ಮತ್ಸ್ಯಗಂಧಿಯರ ನಾಡಲ್ಲಿ ನನ್ನ ಮೂಗು

ಮತ್ಸ್ಯಗಂಧಿಯರ ನಾಡಲ್ಲಿ
img_7377
ಜಿ ಎನ್ ಮೋಹನ್
ಅರಬ್ಬೀ ಸಮುದ್ರದ ಮೇಲೆ ಹಕ್ಕಿಯಂತೆ ಹಾರುತ್ತಾ ಇದ್ದಾಗ ನನಗೆ ಯಾಕೋ ಗುಂಡೂರಾವ್ ನೆನಪಾದರು. ಪತ್ರಕರ್ತರನ್ನೆಲ್ಲಾ ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಅಂದಿದ್ದರು. ಕಿಂಗ್ ಫಿಷರ್ ಎಂಬ ಪುಟ್ಟ ವಿಮಾನ ಕಿಂಗ್ ಫಿಷರ್ ಏರಿಸಿಕೊಂಡೇ ಹಾರುತ್ತಿದೆಯೇನೋ ಎಂಬಂತೆ ನೀರ ರಾಶಿಯ ಮೇಲೆ ಗರ ಗರ ತಿರುಗತೊಡಗಿತು. ಅಲ್ಲಿಯವರೆಗೆ ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಲೂಟಿ ಮಾಡುತ್ತಾ, ಕ್ಯಾಮೆರಾ ಕಣ್ಣಿಗೂ ತುಂಬಿಸುತ್ತಾ ಕುಳಿತಿದ್ದ ನನ್ನನ್ನು ದಿಢೀರನೆ ಈ ಪುಟ್ಟ ಹಕ್ಕಿ ಸಮುದ್ರದ ಮೇಲಕ್ಕೆಸೆಯಿತು. ಅತ್ತ ಇತ್ತ ಎತ್ತೆತ್ತ ನೋಡಿದರೂ ನೀರು.
ಕೇರಳ ಎನ್ನುವುದು ಒಂದು ರೀತಿಯ ರೋಮಾಂಚನ. ಮೀಸೆ ಮೂಡುವಾಗ ನಿರಂಜನರ ‘ಚಿರಸ್ಮರಣೆ’ ಓದಿ ಅಪ್ಪು, ಚಿರಕುಂಡ ರನ್ನು ತಲೆಯಲ್ಲಿ ತುಂಬಿಕೊಂಡು ಬೆಳೆದಿದ್ದ, ಬೀದಿಯಲ್ಲಿ ಗಲ್ಲಿಯಲ್ಲಿ ಧಿಕ್ಕಾರದ ಘೋಷಣೆಗಳನ್ನು ಹಂಚುತ್ತಾ ಬದುಕಿನ ಒಂದಿಷ್ಟು ಭಾಗ ಸವೆಸಿದ್ದ ನನಗೆ ಕೇರಳ ಸದಾ ಸೆಳೆವ ನೆನಪು. ಬಾಲ್ಯಕಾಲ ಸಖಿ, ಪಾತುಮ್ಮನ ಹಾಡುವಿನ ಆ ವೈಕಂ ಅಜ್ಜ, ದಿಢೀರನೆ ಮುಖವನ್ನು ಬುರ್ಖಾದ ಅಡಿ ಇರಿಸಿದ ಮಾಧವಿ ಕುಟ್ಟಿ ಎಲ್ಲರೂ ನನಗೆ ಅಕ್ಷರ ಕಲಿಸಿದವರೇ.
1003574wq5ಅಕ್ಷರವನ್ನು ಎದೆಯಲ್ಲಿಟ್ಟುಕೊಂಡು ನಡೆದು ಇಡೀ ನಾಡನ್ನೇ ಅಕ್ಷರ ಲೋಕದ ಮುಂಚೂಣಿಗೆ ತಂದು ನಿಲ್ಲಿಸಿದ್ದು, ಈ ಅಕ್ಷರವೆ ಬದುಕನ್ನೂ ಬದಲು ಮಾಡುತ್ತಾ ನಡೆದ ಕಥೆಗಳನ್ನು ಪತ್ರಿಕೆಯ ಪುಟಗಳಿಂದ ಹೆಕ್ಕಿ ನಾನೂ ಎದೆಯೊಳಗೆ ಕೂರಿಸಿಕೊಂಡಿದ್ದೆ.
ಎಕ್ಕುಂಡಿ ‘ಅಲ್ಲಿ ನೋಡು ಮತ್ಸ್ಯಗಂಧಿ ಉಟ್ಟುಕೊಂಡು ಹರಕು ಚಿಂದಿ’ ಎಂದು ಓದುವಾಗಲೆಲ್ಲಾ ಏಕೋ ಕೇರಳ ನೆನಪಾಗುತ್ತಿತ್ತು. ಲಂಕೇಶ್ ಕೇರಳದ ಬಗ್ಗೆ ಸಾಕಷ್ಟು ಬರೆದರು. ಕೃಷ್ಣ ಆಲನಹಳ್ಳಿ ವೈಕಂ ಅವರನ್ನು ಹುಡುಕುತ್ತಾ ಹೋದದ್ದನ್ನು ಬರೆದಿದ್ದ. ಫಕೀರ್ ಅಂತೂ ತಿಂಗಳುಗಟ್ಟಲೆ ಅಧ್ಯಯನ ನಡೆಸಿ ಕಯ್ಯೂರನ್ನು ಕಣ್ಣ ಮುಂದೆ ಕೂರಿಸಿದ್ದರು. ಸಾಹಿತ್ಯ ಅಕಾಡೆಮಿಗಾಗಿ ಕೇರಳದ ಅಲೆದಾಟವನ್ನೇ ಆರಿಸಿಕೊಂಡಿದ್ದರು. ‘ಕೇರಳದಲ್ಲಿ ಹದಿನೈದು ದಿನಗಳು’ ಈಗಲೂ ಓದಬೇಕು ಎನಿಸುವ ಪುಸ್ತಕವೇ.
ಕರ್ನಾಟಕ ಎಂದರೆ ಕೇರಳಿಗರಿಗೆ ಕೃಷ್ಣ ಆಲನಹಳ್ಳಿ ಹಾಗೂ ಅನಂತಮೂರ್ತಿ ಮಾತ್ರ. ಗೋಡೆಯಲ್ಲಿ ಹತ್ತು ಹಲವು ವಸ್ತುಗಳನ್ನಿಟ್ಟುಕೊಂಡು ತಿರುಗಿದ ಪರಸಂಗದ ಗೆಂಡೆತಿಮ್ಮನತೆಯೇ ಕೃಷ್ಣ ಕೂಡಾ. ಒಮ್ಮೆ ಕೃಷ್ಣ ಆಲನಹಳ್ಳಿ ಮಲಯಾಳಿಗಳು ನನ್ನನ್ನು ಹೇಗೆ ನೋಡುತ್ತಾರೆ ಎಂದು ಹೋಟೆಲ್ನಲ್ಲಿ ಕೂತು ಬಣ್ನಿಸುತ್ತಿದ್ದಾಗ ಆತನ ಕಣ್ಣುಗಳಲ್ಲಿದ್ದ ಮಿಂಚನ್ನು ನಾನಿನ್ನೂ ಮರೆತಿಲ್ಲ. ಕೊಟ್ಟಾಯಂ ನ ಗಾಂಧೀ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೇರಳಿಗರು ಆರಿಸಿಕೊಂಡದ್ದು ಅನಂತ ಮೂರ್ತಿಯವರನ್ನು. ಅನಂತಮೂರ್ತಿಯವರ ಕೃತಿಗಳೂ ಮಲಯಾಳದ ಕ್ಯಾನ್ವಾಸ್ ಸೇರಿಕೊಂಡಿದೆ.
ಪ್ರಜಾವಾಣಿ ಕಾರಣಕ್ಕಾಗಿ ಮಂಗಳೂರಿಗೆ ಬಂದವನಿಗೆ ಎದ್ದು ಬಿದ್ದರೆ ಕಾಸರಗೋಡಲ್ಲಿ ಅಲೆಯುವುದೇ ಕೆಲಸ. ಆ ನಂತರ ಈಟಿವಿ ಕೆಲಸ ನನ್ನನ್ನು ಕಣ್ನೂರಿನವರೆಗೂ  ಕರೆದುಕೊಂಡು ಹೋಯಿತು. ಮೋಹನಲಾಲ್, ಮಮ್ಮುಟ್ಟಿ ಮಂಗಳೂರಿನ ಸಿನೆಮಾ ಹಾಲ್ ನಲ್ಲಿಯೇ ಕೈಕುಲುಕಿದರು. ಅಡೂರ್ ಹಾಗೂ ಮಮ್ಮುಟ್ತಿಯನ್ನು ತೆರೆಯ ಆಚೆಗೂ ಕಂಡೆ. ಉಪ್ಪಿನಂಗಡಿ ಹಾಗೂ ವಿಟ್ಲದಲ್ಲಿ ‘ವಿಧೇಯನ್’ ಸಿನೆಮಾಗಾಗಿ ಇಬ್ಬರೂ ಇದ್ದಾಗ.
ಕಡಲು ಹಾಗೂ ಗಾಢ ಪಶ್ಚಿಮ ಘಟ್ಟವನ್ನು ಬಗಲಲ್ಲಿಟ್ಟುಕೊಂಡು ಬೆಳೆದವರಿಗೆ ಬಣ್ಣದೊಡನೆ ಆಟವಾಡುವ ಕಲೆ ಗೊತ್ತಿಲ್ಲದೆಯೇ ಬೆಳೆದು ನಿಂತಿರುತ್ತದೆ. ಕೇರಳದ ಚಾನಲ್ ಗಳು ಒಂದಕ್ಕೆ ಒಂದು ಸ್ಪರ್ಧೆ ಒಡ್ಡಿಕೊಳ್ಲಬೇಕೆ ಹೊರತು ಇನ್ನಾವ ಭಾಷೆಯೂ ಇವಕ್ಕೆ ಸವಾಲು ಎಸೆಯುವುದು ಸಾಧ್ಯವೇ ಇಲ್ಲ.
ಕೇರಳವೇ ಒಂದು ಕೆಲಿಡಿಯೋಸ್ಕೊಪ್. ಇಂತಹ ಕೇರಳಕ್ಕೆ ತೀರ್ಥಯಾತ್ರೆ ಹೊರಟವನಂತೆ ಎದ್ದು ಬಂದಿದ್ದೇನೆ. ೧೩ ನೆ ಅಂತರಾಷ್ಟ್ರೀಯ ಸಿನೆಮಾ ಉತ್ಸವ ಎಂಬ ನೆಪ ಸಿಕ್ಕಿಸಿಕೊಂಡು. ಮತ್ಸ್ಯಗಂಧಿಯರ ನಾಡಲ್ಲಿ ಮೀನಿನ ವಾಸನೆ ಹಿಡಿಯಬೇಕೋ, ಕಾಲೇಜಿನಲ್ಲಿ ಬೋಧಿಸಿದಂತೆ ಸುದ್ದಿಯ ವಾಸನೆ ಹಿಡಿಯಬೇಕೋ ಗೊತ್ತಾಗದೇ ನನ್ನ ಮೂಗು ಕಕ್ಕಾಬಿಕ್ಕಿಯಾಗಿದೆ.

‍ಲೇಖಕರು avadhi

December 13, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

10 ಪ್ರತಿಕ್ರಿಯೆಗಳು

 1. srinivasagowda

  Sahebara varse nodtha iddre….”MATSYAGANDIYARA
  HADU” Huttuva hage Kantha ide. neevu bekadre ondu thingalu alle iri… gods own country na kanndakke
  parichaisi sir.

  ಪ್ರತಿಕ್ರಿಯೆ
 2. jogimane

  ಮೋಹನ್,
  ತುಂಬ ಚೆನ್ನಾಗಿದೆ. ನಂಗೂ ಕೇರಳ ಅಂದ್ರೆ ಪ್ರಾಣ. ನಿಮ್ಮ ಸುತ್ತಾಟ ನಮಗೊಂದು ಒಳ್ಳೆಯ ಅನುಭವ ಕಟ್ಟಿಕೊಡಲಿ. ಕೇರಳದ ರಾಜಕೀಯ ಅಧ್ಯಾಯವೂ ಬಂದುಹೋಗಲಿ. ಮೀನಿನ ಸಾರು, ರೊಟ್ಟಿ, ಕೆಂಪಕ್ಕಿ ಅನ್ನದ ಘಮಘಮ ಮತ್ತು ಕಡಲತೀರದ ತಂಗಾಳಿಯ ಉಪ್ಪುಪ್ಪು ರುಚಿ ನಮ್ಮನ್ನೂ ತಾಕಲಿ.
  ಪ್ರೀತಿಯಿಂದ
  ಜೋಗಿ

