ಮತ್ತೆ ಮತ್ತೆ ‘ಅಹರ್ನಿಶಿ’

img_9629ಒಬ್ಬ ಹುಡುಗಿ ಇದ್ದಾಳೆ. ಅವಳಿಗೆ ಕಣ್ಣ ತುಂಬಾ ಕನಸು. ರೆಕ್ಕೆ ಬಿಚ್ಚಿ ಆಕಾಶ ಮುಟ್ಟುವ ಹಂಬಲ. ಮಲೆನಾಡಿನ ಹುಂಚದಕಟ್ಟೆ ಎಂಬ ಪುಟ್ಟ ಗ್ರಾಮದಿಂದ ಎದ್ದು ಬಂದವಳು. ಮನಸ್ಸು ಮನಸ್ಸುಗಳ ನಡುವೆ ಗೋಡೆ ಇರುವುದನ್ನು ಸುತಾರಾಂ ವಿರೋಧಿಸುವ ಈಕೆ ಎರಡರ ಮಧ್ಯೆ ಸಲೀಸು ಮಾತು ಹರಿಯುವಂತಾಗಲು ದಣಪೆ ಕಟ್ಟಿದವಳು. ಇವಳು ಕೆ ಅಕ್ಷತಾ.

ಮೊದಲ ಸಂಕಲನಕ್ಕೆ ಓದುಗರನ್ನು ಸೆಳೆದುಕೊಂಡವಳು. ವೆಂಕಟರಮಣ ಗೌಡರಿಂದ – ‘ಇವಳೆಷ್ಟು ಗಟ್ಟಿ ಹುಡುಗಿಯೆಂದರೆ, ಇವಳು ಗೋಳೋ ಅನ್ನುತ್ತಿಲ್ಲ. ತಾನು ಮೆಚ್ಚಿದವನು ತನ್ನ ನಿರೀಕ್ಷೆಯನ್ನು ಮುಟ್ಟಲಿಲ್ಲವೆಂದು ಗೊತ್ತಾದಾಗಲೂ ಇವಳಲ್ಲಿ ಆ ಬಗ್ಗೆ ಆಘಾತವಿಲ್ಲ. ತಾನೇ ಹೊಸ ಬಗೆಯಲ್ಲಿ ಬದುಕುವ ಅಗತ್ಯವಿದೆ ಎಂದು ಯೋಚಿಸುತ್ತಾಳೆ. ಆ ಮೂಲಕ ನಿವಾರಣೆಯ ದಣಪೆಯಲ್ಲಿ ನಿಂತು ಆತ್ಮವಿಶ್ವಾಸ ಕಟ್ಟಿಕೊಳ್ಳುತ್ತಾಳೆ.

‘ಹಾಗೆಂದು ಇವಳೇನು ಕೌಟುಂಬಿಕ ಪರಿಧಿಯಿಂದ ಆಚೆ ನಿಂತವಳಲ್ಲ. ಅಲ್ಲಿನ ಎಲ್ಲ ಸಣ್ಣತನಗಳ ಜೊತೆಗೇ ಏಗುತ್ತಲೂ ತನ್ನ ದಾರಿಯ ಬಗ್ಗೆ ಎಚ್ಚರಾಗಿರುವವಳು. ಎಂಥದೋ ವಿಶಿಷ್ಟ ಅಂತಃಶಕ್ತಿಯೊಂದರ ಸಖ್ಯದಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳುತ್ತಿರುವವಳು. ಈ ಹುಡುಗಿ ಸಿಗುವುದು ಅಕ್ಷತಾ ಅವರ ಕವಿತೆಗಳಲ್ಲಿ. ಮತ್ತು ಇವಳು ಎಲ್ಲ ಲೆಕ್ಕಗಳಲ್ಲೂ ನಮ್ಮ ಕಾಲದ ಹುಡುಗಿ’

img_18851‘ ಇಷ್ಟೊಂದು ಮಾಗಿದವಳ ಹಾಗೆ ಕಾಣಿಸುತ್ತಾಳಲ್ಲ, ಇದೇನು ಕೃತಕ ಪೋಸ್ ಇರಬಹುದೇ ಎಂಬ ಅನುಮಾನದ ದೃಷ್ಟಿಯಿಂದ ನೋಡಿದರೂ, ಇಲ್ಲ ಹಾಗಲ್ಲ ಎಂಬ ಸಮಾಧಾನವೇ ಮುಂದೆ ಬರುತ್ತದೆ. ಇವಳನ್ನು ಕುತೂಹಲದಿಂದ, ಪ್ರೀತಿಯಿಂದ, ಕಾಳಜಿಯಿಂದ ಗಮನಿಸುತ್ತಿದ್ದರೆ, ಪರಂಪರೆಯ ಪಾಠಗಳನ್ನು ಅರಗಿಸಿಕೊಂಡು ವರ್ತಮಾನದ ನೆಲದಲ್ಲಿ ಬೇರಿಳಿಸಿರುವ ಗಟ್ಟಿಗಿತ್ತಿ ಎಂದೇ ನಿಶ್ಚಯವಾಗುತ್ತದೆ’ -ಶಹಬಾಶ್ ಗಿರಿ ಪಡೆದವಳು.

ಪತ್ರಕರ್ತಳಾಗಿ ಸಮಾಜವನ್ನು ಅರಿಯ ಹೊರಟವಳು. ಬೀಸಿದ ಚಳವಳಿಗಳ ಬಿಸಿಗಾಳಿಗೆ ತೆರೆದುಕೊಂಡವಳು. ಆ ಕಾರಣಕ್ಕಾಗಿಯೇ ಕಡಿದಾಳು ಶಾಮಣ್ಣ ಅವರ ಬದುಕನ್ನು ಬರಹಕ್ಕಿಳಿಸುತ್ತಿರುವವಳು.

pampa_cover2

ಅಕ್ಷತಾ ತನ್ನ ಕವನ ಸಂಕಲನಕ್ಕಾಗಿ ಅಹರ್ನಿಶಿ ಪ್ರಕಾಶನ ಆರಂಭಿಸಿದಳು. ಅದು ಆಕಸ್ಮಿಕ. ಆದರೆ ಇದೀಗ ಶಿಸ್ತುಬದ್ದಾಗಿ ಪ್ರಕಾಶನ ರಂಗವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದ್ದಾಳೆ. ಮೊದಲ ಪುಸ್ತಕವೇ ಅಕ್ಷತಾ ಸಾಗುವ ದಾರಿಯನ್ನು ಸೂಚಿಸುವಂತಿದೆ. ಜಿ ಎಚ್ ನಾಯಕರ ‘ಮತ್ತೆ ಮತ್ತೆ ಪಂಪ’ ಈ ಭಾನುವಾರ ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ.

ಎಂ ಎಸ್ ಆಶಾದೇವಿ, ಕಿ ರಂ ನಾಗರಾಜ್, ಅಭಿನವ ರವಿಕುಮಾರ್, ಚಂದ್ರಿಕಾ, ಅವಿನಾಶ್, ಜಿ ಪಿ ಬಸವರಾಜು  ಇವರೆಲ್ಲ ಇವಳ ಬೆನ್ನಿಗಿದ್ದಾರೆ. ಪ್ರಕಾಶನ ರಂಗದಲ್ಲಿ ಮಹಿಳೆಯರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಇಂತಹ ಸಂದರ್ಭದಲ್ಲಿ ಅಕ್ಷತಾ ರಂಗ ಪ್ರವೇಶಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ.

‍ಲೇಖಕರು avadhi

January 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೊಸ ಕೃತಿ ‘ಖಾನಾಬದೋಶ್’

ಹೊಸ ಕೃತಿ ‘ಖಾನಾಬದೋಶ್’

ರೇಣುಕಾ ನಿಡಗುಂದಿ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುತ್ತಿರುವ ನನ್ನ ಹೊಸಪುಸ್ತಕ. 'ಅಲೆಮಾರಿಯೊಬ್ಬಳ ಆತ್ಮವೃತ್ತಾಂತ' ಬಹುಬೇಗ ನಿಮ್ಮ...

ಮಹಾಶ್ವೇತಾದೇವಿಯವರ ‘ರುಡಾಲಿ’

ಮಹಾಶ್ವೇತಾದೇವಿಯವರ ‘ರುಡಾಲಿ’

ರುಡಾಲಿ ಹೆಸರಾಂತ ಬಂಗಾಳಿ ಲೇಖಕಿ ಮಹಾಶ್ವೇತಾದೇವಿಯವರ ಕಿರು ಕಾದಂಬರಿ. ಇದು ಹಿಂದಿಭಾಷೆಯಲ್ಲಿ ಕಲ್ಪನಾ ಲಾಜ್ಮಿ ಅವರ ನಿರ್ದೇಶನದಲ್ಲಿ...

7 ಪ್ರತಿಕ್ರಿಯೆಗಳು

 1. chetana chaitanya

  ಗೆಳತಿ ಅಕ್ಷತಾಗೆ ಶುಭ ಹಾರೈಕೆಗಳು.
  ವಂದೇ,
  ಚೇತನಾ ತೀರ್ಥಹಳ್ಳಿ

  ಪ್ರತಿಕ್ರಿಯೆ
 2. ಡಿ.ಎಸ್.ರಾಮಸ್ವಾಮಿ

  ದಣಪೆಯಾಚೆಗೆ ದಾಟಿ ಹೊಸ ಸಾಹಸಕ್ಕೆ ಕೈ ಹಾಕಿರುವ ಕವಿಗೆಳತಿಗೆ ಅಭಿನಂದನೆ ಮತ್ತು ಶುಭ ಹಾರೈಕೆ.

  ಪ್ರತಿಕ್ರಿಯೆ
 3. navada

  ಅಕ್ಷತಾರಿಗೆ
  ಅಭಿನಂದನೆಗಳು. ಸಾಗುವ ಹಾದಿಯಲ್ಲಿ ಎಡವುದು ಸಹಜವೇ. ಅದರೆ ಅದನ್ನೂ ಮೀರಿ ಸಾಗುವ ಹಂಬಲಕ್ಕೆ ಸಾಥ್ ಸಿಗಲಿ. ಒಳ್ಳೆಯದಾಗಲಿ
  ನಾವಡ

  ಪ್ರತಿಕ್ರಿಯೆ
 4. shama, nandibetta

  ಅಕ್ಷತಾ, ಹ್ಯಾಟ್ಸ್ ಆಫ್ ನಿಮಗೆ… ಬದುಕೇ ಹೊಸತರ ಹುಡುಕಾಟ…. ನಿಮ್ಮ ಎಲ್ಲಾ ಹೊಸ ಪ್ರಯತ್ನಗಳಿಗೆ ನಿರಂತರ ಗೆಲುವು ಸಿಗಲಿ… ನಿಮ್ಮ ಜತೆಗಿರುತ್ತೇವೆ..
  – ಶಮ, ನಂದಿಬೆಟ್ಟ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಸಂದೀಪ್ ಕಾಮತ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: