ಮನು, ಮನೋರಮಾ, ಬಿ ಎನ್ ಮನೋರಮಾ

000_0040ವೀಣಾ ಡಿಸೋಜಾ ಅರ್ಥಾತ್  Vee. ‘ನಾಳೆಯ ಚಿಂತೆ ನನಗಿಲ್ಲ’ ಎಂದು ಬಹುಧೈರ್ಯದಿಂದ ಘೋಷಿಸಿಕೊಂಡ ಹುಡುಗಿ. ಕನ್ನಡ ಹಾಗೂ ಕೊಂಕಣಿ ಎರಡರಲ್ಲೂ ಬ್ಲಾಗಿಂಗ್ ಮಾಡುತ್ತಿದ್ದಾರೆ. Veeಮನಸ್ಸಿನ ಮಾತು ಕನ್ನಡದ್ದು. ಮ್ಹಜಿಂ ಸ್ವಪ್ಣಾ ಕೊಂಕಣಿಯದ್ದು. ಈಗೆ ತನ್ನ ಗೆಳತಿ ಮನೋರಮಾ ಬಗ್ಗೆ ಬರೆದ ಆತ್ಮೀಯ ಬರಹ ಇಲ್ಲಿದೆ.
ಮನೋರಮಾ ಪತ್ರಿಕೋದ್ಯಮದ ಪಾಠ ಮಾಡುತ್ತಲೇ ನೃತ್ಯದ ದಿಗಂತವನ್ನು ವಿಸ್ತರಿಸುತ್ತಿರುವವರು. ‘ನೂಪುರ ಭ್ರಮರಿ’ ನೃತ್ಯಕ್ಕೆ ಮೀಸಲಾದ ಪತ್ರಿಕೆ. ಅಷ್ಟೇ ಅಲ್ಲದೆ ನೂಪುರ ಭ್ರಮರಿ ವೆಬ್ ಸೈಟ್ ಕೂಡಾ ನಡೆಸುತ್ತಿದ್ದಾರೆ.
Full
ಹಾಯ್,
ನನಗೊಬ್ಬಳು ಗೆಳತಿಯಿದ್ದಾಳೆ. ಶುದ್ಧ ತರಲೆ ಅಂಥನೇ ಹೇಳಬಹುದು. ನನಗಿಂತಲೂ ಒಂದು ಪಟ್ಟು ಜಾಸ್ತಿನೇ ಅವಳ ತುಂಟಾಟಗಳು ನಡೆಯುತ್ತವೆ ಎಂದರೂ ತಪ್ಪಾಗದು. ಅವಳ ಮೇಲೆ ಪ್ರೀತಿ ಹೆಚ್ಚಾದಗೆಲ್ಲಾ ನನ್ನ ಮೊಬೈಲ್ ನಲ್ಲಿ ಅವಳ ಹೆಸರು ಮನು ಎಂದಿರುತ್ತಿದ್ದರೆ, ಕೋಪ ಬಂದಾಗ ಮನೋರಮಾ ಬಿ ಎನ್ ಎಂದು ಪೂರ್ಣ ಹೆಸರನ್ನು ಕಾಣಬಹುದು.
ಈ ಮನುಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ದೈರ್ಯವಿಲ್ಲ ಎಂಬುದಾಗಿ ಒಂದೊಮ್ಮೆ ನಾನು ಕನ್ನಡ ಪ್ರಭದ ‘ಕಾಲೇಜು ರಂಗ’ದ ಮುಖಾಂತರ ತಿಳಿಸಿದ್ದೆ. ಆ ದಿನಗಳಲೆಲ್ಲಾ ಆಕೆ ನನ್ನಲ್ಲಿ ಮಾತು ಬಿಟ್ಟಿದ್ದಳು. ಆದ್ರೂ ನಮ್ಮಿಬ್ಬರಲ್ಲಿ ಅದೆನೋ ಹೊಂದಾಣಿಕೆ, ಆತ್ಮೀಯತೆ ಇತ್ತು.
ಕ್ಷಮಿಸಿ. ಇಂದು ಅವಳ ಬಗ್ಗೆ ಬ್ಲಾಗಿನಲ್ಲಿ ಬರೆಯಲು ಮುಖ್ಯ ಕಾರಣ…. ಅವಳು ಭರತನಾಟ್ಯಂ ಹಾಗೂ ಇತರೆ ನ್ರತ್ಯಗಳ ಕುರಿತಾಗಿನ ತನ್ನದೇ ಆದ ದ್ವೈಮಾಸಿಕ (ಎರಡು ತಿಂಗಳಿಗೊಮ್ಮೆ) ವೊಂದನ್ನು ಕಳೆದ ಒಂದು ವರ್ಷದ ಹಿಂದೆ ಆರಂಭಿಸಿದ್ದಳು. ‘ನೂಪುರ ಭ್ರಮರಿ’ ಕಳೆದ ಒಂದು ವರ್ಷದಲ್ಲೇ ಬಹು ಖ್ಯಾತಿಯನ್ನೇ ಪಡೆಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಮನು ನಿನಗೆ ನನ್ನ ಆತ್ಮೀಯ ವಂದನೆಗಳು. ನಿನ್ನ ಕಾರ್ಯದಲ್ಲಿ ಯಶಸ್ಸು ಲಭಿಸಲಿ ಎನ್ನುವ ಹಾರೈಕೆ ನಿನ್ನ ಜಗಳಗಂಟಿ ಗೆಳತಿಯದು.
ವೀಣಾ ಡಿಸೋಜಾ

‍ಲೇಖಕರು avadhi

May 21, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This