  ಪ್ರತಿಕ್ರಿಯೆ
 3. siddu devaramani

  ಹೌದು ಸರ್,
  ನಮಗೆಲ್ಲ ಕೇರಳದ ಪ್ರವಾಸ ಕಥನ ಕಟ್ಟಿ ಕೊಡಿ..ಅ೦ಗಡಿ ಬಿಟ್ಟು ತಿರುಗದ ನನ್ನ೦ಥವರಿಗೆ ಪ್ರವಾಸದ ಪ್ರಸಾದ ಸಿಕ್ಕೀತು

  ಪ್ರತಿಕ್ರಿಯೆ
 4. subramani

  ಕೇರಳ ಕಥನ ಓದಿ,ಹಿನ್ನೀರಿನಲ್ಲಿ ಮತ್ಸ್ಯಗಂಧಿರೊಂದಿಗೆ ಜಲಕ್ರೀಡೆ ಆಡಿದಂತೆ ಭ್ರಾಂತನಾಗಿ ಪುಳಕಿತನಾದೆ.

  ಪ್ರತಿಕ್ರಿಯೆ
 5. shreedevi kalasad

  ನಾನ್ ಕೂಡ ಕೇರಳದಿಂದ ಒಲ್ಲದ ಮನಸ್ಸಿನಿಂದಲೇ ಮರಳಬೇಕಾಯ್ತು. ಒಂದ್ ಸೆಕೆಂಡ್ ಎಲ್ಲೋ ನಾನ್ ತೆಗೆದ ಫೋಟೋ ಹಾಗೇ ಇದೆಯಲ್ಲ ಇದು ಅಂತ ನೋಡಿದೆ. ತುಂಬಾನೇ ಚೆನ್ನಾಗಿದೆ ಕೇರಳ. ಮತ್ತಷ್ಟು ಬರೀರಿ…

  ಪ್ರತಿಕ್ರಿಯೆ
 6. eshakumar h n

  sir MATSYAGANDIYA bagegina nimma anubhava vivaragalu nammanu adara jaadu hididu nimma hejje gurutugalanu alli hudukuvanthe maadabeku haage irabeku

  ಪ್ರತಿಕ್ರಿಯೆ
 7. leelasampige

  ಹಾಯ್, ಸುದ್ದಿಯ ವಾಸನೆ ಹಿಡಿಯೋಕೇನು ಹೋಗ್ಬೇಡಿ ಮೋಹನ್ರವರೆ, ಅಗತ್ಯ ಇದ್ರೆ ಅವೇ ನಿಮ್ಮನ್ನ ಹುಡುಕ್ಕೊಂಡು ಬರುತ್ವೆ. ಚೆನ್ನಾಗಿ ಫ್ರೆಶ್ ಮೀನು ತಿನ್ನಿ. ಬೋನ್ಗಡೆ,ಭೂತಾಯಿ,ಅಂಜಲ್…….ಹಾಗೆ ಇನ್ನು ತಿನ್ನೋಕೆ ಅಪರೂಪದ್ದು ಏನಾದ್ರೂ ಕರಾವಳಿಯ ಸ್ಪೆಷಲ್!
  ಲೀಲಾಸಂಪಿಗೆ

  ಪ್ರತಿಕ್ರಿಯೆ
 8. sharada naik

  ತುಂಬಾ ಚೆನ್ನಾಗಿದೆ ಮೋಹನ್ ಜೀ ಇನ್ನು ಬೇಗ ಬೇಗ ಬರೆದು ಹಾಕಿ ನಾವು ಕೇರಳ
  ಅರ್ಧಂಬರ್ಧ ನೋಡಿದ್ವಿ ನಿಮ್ಮ ಈ ಪ್ರನಾಸದಿಂದ ಪೂರ್ತಿ ನೋಡುವಂತಾಗಲಿ ಎನ್ನುವುದು
  ದು ನನ್ನಸೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: