ಮನೆ ಒಡೆಯರ ಸ್ಥಾನದಲ್ಲಿ 'ಮನಿ ' ಒಡೆಯರು!…

-ಸೂತ್ರಧಾರ ರಾಮಯ್ಯ “ನೀವು ಎಷ್ಟಾದರೂ ಬೈರಪ್ಪಾ; ನಮಗೆ ಬ್ಯಾಸರಿಲ್ಲ. ಜನರ ಸೇವೆಯಿಂದ ‘ದೂರ ಸರಿದರೂ’ ಚಿಂತಿಲ್ಲಾ, ಅಧಿಕಾರ ಒಂದಿದ್ದರೆ ಸಾಕು ನಮಗಾ” ಅನ್ನೋ ಮನೋಭಾವದ ರಾಜಕಾರಣಿಗಳು ಇದ್ದಾಗ, ದಿನನಿತ್ಯವೂ ಹೈ ಡ್ರಾಮ, ಕಪಟನಾಟಕ,ದೊಂಬರಾಟ,ಆಪರೇಶನ್ ಸರ್ಕಸ್ ಗಳು ಇರುವಂತದೆ. ಒಟ್ಟಾರೆ ಪ್ರಜಾಮತ ವನ್ನು ಕಡೆಗಣಿಸಿ ಅಲ್ಪಮತ-ಬಹುಮತಗಳ ‘ಜೂಟ್ ‘ ಆಟದಲ್ಲಿ ‘ಗೆದ್ದವರು’ ತಾವೇ ಅಂತ ಒಂದೊಂದು ದಿನ ಒಂದೊಂದು ಪಕ್ಷದವರು v -ಕಾರದಲ್ಲಿ ಬೆರಳೆತ್ತಿ ತೋರುವುದು ನಗೆಪಾಟಲಿಗೆ ಗುರಿಯಾದರೂ,ರಾಜ್ಯಧಿಕಾರದ ರೊಟ್ಟಿ ಜಾರಿ ಭಂಡ-ವಾಳಶಾಹಿಗಳ  ತುಪ್ಪದ ಬಟ್ಟಲಿಗೆ ಬಿದ್ದಿದ್ದು, ಮನೆಯೊಡೆಯ ಮನೆಯೊಳಗೆ ಇದ್ದಾನೋ ಇಲ್ಲವೋ ಎಂಬಂತ ಸನ್ನಿವೇಶವನ್ನು ಸೃಷ್ಟಿಸಿವೆ. ಅಧಿಕಾರವಿಲ್ಲದೆ ಇರುವ ತಾಳ್ಮೆ ಉ’ಭಯ’ ಪಕ್ಷಗಳಿಗೂ ಇದ್ದಂತಿಲ್ಲ.ರಂಗೋಲಿ ಕೆಳಗೆ ತೂರುವ ಅಸಹಜ ಅಧಿಕಾರ ಗ್ರ -ಹಣ. ಭಿನ್ನ ಮತವೆಂಬ ಇಲಿಯನ್ನು ಮರಿ ಇದ್ದಾಗಲೇ ನಿವಾರಿಸಿಕೊಳ್ಳುವುದು ಬಿಟ್ಟು, ಅದು ಹೆಗ್ಗಣವಾದನಂತರ ಪಾಷಾಣ ನೀಡಿ, ರಾಜ್ಯಕ್ಕೆಲ್ಲಾ  ದುರ್ವಾಸನೆ ಹಬ್ಬಿಸಿ, ನಮ್ಮ ಹಿರಿಯ ಗಣತಂತ್ರವನ್ನು ಉಳಿಸುವ ಕಸರತ್ತು ಬಹುತೇಕ ಸ್ವಯಂ ಕೃತ ಅಪರಾಧವೇ. ‘ಬಹುಮತ ಇಲ್ಲ’ ಎಂಬ ದೂರನ್ನು ದಿಲ್ಲಿಗೊಯ್ದು, ಇನ್ನೇನು ಕುರ್ಚಿ ಸೋನಿಯ ರ್ ಅನ್ನುತ್ತಿರುವಾಗಲೇ, ‘ಬಹು’ ಮತ್ ಅಂದದ್ದು, ವಿಶ್ವಾಸವನ್ನು ಮರಳಿ ಪಡೆಯಲು ರಾಜ್ಯಪಾಲರು ಭಾರದ ಮನಸ್ಸಿನಿಂದ  ಹಸಿರು ಧ್ವಜ ತೋರಿದ್ದು, ‘ನೂರಾರು’ ಅಪನಂಬಿಕೆಗಳನ್ನು ಒಡಲಲ್ಲಿ ತುಂಬಿಕೊಂಡು ಗೆದ್ದೆನೆಂದು ಆಡಳಿತ ಪಕ್ಷ  ಬೀಗುತ್ತ ಆಯಾರಾಂ ಗಯಾರಾಂ ಗಳೆನ್ನುವ ಮಣ್ಣು ಕುಂಡೆಗಳನ್ನು ನಂಬಿಕೊಂಡು  ನಿರಿಗಿಳಿದಿರುವುದು ನೋಡಿದರೆ ಅಂಕದ ಪರದೆ ಜಾರಿಲ್ಲ ,ಇನ್ನೂ ಸಾಕಷ್ಟು ದೃಶ್ಯಗಳಿವೆ  ಇದು ‘ರಂಗ ನಿರಂತರ’ ಎಂಬ ಸಂದೇಶವನ್ನು ಜನರಿಗೆ ಮುಟ್ತಿಸುತ್ತಿವೆ. ಒಟ್ಟಾರೆ ದೇಶದ ಜನರೆಲ್ಲರ ಬಾಯಲ್ಲೂ ಕರನಾಟಕ ಮಾತೇ! ]]>

‍ಲೇಖಕರು avadhi

October 18, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This