
ಸಾವಿತ್ರಿ ಹಟ್ಟಿ
ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು
ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!!
ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು!
ದಿನಾಲೂ ಬೆಳಗ್ಗೆ ಕದ ತೆಗೆಯುವಷ್ಟರಲ್ಲಿ
ಒಂದಿಬ್ಬರಾದರೂ ಅಸುನೀಗಿರುತ್ತಿದ್ದರು!
ಉಳಿದವರು ಕಿಡಕಿ ತೆರೆದ ಕೂಡಲೆ ಹೊರಗೆ
ಹೋಗುತ್ತಿದ್ದರು!

ಹಠಮಾರಿಗಳು ಇಡೀ ದಿನ ಒಳಗೇ ಇರುತ್ತಿದ್ದರು!
ಕೆಲವರು ಯಾವಾಗಲೋ ಹೋಗಿ ಯಾವಾಗಲೋ
ಬರುತ್ತಿದ್ದರು!
ನನ್ನ ಮನೆ ಏನು ಕಾಶಿ, ಬದರಿ ಅಂತ ತಿಳಿದು
ತೀರ್ಥಯಾತ್ರೆಗೆ ಬರ್ತಿರೇನ್ರೊ ಅಂತ
ಕೇಳ್ತಿದ್ದೆ! ಇವತ್ತು ಗೊತ್ತಾಯ್ತು ಸೌದೆ ಒಲೆ ಹೊಗೆ
ಗೋಡೆಯಲ್ಲಿ ಜೇನು ಕಟ್ಟಿದೆ!
ಮನೆತುಂಬಾ ಜೇನು ಸೈನ್ಯ!
ಭಗವಂತಾ… ಜಗಳಕ್ಕೆ ಬರದಿದ್ದರೆ ಸಾಕು..!
ನನ್ನ ಪಾಡಿಗೆ ನಾನಿರುವೆ!
ನಿಮ್ಮ ಪಾಡಿಗೆ ನೀವಿದ್ದುಕೊಂಡು ಬಿಡ್ರಿ ಅಂತ ಹೇಳಿದ್ದೀನಿ!
0 ಪ್ರತಿಕ್ರಿಯೆಗಳು