ಲ ಬಿಟ್ಟು….ಕೆಲವೇ ದಿನಗಳಲ್ಲಿ..ಮೆತ್ತಗಾಗಿ ಬಿಡುತ್ತಾನೆ…ತೀರ ವೃದ್ದಾಪ್ಯ ಆವರಿಸಿಬಿಡುತ್ತದೆ….ವೃದ್ಧಾಶ್ರಮ ಅವನಿಗೆ ಒಂಥರಾ LKG ಶಾಲೆಯಲ್ಲಿ ಮಕ್ಕಳನ್ನು ಕೂಡಿ ಹಾಕಿದಂತಹ ಅನುಭವ…”ಬೇಗ ಹೋಗಬೇಕೋ ಸ್ವಾಮೀ 12 .30ಗೆ 5 ನಿಮಿಷ ಹೀಗೆ- ಹಾಗೆ ಆದ್ರೆ ಊಟ ಸಿಗೋಲ್ಲ “……ಎಂಬ ದಯಾಲೋಗ್ ಹೇಳಿ…ಕಲುಕಿಬಿಡುತ್ತಾನೆ ಆತ….. ಹೀಗೆ ನಡೆಯುವ ಸಂಭಾಷಣೆ ಕೊನೆಗೆ ….ಸುಳ್ಳಿನ ವೃದ್ಧನ ಒಡನಾಟ…ಇನ್ನೊಬ್ಬ ವೃದ್ದನಿಗೆ ಇಷ್ಟವಾಗಿ…ಮತ್ತೆ ಅದೇ ಸುಳ್ಳನ್ನು ಹರಟಲು…ರೆಡಿ ಆಗ್ತಾರೆ……. ಒಬ್ಬೊಂಟಿ ತನ..ನೋವು, ಹತಾಶೆ,ಅಭದ್ರತೆ,ಜಿಗುಪ್ಸೆ,ಪೂರ್ವಾಗ್ರಹ…ಇವೆಲ್ಲವನ್ನೂ..ಮೀರಿ ಖುಷಿ ಖುಶಿಯಾಗಿ…..ತನ್ನಿಷ್ಟಕ್ಕೆ ತಾನು ಬದುಕಲು ಸುಳ್ಳುಹೆಳಬೇಕಾದ್ರೆ ತಪ್ಪು ಎಲ್ಲಿದೆ ಹೇಳಿ….ಅಂತ ನಮಗೆ ಅನ್ಸತ್ತೆ… ಒಟ್ಟಿನಲ್ಲಿ…ಸುರೇಂದ್ರನಾಥ್(ಸೂರಿ)ಅವರ ಸ್ಕ್ರಿಪ್ಟ್ ಎಂತಹ ಪ್ರಬುದ್ಧತೆಯನ್ನು ಮೀರಿ ಬಿಂಬಿಸುತ್ತದೆ ಅಂದ್ರೆ ಅದೊಂಥರ ಸುಖ….ಏಣಗಿ ನಟರಾಜ್ ಹಾಗು ಮೆಘ ನಾಡಿಗೇರ್…ಪಾತ್ರಕ್ಕೆ ತಕ್ಕಂತೆ ಜೀವ ತುಂಬಿ ನಟಿಸಿದ್ದಾರೆ…… ಇನ್ನು ಬಿ.ಸುರೇಶ ಬಗ್ಗೆ 100 ಪುಟ ಬರೆದರೂ ಸಾಲೊಲ್ಲ….ಪಾತ್ರವೇ ತಾವಾಗಿ….ಮಾತುಗಳಲ್ಲಿ ಬೆರೆತು……”ನಾ ತುಕಾರಾಮ ಅಲ್ಲ….” ನಾಟಕ ಎಂಬಾ ವಾಕ್ ಪ್ರವಾಹದಲ್ಲಿ….ಪ್ರೇಕ್ಷಕನನ್ನು …ಪ್ರೇಕ್ಷಕನ ಗಮನವನ್ನ……ನುಂಗಿಹಾಕಿಬಿಟ್ಟರು…….. ಪ್ರವೀಣ್ ಗೋಡ್ಕಿ೦ಡಿಯವರ ಕೊಳಲು….amazing …. ಲೋಪ ಎತ್ತಿ ಮಾತಾಡಲು ನಾಟಕದಲ್ಲಿ ಏನೂ ಇಲ್ಲ…ನಾನು ನೋಡದೆ ಇದ್ದಿದ್ದರೆ ಅದೇ ಲೋಪವಾಗ್ತಿತ್ತು….  ]]>

‍ಲೇಖಕರು G

April 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವನ ತಲ್ಲಣ..

ಅವನ ತಲ್ಲಣ..

ನಂದಿನಿ ಹೆದ್ದುರ್ಗ 'ಸುಸೀಲಾ...ಏ ಸುಸಿ..ಆ ಲಕ್ಷ್ಮಮ್ಮನ ಮನೆಗೆ ಹೋಗಿದ್ದೇನಮ್ಮೀ. ಮುಯ್ಯ ಆಳಿಗೆ ಬತ್ತೀನಿ ಅಂದಿದ್ಳು ಲಕ್ಷಮ್ಮಕ್ಕ. ಒಂದು ಕಿತ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: