ಒಬ್ಬ ಹುಡುಗಿ ಇದ್ದಾಳೆ. ಅವಳಿಗೆ ಕಣ್ಣ ತುಂಬಾ ಕನಸು. ರೆಕ್ಕೆ ಬಿಚ್ಚಿ ಆಕಾಶ ಮುಟ್ಟುವ ಹಂಬಲ. ಮಲೆನಾಡಿನ ಹುಂಚದಕಟ್ಟೆ ಎಂಬ ಪುಟ್ಟ ಗ್ರಾಮದಿಂದ ಎದ್ದು ಬಂದವಳು. ಮನಸ್ಸು ಮನಸ್ಸುಗಳ ನಡುವೆ ಗೋಡೆ ಇರುವುದನ್ನು ಸುತಾರಾಂ ವಿರೋಧಿಸುವ ಈಕೆ ಎರಡರ ಮಧ್ಯೆ ಸಲೀಸು ಮಾತು ಹರಿಯುವಂತಾಗಲು ದಣಪೆ ಕಟ್ಟಿದವಳು. ಇವಳು ಕೆ ಅಕ್ಷತಾ.
ಮೊದಲ ಸಂಕಲನಕ್ಕೆ ಓದುಗರನ್ನು ಸೆಳೆದುಕೊಂಡವಳು. ವೆಂಕಟರಮಣ ಗೌಡರಿಂದ – ‘ಇವಳೆಷ್ಟು ಗಟ್ಟಿ ಹುಡುಗಿಯೆಂದರೆ, ಇವಳು ಗೋಳೋ ಅನ್ನುತ್ತಿಲ್ಲ. ತಾನು ಮೆಚ್ಚಿದವನು ತನ್ನ ನಿರೀಕ್ಷೆಯನ್ನು ಮುಟ್ಟಲಿಲ್ಲವೆಂದು ಗೊತ್ತಾದಾಗಲೂ ಇವಳಲ್ಲಿ ಆ ಬಗ್ಗೆ ಆಘಾತವಿಲ್ಲ. ತಾನೇ ಹೊಸ ಬಗೆಯಲ್ಲಿ ಬದುಕುವ ಅಗತ್ಯವಿದೆ ಎಂದು ಯೋಚಿಸುತ್ತಾಳೆ. ಆ ಮೂಲಕ ನಿವಾರಣೆಯ ದಣಪೆಯಲ್ಲಿ ನಿಂತು ಆತ್ಮವಿಶ್ವಾಸ ಕಟ್ಟಿಕೊಳ್ಳುತ್ತಾಳೆ.
‘ಹಾಗೆಂದು ಇವಳೇನು ಕೌಟುಂಬಿಕ ಪರಿಧಿಯಿಂದ ಆಚೆ ನಿಂತವಳಲ್ಲ. ಅಲ್ಲಿನ ಎಲ್ಲ ಸಣ್ಣತನಗಳ ಜೊತೆಗೇ ಏಗುತ್ತಲೂ ತನ್ನ ದಾರಿಯ ಬಗ್ಗೆ ಎಚ್ಚರಾಗಿರುವವಳು. ಎಂಥದೋ ವಿಶಿಷ್ಟ ಅಂತಃಶಕ್ತಿಯೊಂದರ ಸಖ್ಯದಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳುತ್ತಿರುವವಳು. ಈ ಹುಡುಗಿ ಸಿಗುವುದು ಅಕ್ಷತಾ ಅವರ ಕವಿತೆಗಳಲ್ಲಿ. ಮತ್ತು ಇವಳು ಎಲ್ಲ ಲೆಕ್ಕಗಳಲ್ಲೂ ನಮ್ಮ ಕಾಲದ ಹುಡುಗಿ’
‘ ಇಷ್ಟೊಂದು ಮಾಗಿದವಳ ಹಾಗೆ ಕಾಣಿಸುತ್ತಾಳಲ್ಲ, ಇದೇನು ಕೃತಕ ಪೋಸ್ ಇರಬಹುದೇ ಎಂಬ ಅನುಮಾನದ ದೃಷ್ಟಿಯಿಂದ ನೋಡಿದರೂ, ಇಲ್ಲ ಹಾಗಲ್ಲ ಎಂಬ ಸಮಾಧಾನವೇ ಮುಂದೆ ಬರುತ್ತದೆ. ಇವಳನ್ನು ಕುತೂಹಲದಿಂದ, ಪ್ರೀತಿಯಿಂದ, ಕಾಳಜಿಯಿಂದ ಗಮನಿಸುತ್ತಿದ್ದರೆ, ಪರಂಪರೆಯ ಪಾಠಗಳನ್ನು ಅರಗಿಸಿಕೊಂಡು ವರ್ತಮಾನದ ನೆಲದಲ್ಲಿ ಬೇರಿಳಿಸಿರುವ ಗಟ್ಟಿಗಿತ್ತಿ ಎಂದೇ ನಿಶ್ಚಯವಾಗುತ್ತದೆ’ -ಶಹಬಾಶ್ ಗಿರಿ ಪಡೆದವಳು.
ಪತ್ರಕರ್ತಳಾಗಿ ಸಮಾಜವನ್ನು ಅರಿಯ ಹೊರಟವಳು. ಬೀಸಿದ ಚಳವಳಿಗಳ ಬಿಸಿಗಾಳಿಗೆ ತೆರೆದುಕೊಂಡವಳು. ಆ ಕಾರಣಕ್ಕಾಗಿಯೇ ಕಡಿದಾಳು ಶಾಮಣ್ಣ ಅವರ ಬದುಕನ್ನು ಬರಹಕ್ಕಿಳಿಸುತ್ತಿರುವವಳು.
ಅಕ್ಷತಾ ತನ್ನ ಕವನ ಸಂಕಲನಕ್ಕಾಗಿ ಅಹರ್ನಿಶಿ ಪ್ರಕಾಶನ ಆರಂಭಿಸಿದಳು. ಅದು ಆಕಸ್ಮಿಕ. ಆದರೆ ಇದೀಗ ಶಿಸ್ತುಬದ್ದಾಗಿ ಪ್ರಕಾಶನ ರಂಗವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದ್ದಾಳೆ. ಮೊದಲ ಪುಸ್ತಕವೇ ಅಕ್ಷತಾ ಸಾಗುವ ದಾರಿಯನ್ನು ಸೂಚಿಸುವಂತಿದೆ. ಜಿ ಎಚ್ ನಾಯಕರ ‘ಮತ್ತೆ ಮತ್ತೆ ಪಂಪ’ ಈ ಭಾನುವಾರ ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ.
ಎಂ ಎಸ್ ಆಶಾದೇವಿ, ಕಿ ರಂ ನಾಗರಾಜ್, ಅಭಿನವ ರವಿಕುಮಾರ್, ಚಂದ್ರಿಕಾ, ಅವಿನಾಶ್, ಜಿ ಪಿ ಬಸವರಾಜು ಇವರೆಲ್ಲ ಇವಳ ಬೆನ್ನಿಗಿದ್ದಾರೆ. ಪ್ರಕಾಶನ ರಂಗದಲ್ಲಿ ಮಹಿಳೆಯರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
ಇಂತಹ ಸಂದರ್ಭದಲ್ಲಿ ಅಕ್ಷತಾ ರಂಗ ಪ್ರವೇಶಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ.
Fan No. 1 hazir hai!
Khushi Khushiya Abhinandanegalu.
Preetiyinda,
Ahalya
ಗೆಳತಿ ಅಕ್ಷತಾಗೆ ಶುಭ ಹಾರೈಕೆಗಳು.
ವಂದೇ,
ಚೇತನಾ ತೀರ್ಥಹಳ್ಳಿ
Wah Akshatha! I am proud of you! Let all your
dreams come true in 2009!
ದಣಪೆಯಾಚೆಗೆ ದಾಟಿ ಹೊಸ ಸಾಹಸಕ್ಕೆ ಕೈ ಹಾಕಿರುವ ಕವಿಗೆಳತಿಗೆ ಅಭಿನಂದನೆ ಮತ್ತು ಶುಭ ಹಾರೈಕೆ.
ಆಲ್ ದಿ ಬೆಸ್ಟ್…:)
ಅಕ್ಷತಾರಿಗೆ
ಅಭಿನಂದನೆಗಳು. ಸಾಗುವ ಹಾದಿಯಲ್ಲಿ ಎಡವುದು ಸಹಜವೇ. ಅದರೆ ಅದನ್ನೂ ಮೀರಿ ಸಾಗುವ ಹಂಬಲಕ್ಕೆ ಸಾಥ್ ಸಿಗಲಿ. ಒಳ್ಳೆಯದಾಗಲಿ
ನಾವಡ
ಅಕ್ಷತಾ, ಹ್ಯಾಟ್ಸ್ ಆಫ್ ನಿಮಗೆ… ಬದುಕೇ ಹೊಸತರ ಹುಡುಕಾಟ…. ನಿಮ್ಮ ಎಲ್ಲಾ ಹೊಸ ಪ್ರಯತ್ನಗಳಿಗೆ ನಿರಂತರ ಗೆಲುವು ಸಿಗಲಿ… ನಿಮ್ಮ ಜತೆಗಿರುತ್ತೇವೆ..
– ಶಮ, ನಂದಿಬೆಟ್ಟ