ಮನೆಯಿರುವುದು ರಾತ್ರಿ ಉಂಡು ಮಲಗಲಷ್ಟೆ…

ಬಿಟಿಎಂ ಲೇಔಟ್

– ಸೂರ್ಯಕಿರಣ್ ಜೋಯಿಸ್

ಅ೦ತರಾಳದ ಮಾತು

ಅರೆ ನಿದ್ದೆಯ ಕಣ್ಣುರಿ ತುಂಬಿ

ಸಂತೆಯ ಸಂದಣಿಯಲ್ಲಿ ದೂಡಿ ಕಿವಿಯಲ್ಲಿ ಉಸುರುತ್ತದೆ “ಓಡು ಮಗುವೆ ಬಸ್ಸಿನ ಛಾವಣಿಯ ಕಂಬಿಗೆ ಜೋತು ಬಿದ್ದು ನಿದ್ದೆಯ ದಣಿವಾರಿಸಿಕೊ ಮನೆಯ ಖಾಲಿ ಬಿಟ್ಟು ದಿನವೆಲ್ಲ ಒಂದಿಷ್ಟು ಬೆವರು ಸುರಿಸಿಕೊ ಮನೆಯಿರುವುದು ರಾತ್ರಿ ಉಂಡು ಮಲಗಲಷ್ಟೆ ಓಡಿನ್ನು ಬೇಗ ಗಿರಗಿರನೆ ತಿರುಗುವ ಚಕ್ರಗಳ ಮೇಲಿನ ಯಂತ್ರದ ರಥಗಳಿಂದ ಕಿಕ್ಕಿರಿದ ರಸ್ತೆಯನೊಮ್ಮೆ ನೋಡು ಜೊಂಪು ನಿದ್ದೆಗೂ ಬಿಡುವಿಲ್ಲ ಅದಕೆ ಹೋಗುತ್ತಲೇ ಕರಗಿಬಿಡು ಸಂತೆಯೊಳಗೆ ಹೋಗಿ ತೀರಿಸಿ ಬಾ ದಿನಕರನಂತೆ ದಿನಕ್ಕೆ ಕೊಡಬೇಕಿರುವ ನಿನ್ನ ಬಾಬ್ತು ಒಂದಿಷ್ಟು ಬೆಂದು ಒಂದಿಷ್ಟು ಉರಿದು ನಿನ್ನನೇ ನೀನು ತೀಡಿಕೊಂಡು ಒಂದಿಷ್ಟು ಹೊಳೆಯಬಲ್ಲೆಯೇನೋ ನೋಡು” ಸಂಜೆ ಸುರಿದ ಮೇಲೆ ಇರುಳ ಚಪ್ಪರ ಕಟ್ಟುತ್ತಲೇ ಬರ ಮಾಡಿಕೊಳ್ಳುತ್ತದೆ ಬಣ್ಣದಾಗಸ ನೋಡಲಾಗದ್ದಕ್ಕೆ ಮೈದಡವಿ ಸಂತೈಸುತ್ತದೆ ದುಡಿಮೆಯ ಕೀಲಿ ಕೊಡಿಸಿಕೊಂಡ ಬೊಂಬೆಗಳ ಹಣೆ ನೀವುತ್ತದೆ ಹೋಟೆಲಿನ ಮೇಜು ಒರೆಸುವ ಪೋರನ ಗುನುಗು ಗೀತೆಯಾಗುತ್ತದೆ ಮನೆ ಮುಟ್ಟಿಸಲು ಬಂದ ಕ್ಯಾಬ್ ಚಾಲಕನ ಇಷ್ಟದ ತಿರುವಾಗುತ್ತದೆ ಠೀವಿಯಾಗುತ್ತದೆ ಲಲನೆಯರ ನಡಿಗೆಯಲ್ಲಿ ತುಳುಕಾಡುತ್ತದೆ ಮೈದಾನದ ಮಕ್ಕಳ ಕೇಕೆಯಲ್ಲಿ ಉಡುಪಿ ಗಾರ್ಡನ್‌ನಿಂದ ಮಡಿವಾಳ ಕೆರೆ ಜಯದೇವದಿಂದ ತಾವರೆಕೆರೆ ಎಡಬಿಡದೆ ಎಲ್ಲರನಲೆಸಿ ಸಂತೆಯ ಲೀಲೆಯಲ್ಲಿ ಸಂಭ್ರಮಿಸುತ್ತದೆ ವಾಹನ ಸರಮಾಲೆ ಧರಿಸಿ ನರ್ತಿಸುತ್ತದೆ ಸಲಹುತ್ತದೆ ಉಬ್ಬುತ್ತದೆ ಬಿಕ್ಕುತ್ತದೆ ಉನ್ಮತ್ತಗೊಂಡು ಮೆರೆಯುತ್ತದೆ ಹಬ್ಬಕ್ಕೆ ಹೆಗಲ ಚೀಲ ಹೊತ್ತು ಹೋಗುವವರ ನೋಡುತ್ತದೆ ಮೌನದಲಿ ಖಾಲಿ ರಸ್ತೆಗಳ ಬಿಕೋ ತಾಳಲಾರದೆ ನಿರುಕಿಸುತ್ತದೆ ದಾರಿಯನ್ನು ಹಾಳು ಸುರಿಯುವ ಖಾಲಿತನದ ಬೇಸರಿಕೆಯಲಿ ಬಣಗುಡುತ್ತದೆ ಹಿಂತಿರುಗುವವರ ಹೆಜ್ಜೆ ಕಂಡು ಹಿಗ್ಗುತ್ತದೆ ಮತ್ತೆ ಮತ್ತೆ ಸಂತೆಯ ಸರಭರಕ್ಕೆ ಅಣಿಯಾಗುತ್ತಲೆ ಎಲ್ಲರ ಒಳಸೆಳೆದಿಟ್ಟುಕೊಳ್ಳುತ್ತಲೇ ಜನನಿಬಿಡ ಒಗಟಾಗುತ್ತದೆ]]>

‍ಲೇಖಕರು G

May 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

ನೀನೆಂದರೆ ಭಯ ಅಲ್ಲ…

ನೀನೆಂದರೆ ಭಯ ಅಲ್ಲ…

ರೇಷ್ಮಾ ಗುಳೇದಗುಡ್ಡಾಕರ್  ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದ ಪ್ರಲಾಪವ ಗಾಢ ಕತ್ತಲೆ ಕಾಣಿಸುವದು ನನ್ನೂಳಗಿನ ನನ್ನು ಅಲ್ಲಿನ...

ಮುಸ್ಸಂಜೆ

ಮುಸ್ಸಂಜೆ

ಜಿತೇಂದ್ರ ಬೇದೂರು ೧ ಮುಸ್ಸಂಜೆ ಯೌವ್ವನದ ಕ್ಷಣದಲ್ಲಿ ಎಷ್ಟೊಂದು ಉರಿದಿದ್ದಸೂರ್ಯ, ಈಗೇಕೋ ತಣ್ಣಗಾಗಿ ಹೋದ.ಯಾರು ಸರಿಸಿದರೋ ಏನೋಪಡುವಣ ಅಂಚ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This