'ಮನೆಯಂಗಳದಲ್ಲಿ..' ಕುಂ ವೀ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುಂವೀ  ಜೊತೆ ಮನೆಯಂಗಳದಲ್ಲಿ ಮಾತುಕತೆ ಶನಿವಾರ (೨೩) ಸಂಜೆ ೪ ಕ್ಕೆ ನಯನ, ಕನ್ನಡಭವನದಲ್ಲಿ ಖಂಡಿತಾ ಬನ್ನಿ-   ಈ ಸಂದರ್ಭದಲ್ಲಿ ಕುಂ ವೀ ಪತ್ರಕರ್ತರಾದ ಒಂದು ನಗೆ ಬುಗ್ಗೆ ಇಲ್ಲಿದೆ ಕುಂ ವೀ as journalist -ಅಂತರ್ಮುಖಿ ಒಳಗೂ..ಹೊರಗೂ.. ಸತೀಶ್ ಚಪ್ಪರಿಕೆ ಅವರ “ಥೇಮ್ಸ್ ತಟದ ತವಕ ತಲ್ಲಣ” ಪುಸ್ತಕ ಬಿಡುಗಡೆ ಕಾರ್ಯಕ್ರಮ. ಅಲ್ಲಿಗೆ ಕುಂ.ವೀರಭದ್ರಪ್ಪ ಅಧ್ಯಕ್ಷರಾಗಿ ಬಂದಿದ್ದರು. ಪತ್ರಕರ್ತರ ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಾ ತಾವು ಪತ್ರಿಕೆ ನಡೆಸುತ್ತಿದ್ದಾಗ ನಡೆದ ಘಟನೆಯೊಂದನ್ನು ಹೇಳಿದರು. ಕುಂವೀಗೆ 21-22. ಪತ್ರಿಕೆಯನ್ನು ಹೊರತರುತ್ತಿದ್ದರಂತೆ. ಬಳ್ಳಾರಿಗೆ ಹೋಗಿ ಪತ್ರಿಕೆ ಪ್ರಿಂಟ್ ಮಾಡಿಸಿಕೊಂಡು ಬಗಲಲ್ಲಿ ಇಟ್ಟುಕೊಂಡು ತಿರುಗುತ್ತಿದ್ದರಂತೆ. ಸಿಕ್ಕವರಿಗೆಲ್ಲಾ ಜಬರದಸ್ತು ಮಾಡಿ ದುಡ್ಡು ಇಸ್ಕೊಂಡು ಒಂದು ಪ್ರತಿ ಕೊಡುತ್ತಿದ್ದರಂತೆ. ಇಲ್ಲ ಒಂದು ವರ್ಷದ ಚಂದಾ ವಸೂಲಿ ಮಾಡುತ್ತಿದ್ದರಂತೆ.. ಈ ಕತೆಯೊಳಗೆ ಉಪಕತೆ.. ಅದನ್ನು ಓದಿ ಬಿಡಿ ಕುಂವೀ ಊರಲ್ಲಿ “ಡಾಕ್ಟರ್ ರೇವಣಸಿದ್ದಪ್ಪ” ಅನ್ನೋ ಒಬ್ಬ ವ್ಯಕ್ತಿ ಇದ್ನಂತೆ. ನಿಜಕ್ಕೂ ಅವರು ಡಾಕ್ಟರ್ ಅಲ್ಲ. ಕಂಪೌಂಡರ್ ಆಗಿದ್ದವ. ಒಮ್ಮೆ ಒಂದು ಹುಡುಗಿ ಮೂಗಲ್ಲಿ ಸಣ್ಣ ಗಡ್ಡೆಯಾಗಿದೆ ಅಂತ ಡಾಕ್ಟರ್ ಬಳಿ ಬಂದಿದ್ದಳಂತೆ. ಡಾಕ್ಟರ್ ಪರೀಕ್ಷೆ ಮಾಡಿ, ಈ ಮಾತ್ರೆ ತಗೊ ಅದಾಗಿ ಬಿದ್ದು ಹೋಗುತ್ತೆ. ಇಲ್ದೇ ಇದ್ರೆ ಆಪರೇಷನ್ ಮಾಡ್ತೀನಿ ಅಂತ್ಹೇಳಿ ಕಳಿಸಿದ್ರಂತೆ. ಸ್ವಲ್ಪ ದಿನಕ್ಕೆ ಆ ಹುಡುಗಿ ಮತ್ತೆ ಆಸ್ಪತ್ರೆಗೆ ಬಂದಳಂತೆ. ಅವತ್ತು ಡಾಕ್ಟರ್ ಇರ್ಲಿಲ್ಲ. ಏನೂಂತ ಕೇಳಿದ ರೇವಣ ಸಿದ್ದಪ್ಪ, ಅದಕ್ಕೆ ಡಾಕ್ಟರ್ಯಾಕೆ ಅಂತಾ ಇದ್ದ ಬ್ಲೇಡನ್ನ ಅರ್ಧ ಕತ್ತರಿಸಿ ಮೂಗೊಳಗಿದ್ದ ಗಡ್ಡೆ ಕತ್ತರಿಸಿ ಡ್ರೆಸ್ ಮಾಡಿ ಕಳಿಸಿದನಂತೆ. ಸ್ವಲ್ಪ ದಿನ ಆದ್ಮೇಲೆ ಡಾಕ್ಟರ್ ಆ ಹುಡುಗಿಗೆ ಸಿಕ್ಕು, ಗಡ್ಡೆ ವಿಷಯ ಕೇಳಿದಾಗ, ` ರೇವಣ ಸಿದ್ದಪ್ಪ ಡಾಕ್ಟರ್’ ತೆಗೆದ್ರು ಅಂದ್ಲಂತೆ. ಡಾಕ್ಟರ್ ಆಸ್ಪತ್ರೆಗೆ ಬಂದವರೇ ರೇವಣಸಿದ್ದಪ್ಪನನ್ನು ಹೊರಗೆ ಹಾಕಿದರು. ಹೀಗೆ ಡಾಕ್ಟರ್ ಅನ್ನಿಸಿಕೊಂಡ ರೇವಣಸಿದ್ದಪ್ಪ ಇದ್ದಕ್ಕಿದ್ದಂತೆ ಕಣ್ಮರೆ ಆದವನು, ನಾಲ್ಕೈದು ವರ್ಷದ ನಂತರ ಊರಿಗೆ ಮರಳಿದರಂತೆ. ಈಗ ಮುಖ್ಯಕತೆಗೆ ಬರೋಣ.. ಮರಳಿದ ಬಂದಿದ್ದ ರೇವಣ ಸಿದ್ದಪ್ಪ ಹಿಂದಿನ ತರ ಇರ್ಲಿಲ್ಲವಂತೆ. ದೇವರ ಬೆರಳುಗಳನ್ನು ಕೊಟ್ಟಿರೋದೆ ಉಂಗುರ ಹಕ್ಕೊಳ್ಳೋಕೆ ಅಂತಾ ಹತ್ತೂ ಬೆರಳಿಗೆ ಉಂಗುರ ಹಾಕ್ಕೊಂಡು ತಿರುಗುತ್ತಿದ್ದನಂತೆ. ಆತನ ಇಮೇಜ್ ಎಷ್ಟರಮಟ್ಟಿಗೆ ಇತ್ತಂದ್ರೆ ದೇವಸ್ಥಾನಕ್ಕೆ ಹೋದ್ರೆ ಪೂಜಾರ್ರು ದೇವರನ್ನು ಕರ್ಕೊಂಡು ಹೊರಗೆ ಬಂದ್ಬಿಡ್ತಿದ್ರಂತೆ. ಯಾಕಂದ್ರೆ ಆ ಕಾಲಕ್ಕೆ ಪೂಜಾರಿ ತಟ್ಟೆಗೆ 5 ರುಪಾಯಿ ದಕ್ಷಿಣೆ ಹಾಕುತ್ತಿದ್ದ ಒಬ್ಬನೇ ಭೂಪ ರೇವಣಸಿದ್ದಪ್ಪ. 5 ರುಪಾಯಿ ಆ ಪೂಜಾರಿ ಮಟ್ಟಿಗೆ ವರ್ಷದ ಆದಾಯ. ಊರಲ್ಲಿ ಸ್ವಾಮಿಗಳು ಬಂದ್ರಂದ್ರೆ ಶ್ರೀಮಂತರಿಗೆಲ್ಲಾ ಕಸಿವಿಸಿ. ರೇವಣಸಿದ್ದಪ್ಪ ಸ್ವಾಮಿ ಪಾದಕ್ಕೆ 5-10 ಸಾವಿರ ಧಾರಾಳವಾಗಿ ಕೊಟ್ಟು ಬಿಡುತ್ತಿದ್ದನಂತೆ. ಊರ ಶ್ರೀಮಂತರೆಲ್ಲಾ ಮರ್ಯಾದೆಗಂಜಿ ಇನ್ನು ಸ್ವಲ್ಪ ಜಾಸ್ತಿ ಕೊಡ್ತಿದ್ರಂತೆ. ಹೀಗಿದ್ದ ರೇವಣ ಸಿದ್ದಪ್ಪಂಗೆ ಚಂದಾ ಕೇಳಿದ್ರೆ ನೂರು ರುಪಾಯಿ ಕೊಟ್ನಂತೆ ಕುಂವೀಗೆ. ವರ್ಷದ ಚಂದ 12. “ಚಿಲ್ರೆ ಇಲ್ಲ ಸಾರ್” ಅಂದಿದ್ದಕ್ಕೆ “ಇರ್ಲಿ ಇಟ್ಕೊಳ್ಳಪ್ಪಾ” ಅಂದಿದ್ದನಂತೆ. “ಇಂಥವರಿರಬೇಕು” ಅಂತಾ ಪತ್ರಿಕೆ ಪ್ರಿಂಟ್ ಮಾಡೋಕೆ ಅನುಕೂಲ ಆಯ್ತು ಅಂದ್ಕೊಂಡು ಸುಮ್ನಾದ್ರಂತೆ. ಏಮೇಲೆ ಸಿಕ್ಕಾಗೆಲ್ಲಾ ರೇವಣಸಿದ್ದಪ್ಪಂಗೆ ಸಲ್ಯೂಟ್ ಹೊಡ್ಕೊಂಡು ತಿರುಗುತ್ತಿದ್ದತಂತೆ ಕುಂವೀ ಗ್ಯಾಂಗು. ಒಮ್ಮೆ ಹೀಗೆ ಬಳ್ಳಾರಿಗೋ, ಹೊಸಪೇಟೆಗೋ (ನನಗೆ ನೆನಪಾಗ್ತಾ ಇಲ್ಲ) ಹೋದಾಗ ಸ್ನೇಹಿತರ ಜತೆ ಪೊಲೀಸ್ ಸ್ಟೇಷನ್ಗೆ ಹೋಗಿದ್ರಂತೆ ಕುಂವೀ. ಇಂಥ ಕಡೆ ಹೋದಾಗಲೆಲ್ಲಾ ಸಾಲಾಗಿ ಹಾಕಿರೋ “ದೇಶಭಕ್ತರ” ಫೋಟೋ ನೋಡ್ತಾ ನಿಲ್ಲೋದು ಕುಂವೀಗೆ ಹವ್ಯಾಸವಂತೆ. ಟೈಮ್ ಪಾಸ್ಗೆ. “ನೋಡ್ತಿದ್ದಂಗೆ ಮರುಕು ಹುಟ್ಟಿಸೋ ಹಾಗೆ ಇರೋ ಅವರನ್ನು ನೋಡಬೇಕು” ಅಂದ್ರು ಕುಂವೀ. ಹೀಗೆ ನೋಡುತ್ತಿರುವಾಗ ಅವರಿಗೆ ಡಾ.ರೇವಣಸಿದ್ದಪ್ಪನ ಫೋಟೋನೂ ಕಣ್ಣಿಗೆ ಬಿತ್ತು! ಊರಿಗೆ ಬಂದಾಗ ರೇವಣಸಿದ್ದಪ್ಪನೇ ಎದುರಾದರಂತೆ. ಅವರಿಗೆ ಕುಂವೀ “ನಿಮ್ಮ ಫೋಟೋ ನೋಡಿದೆ” ಎಂದಷ್ಟೆ ಹೇಳಿದರಂತೆ. ಜತೆಗಿದ್ದ ಗೆಳೆಯ “ನೊಂದುಕೊಂಡಾರು” ಅಂತ ಹೇಳಿದ ಕಾರಣಕ್ಕೆ ರೇವಣಸಿದ್ದಪ್ಪ ಕೇಳಿದರೂ ಎಲ್ಲಿ ನೋಡಿದೆ ಎಂಬುದನ್ನು ಹೇಳ್ಲಿಲ್ಲವಂತೆ. ಇದಾದ ಮೇಲೆ ರೇವಣಸಿದ್ದಪ್ಪ ವರ್ತನೆಯ ಬೇರೆ ಆಯ್ತಂತೆ. ಕುಂವೀಯನ್ನು ಇದ್ದಕ್ಕಿದ್ದಂತೆ ಬಹುವಚನದಲ್ಲಿ ಮಾತಾಡಿಸೋಕೆ ಶುರುಮಾಡಿ ಬಿಟ್ಟನಂತೆ. ಬೆಳಗ್ಗೆ ಬೆಳಗ್ಗೆ ಮನೆಗೆ ಬಂದು ಅಜ್ಜಿ ಮುಂದೆ, “ವೀರಭದ್ರ ಇದಾನೆನವ್ವಾ. ಹುಡುಗ ಇಷ್ಟೊತ್ತಾದ್ರೂ ಮಲಗಿದ್ದಾನಾ” ಅಂತಾ ಬಂದು, ಅವರನ್ನು ಎಬ್ಬಿಸಿಕೊಂಡು, ಮೈದಾನದ ಕಡೆಗೆ ಕರ್ಕೊಂಡು ಹೋದ್ನಂತೆ. ಆಗ ಕುಂವೀ ಬಹುವಚನದಲ್ಲಿ ಮಾತಾಡಿಸಿದನಂತೆ ರೇವಣಸಿದ್ದಪ್ಪ.”ಎಲ್ಲಿ ನೋಡಿದ್ರಿ. ಹೇಳಿ ” ಅದ್ನಂತೆ. ಕುಂವೀ ಮಾತು ಮರೆಸುವುದಕ್ಕೆ ತೇಲಿಸುವುದಕ್ಕೆ ನೋಡಿದ್ರಂತೆ… “ಮೇಷ್ಟ್ರಾಗಾಕೆ ಎಷ್ಟು ಬೇಕಾಗಬಹುದು. 10ಸಾವಿರ, 15 ಸಾವಿರ” ಅಂತಾ ಆಮಿಷವೊಡ್ಡಿದನಂತೆ. “ಬಸ್ ಚಾರ್ಜಗೆ 15 ರುಪಾಯಿ ಬೇಕು. ಅದನ್ನು ಮನೆಯವರು ಕೊಡ್ತಾರೆ” ಅಂತಾ ರೇವಣಸಿದ್ದಪ್ಪನ ಆಫರ್ ತಿರಸ್ಕರಿಸಿದರಂತೆ. ***** ಇಡೀ ಕತೆಯನ್ನು ಅವರ ಬಾಯಲ್ಲೇ ಕೇಳಬೇಕು  ]]>

‍ಲೇಖಕರು avadhi

October 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: