ಮದುವೆಯಾಗಿ ನಾಲ್ಕು ವರ್ಷಗಳಲ್ಲಿಯೇ..

ಧನಂಜಯ ಕುಲಕರ್ಣಿ

ಅವಳು ನನಗೆ ಮೊದಲಿನಿಂದಲೂ ಪರಿಚಿತಳೇನಲ್ಲ….ನಾನು ಅಲ್ಲಿ ಕೆಲಸಕ್ಕೆ ಸೇರಿದಾಗ ನನ್ನ ಸಹೋದ್ಯೋಗಿಯಾಗಿದ್ದಳು. ತುಂಬ ಚುರುಕು ಬುದ್ಧಿಯ ಹುಡುಗಿ….ಆಗಷ್ಟೇ ಕಾಲೇಜಿನ ವ್ಯಾಸಂಗ ಮುಗಿಸಿಕೊಂಡು ಬಂದಿದ್ದಳು. ಯಾವುದೇ ಒಂದು ವೃತ್ತಿಯನ್ನು ಸ್ವೀಕರಿಸುವಾಗ ಇರಬೇಕಾದ ಬದ್ಧತೆ ಅವಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ತನಗೆ ತಿಳಿಯದ ಕೆಲಸವನ್ನು ಮುಲಾಜಿಲ್ಲದೇ ಕೇಳುತ್ತಿದ್ದಳು..ತನಗೆ ತಪ್ಪೆನಿಸಿದ್ದನ್ನು ಅಷ್ಟೇ ನೇರವಾಗಿ ಹೇಳಿಬಿಡುತ್ತಿದ್ದಳು. ನಾನು ಆ ಕಂಪನಿಯ ಮುಖ್ಯಸ್ಥನಾಗಿ ಅವಳ ಮಾರ್ಗದರ್ಶಕನೂ ಆಗಿದ್ದೆ. ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಅವಳು ಎಲ್ಲರಿಗೂ ಅಚ್ಚುಮೆಚ್ಚಿನ ಸಹೋದ್ಯೋಗಿಯಾಗಿ ಹೋಗಿದ್ದಳು. ನಾನೀಗ ಆ ಕಂಪನಿಯನು ಬಿಟ್ಟು ನಾಲ್ಕು ವರ್ಷಗಳೇ ಕಳೆದಿವೆ. ಆದರೂ ಅಲ್ಲಿನ ಬಹುತೇಕ ಸಹೋದ್ಯೋಗಿಗಳು ಇಂದಿಗೂ ನನ್ನ ಸಂಪರ್ಕದಲ್ಲಿದ್ದಾರೆ. ಕೆಲಸಕ್ಕೆ ಸಂಬಂಧ ಪಟ್ಟಂತೆ ಅನೇಕ ಬಾರಿ ಸಲಹೆ ಸೂಚನೆಗಳನ್ನು ಕೇಳುತ್ತಾರೆ. ಕೆಲವರಂತೂ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಸಹ ನನ್ನೊಂದಿಗೆ ಚರ್ಚೆ ನಡೆಸುತ್ತಾರೆ. ನಿನ್ನೆ ಈ ಹುಡುಗಿಯ ಫೋನ್ ಬಂದಾಗ ಅವಳ ಧ್ವನಿಯಲ್ಲಿ ಎಂದಿನ ಲವಲವಿಕೆ, ಉತ್ಸಾಹ ಇರಲಿಲ್ಲ. ಏನೋ ದುಗುಡ, ಏನನ್ನೋ ಕಳೆದುಕೊಂಡ ಆತಂಕ ಅವಳ ಧ್ವನಿಯಲ್ಲಿ ಮನೆಮಾಡಿತ್ತು. ಅವಳು ಹಲೋ ಎಂದಾಗಲೇ ಏನೋ ನಡೆಯಬಾರದ್ದು ನಡೆದು ಹೋಗಿದೆ ಎಂದು ನನಗೆ ಖಾತರಿಯಗಿ ಹೋಗಿತ್ತು. “”ನನ್ನ ಮದುವೆ ಮುರಿದು ಬಿತ್ತು…” ಎಂದು ಆಕೆ ಹೇಳುವಾಗ ಅವಳ ಧ್ವನಿಯಲ್ಲಿ ಆತಂಕದ ಜೊತೆಗೆ ಮುಂದಿನ ಬದುಕನ್ನು ನಡೆಸುವ ಕುರಿತು ಸ್ಪಷ್ಟ ನಿರ್ಧಾರ ಪ್ರಕಟವಾಗಿ ಹೋಗಿತ್ತು. ಅವಳದು ಪ್ರೇಮ ವಿವಾಹ. ಕಾಲೇಜಿನಲ್ಲಿ ಓದುವಾಗಲೇ ಒಬ್ಬನನ್ನ ಪ್ರೀತಿಸಿ ಮದುವೆಯಾಗಿದ್ದಳು. ಅವಳ ಅಭೂತಪೂರ್ವ ಮದುವೆಗೆ ನಮ್ಮ ಕಚೇರಿಯ ಎಲ್ಲರೂ ಸಾಕ್ಷಿಯಾಗಿದ್ದೆವು. ಅವಳ ಬದುಕು ಬಂಗಾರವಾಗಲಿ ಎಂದು ಹಾರೈಸಿದ್ದೆವು…ಆದರೆ ಮದುವೆಯಾಗಿ ನಾಲ್ಕು ವರ್ಷಗಳಲ್ಲಿಯೇ ಅದು ಮುರಿದು ಬಿದ್ದಿತ್ತು…. ಅವಳನ್ನು ಮದುವೆ ಮಾಡಿ ಕೊಂಡ ಭೂಪ ಬರೊಬ್ಬರಿ ೪ ವರ್ಷಗಳಲ್ಲಿ ೬ ಕೆಲಸಗಳನ್ನು ಬದಲಿ ಮಾಡಿದ್ದ. ಎಲ್ಲಿಯೂ ನಿಯತ್ತು ಎನ್ನುವುದು ಇರಲಿಲ್ಲ. ತಮ್ಮ ಸಂಸಾರದ ಬಂಡಿಯನ್ನು ಈ ಹುಡುಗಿ ಬಹಳ ಅದ್ಭುತವಾಗಿ ನಡೆಸಿಕೊಂಡು ಬಂದಿದ್ದಳು. ಅವನಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಯಾವುದಕ್ಕೂ ಕಡಿಮೆ ಇಲ್ಲದಂತೆ ಅಕ್ಷರಶಃ ಅವನನ್ನು ಸಾಕಿದ್ದಳು. ಬಹುಶಃ ಅದೇ ಅವಳು ಮಾಡಿದ ತಪ್ಪು ಅನಿಸುತ್ತದೆ. ಅವನಿಗೆ ಯಾವುದೇ ರೀತಿಯ ನಿರ್ಧಿಷ್ಟ ಜವಾಬ್ದಾರಿಯನ್ನು ಇವಳು ನೀಡಲಿಲ್ಲ. ಪೂರ್ಣವಾಗಿ ನಂಬಿಬಿಟ್ಟಿದ್ದಳು ಅವನನ್ನ….ಇವಳ ಸಲುಗೆಯನ್ನು ಅವನು ದುರುಪಯೋಗ ಪಡಿಸಿಕೊಂಡಿದ್ದ…..ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಮನೆಯಲ್ಲಿಟ್ಟು, ಮತ್ತೊಂದು ಕಡೆ ಇವನು ಮೇಯಲು ಶುರುವಿಟ್ಟುಕೊಂಡಿದ್ದ…ಎಲ್ಲವೂ ಪೂರ್ವ ನಿಯೋಜಿತ ಎಂಬಂತೆ ಬರೊಬ್ಬರಿ ೬ ತಿಂಗಳುಗಳ ಕಾಲ ಇವಳಿಗೆ ಸತ್ಯದ ತಲೆಯ ಮೇಲೆ ಹೊಡೆಯುವಂತೆ ಸುಳ್ಳು ಹೇಳಿ ಇವಳಿಂದ ದೂರ ಉಳಿಯತೊಡಗಿದ್ದ….ಇವಳಿಗೆ ಅವನ ಮೇಯುವಿಕೆಯ ವಿಷಯ ತಿಳಿದು ತುಂಬಾ ಕಸಿವಿಸಿಗೊಂಡಳು….ಈ ಕಾರಣಕ್ಕಾಗಿಯೇ ನಾನು ಇವನನ್ನು ಪ್ರೀತಿಸಿ ಮದುವೆಯಾದೆನಾ ಎಂದು ಶಪಿಸಿಕೊಂಡಳು. ಆದರೆ ಅವನ ನಿರ್ಧಾರ ಸ್ಪಷ್ಟವಾಗಿತ್ತು…ನಿನಗೆ ಏನು ಬೇಕೋ ಕೇಳು ಕೊಡುತ್ತೇನೆ..ಮುಂದಿನ ತಿಂಗಳಿನಿಂದ ನಾವಿಬ್ಬರೂ ವಿಚ್ಛೇದನಗೊಳ್ಳೋಣ….ನನ್ನ ದಾರಿ ನನಗೆ..ನಿನ್ನ ದಾರಿ ನಿನಗೆ….. ಈ ಎಲ್ಲ ವಿವರಣೆಗಳನ್ನು ಅವಳು ನನಗೆ ಹೇಳುತ್ತಿರುವಾಗ ನನ್ನಲ್ಲಿ ಮಾತೇ ಹೊರಡಲಿಲ್ಲ….ಆದರೆ ಅವಳಲ್ಲಿ ಅದಮ್ಯವಾದ ಧೈರ್ಯ ಬಂದಿತ್ತು….ನಾನು ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತೇನೆ…ನನ್ನ ಬದುಕನ್ನು ಅವನು ನಾಚುವಂತೆ ರೂಪಿಸಿಕೊಳ್ಳುತ್ತೇನೆ…..ಒಂದು ವೇಳೆ ನನಗೆ ಏನಾದರೂ ಸಹಾಯ ಬೇಕಾದಲ್ಲಿ ನೀವು ಮಾಡ್ತೀರಾ ಅಲ್ವಾ ಸರ್? ಎಂದು ಅವಳು ಹೇಳುತ್ತಿರುವಾಗ ಯಾಕೋ ಕರಳು ಕಿತ್ತು ಬಂದ ಹಾಗಾಗಿತ್ತು…….]]>

‍ಲೇಖಕರು G

August 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: